IMA Scam Case| ಕುತೂಹಲ ಮೂಡಿಸಿದ ಜಮೀರ್ ಅಹ್ಮದ್ ಮತ್ತು ಸಚಿವ ಆರ್. ಅಶೋಕ್ ಭೇಟಿ

ಐಎಂಎ ಹಗರಣ ಪ್ರಕರಣದ ವಿಚಾರ ಸಾಮಾನ್ಯವಾಗಿ ಮಾಜಿ ಸಚಿವ ಜಮೀರ್ ಅಹ್ಮದ್ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಈ ಬಗ್ಗೆ ಚರ್ಚೆ ನಡೆಸಲು, ತಮ್ಮ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಸಚಿವ ಆರ್​. ಅಶೋಕ್ ಅವರನ್ನು ಜಮೀರ್ ಅಹ್ಮದ್ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸಚಿವ ಆರ್​ ಅಶೋಕ್-ಮಾಜಿ ಸಚಿವ ಜಮೀರ್ ಅಹ್ಮದ್.

ಸಚಿವ ಆರ್​ ಅಶೋಕ್-ಮಾಜಿ ಸಚಿವ ಜಮೀರ್ ಅಹ್ಮದ್.

  • Share this:
    ಬೆಂಗಳೂರು (ಆಗಸ್ಟ್​ 28); ಕಳೆದ ಎರಡು ವರ್ಷಗಳಿಂದ ಕರ್ನಾಟಕದಲ್ಲಿ ಭಾರೀ ಸುದ್ದು ಮಾಡುತ್ತಿರುವ ಐಎಂಎ ವಂಚನೆ ಪ್ರಕರಣ ಸಂಬಂಧ ಕಾಂಗ್ರೆಸ್​ ಶಾಸಕ ಮಾಜಿ ಸಚಿವ ಜಮೀರ್ ಅಹ್ಮದ್​ಗೆ ಆಗಸ್ಟ್​ 5 ರಂದು ಐಟಿ ಅಧಿಕಾರಿಗಳು ಎರಡೆರಡು ಶಾಕ್ ನೀಡಿದ್ದರು. ಏಕ ಕಾಲದಲ್ಲಿ ಅವರ ಮನೆ ಮತ್ತು ಕಚೇರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಪ್ರಮುಖ ಸಾಕ್ಷ್ಯಗಳ ಪತ್ತೆಗೆ ಮುಂದಾಗಿದ್ದರು. ಐಎಂಎ ಕೇಸ್​​ನಲ್ಲಿ ಜಮೀರ್​ ಅಹ್ಮದ್​ ಹೆಸರು ತಳುಕುಹಾಕಿಕೊಂಡಿದೆ. ಹೀಗಾಗಿ ಇಡಿ ಅಧಿಕಾರಿಗಳು ಜಮೀರ್ ನಿವಾಸದ ಮೇಲೆ ದಾಳಿ ನಡೆಸಿದ್ದರು. ಅಸಲಿಗೆ ಜಮೀರ್​ ಅಹ್ಮದ್ ರಿಚ್ಮಂಡ್​ ಟೌನ್​ ಬಳಿ​ ಮನ್ಸೂರ್​​​ ಖಾನ್ ಗೆ ನಿವೇಶನ ಮಾರಾಟ ಮಾಡಿದ್ದರು. ಈ‌ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಜಮೀರ್ ಅಹಮದ್ ಮನೆ ಮೇಲೆ ದಾಳಿ ನಡೆಸಿದ್ದರು.

    ಅಲ್ಲದೆ, ಇದೇ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಮೀರ್ ಅಹ್ಮದ್ ಅವರನ್ನು ಅವರ ಕೊಠಡಿಯಲ್ಲೇ ಕೂರಿಸಿ ವಿಚಾರಣೆಯೂ ನಡೆಸಿದ್ದರು. ವಿಚಾರಣೆ ವೇಳೆ ಐಎಂಎ ಹಾಗೂ ಮನ್ಸೂರ್ ಜೊತೆಗಿನ ಒಡನಾಟದ ಬಗ್ಗೆ ಅಧಿಕಾರಿಗಳು ಸತತ ಪ್ರಶ್ನೆಗಳನ್ನು ಮುಂದಿಟ್ಟಿದ್ದರು.

    ಏಕೆಂದರೆ ಜಮೀರ್ ಅಹ್ಮದ್ ರಿಚ್ಮಂಡ್ ಟೌನ್ ನಲ್ಲಿರುವ 14.924 ಚದರಡಿ ನಿವೇಶನವನ್ನು ಐಎಂಎ ಮಾಲೀಕ ಮನ್ಸೂರ್ ಖಾನ್ ಗೆ ಮಾರಾಟ ಮಾಡಿದ್ದರು. ಶಾಸಕ ಜಮೀರ್ 9.38 ಕೋಟಿಗೆ ನಿವೇಶನ ಮಾರಾಟ ಮಾಡಿದ್ದರು. ಇದೇ ವಿಚಾರಕ್ಕೆ ಐಎಂಎ ಪ್ರಕರಣದಲ್ಲಿ ಜಮೀರ್ ಹೆಸರು ಕೇಳಿ ಬಂದಿತ್ತು. ಮನ್ಸೂರ್ ಖಾನ್ ನಿಂದ ಹೆಚ್ಚಿನ ಹಣ ಪಡೆದ ಆರೋಪ ಕೇಳಿ ಬಂದಿತ್ತು.

    ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸಮನ್ಸ್ ಕೂಡ ಕೊಟ್ಟಿದ್ದರು. 2019ರ ಜುಲೈ 5ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಮೀರ್​ ಅವರನ್ನು ವಿಚಾರಣೆಗೆ ಕರೆದಿದ್ದರು.

    ಇದನ್ನೂ ಓದಿ: Mysore Gang Rape Case| ಜನಾಕ್ರೋಶಕ್ಕೆ ಮಣಿದು ಮಹಿಳಾ ವಿರೋಧಿ ಆದೇಶವನ್ನು ಹಿಂಪಡೆದ ಮೈಸೂರು ವಿಶ್ವವಿದ್ಯಾಲಯ

    ಉಳಿದ 80 ಕೋಟಿ ಹಣ ವನ್ನ ಹವಾಲ ಹಣ ಪಡೆದಿದ್ದಾರೆ ಎಂಬ ಆರೋಪ ಜಮೀರ್ ಮೇಲಿತ್ತು‌. 2014 ರಲ್ಲಿ ಆಸ್ತಿಯ ವಿಚಾರವಾಗಿ ವ್ಯಾಜ್ಯ ಕೋರ್ಟ್ ನಲ್ಲಿತ್ತು. ವ್ಯಾಜ್ಯ ಇದ್ರೂ ಕೂಡ ಜಮೀರ್ ಅಹ್ಮದ್​​ ಮಾರಾಟ ಮಾಡಿದ್ದರು. ಶಾಸಕ ಜಮೀರ್​ 2018ರಲ್ಲಿ ಚುನಾವಣ ಪ್ರಮಾಣ ಪತ್ರದಲ್ಲಿ ಕೂಡ ತಪ್ಪು ಮಾಹಿತಿ ನೀಡಿದ್ದರು. ಚೆಲುವರಾಯ ಸ್ವಾಮಿ ಬಳಿ 40 ಲಕ್ಷ ಹಣ ಸಾಲ ಪಡೆದಿದ್ದಾಗ ತಪ್ಪು ಮಾಹಿತಿ ನೀಡಿದ್ದರು. ಈ ಎಲ್ಲಾ ವಿಚಾರವಾಗಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.

    ಐಎಂಎ ಹಗರಣ ಪ್ರಕರಣದ ವಿಚಾರ ಸಾಮಾನ್ಯವಾಗಿ ಮಾಜಿ ಸಚಿವ ಜಮೀರ್ ಅಹ್ಮದ್ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಈ ಬಗ್ಗೆ ಚರ್ಚೆ ನಡೆಸಲು, ತಮ್ಮ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಸಚಿವ ಆರ್​. ಅಶೋಕ್ ಅವರನ್ನು ಜಮೀರ್ ಅಹ್ಮದ್ ಇಂದು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

    ಇದನ್ನೂ ಓದಿ: Mysuru Gang Rape Case| ಅತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಿ; ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರತಿಭಟನೆ



    ಪದ್ಮನಾಭನಗರದಲ್ಲಿರುವ ಸಚಿವ ಆರ್. ಅಶೋಕ್ ಕಚೇರಿಯಲ್ಲಿ ಅವರನ್ನು ಭೇಟಿ ಮಾಡಿದ ಜಮೀರ್ ಅಹ್ಮದ್ ಅಶೋಕ್ ಮೂಲಕ ಬಿಜೆಪಿ ವರಿಷ್ಠರ ಮೇಲೆ ಒತ್ತಡ? ಹೇರಿ ಇಡಿ ವಿಚಾರದಿಂದ ಪಾರಾಗುವ ಬಗ್ಗೆ ಚರ್ಚೆ ನಡೆಸಲಾಯಿತೇ? ಎಂಬ ಚರ್ಚೆ ಮತ್ತು ಕುತೂಹಲ ಇದೀಗ ರಾಜ್ಯ ರಾಜಕೀಯದಲ್ಲಿ ಮನೆ ಮಾಡಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    Published by:MAshok Kumar
    First published: