ಬೆಂಗಳೂರಿನಲ್ಲಿ ನೀರಿಗೆ ಕನ್ನ : ಕಾವೇರಿ ಕಳ್ಳರಿಗೆ ಜಲ ಮಂಡಳಿ ಶಾಕ್

BWSSB ಕಾನೂನುಬಾಹಿರ ವಿಧಾನಗಳನ್ನು ಪಾಲಿಸುವವರಿಗೆ ಭಾರಿ ದಂಡ ವಿಧಿಸುತ್ತದೆ. ನಮ್ಮ ಅಧಿಕಾರಿಗಳು ಅಕ್ರಮವಾಗಿ ನೀರನ್ನು ಎಲ್ಲಿಯವರೆಗು ಎಳೆದಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ

ಜಲಮಂಡಳಿ

ಜಲಮಂಡಳಿ

  • Share this:
ಬೆಂಗಳೂರು (ಸೆ. 16): ನಗರದ ಹಲವು ಅನಧಿಕೃತ ನೀರಿನ ಸಂಪರ್ಕಗಳು ಪತ್ತೆಯಾಗಿದೆ. ಲೀಗಲ್ ಆಗಿ ಜಲ‌ ಮಂಡಳಿಯಿಂದ ಅನುಮತಿ ಪಡೆದು ನೀರಿನ ಸಂಪರ್ಕ ಕಲ್ಪಿಸಿಕೊಳ್ಳಬೇಕು. ಆದರೆ BWSSB ಕೊಟ್ಟ ಯಾವುದೋ ನೀರಿನ ಸಂಪರ್ಕಕ್ಕೆ ಬೈಪಾಸ್ ಮಾಡಿಕೊಂಡು ನೀರಿಗೆ ಕನ್ನ ಹಾಕಿರುವ ಘಟನೆಗಳು ಇದೀಗ ಬೆಳಕಿಗೆ ಬಂದಿದೆ. ಅಂಥವರ ವಿರುದ್ಧ ಜಲ ಮಂಡಳಿ ಇದೀಗ ದಂಡಾಸ್ತ್ರ ಪ್ರಯೋಗ ಮಾಡಿದೆ. 

ಬೆಂಗಳೂರಿಲ್ಲಿ ಪತ್ತೆಯಾಯ್ತು ಅನಧಿಕೃತ ನೀರಿ‌ನ‌ ಸಂಪರ್ಕಗಳು.!!

ಮಹಾನಗರ ಬೆಂಗಳೂರಿಗೆ ನೀರಿನ ಸಮಸ್ಯೆ ಇಲ್ಲ ಎನ್ನುವ ಹಾಗಿಲ್ಲ. ಕಾವೇರಿ ಇಲ್ಲದಿದ್ದರೆ ಬೆಂಗಳೂರಿಲ್ಲ. ಇದರ ನಡುವೆ ಬೆಂಗಳೂರಿನಲ್ಲಿ ನೀರಿಗೆ ಕನ್ನಾ ಹಾಕುವವರು ಇದ್ದಾರೆ ಎಂದರೆ ನಂಬಲೇ ಬೇಕು. ಹೌದು, ಇತ್ತೀಚೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಂದರೆ BWSSB ಒಂದು ಸರ್ವೇ ನಡೆಸಿ ಅನಧಿಕೃತವಾಗಿ ನೀರಿನ ಸಂಪರ್ಕ ಹೊಂದಿರುವ ಪೈಪ್ ಲೈನ್ ಗಳನ್ನು ಪತ್ತೆ ಹಚ್ಚಿಕೊಂಡಿದೆ. BWSSB ಸುಮಾರು 4,000 ಅಕ್ರಮ ನೀರಿನ ಸಂಪರ್ಕಗಳನ್ನು ಪತ್ತೆ ಮಾಡಿದೆ, ಎರಡು ತಿಂಗಳ ಹಿಂದೆ ಪೋಲಾಗುತ್ತಿದ ನೀರನ್ನು ಪತ್ತೆಹಚ್ಚಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಈ ಕುರಿತು ಕಾರ್ಯಾಚರಣೆ ನಡೆಸಿದ್ದು 3774 ಅಕ್ರಮ ನೀರಿನ ಸಂಪರ್ಕವನ್ನು ಪತ್ತೆ ಹಚ್ಚಿದೆ.

ಪೂರ್ವ ಮತ್ತು ಪಶ್ಚಿಮ ವಲಯದಲ್ಲಿ ಜಲ ಮಂಡಳಿ ಬೇಟೆ.!!

ನಗರದಾದಂತ್ಯ ನೀರು ಸರಬರಾಜು ಜಾಲವನ್ನು ತಿಳಿಯಲು ಮಂಡಳಿಯು ಕಾರ್ಯಚರಣೆ ನಡೆಸುತ್ತದೆ ಮತ್ತು ಶೇಕಡ 50%ರಷ್ಟು ಸಮೀಕ್ಷೆ ಮಾಡಿದೆ. ಪೂರ್ವ ವಲಯದಲ್ಲಿ 2.9ಲಕ್ಷ ಸಂಪರ್ಕಗಳನ್ನು ಸಮೀಕ್ಷೆ ಮಾಡಲಾಗಿದ್ದು ಇದರಲ್ಲಿ 1,436 ಅಕ್ರಮ ನೀರಿನ ಸಂಪರ್ಕ ಹೊಂದಿದೆ ಎಂದು BWSSBಯ ಇಂಜಿನಿಯರ್ ಇನ್‌ ಚೀಫ್ ಬಿಎಂ ಸೋಮಶೇಖರ್ ತಿಳಿಸಿದ್ದಾರೆ. ಪಶ್ಚಿಮ ವಲಯದಲ್ಲಿ, 2,20,000 ಸಂಪರ್ಕಗಳನ್ನು ಸಮೀಕ್ಷೆ ಮಾಡಲಾಗಿದ್ದು ಇದರಲ್ಲಿ 2,338 ಅಕ್ರಮ ನೀರಿನ ಸಂಪರ್ಕಗಳನ್ನು ಪತ್ತೆಹಚ್ಚಲಾಗಿದೆ.  ಮಂಡಳಿಯು 10.34 ಲಕ್ಷ ಸಂಪರ್ಕಗಳನ್ನು ಹೊಂದಿದ್ದು, ಅವುಗಳಲ್ಲಿ 5.10 ಲಕ್ಷ ಸಮೀಕ್ಷೆ ಪೂರ್ಣಗೊಳಿಸಿದೆ. ನಾವು ಪ್ರತಿ ಮನೆಯನ್ನು ತಲುಪಲು ಮತ್ತು ಕಾನೂನುಬಾಹಿರ ನೀರಿನ ಸಂಪರ್ಕಹೊಂದದಂತೆ ನೋಡಿಕೊಳ್ಳಲು ಯೋಜಿಸಿದ್ದೇವೆ. ಇದು ನಿರಂತರ ಪ್ರಕ್ರಿಯೆಯಾಗಿದ್ದು, ಕಾನೂನು ಬದ್ಧವಾಗಿ ಪಡೆದಿರುವ ನೀರಿನ ಸಂಪರ್ಕವು ನೀರಿನ ಬಳಕೆಯನ್ನು ತಿಳಿಯಲು ಅನುವು ಮಾಡಿಕೊಡುತ್ತದೆ. ಅಕ್ರಮವಾಗಿ ಪಡೆದಿರುವ ನೀರಿನ ಸಂಪರ್ಕ ನಮಗೆ ನೀರಿನ ಬಳಕೆಯ ಬಗ್ಗೆ ಮಾಹಿತಿ ತಿಳಿದು ಬರುವುದಿಲ್ಲ ಎಂದು BWSSB ಇಂಜಿನಿಯರ್ ‌ಇನ್ ಚೀಫ್ ಬಿಎಂ ಸೋಮಶೇಖರ್ ರವರು ಹೇಳಿದ್ದಾರೆ.

ಇದನ್ನು ಓದಿ: ಕಡೆಗೂ ತನ್ನ ಮಗುವಿನ ತಂದೆ ಹೆಸರು ಬಹಿರಂಗಪಡಿಸಿದ ಸಂಸದೆ ನುಸ್ರತ್ ಜಹಾನ್

BWSSB ಕಾನೂನುಬಾಹಿರ ವಿಧಾನಗಳನ್ನು ಪಾಲಿಸುವವರಿಗೆ ಭಾರಿ ದಂಡ ವಿಧಿಸುತ್ತದೆ. ನಮ್ಮ ಅಧಿಕಾರಿಗಳು ಅಕ್ರಮವಾಗಿ ನೀರನ್ನು ಎಲ್ಲಿಯವರೆಗು ಎಳೆದಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ನೀರಿನ ಸಂಪರ್ಕಗಳನ್ನು ಸಮೀಕ್ಷೆ ಮಾಡಲು ಮಂಡಳಿಯು ಸಬ್‌ಸ್ಟೇಷನ್ ಮಟ್ಟದಲ್ಲಿ ಮೂರು ಸದಸ್ಯರ ತಂಡವನ್ನು ಸ್ಥಾಪಿಸಿದ್ದು ಮತ್ತು ಪ್ರತಿ ವಲಯದಲ್ಲಿ ಸುಮಾರು 150 ಉದ್ಯೋಗಿಗಳು ಸಮೀಕ್ಷೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

BWSSB ಅಧಿಕಾರಿಗಳು ಲೆಕ್ಕವಿಲ್ಲದ ನೀರು ಪೋಲಾಗುವುದನ್ನು ತಡೆಯಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ, ಇದು ಮುಂದಿನ ದಿನಗಳಲ್ಲಿ ಶೇಕಡಾ 2 ರಷ್ಟು ಕಡಿಮೆಯಾಗುತ್ತದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಅಕ್ರಮ ನೀರಿನ ಸಂಪರ್ಕಗಳಲ್ಲದೆ ನಾವು ಸುಮಾರು 57,000 ಅನಧಿಕೃತ ಸಂಪರ್ಕಗಳನ್ನು ಗುರುತಿಸಿದ್ದೇವೆ ಮತ್ತು ಅವನ್ನು ಕ್ರಮಬದ್ಧಗೊಳಿಸಿದ್ದೇವೆ. ನಾವು ದೋಷಯುಕ್ತ ಮೀಟರ್‌ಗಳನ್ನುಸ್ಮಾರ್ಟ್ ಮೀಟರ್‌ಗಳಾಗಿ ಬದಲಾಯಿಸಲು ನೋಡುತ್ತಿದ್ದೇವೆ, ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷ ಎನ್. ಜಯರಾಮ್ ಹೇಳಿದ್ದಾರೆ.

ಅನಧಿಕೃತವಾಗಿ ನೀರಿನ ಸಂಪರ್ಕ ಹೊಂದಿರುವವರಿಗೆ ಜಲ ಮಂಡಳಿಯಿಂದ ದಂಡ.!!

ಇನ್ನು ಅನಧಿಕೃತವಾಗಿ ಯಾರೆಲ್ಲಾ ನೀರಿ‌ನ ಸಂಪರ್ಕ ಹೊಂದಿದ್ದಾರೋ ಅವರಿಗೆಲ್ಲಾ ಜಲ ಮಂಡಳಿ ಭಾರೀ ದಂಡ ವಿಧಿಸಲಿದೆ. ಕಾನೂನಾತ್ಮಕವಾಗಿ ಇದೂ ಒಂದು ರೀತಿಯಲ್ಲಿ ಕಳ್ಳತನವೇ ಆಗಿದ್ದು, ಈ ಬಗ್ಗೆಪೊಲೀಸರಿಗೆ ಜಲ ಮಂಡಳಿ ಮಾಹಿತಿ ರವಾಹನಿಸಲಿದೆ. ಅಲ್ದೇ ಈಗ ಅನಧಿಕೃತವಾಗಿ ನೀರಿನ ಕನೆಕ್ಷನ್ ಪಡೆದುಕೊಂಡಿರುವವರಿಗೆ BWSSB ಐದು ಸಾವಿರದಿಂದ ಹತ್ತು ಸಾವಿರದ ವರೆಗೆ ದಂಡ ವಿಧಿಸಿದೆ‌. 2013 ರಲ್ಲಿ ಶೇ .49 ರಷ್ಟಿದ್ದ ನೀರು ಪೋಲಾಗುವಿಕೆ ಇದೀಗ ಶೇ .36 ಕ್ಕೆ ಇಳಿದಿದೆ. ಇತ್ತೀಚಿನ ಪರಿಶೀಲನಾ ಸಭೆಯಲ್ಲಿ, ಆಗಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇದನ್ನು ಶೇಕಡ 20 ಕ್ಕೆ ಕಡಿತಗೊಳಿಸುವಂತೆ ಬಿಡಬ್ಲ್ಯೂಎಸ್‌ಎಸ್‌ಬಿಗೆ ಸೂಚನೆ ನೀಡಿದ್ದಾರೆ. ಅಂದಹಾಗೆ, ಬೆಂಗಳೂರು ನಗರ ಪ್ರತಿ ದಿನ 1450 ಮಿಲಿಯನ್ ಲೀಟರ್ ನಷ್ಟು ನೀರು ಬಳಕೆ ಮಾಡುತ್ತಿದೆ.
Published by:Seema R
First published: