ರಾಜೀನಾಮೆ ನೀಡಲು ನಾನು ಸಿದ್ಧ; ರಮೇಶ್​ ಜಾರಕಿಹೊಳಿ ಹೊಸ ಬಾಂಬ್​

ರಮೇಶ್ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, 'ನನ್ನನ್ನು ಅನರ್ಹ ಮಾಡೋದಾದರೆ ಮಾಡಲಿ. ನಾನು ರಾಜೀನಾಮೆಗೆ ಸಿದ್ಧನಿದ್ದೇನೆ. ನಾನು ಏಕಾಂಗಿಯಾಗಿದ್ದೇನೆ' ಎಂದು ಕಾಂಗ್ರೆಸ್ ಗೆ ರಮೇಶ್ ಜಾರಕಿಹೊಳಿ ಸವಾಲೆಸೆದಿದ್ದಾರೆ.

Rajesh Duggumane | news18
Updated:February 13, 2019, 2:35 PM IST
ರಾಜೀನಾಮೆ ನೀಡಲು ನಾನು ಸಿದ್ಧ; ರಮೇಶ್​ ಜಾರಕಿಹೊಳಿ ಹೊಸ ಬಾಂಬ್​
ರಮೇಶ್​ ಜಾರಕಿಹೊಳಿ
Rajesh Duggumane | news18
Updated: February 13, 2019, 2:35 PM IST
ಬೆಂಗಳೂರು (ಫೆ.13): ಅನರ್ಹತೆಯ ಅಸ್ತ್ರ ಪ್ರಯೋಗಿಸಲು ಮುಂದಾದ ಕಾಂಗ್ರೆಸ್​​ಗೆ ಅತೃಪ್ತ ಶಾಸಕ ರಮೇಶ್​ ಜಾರಕಿಹೊಳಿ ಶಾಕ್​ ನೀಡಿದ್ದಾರೆ. ನನ್ನನ್ನು ಅನರ್ಹಗೊಳಿಸುವುದಾದರೆ ಏನೂ ಅಡ್ಡಿಯಿಲ್ಲ. ನಾನು ಎಲ್ಲದಕ್ಕೂ ಸಿದ್ಧ ಎಂದು ಹೇಳಿದ್ದಾರೆ.

ಆಪರೇಷನ್ ಕಮಲ ಕೈ ಬಿಟ್ಟ ಬಗ್ಗೆ ಪಕ್ಷೇತರರು, ರೆಬೆಲ್​ ಶಾಸಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ಸಂದೇಶ ರವಾನೆ ಮಾಡಿದ್ದಾರೆ. ಯಡಿಯೂರಪ್ಪ ಅವರ ಈ ನಿರ್ಧಾರ ರೆಬೆಲ್​ ಶಾಸಕರು ಹಾಗೂ ಪಕ್ಷೇತರರಿಗೆ ತೀವ್ರ ಬೇಸರ ಮೂಡಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಅತೃಪ್ತ ಶಾಸಕರು ಹಾಗೂ ಇಬ್ಬರು ಪಕ್ಷೇತರ ಶಾಸಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಅಷ್ಟೇ ಅಲ್ಲ ಇಂದು ವಿಧಾನಸಭೆ ಕಲಾಪಕ್ಕೂ ಹಾಜರಿ ಹಾಕಿದ್ದಾರೆ. ಹಾಗಾಗಿ ಅವರು ಪಕ್ಷದಲ್ಲೇ ಉಳಿಯಲಿದ್ದಾರೆ ಎನ್ನಲಾಗಿತ್ತು. ಆದರೆ, ಈಗ ಅವರು ಮತ್ತೆ ಯು-ಟರ್ನ್​ ತೆಗೆದುಕೊಂಡಿದ್ದಾರೆ.

ಈ ವೇಳೆ ರಮೇಶ್ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, 'ನನ್ನನ್ನು ಅನರ್ಹ ಮಾಡೋದಾದರೆ ಮಾಡಲಿ. ನಾನು ರಾಜೀನಾಮೆಗೆ ಸಿದ್ಧನಿದ್ದೇನೆ. ನಾನು ಏಕಾಂಗಿಯಾಗಿದ್ದೇನೆ' ಎಂದು ಕಾಂಗ್ರೆಸ್ ಗೆ ರಮೇಶ್ ಜಾರಕಿಹೊಳಿ ಸವಾಲೆಸೆದಿದ್ದಾರೆ.

ಇದನ್ನೂ ಓದಿ: ಆಪರೇಷನ್ ಕಮಲ ಕೈ ಬಿಟ್ಟ ಬಿಜೆಪಿ; ಪಕ್ಷದಲ್ಲೇ ಶುರುವಾಯ್ತು ಕಿತ್ತಾಟ

ಇತ್ತ ಕೆ. ಆರ್. ಪೇಟೆ ಕ್ಷೇತ್ರದ ಜೆಡಿಎಸ್‌ ಶಾಸಕ ಬಿ. ನಾಗೇಂದ್ರ ಕೂಡಾ ಪ್ರತಿಕ್ರಿಯಿಸಿದ್ದು, "ನಾವೆಲ್ಲರೂ ಒಗ್ಗಟ್ಟಿದ್ದೇವೆ. ಹೀಗಂತ ನಾವು ಅತೃಪ್ತರಲ್ಲ, ನಾವೆಲ್ಲಅಸಮಾಧಾನಗೊಂಡವರು. ನಮ್ಮೊಂದಿಗೆ ಬಿ.ಸಿ. ಪಾಟೀಲ್ ಸಹ ಇದ್ದಾರೆ. ನಾವು ಪಕ್ಷ ತೊರೆಯುವ ಬಗ್ಗೆ ನಿರ್ಧರಿಸಿಲ್ಲ ಪಕ್ಷ ಬಿಡುವುದಾಗಿ ಎಲ್ಲಿಯೂ ಹೇಳಿಲ್ಲ. ಬೆಂಗಳೂರಿನಿಂದ ಬೇರೆ ಊರಿಗೆ ಹೋದರೆ ಅದು ಆಪರೇಷನ್ ಕಮಲವೇ?," ಎಂದು ಪ್ರಶ್ನಿಸಿದ್ದಾರೆ.

ಸದನದ ಒಳಗೆ ಎಂಬಿ ಪಾಟೀಲ್ ಅವರ ಜೊತೆ ರಮೇಶ್ ಜಾರಕಿಹೊಳಿ ಮತ್ತು ಬಿ. ನಾಗೇಂದ್ರ ಅವರು ಕೆಲ ಹೊತ್ತು ಚರ್ಚೆ ನಡೆಸಿದ್ದು ಕಂಡು ಬಂತು. ಉಮೇಶ್ ಜಾಧವ್ ಅವರು ಸ್ಪೀಕರ್ ರಮೇಶ್ ಕುಮಾರ್ ಭೇಟಿಗೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆಮೇಲೆ ಸಿಗುತ್ತೇನೆಂದು ಜಾಧವ್ ಅವರಿಗೆ ಸ್ಪೀಕರ್ ತಿಳಿಸಿದರೆನ್ನಲಾಗಿದೆ.ಇದನ್ನೂ ಓದಿ: ಬಿಜೆಪಿಯ ಆಪರೇಷನ್ ಠುಸ್ ಮಾಡಿದ ಆಡಿಯೋ: ಸದನಕ್ಕೆ ಬಂದ ಅತೃಪ್ತ ಶಾಸಕರು

ಇದೇ ವೇಳೆ, ಆಪರೇಷನ್ ಕಮಲದ ರೂವಾರಿಗಳೆನ್ನಲಾದ ಬಿಜೆಪಿಯ ಅಶ್ವಥ್ ನಾರಾಯಣ ಮತ್ತು ಬಿವೈ ವಿಜಯೇಂದ್ರ ಅವರಿಬ್ಬರೂ ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ತಾವು ಯಾವುದೇ ತಪ್ಪು ಮಾಡಿಲ್ಲ. ಇದೆಲ್ಲವೂ ವ್ಯವಸ್ಥಿತ ಸಂಚು ಎಂದು ಪ್ರತಿಪಾದಿಸಿದ್ದಾರೆ.

First published:February 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ