• Home
  • »
  • News
  • »
  • state
  • »
  • Chitradurga: ಗಂಡನನ್ನ ಕೊಂದು ಬಾ, ಸಂಸಾರ ಮಾಡೋಣ ಅಂದ್ಳು: ಕಾಮದಾಸೆಗೆ ಪತಿಯ ಕೊಲೆಗೆ ಸುಪಾರಿ

Chitradurga: ಗಂಡನನ್ನ ಕೊಂದು ಬಾ, ಸಂಸಾರ ಮಾಡೋಣ ಅಂದ್ಳು: ಕಾಮದಾಸೆಗೆ ಪತಿಯ ಕೊಲೆಗೆ ಸುಪಾರಿ

ಕೊಲೆ ಆರೋಪಿಗಳು ಮತ್ತು ಪೊಲೀಸ್ ತಂಡ

ಕೊಲೆ ಆರೋಪಿಗಳು ಮತ್ತು ಪೊಲೀಸ್ ತಂಡ

ಅತಿಯಾದ ಮದ್ಯ ಸೇವಿಸಿದ ನಿಂಗಪ್ಪ ನಿದ್ದೆಗೆ ಜಾರುತ್ತಿದ್ದಂತೆ, ಆತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಶವವನ್ನು ಗದ್ದೆಯೊಳಗೆ ಎಳೆದು ತಂದು ಹೊಟ್ಟಿನ ಮಧ್ಯೆ ಮುಚ್ಚಿಡಲು ಪ್ರಯತ್ನಿಸಿದ್ದಾನೆ. ಆದ್ರೆ ಜನರು ಬರುತ್ತಿದ್ದಂತೆ ಹೊನ್ನೂರುಸ್ವಾಮಿ ಅಲ್ಲಿಂದ ಕಾಲ್ಕಿತ್ತಿದ್ದನು.

ಮುಂದೆ ಓದಿ ...
  • Share this:

ಚಿತ್ರದುರ್ಗ:  ಪತಿ(Husband)ಯೇ ಪರದೈವ ಅನ್ನೋ ಪತ್ನಿ(Wife)ಯರನ್ನ ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೇ ಪರ ಪುರುಷನ ಸಂಬಂಧಕ್ಕಾಗಿ (Illicit Relationship) ಪತ್ನಿಯೇ ಪತಿಗೆ ಸ್ಕೆಚ್ ಹಾಕಿ ಪ್ರಿಯಕರನಿಂದ ಹತ್ಯೆ ಮಾಡಿಸಿದ್ದಾಳೆ. ಫೋನ್ ಕಾಲ್ ಮಾಡಿ  ಪತಿಯ ಹತ್ಯೆಯ ಹಿಂದೆ ನವರಂಗಿ ಆಟವಾಡಿದ್ದ ಖತರ್ನಾಕ್ ಪತ್ನಿ ಪ್ರಿಯಕರನ ಜೊತೆ ಸೇರಿ ಮಾಡಿದ ತಪ್ಪಿಗೆ ಜೈಲು ಸೇರಿದ್ದಾಳೆ.  ಫೆಬ್ರವರಿ 21 ರಂದು ಚಿತ್ರದುರ್ಗ (Chitradurga) ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರಾಂಪುರ (Rampur, Molakalmur) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಓರ್ವ ವ್ಯಕ್ತಿಯ ಭೀಕರ ಕೊಲೆ ನಡೆದಿತ್ತು. ಹತ್ಯೆ ವಿಷಯ ತಿಳಿಯುತ್ತಿದ್ದಂತೆ  ಸ್ಥಳಕ್ಕೆ ಪೊಲೀಸರು (Police) ದೌಡಾಯಿಸಿದ್ರು. ಅಲ್ಲದೇ ಕೊಲೆಯಾಗಿರುವ ವ್ಯಕ್ತಿ ಯಾರು ಅಂತ ಪತ್ತೆ ಹಚ್ಚೋಕೆ ಹರ ಸಾಹಸ ಪಟ್ಟಿದ್ದರು. ಕಾರಣ ಆ ವ್ಯಕ್ತಿಯನ್ನ ಕೊಲೆ ಮಾಡಿದ ಆರೋಪಿ ಯಾರಿಗೂ ಸಿಗದೇ ತಲೆಮರೆಸಿಕೊಂಡು ಹೋಗಿದ್ದನು.


40 ವರ್ಷದ ನಿಂಗಪ್ಪ ಕೊಲೆಯಾದ ವ್ಯಕ್ತಿ. ಆಂದ್ರದ ವೆಂಕಟಂಪಲ್ಲಿ ಎಂಬ ಗ್ರಾಮದ ನಿಂಗಪ್ಪ ಮೂಲತಃ ಕುರಿ ವ್ಯಾಪಾರಿ ಆಗಿದ್ದನು. ನಿಂಗಪ್ಪ ರಾಂಪುರ ಸಂಂತೆಗೆ ಕುರಿ ಕೊಳ್ಳೋಕೆ ಬಂದು ಹೆಣವಾಗಿ ಬಿದ್ದಿದ್ದನು.


ಇನ್ನೂ ಈ ವಿಷಯ ತಿಳಿಯುತ್ತಿದ್ದಂತೆ ನಿಂಗಪ್ಪನ ಪತ್ನಿ ಪಾರ್ವತಮ್ಮ ಹಾಗೂ ಅಣ್ಣ ತಿಪ್ಪೇಸ್ವಾಮಿ ಸೇರಿದಂತೆ ಕುಟುಂಬಸ್ಥರು ಓಡೋಡಿ ಬಂದು ನಿಂಗಪ್ಪನ ಮೃತ ದೇಹ ಕಂಡು ಬಿಕ್ಕಿ ಬಿಕ್ಕಿ ಅತ್ತಿದ್ದರು. ಅಲ್ಲದೇ ಆರೋಪಿಗಳನ್ನ ಅರೆಸ್ಟ್ ಮಾಡಿ ಕಠಿಣ ಶಿಕ್ಷೆ ಕೊಡಬೇಕು ಅಂತ ಆಗ್ರಹ ಮಾಡಿದ್ದರು. ಅಷ್ಟೆ ಅಲ್ಲದೇ ರಾಂಪುರ ಪೋಲೀಸ್ ಠಾಣೆಗೆ ದೂರು ಕೂಡ ನೀಡಿದ್ದರು.


ಇದನ್ನೂ ಓದಿ:  Koppal Murder: ಇನಿಯನ ಜೊತೆ ಸಿಕ್ಕಿ ಬಿದ್ದಿದ್ದಕ್ಕೆ 22 ವರ್ಷದ ಮಗನ ಉಸಿರು ನಿಲ್ಲಿಸಿದ ತಾಯಿ!


ಸುಳಿವು ನೀಡದ ಕಾಲ್ ಡೀಟೈಲ್ಸ್, ಸಿಸಿಟಿವಿ ದೃಶ್ಯ


ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಿಂಗಪ್ಪನ ಕಾಲ್ ಡೀಟೈಲ್ಸ್ ಸಹ ಚೆಕ್ ಮಾಡಿದ್ದರು. ಆದ್ರೆ ಇಲ್ಲಿ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಮಾರುಕಟ್ಟೆಯಲ್ಲಿರುವ ಸಿಸಿಟಿವಿ ದೃಶ್ಯಗಳ ಸಹ ಪೊಲೀಸರಿಗೆ ಯಾವುದೇ ಸುಳಿವು ನೀಡಿರಲಿಲ್ಲ. ಕೊನೆಗೆ ಪೊಲೀಸರು ನಿಂಗಪ್ಪನ ಗ್ರಾಮಕ್ಕೆ ತೆರಳಿ, ಮಾಹಿತಿ ಸಂಗ್ರಹಣೆಗೆ ಮುಂದಾಗಿದ್ದರು.


ಗ್ರಾಮಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ ಪೊಲೀಸರು


ನಿಂಗಪ್ಪ ಗ್ರಾಮದಲ್ಲಿ ಯಾರೊಂದಿಗೆ ಜಗಳ ಮಾಡಿಕೊಂಡಿದ್ದಾನಾ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲು ಆರಂಭಿಸಿದರು. ಇದರ ಜೊತೆಗೆ ಪಾರ್ವತಮ್ಮ ಮತ್ತು ನಿಂಗಪ್ಪನ ದಾಂಪತ್ಯ ಹೇಗಿತ್ತು ಅನ್ನೋದರ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದಾರೆ. ಆದ್ರೆ ಆರಂಭದಲ್ಲಿ ಗ್ರಾಮಸ್ಥರು ಪಾರ್ವತಮ್ಮಳ ಅಕ್ರಮ ಸಂಬಂಧದ ಬಗ್ಗೆ ಮಾಹಿತಿ ನೀಡಿರಲಿಲ್ಲ.


ಒಂದು ವರ್ಷದಿಂದ ಗಂಡನ ಕೊಲೆಗೆ ಸ್ಕೆಚ್


ಕೊಲೆಯ ಹಿಂದೆ ಪತ್ನಿ ಪಾರ್ವತಮ್ಮ, ಪ್ರಿಯಕರ ಹೊನ್ನೂರಸ್ವಾಮಿ ಇದ್ದಾರೆ ಅನ್ನೋದು ಪೊಲೀಸರಿಗೆ ಖಾತ್ರಿಯಾಗಿತ್ತು. ಅಕ್ರಮ ಸಂಬಂಧಕ್ಕೆ ನಿಂಗಪ್ಪ ಅಡ್ಡಿಯಾಗ್ತಾನೆ ಅಂತ ಇಬ್ಬರು ಸೇರಿ ಆತನನ್ನು ಕೊಲೆ ಮಾಡಿದ್ದರು. ಕಳೆದ ಒಂದು ವರ್ಷದಿಂದ  ಗಂಡನ ಕೊಲೆಗೆ ಪಾರ್ವತಮ್ಮ ಸ್ಕೆಚ್ ಹಾಕಿದ್ದಳು. ಆದ್ರೆ ಸಕ್ಸಸ್ ಆಗಿರಲಿಲ್ಲ.


ಕೊಂದು ಬಾ, ಸಂಸಾರ ಮಾಡೋಣ ಅಂದ್ಳು


ಇನ್ನು ಫೆ.21ರಂದು ರಾಂಪುರ ಸಂತೆಗೆ ಹೋಗುತ್ತಿರೋದಾಗಿ ನಿಂಗಪ್ಪ ಪತ್ನಿಗೆ ಹೇಳಿದ್ದಾನೆ. ಇತ್ತ ಇನಿಯನಿಗೆ ಫೋನ್ ಮಾಡಿದ ಪಾರ್ವತಮ್ಮ, ಹೇಗಾದ್ರೂ ಮಾಡಿ ಆತನನ್ನು ಕೊಂದು ಬಾ, ಇಬ್ಬರೂ ದೂರ ಹೋಗಿ ಸಂಸಾರ ನಡೆಸೋಣ ಅಂತ ಹೇಳಿದ್ದಳು.


ಮದ್ಯ ಕುಡಿಸಿ ಕಲ್ಲು ಎತ್ತಿ ಹಾಕಿ ಕೊಲೆ


ಪಾರ್ವತಮ್ಮ ಮೇಲಿನ ಆಸೆಗಾಗಿ ಹೊನ್ನೂರುಸ್ವಾಮಿ ರಾಂಪುರಕ್ಕೆ ತೆರಳಿದ್ದಾನೆ. ಅಲ್ಲಿ ನಿಂಗಪ್ಪನ ಜೊತೆ ಸಹಜವಾಗಿ ಮಾತನಾಡಿ ಆತನಿಗೆ ಮದ್ಯ ಕುಡಿಸಿ, ಗ್ರಾಮಕ್ಕೆ ಬಿಡೋದಾಗಿ ಬೈಕ್ ನಲ್ಲಿ ಕರೆದುಕೊಂಡು ಬಂದಿದ್ದಾನೆ. ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿ, ನಿಂಗಪ್ಪನಿಗೆ ಮತ್ತಷ್ಟು ಮದ್ಯ ಕುಡಿಸಿದ್ದಾನೆ.


ಇದನ್ನೂ ಓದಿ:  Udupi: ಸಿಗರೇಟ್ ನಿಂದ ಪತ್ನಿಯನ್ನ ಸುಡುವ ಯತ್ನ: ವೈರಲ್ ವಿಡಿಯೋ ಹಿಂದಿನ ಅಸಲಿ ಕಹಾನಿ ಇಲ್ಲಿದೆ


ಅತಿಯಾದ ಮದ್ಯ ಸೇವಿಸಿದ ನಿಂಗಪ್ಪ ನಿದ್ದೆಗೆ ಜಾರುತ್ತಿದ್ದಂತೆ, ಆತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಶವವನ್ನು ಗದ್ದೆಯೊಳಗೆ ಎಳೆದು ತಂದು ಹೊಟ್ಟಿನ ಮಧ್ಯೆ ಮುಚ್ಚಿಡಲು ಪ್ರಯತ್ನಿಸಿದ್ದಾನೆ. ಆದ್ರೆ ಜನರು ಬರುತ್ತಿದ್ದಂತೆ ಹೊನ್ನೂರುಸ್ವಾಮಿ ಅಲ್ಲಿಂದ ಕಾಲ್ಕಿತ್ತಿದ್ದನು.


ಹೊಸ ಸಂಸಾರದ ಕನಸು ಕಂಡಿದ್ದ ಪಾರ್ವತಮ್ಮ ಮತ್ತು ಹೊನ್ನೂರುಸ್ವಾಮಿಯನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.

Published by:Mahmadrafik K
First published: