• Home
  • »
  • News
  • »
  • state
  • »
  • Vijayapura: ಹರೆಯದ ಹುಡುಗನ ಮೇಲೆ ಆಸೆ; ಗಂಡನಿಗೆ ಗುಂಡಿ ತೋಡಿದ ಆಂಟಿ

Vijayapura: ಹರೆಯದ ಹುಡುಗನ ಮೇಲೆ ಆಸೆ; ಗಂಡನಿಗೆ ಗುಂಡಿ ತೋಡಿದ ಆಂಟಿ

ರವಿ, ರಾಜೇಶ್ವರಿ ಮತ್ತು ಪ್ರಕಾಶ್

ರವಿ, ರಾಜೇಶ್ವರಿ ಮತ್ತು ಪ್ರಕಾಶ್

ಬಳಿಕ ಪ್ರಿಯಕರ ಆತನ ಸ್ನೇಹಿತ ಇಬ್ಬರು ಎಸ್ಕೇಪ್ ಆಗಿದ್ದು, ರಾಜೇಶ್ವರಿ ಬೆಳಗಿನವರೆಗೂ ಗಂಡನ ಶವದೊಂದಿಗೆ ಎದ್ದು ಬೆಳಗ್ಗೆದ್ದ ಕೂಡಲೇ ಗಂಡನಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಎಲ್ಲರನ್ನೂ ನಂಬಿಸಿದ್ದಾಳೆ. ಆದ್ರೆ ಇವರಿಬ್ಬರ ಮಧ್ಯೆ ಸಂಸಾರ ಸರಿ ಇರಲಿಲ್ಲ ಎಂಬುದು ಗೊತ್ತಿದ್ದುದರಿಂದ ಪ್ರಕಾಶನ ಸಾವಿನಲ್ಲಿ ಸಂಶಯವಿದೆ ಎಂದು ಆತನ ತಂದೆ ಲಕ್ಷ್ಮಣ ಜಲನಗರ ಠಾಣೆಗೆ ದೂರು ನೀಡಿದ್ರು.

ಮುಂದೆ ಓದಿ ...
  • Share this:

ಆಕೆಗೆ 35 ವರ್ಷ. ಅವನಿಗೆ 25 ವರ್ಷ. ಆದರೆ ಅವರಿಬ್ಬರ ನಡುವಿನ ಪ್ರೀತಿ, ಪ್ರೇಮ, ಪ್ರಣಯ, ಕಾಮಕ್ಕೆ ಯಾವುದೇ ವಯಸ್ಸಿನ ಮಿತಿ (Age Limit) ಇರಲಿಲ್ಲ. ಆಕೆಯದ್ದು ಗಂಡ (Husband) ಹಾಗೂ ಮೂರು ಮಕ್ಕಳ (Children) ಸುಂದರ ಕುಟುಂಬ. ಆತ ದುಡಿಯಲು ಕೆಲಸವಿಲ್ಲದೆ (Job) ಕೆಲಸಕ್ಕಾಗಿ ಊರೂರು ಅಲೆಯುತ್ತಿದ್ದ ಪೋಲಿ. ಅದ್ಯಾವ ಗಳಿಗೆಯಲ್ಲಿ ಆಕೆಯ ಜೀವನದಲ್ಲಿ ಆತ ಎಂಟ್ರಿ ಕೊಟ್ಟನೋ ಅಲ್ಲಿಗೆ ಎಲ್ಲವೂ ಬದಲಾಯಿತು. ಮೋಹಕ್ಕೆ ಬಲಿಯಾದ ಮಡದಿ ಗಂಡನಿಗೆ ತಿಥಿ ಮಾಡಿದಳು. ಏನೂ ಅರಿಯದ ಮೂರು ಮಕ್ಕಳು ಅನಾಥವಾದವು. ಎಲ್ಲವನ್ನು ಮಾಡಿ ಏನೂ ಗೊತ್ತಿಲ್ಲದಂತಿದ್ದ ಮೂವರು (Three Accused) ಪೊಲೀಸರ ಅಥಿತಿಯಾದರು. ವಿಜಯಪುರ (Vijayapura) ನಗರದಲ್ಲಿ ನಡೆದ ವ್ಯಕ್ತಿಯ ಅನುಮಾನಾಸ್ಪದ ಸಾವಿನ ರೋಚಕ ಕಹಾನಿ‌ ಇದು


ಬೇರೊಬ್ಬನ ಸಹವಾಸಕ್ಕೆ ಬಿದ್ದ ಅಂಗನವಾಡಿ ಶಿಕ್ಷಕಿಯೊಬ್ಬಳು ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡನಿಗೆ ನಿದ್ದೆ ಮಾತ್ರ ಹಾಕಿ ಆತನಿಗೆ ಪ್ರಜ್ಞೆ ತಪ್ಪಿದ ಬಳಿಕ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರದ ಏಕ್ತಾ ನಗರ ನಿವಾಸಿ ಪ್ರಕಾಶ್ ಹಳ್ಳಿ(40) ಕೊಲೆಯಾದ ದುರ್ದೈವಿ.


ಎರಡ್ಮೂರು ಬಾರಿ ಓಡಿ ಹೋಗಿದ್ದ ರಾಜೇಶ್ವರಿ


ಈತನ ಪತ್ನಿ ರಾಜೇಶ್ವರಿ ಹೊಸಮನಿ ಹಾಗೂ ಆಕೆಯ ಪ್ರಿಯಕರ ರವಿ ತಳವಾರ ಮತ್ತು ರವಿಯ ಸ್ನೇಹಿತ ಗುರುಪಾದ ದಳವಾಯಿ ಕೊಲೆ ಮಾಡಿದ್ದಾರೆ. ಕಳೆದ ಐದಾರು ವರ್ಷಗಳಿಂದಲೂ ರವಿಯೊಂದಿಗೆ ಅನೈತಿಕ ಸಂಭಂದ ಹೊಂದಿದ್ದ ರಾಜೇಶ್ವರಿ ಈಗಾಗಲೇ ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣದ ಸಮೇತ ಎರಡ್ಮೂರು ಬಾರಿ ರವಿಯೊಂದಿಗೆ ಓಡಿಹೋಗಿ, ತಿಂಗಳುಗಳ ವರೆಗೆ ಆತನೊಂದಿಗಿದ್ದು ಮತ್ತೆ ವಾಪಸ್ ಬಂದಿದ್ಲು.


ಇದನ್ನೂ ಓದಿ:  Hubballi Crime News: ಯುವಕನ ಕೊಲೆ, ಇಬ್ಬರಿಗೆ ಚಾಕು ಇರಿತ; ಏನಾಗ್ತಿದೆ ಹುಬ್ಬಳ್ಳಿಯಲ್ಲಿ?


ಇಷ್ಟಾದರೂ ಸಹ ಪತ್ನಿ ಬೇಕು ಎಂದು ನೀತಿಗೆಟ್ಟ ಈಕೆಯನ್ನು ಒಪ್ಪಿಕೊಂಡ ಪ್ರಕಾಶ್ ಹಳ್ಳಿ ಒಪ್ಪಿಕೊಂಡು ಸಂಸಾರ ಸಾಗಿಸುತ್ತಿದ್ದ. ವಿಜಯಪುರದಲ್ಲಿ ಪಾನ್ ಶಾಪ್ ಇಟ್ಟಿಕೊಂಡಿದ್ದ ಪ್ರಕಾಶ ಜೂನ್ 8ರಂದು ರಾತ್ರಿ ಮನೆಗೆ ಬಂದಿದ್ದ ವೇಳೆ ಆತನಿಗೆ ಊಟಕ್ಕೆ ಕೊಟ್ಟಿದ್ದ ಚಿಕನ್ ಸಾರಿನಲ್ಲಿ ನಿದ್ದೆ ಮಾತ್ರ ಬೆರೆಸಿದ್ದಳು ರಾಜೇಶ್ವರಿ.


ಮೂವರು ಸೇರಿ ಕೊಲೆ


ಪತಿಗೆ ಪ್ರಜ್ಞೆ ತಪ್ಪಿದ ಬಳಿಕ ಮೊದಲೇ ಪ್ಲಾನ್ ಮಾಡಿಕೊಂಡಿದ್ದಂತೆ ಪ್ರಿಯಕರನಿಗೆ ಕರೆ ಮಾಡಿ ಮದ್ಯರಾತ್ರಿ ಮನೆಗೆ ಕರೆಸಿದ್ದಳು. ರಾತ್ರಿ ಮನೆಗೆ ಬಂದ ಪ್ರಿಯಕರ ರವಿ ತಳವಾರ ಪ್ರಕಾಶ್ ನ ಮೇಲೆ ಕುಳಿತು ಕೈ ಹಿಡಿದಿದ್ರೆ, ಪತ್ನಿ ರಾಜೇಶ್ವರಿ ಕಾಲು ಹಿಡಿದಿದ್ದಾಳೆ. ಇದೇ ವೇಳೆ ರವಿ ಜೊತೆಗೆ ಬಂದಿದ್ದ ಆತನ ಸ್ನೇಹಿತ ಗುರುಪಾದ ದಳವಾಯಿ ಸೀರೆಯಿಂದ ಕತ್ತಿಗೆ ಬಿಗಿಯಾಗಿ ಬಿಗಿದು ಮೂವರು ಸೇರಿ ಕೊಲೆ ಮಾಡಿದ್ದಾರೆ.


ಪ್ರಕಾಶ್ ತಂದೆಯಿಂದ ದೂರು ದಾಖಲು


ಬಳಿಕ ಪ್ರಿಯಕರ ಆತನ ಸ್ನೇಹಿತ ಇಬ್ಬರು ಎಸ್ಕೇಪ್ ಆಗಿದ್ದು, ರಾಜೇಶ್ವರಿ ಬೆಳಗಿನವರೆಗೂ ಗಂಡನ ಶವದೊಂದಿಗೆ ಎದ್ದು ಬೆಳಗ್ಗೆದ್ದ ಕೂಡಲೇ ಗಂಡನಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಎಲ್ಲರನ್ನೂ ನಂಬಿಸಿದ್ದಾಳೆ. ಆದ್ರೆ ಇವರಿಬ್ಬರ ಮಧ್ಯೆ ಸಂಸಾರ ಸರಿ ಇರಲಿಲ್ಲ ಎಂಬುದು ಗೊತ್ತಿದ್ದುದರಿಂದ ಪ್ರಕಾಶನ ಸಾವಿನಲ್ಲಿ ಸಂಶಯವಿದೆ ಎಂದು ಆತನ ತಂದೆ ಲಕ್ಷ್ಮಣ ಜಲನಗರ ಠಾಣೆಗೆ ದೂರು ನೀಡಿದ್ರು.


ಓದಿಸಿ ಉದ್ಯೋಗ ಕೊಡಿಸಿದ್ದ ಗಂಡ


ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ ಬಳಿಕ ಸತ್ಯಾಂಶ ಹೊರಬಿದ್ದಿದೆ. ಪ್ರಕಾಶ್ ನನ್ನು ಕೊಲೆ ಮಾಡಿದ ರಾಜೇಶ್ವರಿ, ರವಿ ಹಾಗೂ ಗುರುಪಾದನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಂದು ಮುಖ್ಯ ವಿಚಾರ ಅಂದ್ರೆ 10ನೇ ತರಗತಿ ಫೇಲ್ ಆಗಿದ್ದ ರಾಜೇಶ್ವರಿಯನ್ನು ಮದುವೆಯಾದ ಬಳಿಕ ಓದಿಸಿ ಪಿಯುಸಿ ಪಾಸ್ ಮಾಡಿಸಿ ಅಂಗನವಾಡಿ ಕಾರ್ಯಕರ್ತೆಯ ನೌಕರಿಯನ್ನೂ ಸಹ ಪ್ರಕಾಶ್ ಕೊಡಿಸಿದ್ದ. ಇಂತಹ ಪತಿಯನ್ನೇ ಪ್ಲಾನ್ ಮಾಡಿ ಬಲಿ ತೆಗೆದುಕೊಂಡಿದ್ದಾಳೆ ಈ ಕಿರಾತಕಿ ಅಂಗನವಾಡಿ ಟೀಚರ್ ರಾಜೇಶ್ವರಿ.


ಪರೀಕ್ಷೆ ಬರೆಯಲು ತೆರಳಿದ್ದಾಗ ಲವ್


10ನೇ ತರಗತಿ ಫೇಲ್ ಆಗಿದ್ದ ರಾಜೇಶ್ವರಿಯನ್ನು ಪತಿ ಪ್ರಕಾಶ ಓದಿಸಿ ಶಿಕ್ಷಣ ಕೊಡಿಸಿದ್ದ. ಜೀವನಕ್ಕೊಂದು ಆಧಾರವಾಗಲಿ ಎಂದು ಅಂಗನವಾಡಿ ಶಿಕ್ಷಕಿಯನ್ನಾಗಿ ಮಾಡಿದ್ದ. ಅಂಗನವಾಡಿ ಶಿಕ್ಷಕಿ ಜೊತೆಗೆ ಇನ್ನೂ ಬೇರೆ ಹುದ್ದೆ  ದೊರೆಯಲಿ ಅನ್ನೋ ಕಾರಣಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ತಯಾರಿ ಮಾಡಿಸಿದ್ದ. ಈ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ರಾಜೇಶ್ವರಿ ತೆರಳಿದ್ಧ ವೇಳೆಯಲ್ಲಿ ರವಿ ಆಕೆಗೆ ಪರಿಚಯವಾಗಿದ್ದು.


ಇದನ್ನೂ ಓದಿ:  Hassan Crime News: ತಾಳಿ ಕಟ್ಟಿದ ಪತಿಗೆ ಚಟ್ಟ ಕಟ್ಟಿದ ಪತ್ನಿ; ಪಾತಕಿಗೆ ಅಮ್ಮ, ಮಗ ಸಾಥ್​


ಈ ಹಿಂದೆಯೂ ಇದೇ ರವಿ ಜೊತೆಗೆ ರಾಜೇಶ್ವರಿ ಮೂರು ಸಲ ಮನೆ ಬಿಟ್ಟು ಓಡಿಹೋಗಿದ್ದಳು. ಆದರೆ ಮಕ್ಕಳ ಪಾಲನೆ ದೃಷ್ಟಿಯಿಂದ ಅವಳು ವಾಪಸ್ ಬಂದಾಗ ಪ್ರಕಾಶ್ ಹಾಗೂ ಆತನ ಮನೆಯವರು ಯಾವುದೇ ತಕರಾರು ಮಾಡಿದಿಲ್ಲ. ಮಕ್ಕಳ ಜೀವನ ಹಾಳಾಗುತ್ತೆ, ಆಗಿದ್ದು, ಆಗಿ ಹೋಯಿತು ಮುಂದೆ ಮತ್ತೆ ಈ ರೀತಿಯ ತಪ್ಪು ಮಾಡಬೇಡ ಎಂದು ಬುದ್ದಿವಾದ ಹೇಳಿದ್ದರು. ಆದರೆ ಹಿರಿಯರ ಬುದ್ದಿವಾದ ಅರ್ಥ ಮಾಡಿಕೊಳ್ಳದ ರಾಜೇಶ್ವರಿ ಪ್ರೀಯಕರ ರವಿಯನ್ನು ಬಿಟ್ಟಿರಲಿಲ್ಲ. ಕೊನೆಗೆ ಅಕ್ರಮ ಸಂಬಂಧಕ್ಕೆ ಗಂಡ ಇದ್ದರೆ ಸಮಸ್ಯೆಯಾಗುತ್ತೆ ಎಂದು ಆತನ ಕಥೆ ಮುಗಿಸಿದ್ದಾಳೆ.


ಪ್ರಿಯಕರನೊಂದಿಗೆ ಜೈಲು ಸೇರಿದ್ಳು


ಮುದ್ದಾದ ಮೂರು ಗಂಡು ಮಕ್ಕಳಿದ್ರೂ ಸಹ ಬೇರೊಬ್ಬನ ಸಹವಾಸಕ್ಕೆ ಬಿದ್ದ ರಾಜೇಶ್ವರಿ ತಾನೊಬ್ಬಳು ಮಕ್ಕಳಿಗೆ ನೀತಿ ಪಾಠ ಹೇಳಿಕೊಡುವ ಅಂಗನವಾಡಿ ಶಿಕ್ಷಕಿ ಎಂಬುದನ್ನೂ ಮರೆತು ತಪ್ಪು ದಾರಿ ತುಳಿದಿದ್ದಾಳೆ. ಉಪ್ಪು ತಿಂದಮೇಲೆ ನೀರು ಕುಡಿಯಲೇಬೇಕು ಎಂಬಂತೆ ಮಾಡಿದ ತಪ್ಪಿಗೆ ಇದೀಗ ಪ್ರಿಯಕರನೊಂದಿಗೆ ಜೈಲು ಸೇರಿದ್ದಾಳೆ.


ವರದಿ: ಗುರು ಗದ್ದನಕೇರಿ

Published by:Mahmadrafik K
First published: