ಪಿಜಿ ಮೆಡಿಕಲ್‌ ಸೀಟ್ ಕೌನ್ಸಿಲಿಂಗ್‌ನಲ್ಲಿ ಅಕ್ರಮ?; ಕೋರ್ಟ್‌ ಮೊರೆಹೋದ ಪೋಷಕರು

ಈ ಬಾರಿ ಕೌನ್ಸಲಿಂಗ್ ನಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ ಎನ್ನುವ ಗಂಭೀರ ಆರೋಪವಿದೆ. ಕೆಇಎ ವಿರುದ್ದ ಗಂಭೀರ ಆರೋಪ ಮಾಡುತ್ತಿರುವ ನೊಂದ ಪೋಷಕರು ಕೋರ್ಟ್ ಮೊರೆ ಹೋಗಲು ನಿರ್ಧಾರ ಮಾಡಿದ್ದಾರೆ. ಈಗಾಗಲೇ ಮೆಡಿಕಲ್ ಸೀಟ್ ಕುರಿತು ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ.

  • Share this:
ಬೆಂಗಳೂರು; ಕಡಿಮೆ ರ್‍ಯಾಂಕ್ ಪಡೆದವರಿಗೆ ಮೆಡಿಕಲ್‌ ಸೀಟ್ ಸಿಗಲ್ಲ. ಅಂತದ್ದರಲ್ಲಿ ಕೊನೆಯ ರ್‍ಯಾಂಕ್ ಪಡೆದವರಿಗೆ ಮೆಡಿಕಲ್‌ ಕಾಲೇಜು ಸೀಟ್ ಫಿಕ್ಸ್ ಆಗುತ್ತದೆ ಎಂದರೆ ತುಸು ನಂಬುವುದು ಕಷ್ಟವೇ. ಆದರೆ, ಅಧಿಕಾರಿಗಳು ಮನಸು‌ ಮಾಡಿದ್ರೆ ಏನು ಬೇಕಾದ್ರೂ ಆಗುತ್ತೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಂಬಿದಂತಿದೆ. ಪರಿಣಾಮ ಬಹುದೊಡ್ಡ ಅಕ್ರಮದ ಗಂಭೀರ ಆರೋಪ ಇದೀಗ ಎದುರಾಗಿದೆ‌.

ಪ್ರತಿಭಾವಂತ‌ ವಿದ್ಯಾರ್ಥಿಗಳಿಗೆ ತಮಗಿಷ್ಟವಾದ ಮೆಡಿಕಲ್‌ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ಕನಸು ಕಾಣಬಾರದು. ತಮಗಿಷ್ಟವಾದ ಬಿಡಿ, ಚೆನ್ನಾಗಿ ಓದಿ ಒಳ್ಳೆಯ ರ್‍ಯಾಂಕ್ ಪಡೆದರೂ ಮೆಡಿಕಲ್‌ಸೀಟ್  ಸಿಗದೆ ಅನ್ಯಾಯವಾದ್ರೆ ಹೇಗಾಗುತ್ತೆ? ಇಂಥದೊಂದು ಗಂಭೀರ ಆರೋಪವನ್ನು ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎದುರಿಸುತ್ತಿದೆ.

1,12,163 ರ್‍ಯಾಂಕ್ ಪಡೆದಿರುವ ಆಂಧ್ರದ ವಿದ್ಯಾರ್ಥಿನಿಗೆ ಬೆಂಗಳೂರಿನ ಪ್ರತಿಷ್ಠಿತ ಮೆಡಿಕಲ್‌ ಕಾಲೇಜಿನಲ್ಲಿ ಸೀಟು ಅಲಾಟ್ ಆಗಿದೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ರೇಡಿಯೋಲಾಜಿ ವಿಭಾಗದಲ್ಲಿ ವಿದ್ಯಾರ್ಥಿಗೆ ಹಂಚಿಕೆಯಾಗಿದೆ. ಅದೇ ನಮ್ಮ ರಾಜ್ಯದಲ್ಲಿ 86 ಸಾವಿರ ರ್‍ಯಾಂಕ್ ಪಡೆದ‌ ವಿದ್ಯಾರ್ಥಿಗೆ ಸೀಟ್ ಇಲ್ಲದಂತಾಗಿದೆ.

"ರ್‍ಯಾಂಕ್ ಗೆ ತಕ್ಕ ಸೀಟು ಸಿಗದೆ ನಮ್ಮ‌ ಮಗನಿಗೆ ಅನ್ಯಾಯವಾಗಿದೆ. ಕೆಇಟಿ ಕೌನ್ಸಲಿಂಗ್ ನಲ್ಲಿ ನಮ್ಮ ಮಕ್ಕಳಿಗೆ ಅನ್ಯಾಯವಾಗಿದೆ" ಎಂದು ನೊಂದ ಪೋಷಕರು ನ್ಯೂಸ್ 18 ಮುಂದೆ ಅಲವತ್ತುಕೊಂಡಿದ್ದಾರೆ. ಪ್ರತಿಷ್ಠಿತ ಕಾಲೇಜುಗಳ ಸೀಟುಗಳಿಗೆ ಭಾರಿ ಬೇಡಿಕೆ ಹಿನ್ನೆಲೆ ಪಿಜಿ ಮೆಡಿಕಲ್ ನಲ್ಲಿರುವ ರೆಡಿಯೋಲಾಜಿ, ಪಿಡಿಯಾಟ್ರಿಕ್ಸ್ , ಡರ್ಮಾಟಾಲಜಿ ಹಾಗೂ ಗೈನಾಕಾಲಾಜಿ ಕೋರ್ಸ್ ಗಳ ಸೀಟು ಬ್ಲಾಕಿಂಗ್ ನಡೆಯುತ್ತಿದೆ ಎಂಬ ಆರೋಪವಿದೆ.

ಈ ಬಾರಿ ಕೌನ್ಸಲಿಂಗ್ ನಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ ಎನ್ನುವ ಗಂಭೀರ ಆರೋಪವಿದೆ. ಕೆಇಎ ವಿರುದ್ದ ಗಂಭೀರ ಆರೋಪ ಮಾಡುತ್ತಿರುವ ನೊಂದ ಪೋಷಕರು ಕೋರ್ಟ್ ಮೊರೆ ಹೋಗಲು ನಿರ್ಧಾರ ಮಾಡಿದ್ದಾರೆ. ಈಗಾಗಲೇ ಮೆಡಿಕಲ್ ಸೀಟ್ ಕುರಿತು ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.

ಈ ಬಗ್ಗೆ ಕೆಇಎ ನಿರ್ದೇಶಕ ವೆಂಕಟರಾಜು ನ್ಯೂಸ್ 18 ಗೆ ಕೇಳಿದರೆ, "ಪಿಜಿ ಮೆಡಿಕಲ್ ಕೌನ್ಸಲಿಂಗ್ ಪಾರದರ್ಶಕವಾಗಿ ಜರುಗಿದೆ. ಸೀಟ್ ಅಲಾಟ್ ಮೆಂಟ್‌ನಲ್ಲಿ ನಿಯಮದ ರೀತಿ ನಡೆದಿದೆ. ಕೋರ್ಟ್‌‌ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಹೆಚ್ಚೇನು ಹೇಳಲಾರೆ" ಎಂದು ಪ್ರತಿಕ್ರಿಯೆ ನೀಡುತ್ತಾರೆ‌.

ಇದನ್ನೂ ಓದಿ : ದೆಹಲಿ ಗಲಭೆ; ಜೆಎನ್‌ಯು ಸಂಶೋಧನಾ ವಿದ್ಯಾರ್ಥಿ ಶಾರ್ಜೀಲ್‌ ಇಮಾಮ್‌ರನ್ನು ಮತ್ತೊಮ್ಮೆ ಬಂಧಿಸಿದ ದೆಹಲಿ ಪೊಲೀಸರು

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಡಾ ಸಚ್ಚಿದಾನಂದ ಮಾತನಾಡಿ, "ಕೌನ್ಸಿಲಿಂಗ್ ಮೂರು ರೀತಿ ಹಂತದಲ್ಲಿ ಜರುಗುತ್ತದೆ. ನಾನು ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದೇನೆ. ಕೆಇಎ ನಲ್ಲಿ ಸೀಟ್ ಬ್ಲಾಕಿಂಗ್ ಮಾಡಲು ಬರುವುದಿಲ್ಲ. ಹೆಚ್ಚಿನ ರ್‍ಯಾಂಕ್ ವಿದ್ಯಾರ್ಥಿ ಪ್ರತಿಷ್ಟಿತ ಕಾಲೇಜನ್ನು ನಿರಾಕರಿಸಿದರೆ ಮುಂದಿನವರಿಗೆ ಅವಕಾಶ ಸಿಗುತ್ತೆ" ಎಂದು ತಿಳಿಸಿದ್ದಾರೆ.

ಇದೇ  ಆಗಸ್ಟ್‌ 18ರಂದು ಪಿಜಿ‌ ಮೆಡಿಕಲ್ ಕೌನ್ಸಿಲಿಂಗ್ ನಡೆದಿತ್ತು. ಮಲ್ಲೇಶ್ವರಂ ನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ 161 ಸೀಟುಗಳಿಗೆ ಪಿಜಿ‌ ಮೆಡಿಕಲ್‌ ‌ಕೌನ್ಸಿಲಿಂಗ್ ಜರುಗಿತ್ತು. ಫಿಜಿಕಲ್ ವೆರಿಫಿಕೇಶನ್ ಮೂಲಕ ಜರುಗಿದ ಕೌನ್ಸಿಲಿಂಗ್ ನಲ್ಲಿ 1 ನೇ ರ್‍ಯಾಂಕ್ ನಿಂದ ಕೊನೆ ರ್‍ಯಾಂಕ್ ವರೆಗೂ ಕೌನ್ಸಿಲಿಂಗ್ ನಲ್ಲಿ ವಿದ್ಯಾರ್ಥಿಗಳು, ಪೋಷಕರು ಭಾಗಿಯಾಗಿದ್ದರು. ಆದರೆ, ಇದರಲ್ಲಿ ಅಕ್ರಮ ನಡೆದಿದೆ ಎಂದು ನೊಂದ ಪೋಷಕರು ಇದೀಗ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ‌.
Published by:MAshok Kumar
First published: