ಐಎಂಎ ಬಹುಕೋಟಿ ವಂಚನೆ ಪ್ರಕರಣ; ಎಸ್​ಐಟಿ ಪೊಲೀಸರ ಎದುರು ರೋಷನ್ ಬೇಗ್ ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ?

ರೋಷನ್ ಬೇಗ್ ಅವರ ವಿಚಾರಣೆ ನಡೆಸಲು ಎಸ್ಐಟಿ ಅಧಿಕಾರಿಗಳು ಈವರೆಗೆ 3 ಬಾರಿ ಅವರಿಗೆ ನೋಟಿಸ್ ನೀಡಿದ್ದರು. ಆದರೆ, ಈವರೆಗೆ ಅವರು ನಾನಾ ಕಾರಣಗಳನ್ನು ನೀಡಿ ವಿಚಾರಣೆಗೆ ಹಾಜರಾಗದೆ ಉಳಿದಿದ್ದರು. ಆದರೆ, ಇಂದು ಅವರಿಗೆ ನಾಲ್ಕನೇ ನೊಟೀಸ್ ಜಾರಿ ಮಾಡಲಾಗಿದೆ.

news18
Updated:August 16, 2019, 11:33 AM IST
ಐಎಂಎ ಬಹುಕೋಟಿ ವಂಚನೆ ಪ್ರಕರಣ; ಎಸ್​ಐಟಿ ಪೊಲೀಸರ ಎದುರು ರೋಷನ್ ಬೇಗ್ ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ?
ರೋಷನ್​​ ಬೇಗ್​
  • News18
  • Last Updated: August 16, 2019, 11:33 AM IST
  • Share this:
ಬೆಂಗಳೂರು (ಆಗಸ್ಟ್.16); ರಾಜ್ಯಾದ್ಯಂತ ಕೋಲಾಹಕ್ಕೆ ಕಾರಣವಾಗಿದ್ದ ಐಎಂಎ ಬಹುಕೋಟಿ ವಂಚನೆಗೆ ಸಂಬಂಧಿಸಿದ ವಿಚಾರಣೆಗೆ ಎಸ್ಐಟಿ ಪೊಲೀಸರ ಎದುರು ಮಾಜಿ ಸಚಿವ ರೋಷನ್ ಬೆಗ್ ಇಂದು ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಜನ ಸಾಮಾನ್ಯರಿಗೆ ಸುಮಾರು 20 ಸಾವಿರ ಕೋಟಿಗೂ ಅಧಿಕ ಹಣ ವಂಚನೆ ಎಸಗಿ ವಿದೇಶಕ್ಕೆ ಪರಾರಿಯಾಗಿದ್ದ ಮನ್ಸೂರ್ ಖಾನ್ ಅವರನ್ನು ಕಳೆದ ತಿಂಗಳು ಬಂಧಿಸಿದ್ದ ಎಸ್ಐಟಿ ಅಧಿಕಾರಿಗಳು ಅವರನ್ನು ನ್ಯಾಯಾಂಗ ಬಂಧನಕ್ಕೆ ಪಡೆದಿದ್ದರು. ಅಲ್ಲದೆ ಈ ಹಿಂದೆ ವಿದೇಶದಿಂದಲೇ ವಿಡಿಯೋ ತುಣುಕೊಂದನ್ನು ಬಿಡುಗಡೆ ಮಾಡಿದ್ದ ಮನ್ಸೂರ್, ರೋಷನ್ ಬೇಗ್ ಅವರಿಗೆ ನೂರಾರು ಕೋಟಿ ಹಣ ನೀಡಿದ ಬಗ್ಗೆ ಮಾಹಿತಿ ನೀಡಿದ್ದರು.

ಇದರ ಆಧಾರದ ಮೇಲೆ ರೋಷನ್ ಬೇಗ್ ಅವರ ವಿಚಾರಣೆ ನಡೆಸಲು ಎಸ್ಐಟಿ ಅಧಿಕಾರಿಗಳು ಈವರೆಗೆ 3 ಬಾರಿ ಅವರಿಗೆ ನೋಟಿಸ್ ನೀಡಿದ್ದರು. ಆದರೆ, ಈವರೆಗೆ ಅವರು ನಾನಾ ಕಾರಣಗಳನ್ನು ನೀಡಿ ವಿಚಾರಣೆಗೆ ಹಾಜರಾಗದೆ ಉಳಿದಿದ್ದರು. ಆದರೆ, ಇಂದು ಅವರಿಗೆ ನಾಲ್ಕನೇ ನೊಟೀಸ್ ಜಾರಿ ಮಾಡಲಾಗಿದೆ.

ಅಲ್ಲದೆ, ಮನ್ಸೂರ್ ಖಾನ್ ಅವರ ನ್ಯಾಯಾಂಗ ಬಂಧನ ಇಂದಿಗೆ ಅಂತ್ಯವಾಗಲಿದ್ದು ಅವರನ್ನು ಮಧ್ಯಾಹ್ನ 3 ಗಂಟೆಗೆ ನ್ಯಾಯಾಲಯ ಎದುರು ಹಾಜರು ಪಡಿಸಲಿದ್ದಾರೆ. ಮನ್ಸೂರ್ ಈವರೆಗೆ ಎಸ್ಐಟಿ ಪೊಲೀಸರ ವಶದಲ್ಲಿದ್ದ ಕಾರಣ ರೋಷನ್ ಬೇಗ್ ವಿಚಾರಣೆಗೆ ಹಾಜರಾಗಿರಲಿಲ್ಲ, ಇದೀಗ ಅವರ ಕಸ್ಟಡಿ ಅಂತ್ಯವಾಗುವುದನ್ನೆ ಕಾಯುತ್ತಿದ್ದ ಬೇಗ್ ಇಂದು ವಿಚಾರಣೆಗೆ ಒಳಪಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾಜಿ ಸಚಿವ ರೊಷನ್ ಬೇಗ್ ವಿಚಾರಣೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಎಸ್​ಐಟಿ ಅಧಿಕಾರಿಗಳು ಇದೀಗ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಐಎಂಎ ಪ್ರಕರಣ; ಜಿಲ್ಲಾಧಿಕಾರಿ ವಿಜಯ ಶಂಕರ್​​ರಿಂದ ​​2.5 ಕೋಟಿ ಹಣ ಜಪ್ತಿ

First published:August 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...