News18 India World Cup 2019

ಐಎಂಎ ವಂಚನೆಗೆ ರಾಜ್ಯದಲ್ಲಿ ಮೊದಲ ಬಲಿ; ಹಣ ಕಳೆದುಕೊಂಡು ಹೃದಯಾಘಾತದಿಂದ ದಿನಗೂಲಿ ನೌಕರ ಮೃತ

ಕಂಪೆನಿ ದೋಖಾ ವಿಷಯ ಕೇಳಿದ ನಂತರ ಅಪ್ಜಲ್​ ಪಾಷಾ ಸ್ಥಳಕ್ಕೆ ದೌಡಾಯಿಸಿದ್ದರು. ಅಲ್ಲದೆ ತಾನು ಹಣ ಕಳೆದುಕೊಂಡಿರುವ ಬಗ್ಗೆ ದೂರನ್ನೂ ಸಹ ನೀಡಿದ್ದರು. ಆದರೆ, ದೂರು ನೀಡಿ ಮನೆಗೆ ವಾಪಾಸ್ ಬಂದ ಬಳಿಕ ಮಗಳ ಮದುವೆಯನ್ನು ನೆನೆದು ತುಂಬಾ ಟೆನ್ಷನ್​ಗೆ ಒಳಗಾಗಿದ್ದಾರೆ.

MAshok Kumar | news18
Updated:June 14, 2019, 9:16 AM IST
ಐಎಂಎ ವಂಚನೆಗೆ ರಾಜ್ಯದಲ್ಲಿ ಮೊದಲ ಬಲಿ; ಹಣ ಕಳೆದುಕೊಂಡು ಹೃದಯಾಘಾತದಿಂದ ದಿನಗೂಲಿ ನೌಕರ ಮೃತ
ಪ್ರಾತಿನಿಧಿಕ ಚಿತ್ರ.
MAshok Kumar | news18
Updated: June 14, 2019, 9:16 AM IST
ಬೆಂಗಳೂರು (ಜೂನ್.14); ಇಡೀ ರಾಜ್ಯವನ್ನೇ ಬೆಚ್ಚಿ ಬಿಳೀಸಿರುವ ಐಎಂಎ ವಂಚನೆಗೆ ನಗರದಲ್ಲಿ ಮೊದಲ ಬಲಿ ಬಿದ್ದಿದೆ. ಐಎಂಎ ಜ್ಯುವೆಲ್ಸ್​ ಮಾಲೀಕ ಮನ್ಸೂರ್ ಖಾನ್ ಮೇಲಿನ ವಿಶ್ವಾಸಕ್ಕೆ ಕಂಪೆನಿಯ ಮೇಲೆ ಸುಮಾರು 8 ಲಕ್ಷ ಹೂಡಿಕೆ ಮಾಡಿದ್ದ ಅಪ್ಜಲ್​ ಪಾಷ ಎಂಬ ವಕ್ತಿ ಹಣ ಕಳೆದುಕೊಂಡ ನೋವಿನಿಂದ ನಿನ್ನೆ ಸಂಜೆ ಹೃದಾಯಾಘಾತಕ್ಕೆ ಬಲಿಯಾಗಿದ್ದಾರೆ.

ಮೈಸೂರು ರಸ್ತೆ ಪೆನ್ಷನ್​ ಮೊಹಲ್ಲಾ ನಿವಾಸಿ ಅಪ್ಜಲ್ ಪಾಷಾ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ. ನಾಲ್ಕು ಹೆಣ್ಣು ಮಕ್ಕಳ ತಂದೆಯಾದ ಈತ ಮೊದಲ ಎರಡು ಮಕ್ಕಳಿಗೆ ಮದುವೆ ಮಾಡಿಸಿದ್ದರು. ಅಲ್ಲದೆ ಮೂರನೇ ಮಗಳಿಗೆ ಮದುವೆ ನಿಶ್ಚಯ ಮಾಡಿ ಆಗಸ್ಟ್​.4ಕ್ಕೆ ದಿನಾಂಕವನ್ನು ನಿಗದಿ ಮಾಡಲಾಗಿತ್ತು. ಮದುವೆ ಖರ್ಚಿನ ಕಾರಣಕ್ಕೆ ಆತ ತನ್ನ ಇಬ್ಬರು ಹೆಣ್ಣು ಮಕ್ಕಳ ಮೇಲೆ ತಲಾ 3 ಲಕ್ಷ ಹಾಗೂ ಹೆಂಡತಿ ಖಮರುನ್ನೀಸಾ ಹೆಸರಿನಲ್ಲಿ 2 ಲಕ್ಷ ಸೇರಿದಂತೆ ಒಟ್ಟು 8 ಲಕ್ಷ ಹಣವನ್ನು ಐಎಂಎ ಕಂಪೆನಿ ಮೇಲೆ ಹೂಡಿಕೆಮಾಡಿದ್ದರು.

ಇದನ್ನೂ ಓದಿ : IMA Jewels Fraud; 20 ಸಾವಿರಕ್ಕೂ ಅಧಿಕ ದೂರು ದಾಖಲು; ಏಳು ಐಎಂಎ ನಿರ್ದೇಶಕರು ಪೊಲೀಸರ ವಶಕ್ಕೆ!

ಕಂಪೆನಿ ದೋಖಾ ವಿಷಯ ಕೇಳಿದ ನಂತರ ಅಪ್ಜಲ್​ ಪಾಷಾ ಸ್ಥಳಕ್ಕೆ ದೌಡಾಯಿಸಿದ್ದರು. ಅಲ್ಲದೆ ತಾನು ಹಣ ಕಳೆದುಕೊಂಡಿರುವ ಬಗ್ಗೆ ದೂರನ್ನೂ ಸಹ ನೀಡಿದ್ದರು. ಆದರೆ, ದೂರು ನೀಡಿ ಮನೆಗೆ ವಾಪಾಸ್ ಬಂದ ಬಳಿಕ ಮಗಳ ಮದುವೆಯನ್ನು ನೆನೆದು ತುಂಬಾ ಟೆನ್ಷನ್​ಗೆ ಒಳಗಾಗಿದ್ದಾರೆ. ಮನೆಯವರು ಎಷ್ಟೇ ಸಮಾಧಾನ ಹೇಳಿದರು ಅವರು ಸಮಾಧಾನವಾಗಿರಲಿಲ್ಲ. ನಿನ್ನೆ ಬೆಳಗ್ಗೆ ಕೆಲಸದ ನಿಮಿತ್ತ ಪೀಣ್ಯ ಹೋಗಿ ಮನೆಗೆ ಬಂದವರು ಸಂಜೆ ವೇಳೆಗೆ ವಿಪರೀತ ಆಯಾಸಕ್ಕೆ ಒಳಗಾಗಿದ್ದರು.

ತಲೆ ಸುತ್ತು ಬಂದಂತೆ ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಐಎಂಎ ಜ್ಯುವೆಲ್ಸ್​ನಲ್ಲಿ 20 ಸಾವಿರಕ್ಕೂ ಅಧಿಕ ಜನ ಹಣ ಹೂಡಿದ್ದು ಎಲ್ಲರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ.

ಇದನ್ನೂ ಓದಿ : ಸಾವಿರಾರು ಜನರಿಗೆ ಮೋಸ ಮಾಡಿರುವ ಐಎಂಎ ಜ್ಯುವೆಲ್ಸ್​ ಮಾಲೀಕ ಮನ್ಸೂರ್ ಖಾನ್ ಇಲ್ಲಿ ಮಾತ್ರ ಹೀರೋ!
Loading...

First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...