Ramanagara: ಅತ್ತೆ ಜೊತೆ ಅಳಿಯನ ಕಾಮ ಪುರಾಣ; ಆಂಟಿ ಕೊಲೆಯಲ್ಲಿ ಅಂತ್ಯ, ಯುವಕ ಜೈಲುಪಾಲು

ತುಂಬಾ ಸಂಸ್ಕಾರ ಉಳ್ಳವಳಾಗಿದ್ದು, ಎಲ್ಲೂ ಕೆಟ್ಟ ಹೆಸರು ಪಡೆಯದೆ, ಉತ್ತಮ ಹೆಣ್ಣಾಗಿದ್ದ ಆಕೆಯನ್ನು ಆತ ಮಣ್ಣುಪಾಲು ಮಾಡಿದ್ದಾನೆ. ಕಾಮಕ್ಕೆ ಕಣ್ಣಿಲ್ಲಾ ಎಂಬ ಗಾದೆಯಂತೆ ಆರಂಭವಾದ ಇವರ ಲವ್ವಿ-ಡವ್ವಿಗೆ ಆಕೆಯೂ ಮಣಿದಿದ್ದಳು.

ಕೊಲೆಯಾದ ಮಹಿಳೆ

ಕೊಲೆಯಾದ ಮಹಿಳೆ

  • Share this:
ಸಂಬಂಧದಲ್ಲಿ ಸೋದರತ್ತೆಯಾದರೂ (Relation Woman) ಈ ಖದೀಮ ಆಕೆಯನ್ನೇ ಬಯಸಿದ್ದ. ಆಕೆಗೆ ವಯಸ್ಸಿನಲ್ಲಿ 9 ವರ್ಷ ಚಿಕ್ಕವನಾದರೂ ಸಹ ಅವಳಿಗೂ ಈತನೇ ಬೇಕಿತ್ತು. ಇವರಿಬ್ಬರ ಕಾಮದಾಟಕ್ಕೆ (Illicit Relationship) ಗಂಡ ಮತ್ತು ಎರಡು ಪುಟ್ಟ ಮಕ್ಕಳು ಬೀದಿಗೆ ಬಂದಿದ್ದಾರೆ. ಆಂಟಿ ಪರಲೋಕ ಸೇರಿದ್ದರೆ, ಕಾಮುಕ ಜೈಲು ಹಕ್ಕಿದ್ದಾನೆ‌. ಜುಲೈ 15ನೇ ಶುಕ್ರವಾರ ಮಧ್ಯಾಹ್ನವೇ ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದ ಹೌಸಿಂಗ್ ಬೋರ್ಡ್ ನಲ್ಲಿ- (Housing Board) ಭೂಹಳ್ಳಿ ಗ್ರಾಮದ ವೆಂಕಟೇಶ್ ಮನೆಯಲ್ಲಿ ಆತನ ಪತ್ನಿ ಹೆಣವಾಗಿ ಬಿದ್ದಿದ್ದಳು. ಮನೆಯ ಬಳಿ ಬಂದಿದ್ದ ಕೊಲೆಗಾರ ಮೃತ ಗೀತಾಳ ಪತಿ ವೆಂಕಟೇಶ್ ಮನೆಯಿಂದ ಹೊರ ಹೋಗುವ ತನಕ ಮುಖ್ಯ ರಸ್ತೆಯಲ್ಲಿ ಕಾದಿದ್ದು, ಆತ ಹೊರ ಹೋದ ನಂತರ ಮನೆಯ ಮುಂದೆ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಹೀರೋ ಹೋಂಡಾ ಫ್ಯಾಷನ್ ಪ್ಲಸ್ ಬೈಕ್ ನಿಲ್ಲಿಸಿ, ಹೆಲ್ಮೆಟ್ ಗೇಟಿನ ಒಳಗಿನ ಬಾಗಿಲ ಬಳಿ ಇಟ್ಟು ಮನೆ ಒಳ ಹೋಗಿದ್ದಾನೆ. ಯಾವಾಗಲೂ ಬಾಗಿಲು ಹಾಕಿಕೊಂಡೇ ಇದ್ದ ಗೀತಾ ಬಾಗಿಲು ತೆರೆದು ಒಳಕರೆದು ಕಾಫಿ ಮಾಡಿಕೊಟ್ಟಿದ್ದಾಳೆ.

ಈ ಮೊದಲೇ ಆತನ ಸಂಪರ್ಕದಲ್ಲಿದ್ದ ಆಕೆಗೆ ಆತನ ಜೊತೆ ಮನೆಯಲ್ಲಿ ಎಲ್ಲವೂ ನಡೆದಿದೆ. ನಂತರವೇ ಆತ ಕುತ್ತಿಗೆಯನ್ನು ಸೀಳಿ ಕೊಲೆಗೈದಿದ್ದಾನೆ. ಮುಂದಾಲೋಚನೆಯಿಂದಲೇ ಆಗಮಿಸಿದ್ದ ಅವನು, ಕೈಗಳಿಗೆ ಗ್ಲೌಸ್ ಹಾಕಿಕೊಂಡು, ರಕ್ತ ಚಿಮ್ಮಿದರೂ ಗೊತ್ತಾಗದಿರಲೆಂದು ಕೆಂಪು ಬಣ್ಣದ ಅಂಗಿ ಹಾಕಿಕೊಂಡು ಬಂದೇ ಕೊಲೆಗೈದಿದ್ದಾನೆ. ನಂತರ ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಬಂದ ಮಗ ನೋಡಿದ ಬಳಿಕ ಘಟನೆ ಹೊರಬಂದಿದೆ.

ಇದನ್ನೂ ಓದಿ:  Basavaraj Bommai: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ, ಬೊಂಬೆ ಸಿಎಂ ಎಂದ ಕಾಂಗ್ರೆಸ್!

ಮೂರು ವರ್ಷಗಳಿಂದ ಇಬ್ಬರ ಲವ್ವಿ ಡವ್ವಿ

ಕೊಲೆಗಾರ ಅಜಯ್ (24) ಬಿನ್ ಗೋವಿಂದರಾಜು ಗೀತಾಳ ಪತಿಯ ಖಾಸಾ ಅಕ್ಕನ ಮಗ. ವೆಂಕಟೇಶ್​ಗೆ ಮೂವರು ಸಹೋದರಿಯರು. ಹಲಗೂರು ಸಮೀಪದ ದಳವಾಯಿ ಕೋಡಿಹಳ್ಳಿ ಗ್ರಾಮಕ್ಕೆ ಮದುವೆಯಾಗಿದ್ದ ಸಹೋದರಿಯ ಮಗನೇ ಅಜಯ್.

Illicit Relationship Young man Kills woman in Ramanagara atvr mrq
ಸಾಂದರ್ಭಿಕ ಚಿತ್ರ


ಯಾವುದೋ ಕೆಟ್ಟ ಘಳಿಗೆಯಲ್ಲಿ, ಆತನ ಬಲವಂತಕ್ಕೆ ಮಣಿದು ಕಳೆದ ಮೂರು ವರ್ಷಗಳಿಂದಲೂ ಇವರಿಬ್ಬರ ಲವ್ವಿ-ಡವ್ವಿ ನಡೆಯುತ್ತಿತ್ತು. ಬೇರೆಯವರಿಗೆ ಇರಲಿ ಕುಟುಂಬದವರಿಗೂ ಗೊತ್ತೇ ಇರಲಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಆಕೆಯೂ ಸಹ ಗಂಡನ ಮನೆ, ತಾಯಿಯ ಮನೆ ಹಾಗೂ ಆಕೆ ಇದ್ದ ನಗರದ ಮನೆಯ ಅಕ್ಕಪಕ್ಕದಲ್ಲೂ ಕೆಟ್ಟ ಹೆಸರು ಪಡೆದವಳಲ್ಲಾ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

ಆಕೆಗೂ ಆ ಹುಡುಗ ಬೇಕೆನಿಸಿತ್ತು

ತುಂಬಾ ಸಂಸ್ಕಾರ ಉಳ್ಳವಳಾಗಿದ್ದು, ಎಲ್ಲೂ ಕೆಟ್ಟ ಹೆಸರು ಪಡೆಯದೆ, ಉತ್ತಮ ಹೆಣ್ಣಾಗಿದ್ದ ಆಕೆಯನ್ನು ಆತ ಮಣ್ಣುಪಾಲು ಮಾಡಿದ್ದಾನೆ. ಕಾಮಕ್ಕೆ ಕಣ್ಣಿಲ್ಲಾ ಎಂಬ ಗಾದೆಯಂತೆ ಆರಂಭವಾದ ಇವರ ಲವ್ವಿ-ಡವ್ವಿಗೆ ಆಕೆಯೂ ಮಣಿದಿದ್ದಳು.

Illicit Relationship Young man Kills woman in Ramanagara atvr mrq
ಸಾಂದರ್ಭಿಕ ಚಿತ್ರ


ಕೋಡಿಹುಚ್ಚು ಮನಸ್ಸಿನ ಹುಡುಗನಿಗೆ ಆಕೆ ಸಂಪೂರ್ಣವಾಗಿ ಬೇಕೆನಿಸಿತ್ತು. ಆದರೆ ಆಕೆಗೆ ಆತ ಉಪ್ಪಿನಕಾಯಿಯಂತೆ ಸಾಕಿತ್ತು. ಆತ ಹೇಳಿದಂತೆ ಕೇಳದ ಆಕೆಗೆ ಗತಿ ಕಾಣಿಸಲೆಂದೇ ರಿಹರ್ಸಲ್ ನಡೆಸಿದ ಪಾಪಿ ಎರಡು ಎಳೆಯ ಕಂದಮ್ಮಗಳನ್ನು ಅನಾಥರಾಗಿಸಿ, ತಾನು ಪ್ರೀತಿಸುತ್ತಿದ್ದ ಹದಿನೆಂಟರ ಹರೆಯದ ಯುವತಿಗೆ ಕೈಕೊಟ್ಟು, ಸಂಬಂಧಿಕರ ಕೆಂಗಣ್ಣಿಗೆ ಗುರಿಯಾಗಿ ಜೈಲಿನಲ್ಲಿ ಮುದ್ದೆ ಮುರಿಯಲು ಅಣಿಯಾಗಿದ್ದಾನೆ.

ಇದನ್ನೂ ಓದಿ:  Politics: ಬೆಟ್ಟಿಂಗ್, ಮೋಸ, ಕಣ್ಣೀರು, ನಾಚಿಕೆ ಪುರಾಣ: ಎಚ್​ಡಿಕೆ-ಅಶ್ವಥ್ ನಾರಾಯಣ ಸಮರ!

ಅವಳು ಕೊಲೆ, ಇವನು ಜೈಲು ಸೇರಿದ

ಒಟ್ಟಾರೆ ಮದುವೆಯಾಗಿ ಗಂಡ, ಮಕ್ಕಳಿದ್ದರೂ ಕಾಮಕ್ಕೆ ಈ ಹೆಣ್ಣು ಬಲಿಯಾಗಿದ್ದಾಳೆ. ಇನ್ನು ವಯಸ್ಸಿದ್ದರೂ ಸಹ ಕಾಮದಾಹಕ್ಕೆ ಒಳಗಾಗಿ ಈ ಖದೀಮ ಒಂದು ಮನೆಯನ್ನೇ ಹಾಳು ಮಾಡಿ ಈಗ ಜೈಲು ಸೇರಿದ್ದಾನೆ. ಇವರಿಬ್ಬರ ನಡುವೆ ಗಂಡ, ಮಕ್ಕಳು ಬೀದಿಗೆ ಬಂದಿದ್ದಾರೆ.
Published by:Mahmadrafik K
First published: