Kalaburagi: ಪಲ್ಲಂಗದಾಸೆಗಾಗಿ ಪ್ರಾಣ ಕಳೆದುಕೊಂಡ ಮಹಿಳೆ: ವಿದೇಶದಲ್ಲಿ ಪತಿ, ಇಲ್ಲಿ ಮತ್ತೊಬ್ಬನ ಜೊತೆ ಸಂಬಂಧ

ಕಳೆದ ರಾತ್ರಿಯೂ ವಸೀಂ ಅಕ್ರಂ ಕಂಠಪೂರ್ತಿ ಕುಡಿದು ಬಂದು ಶಹಾನಳ ಮನೆಗೆ ಬಂದು ಹಣ ಕೊಡುವಂತೆ ಕೇಳಿದ್ದಾನೆ. ಹಣ ಕೊಡಲ್ಲ ಅಂತಾ ಹೇಳಿದಕ್ಕೆ ರೊಚ್ಚಿಗೆದ್ದ ವಸೀಂ ಅಕ್ರಂ, ಚಾಕುವಿನಿಂದ ಶಹನಾಳ ಕತ್ತು‌ ಸೀಳಿ ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ.

ಕೊಲೆಯಾದ ಮಹಿಳೆ

ಕೊಲೆಯಾದ ಮಹಿಳೆ

  • Share this:
ಪತಿ ಸೌದಿ ಅರೇಬಿಯಾ(Saudy Arabia)ದಲ್ಲಿದ್ದ ಕಾರಣ, ಇಲ್ಲಿ ಮತ್ತೊಬ್ಬನ ಜೊತೆ ಅಕ್ರಮ ಸಂಬಂಧ (Illicit Affair) ಹೊಂದಿದ್ದ ಮಹಿಳೆ ಆತನಿಂದಲೇ ಕೊಲೆ(Murder)ಯಾಗಿದ್ದಾಳೆ. ಕಂಠಪೂರ್ತಿ ಕುಡಿದ ಬಂದ ಇನಿಯ ಮಹಿಳೆಯ ಬಳಿ ಹಣ (Money) ಕೇಳಿದ್ದಾನೆ. ಹಣ ಕೊಡಲು ಮಹಿಳೆ ಒಪ್ಪದಿದ್ದಾಗ ಆತನಿಂದಲೇ ಕೊಲೆಯಾಗಿದ್ದಾಳೆ. ಕಲಬುರಗಿ(Kalaburagi)ಯಲ್ಲಿ ಈ ಕೊಲೆ ನಡೆದಿದೆ. 36 ವರ್ಷದ ಶಹನಾ ಬೇಗಂ. 2004ರಲ್ಲಿ ಶಹನಾ ಬೇಗಂಗೆ ಮದುವೆ(Marriage)ಯಾಗಿದ್ದು, ನಾಲ್ಕು ಮಕ್ಕಳಿವೆ. ಪತಿ ಉದ್ಯೋಗ ಅರಸಿ ಸೌದಿ ಅರೇಬಿಯಾಗೆ ತೆರಳಿದ್ದು, ಅಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಇತ್ತ ಗಾರ್ಮೆಂಟ್ (Garment) ಕೆಲಸ ಮಾಡ್ತಿದ್ದ ಶಹನಾಳಿಗೆ ವರ್ಷ ಕಳೆದಂತೆ ಒಂಟಿತನ ಕಾಡಲಾರಂಭಿಸಿತ್ತು.. ಆ ಟೈಮಲ್ಲಿ‌ ಪರಿಚಯವಾಗಿದ್ದೇ ಬಿಲಾಲಬಾದ್ ಕಾಲೋನಿ ನಿವಾಸಿ 26 ವರ್ಷದ ವಸೀಂ ಅಕ್ರಂ.

ವಸೀಂ ಅಕ್ರಂ ದಿನ‌ ಕಳೆದಂತೆ ಶಹಾನ ಬೇಗಂ ಜೊತೆ ಮಾತಾಡೊದು ಮನೆಗೆ ಹೋಗಿ ರಾತ್ರಿ ಉಳಿದುಕೊಳ್ಳಲು ಮಾಡಿದ್ದನು. ಕೆಲವೇ ದಿನಗಳಲ್ಲಿ ಇಬ್ಬರ ಮಧ್ಯೆ ಸಂಬಂಧ ಕೂಡ ಬೆಳೆದಿದೆ. ಕೆಲ ದಿನಗಳ ನಂತರ ವಸೀಂ ಅಕ್ರಂ ನಿತ್ಯವು ಕುಡಿದು ಬಂದು ಹಣ ಕೊಡುವಂತೆ ಶಹಾನಳಿಗೆ ಪೀಡಿಸಲಾರಂಭಿಸಿದ್ದನು.

ಬರ್ಬರವಾಗಿ ಕೊಲೆಗೈದು ಎಸ್ಕೇಪ್

ಕಳೆದ ರಾತ್ರಿಯೂ ವಸೀಂ ಅಕ್ರಂ ಕಂಠಪೂರ್ತಿ ಕುಡಿದು ಬಂದು ಶಹಾನಳ ಮನೆಗೆ ಬಂದು ಹಣ ಕೊಡುವಂತೆ ಕೇಳಿದ್ದಾನೆ. ಹಣ ಕೊಡಲ್ಲ ಅಂತಾ ಹೇಳಿದಕ್ಕೆ ರೊಚ್ಚಿಗೆದ್ದ ವಸೀಂ ಅಕ್ರಂ, ಚಾಕುವಿನಿಂದ ಶಹನಾಳ ಕತ್ತು‌ ಸೀಳಿ ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ.

ಇದನ್ನೂ ಓದಿ:  Chitradurga: ಗಂಡನನ್ನ ಕೊಂದು ಬಾ, ಸಂಸಾರ ಮಾಡೋಣ ಅಂದ್ಳು: ಕಾಮದಾಸೆಗೆ ಪತಿಯ ಕೊಲೆಗೆ ಸುಪಾರಿ

ಇನ್ನೂ ಘಟನೆ ನಂತರ ಸ್ಥಳಕ್ಕೆ ರೋಜಾ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕೊಲೆ ಮಾಡಿ ಪರಾರಿಯಾಗಿರುವ ವಸೀಂ ಅಕ್ರಂನ ಬಂಧನಕ್ಕೆ ಬಲೆ ಬೀಸಲಾಗಿದೆ ಅಂತಾ ಡಿಸಿಪಿ ಅಡ್ಡೂರು ಶ್ರೀನಿವಾಸುಲು ಹೇಳಿದ್ದಾರೆ.

ಎಂಟು ತಿಂಗಳ ಹಿಂದೆ ಓಡಿ ಹೋಗಿದ್ರು!

ಇನ್ನೂ ಶಹಾನಳ ಪತಿ ಕಳೆದ ಹಲವು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ವರ್ಷಕ್ಕೆ ಒಂದೆರಡು ಬಾರಿ ತವರಿಗೆ ಬಂದು ಹೋಗುತ್ತಿದ್ದರು. ಇತ್ತ ಶಹನಾಳು ವಸೀಂ ಅಕ್ರಂ ಜೊತೆ ಗಾಢವಾದ ಸಂಬಂಧ ಬೆಳೆದಿದ್ದಳು. ನಾ ಬಿಡಲಾರೆ ಅಂತಾ ನಿತ್ಯವು ಶಹನಾಳ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಎಂಟು ತಿಂಗಳ ಹಿಂದೆ ಇಬ್ಬರು ಮನೆ ಬಿಟ್ಟು ಓಡಿಹೋಗಿದ್ದರು. ನಂತರ ತವರಿಗೆ ಬಂದಿದ್ದ ಶಹನಾಳ ಪತಿ, ಪತ್ನಿಗೆ ಬುದ್ದಿವಾದ ಹೇಳಿ ಹೋಗಿದ್ದನು ಎನ್ನಲಾಗಿದೆ.

ಹತ್ಯೆಯನ್ನ ಶಹನಾಳ ಮಗಳು ಮತ್ತು ಸ್ಥಳೀಯರು ಸಹ ನೋಡಿ ಬೆಚ್ಚಿಬಿದ್ದಿದ್ದಾರೆ. ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನ ಬಿಟ್ಟು ಇದೀಗ ಶಹನಾಳ ಬಾರದ ಲೋಕಕ್ಕೆ ಹೋಗಿದ್ದಾಳೆ.

ಆರೋಪಿ ಬಂಧನಕ್ಕೆ ಕುಟುಂಬಸ್ಥರ ಆಗ್ರಹ

ಆರೋಪಿ ವಸೀಂ ಅಕ್ರಂ ದಿನಾಲು ಕುಡಿದು ಬಂದು ಹಣ ಕೊಡುವಂತೆ ಶಹನಾಳಿಗೆ ಪೀಡಿಸುತ್ತಿದ್ದ. ಅಲ್ಲದೇ ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆ ಕೊಡುತ್ತಿದ್ದ. ಹೀಗಾಗಿ ಸಹೋದರಿಯನ್ನ ಕೊಲೆ ಮಾಡಿ ಪರಾರಿಯಾಗಿರುವ ವಸೀಂ ಅಕ್ರಂನನ್ನ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಶಹನಾಳ ಸಹೋದರ ಬಾಬಾ ಒತ್ತಾಯಿಸಿದ್ದಾರೆ.

ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ ಪ್ರೇಮಿಗಳ ಆತ್ಮಹತ್ಯೆ

ಮದುವೆಗೆ (Love Marriage) ಪೋಷಕರು (Parents) ವಿರೋಧ ವ್ಯಕ್ತಪಡಿಸಿದ್ದರಿಂದ ಬೇಸರಗೊಂಡ ಜೋಡಿ (Couple) ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ಆನೇಕಲ್ (Anekal) ಸಂಮದೂರು ಬಳಿಯಲ್ಲಿ ರೈಲಿಗೆ ತಲೆಕೊಟ್ಟ ಜೋಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Koppal Murder: ಇನಿಯನ ಜೊತೆ ಸಿಕ್ಕಿ ಬಿದ್ದಿದ್ದಕ್ಕೆ 22 ವರ್ಷದ ಮಗನ ಉಸಿರು ನಿಲ್ಲಿಸಿದ ತಾಯಿ!

ಮಣಿ ಮತ್ತು ಅನುಷಾ ಆತ್ಮಹತ್ಯೆಗೆ ಶರಣಾದ ಜೋಡಿ. ಮಾರನಾಯಕನಹಳ್ಳಿಯ ಮಣಿ ಹಾಗೂ ಕೊತ್ತಗೊಂಡಪಲ್ಲಿಯ ಅನುಷಾ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಲು ಸಹ ನಿರ್ಧರಿಸಿದ್ದರು. ಆದ್ರೆ ಇಬ್ಬರ ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು ಎಂದು ವರದಿಯಾಗಿದೆ.
Published by:Mahmadrafik K
First published: