ಕಾನೂನು ಬಾಹಿರವಾಗಿ ಕಲ್ಲು‌ ದಾಸ್ತಾನು ; ಗೊತ್ತಿದ್ದರೂ ಕ್ರಮಕ್ಕೆ ಮುಂದಾಗದ ಅರಣ್ಯ ಇಲಾಖೆ

ಬಂಡೆ ಕಲ್ಲುಗಳನ್ನ ಗುತ್ತಿಗೆ ಪಡೆದ ಡಿವಿಪಿ ಕಂಪನಿಯವರು ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ದಾಸ್ತಾನು ಮಾಡಿದ್ದಾರೆ. ಈ ಜಾಗದಲ್ಲಿ ದಾಸ್ತಾನು ಮಾಡುವ ಮುಂಚೆ ಅರಣ್ಯ ಇಲಾಖೆಯ ಯಾವುದೇ ಪರವಾನಿಗೆ ಪಡೆಯದೆ ಮಾಡಿದ್ದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಕಾನೂನು ಬಾಹಿರವಾಗಿ ಕಲ್ಲು‌ ದಾಸ್ತಾನು

ಕಾನೂನು ಬಾಹಿರವಾಗಿ ಕಲ್ಲು‌ ದಾಸ್ತಾನು

  • Share this:
ಕಾರವಾರ(ಜ.25) : ಸಾಗರ ಮಾಲಾ ಯೋಜನೆಯಡಿ ಬಂದರು ವಿಸ್ತರಣೆಗೆ ವಿರೋಧಿಸಿ ಇಷ್ಟು ದಿನ ಮೀನುಗಾರರು ಹೋರಾಟ ಮಾಡಿ ಭಾರೀ ಸುದ್ದಿ ಆಯ್ತು. ಇನ್ನೂ ಈ ಮದ್ಯೆ ಸಾಗರಮಾಲಾ ಬಂದರು ವಿಸ್ತರಣೆಯ ಭಾಗವಾಗಿ ಸಮುದ್ರ ಅಲೆ ತಡೆಗೋಡೆಗೆ ಬಳಸುವ ಬಂಡೆ ಕಲ್ಲುಗಳನ್ನ ಕಾನೂನು ಬಾಹಿರವಾಗಿ ಗುತ್ತಿಗೆ ಪಡೆದ ಕಂಪನಿ ಅರಣ್ಯ ಇಲಾಖೆಯ ಜಾಗದಲ್ಲಿ ದಾಸ್ತಾನು ಮಾಡಿದೆ.

ಸಾಗರಮಾಲ ಯೋಜನೆಯಡಿ ಕಾರವಾರ ಬಂದರು ವಿಸ್ತರಣೆ ಕಾಮಗಾರಿ ಪ್ರಾರಂಭವಾಗಿದೆ ಈ ಮಧ್ಯೆ ಇಲ್ಲಿನ ಮೀನುಗಾರರ ಹೋರಾಟದ ಹಿನ್ನಲೆಯಲ್ಲಿ ಕಾಮಗಾರಿಗೆ ಕೊಂಚ ಹಿನ್ನಡೆಯಾಗಿದೆ. ಕಾಮಗಾರಿಯ ಭಾಗವಾಗಿ ಸಮುದ್ರದಲ್ಲಿ ಅಲೆ ತಡೆಗೋಡೆಯನ್ನ ನಿರ್ಮಾಣ ಮಾಡಬೇಕಿದೆ. ಇದಕ್ಕೆ ಬೇಕಾದ ಬಂಡೆ ಕಲ್ಲುಗಳನ್ನ ಗುತ್ತಿಗೆ ಪಡೆದ ಡಿವಿಪಿ ಕಂಪನಿಯವರು ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ದಾಸ್ತಾನು ಮಾಡಿದ್ದಾರೆ. ಈ ಜಾಗದಲ್ಲಿ ದಾಸ್ತಾನು ಮಾಡುವ ಮುಂಚೆ ಅರಣ್ಯ ಇಲಾಖೆಯ ಯಾವುದೇ ಪರವಾನಿಗೆ ಪಡೆಯದೆ ಮಾಡಿದ್ದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನೂ ಕಾನೂನು ಬಾಹಿರವಾಗಿ ಅರಣ್ಯ ಇಲಾಖೆಯ ಜಾಗದಲ್ಲಿ ಬಂಡೆಕಲ್ಲು ದಾಸ್ತಾನು ಮಾಡುವ ಅಕ್ರಮ ಕಾರ್ಯ ಕಳೆದ ಒಂದು ತಿಂಗಳಿಂದಲೂ ನಡೆಯುತ್ತಿದೆ. ಈ ವಿಚಾರ ಆಂತರಿಕವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಗೊತ್ತಿದೆ. ಆದರೆ, ಈ ಬಗ್ಗೆ ಕಾನೂನು ಕ್ರಮಕ್ಕೆ ಅಧಿಕಾರಿಗಳು ಮುಂದಾಗಿಲ್ಲವಾಗಿತ್ತು. ಈ ವಿಚಾರ ಕೊನೆಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಬಂದಾಗ ಗಲಿಬಿಲಿ ಗೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಹರಾತುರಿಯಲ್ಲಿ ಗುತ್ತಿಗೆ ಪಡೆದ ಕಂಪನಿಯ ವಿರುದ್ದ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.

ಅರಣ್ಯ ಇಲಾಖೆಯ ಜಾಗದಲ್ಲಿ ಸಾವಿರಾರು ಟನ್ ಗಳಷ್ಟು ಬಂಡೆಕಲ್ಲುಗಳನ್ನ ಗುತ್ತಿಗೆ ಪಡೆದ ಕಂಪನಿಯವರು ದಾಸ್ತಾನು ಮಾಡಿದ್ದಾರೆ. ಈ‌ ವಿಚಾರ ಅರಣ್ಯ ಇಲಾಖೆಯವರಿಗೆ ಗೊತ್ತಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿರುವ ಆರೋಪ, ಆದರೂ ಕೂಡಾ ಅರಣ್ಯ ಇಲಾಖೆಯವರು ಈ ವಿಚಾರ ಬಹಿರಂಗ ಪಡಿಸದೆ ಗೊತ್ತು ಗೊತ್ತಿದ್ದರೂ ಕಿವಿಗೆ ಹಾಕಿಕೊಳ್ಳದೆ ಸುಮ್ಮನಿದ್ದರು, ಆದರೆ, ಸಾರ್ವಜನಿಕರ ಆಕ್ರೋಶ ಜೋರಾಗುತ್ತಿದ್ದಂತೆ ಅರಣ್ಯ ಇಲಾಖೆಯವರು ಕ್ರಮಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ : ಸಚಿವ ಸಂಪುಟ ವಿಸ್ತರಣೆ ವಿಳಂಬ - ಗಂಡುಮೆಟ್ಟಿನ ನಾಡಿನ ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಲ್ಲ ; ಸಿಎಂ ಕಾಲೆಳೆದ ಪುಟ್ಟರಾಜು

ಒಟ್ಟಾರೆ ಅಕ್ರಮ ದಾಸ್ತಾನು ಕಣ್ಣ ಮುಂದೆ ಕಂಡರು ಇಷ್ಟು ದಿನ ಇದು ಬಂದರು ಜಾಗ ಎಂದು ಕಾಲ ದೂಡುತ್ತಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕೊನೆಗೂ ಸಾರ್ವಜನಿಕರು ಪಾಠ ಕಲಿಸಿ ತಪ್ಪು ಕಂಡು ಹಿಡಿದಿದ್ದಾರೆ.

 (ವರದಿ : ದರ್ಶನ ನಾಯ್ಕ್)

 
First published: