ಐಎಂಎ ಹಗರಣ: ಸಿಬಿಐನಿಂದ ಎರಡನೇ ಚಾರ್ಜ್ ಶೀಟ್ ಸಲ್ಲಿಕೆ; ಮೌಲ್ವಿ ಅಫ್ಸರ್ ಸೇರಿ ಇಬ್ಬರ ಮೇಲೆ ಆರೋಪಪಟ್ಟಿ ದಾಖಲು

ಮೌಲ್ವಿ ಅವರು 2017ರಲ್ಲಿ ಹೆಚ್​ಬಿಆರ್ ಲೇಔಟ್​ನಲ್ಲಿ ಮೂರು ಕೋಟಿ ಮೌಲ್ಯದ ಮನೆ ಖರೀದಿಸಿದ್ದಾರೆ. ಇದು ಇದೇ ಐಎಂಎ ದುಡ್ಡಿನ ಕರಾಮತ್ತು ಎಂಬ ಮಾತಿದೆ. ಹೆಚ್ಚೆಚ್ಚು ಜನರಿಂದ ಹಣ ಹೂಡಿಕೆ ಮಾಡಿಸಿದ್ದ ಕಾರಣಕ್ಕೆ ಮೌಲ್ವಿಗೆ ಋಣಸಂದಾಯ ಮಾಡಲು ಐಎಂಎ ಸಂಸ್ಥೆ ಮಾಲೀಕ ಮನ್ಸೂರ್ ಖಾನ್ ಅವರು ಈ ಬಂಗಲೆಯನ್ನು ಗಿಫ್ಟ್ ಆಗಿ ನೀಡಿದ್ದರೆಂದು ಹೇಳಲಾಗುತ್ತಿದೆ.

news18-kannada
Updated:October 9, 2019, 9:16 PM IST
ಐಎಂಎ ಹಗರಣ: ಸಿಬಿಐನಿಂದ ಎರಡನೇ ಚಾರ್ಜ್ ಶೀಟ್ ಸಲ್ಲಿಕೆ; ಮೌಲ್ವಿ ಅಫ್ಸರ್ ಸೇರಿ ಇಬ್ಬರ ಮೇಲೆ ಆರೋಪಪಟ್ಟಿ ದಾಖಲು
ಐಎಂಎ ಕಂಪನಿ
  • Share this:
ಬೆಂಗಳೂರು(ಅ. 09): ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಎರಡನೇ ಆರೋಪ ಪಟ್ಟಿ ಸಲ್ಲಿಸಿದೆ. ಮೌಲ್ವಿ ಅಫ್ಸರ್ ಹನೀಜ್ ಸೇರಿದಂತೆ ಇಬ್ಬರ ಮೇಲೆ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಎಸ್​ಐಟಿ ತಂಡದ ಪೊಲೀಸರು ಮೌಲ್ವಿಯನ್ನು ಬಂಧಿಸಿದ್ದರು.

ಆರ್.ಟಿ. ನಗರ ಮೂಲದ ಮೌಲ್ವಿ ಅಫ್ಸರ್ ಹನೀಜ್ ಅವರು ಶಿವಾಜಿನಗರದ ಓಪಿಎಚ್ ರಸ್ತೆಯಲ್ಲಿರುವ ಬೇಪಾರಿಯನ್ ಮಸೀದಿಯ ಧರ್ಮಗುರುವಾಗಿದ್ದಾರೆ. ಮಸೀದಿಯಲ್ಲಿ ಪ್ರಾರ್ಥನೆಗೆ ಬರುವ ತನ್ನ ಸಮುದಾಯದವರಿಗೆ ಐಎಂಎಯಲ್ಲಿ ಹೂಡಿಕೆ ಮಾಡುವಂತೆ ಅವರು ಪ್ರಚೋದನೆ ಮಾಡುತ್ತಿದ್ದರೆನ್ನಲಾಗಿದೆ. ಇವರ ಮಾತನ್ನು ನಂಬಿ ಸಾವಿರಾರು ಜನರು ಐಎಂಎನಲ್ಲಿ ಹಣ ಹೂಡಿಕೆ ಮಾಡಿದ್ದರೆಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ವಿಧಾನಸಭೆ, ಪರಿಷತ್ನಲ್ಲಿ ಸಿದ್ದರಾಮಯ್ಯ ಮತ್ತು ಎಸ್.ಆರ್. ಪಾಟೀಲ್ ವಿಪಕ್ಷ ನಾಯಕರು; ಮೂಲ ಕಾಂಗ್ರೆಸ್ಸಿಗರಿಗೆ ಹಿನ್ನಡೆ

ಮೌಲ್ವಿ ಅವರು 2017ರಲ್ಲಿ ಹೆಚ್​ಬಿಆರ್ ಲೇಔಟ್​ನಲ್ಲಿ ಮೂರು ಕೋಟಿ ಮೌಲ್ಯದ ಮನೆ ಖರೀದಿಸಿದ್ದಾರೆ. ಇದು ಇದೇ ಐಎಂಎ ದುಡ್ಡಿನ ಕರಾಮತ್ತು ಎಂಬ ಮಾತಿದೆ. ಹೆಚ್ಚೆಚ್ಚು ಜನರಿಂದ ಹಣ ಹೂಡಿಕೆ ಮಾಡಿಸಿದ್ದ ಕಾರಣಕ್ಕೆ ಮೌಲ್ವಿಗೆ ಋಣಸಂದಾಯ ಮಾಡಲು ಐಎಂಎ ಸಂಸ್ಥೆ ಮಾಲೀಕ ಮನ್ಸೂರ್ ಖಾನ್ ಅವರು ಈ ಬಂಗಲೆಯನ್ನು ಗಿಫ್ಟ್ ಆಗಿ ನೀಡಿದ್ದರೆಂದು ಹೇಳಲಾಗುತ್ತಿದೆ.

ಶಿವಾಜಿನಗರದಲ್ಲಿ ಮನ್ಸೂರ್ ಖಾನ್ ಸ್ಥಾಪಿಸಿದ್ದ ಐ ಮಾನಿಟರಿ ಅಡ್ವೈಸರಿ ಕಂಪನಿಯು ಆಕರ್ಷಕ ರಿಟರ್ನ್ಸ್ ಕೊಡುವ ಭರವಸೆ ನೀಡಿ ಸಾವಿರಾರು ಮಂದಿಯಿಂದ ಕೋಟ್ಯಂತರ ಹಣ ಹೂಡಿಕೆ ಮಾಡಿಸಿಕೊಂಡಿತ್ತು. ಇವರಲ್ಲಿ ಹೂಡಿಕೆ ಮಾಡಿದವರಲ್ಲಿ ಮುಸ್ಲಿಮ್ ಸಮುದಾಯದವರೇ ಹೆಚ್ಚು. ಐಎಂಎ ಪ್ರಕರಣದಲ್ಲಿ ರೋಷನ್ ಬೇಗ್ ಸೇರಿದಂತೆ ಹಲವು ಪ್ರಮುಖರ ಹೆಸರುಗಳು ತಳುಕು ಹಾಕಿಕೊಂಡಿದೆ. ರೋಷನ್ ಬೇಗ್ ಹಾಗೂ ಹಲವರು ತಮ್ಮಿಂದ ಕೋಟ್ಯಂತರ ಹಣ ಪಡೆದುಕೊಂಡಿದ್ದರು ಎಂದು ಐಎಂಎ ಮಾಲೀಕ ಮನ್ಸೂರ್ ಖಾನ್ ಹೇಳಿಕೆ ನೀಡಿದ್ದರು. ಈಗ ಮನ್ಸೂರ್ ಸಿಬಿಐ ಕಸ್ಟಡಿಯಲ್ಲಿದ್ಧಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: October 9, 2019, 9:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading