ಐಎಂಎ ಬಹುಕೋಟಿ ವಂಚನೆ ಪ್ರಕಟಣೆ; 15 ಅಧಿಕಾರಿಗಳ ಮನೆ ಮೇಲೆ ದಾಳಿ ಸಂಬಂಧ ಸಿಬಿಐನಿಂದ ಪ್ರಕಟಣೆ ಬಿಡುಗಡೆ

ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಆರಂಭ ಮಾಡಿ ದೇಶದ್ಯಾಂತ ಜನರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.  ರಾಜಕೀಯ ನಾಯಕರು, ಪೊಲೀಸ್ ಅಧಿಕಾರಿಗಳು‌ ಐಎಎಸ್ ಅಧಿಕಾರಿಗಳಿಗೆ ಲಂಚ ನೀಡಲಾಗಿದೆ. ತನ್ನ ವಂಚನೆ ಮುಂದುವರಿಸಲು ಹಾಗೂ ಕಂಪನಿಯ ವಿರುದ್ದ ಯಾವುದೇ ಕ್ರಮ ಕೈಗೊಳ್ಳದಿರಲು ಐಎಂಎ ಕಂಪನಿ ಮಾಲೀಕ ಅಧಿಕಾರಿಗಳಿಗೆ ಲಂಚ‌ ನೀಡಿದ್ದಾರೆ ಎಂದು ಸಿಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಐಎಂಎ ಕಂಪನಿ

ಐಎಂಎ ಕಂಪನಿ

 • Share this:
  ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ನಿನ್ನೆ ಬೆಂಗಳೂರು ಸೇರಿದಂತೆ 15 ಕಡೆ ದಾಳಿ ನಡೆಸಲಾಗಿದೆ ಎಂದು ಸಿಬಿಐ ದೆಹಲಿಯಿಂದ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ.

  ಉತ್ತರ ಪ್ರದೇಶದ ಮಿರತ್, ಕರ್ನಾಟಕದ ಬೆಂಗಳೂರು ಮಂಡ್ಯ ,ರಾಮನಗರ, ಬೆಳಗಾವಿಯಲ್ಲಿ ದಾಳಿ ನಡೆಸಲಾಗಿದ್ದು, ಅಂದಿನ ಸಿಐಡಿ ಆರ್ಥಿಕ ಅಪರಾಧ ವಿಭಾಗದ ಐಜಿಪಿ ಹೇಮಂತ್ ನಿಂಬಾಳ್ಕರ್, ಅಂದಿನಿ ಪೂರ್ವ ವಿಭಾಗದ ಡಿಸಿಪಿ ಅಜಯ್ ಹಿಲೋರಿ ಮನೆ , ಸಿಐಡಿ ಡಿವೈಎಸ್​ಪಿ ಶ್ರೀಧರ್, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಮೇಶ ಹಾಗೂ ಕೆಎಎಸ್ ಅಧಿಕಾರಿ ಎಸಿ ನಾಗರಾಜ್, ಅಮಾನತಾದ ಡಿಸಿ ವಿಜಯ್ ಶಂಕರ್, ಗ್ರಾಮ ಲೆಕ್ಕಿಗ ಹಾಗೂ ಬಿಡಿಎ ಮುಖ್ಯ ಎಂಜಿನಿಯರ್ ಕುಮಾರ್ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  ದಾಳಿ ವೇಳೆ ಮಹತ್ವದ ದಾಖಲೆ, ಆಸ್ತಿಗೆ ಸಂಬಂಧಿಸಿದ ದಾಖಲೆ, ಡಿಜಿಟಲ್ ಎಲೆಕ್ಟ್ರಾನಿಕ್ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಎಲ್ಲಾ ಅಧಿಕಾರಿಗಳು ಐಎಂಎ ಕಂಪನಿಯಿಂದ ಹಣ ಪಡೆದು ಆ ಕಂಪನಿಗೆ ಕ್ಲೀನ್ ಚೀಟ್ ನೀಡಿದ್ದಾರೆ. ಆರ್​ಬಿಐ ಸೂಚನೆ ನೀಡಿದರೂ ಎಚ್ಚೆತ್ತುಕೊಳ್ಳದೆ ಕಂಪನಿಯ ಪರವಾಗಿ ವರದಿಗಳನ್ನು ನೀಡಿದ್ದಾರೆ. ಆರ್​ಬಿಐನಿಂದ ನಿರಂತರವಾಗಿ ಸರ್ಕಾರಕ್ಕೆ ಪತ್ರಗಳು ಬಂದಿದ್ದು, ಕಂಪನಿ ಅವ್ಯವಹಾರದ ಬಗ್ಗೆ ಮಾಹಿತಿ ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಆರಂಭ ಮಾಡಿ ದೇಶದ್ಯಾಂತ ಜನರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.  ರಾಜಕೀಯ ನಾಯಕರು, ಪೊಲೀಸ್ ಅಧಿಕಾರಿಗಳು‌ ಐಎಎಸ್ ಅಧಿಕಾರಿಗಳಿಗೆ ಲಂಚ ನೀಡಲಾಗಿದೆ. ತನ್ನ ವಂಚನೆ ಮುಂದುವರಿಸಲು ಹಾಗೂ ಕಂಪನಿಯ ವಿರುದ್ದ ಯಾವುದೇ ಕ್ರಮ ಕೈಗೊಳ್ಳದಿರಲು ಐಎಂಎ ಕಂಪನಿ ಮಾಲೀಕ ಅಧಿಕಾರಿಗಳಿಗೆ ಲಂಚ‌ ನೀಡಿದ್ದಾರೆ ಎಂದು ಸಿಬಿಐ ಪ್ರಕಟಣೆಯಲ್ಲಿ ತಿಳಿಸಿದೆ. ಹಗರಣ ಬಗ್ಗೆ ಈಗಾಗಲೇ ಸಿಬಿಐ ನ್ಯಾಯಾಲಯಕ್ಕೆ ಎರಡು ಬಾರಿ ಚಾರ್ಜ್ ಶೀಟ್ ಸಲ್ಲಿಸಿದೆ.

  ಇದನ್ನು ಓದಿ: ಐಎಂಎ ಪ್ರಕರಣ: ಎರಡನೇ ಬಾರಿಗೆ ಸಿಬಿಐ ಮುಂದೆ ವಿಚಾರಣೆಗೆ ಹಾಜರಾದ ಹೇಮಂತ್​​​ ನಿಂಬಾಳ್ಕರ್​​​

  First published: