ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಸ್ವಜಿಲ್ಲೆಯಲ್ಲೇ ಗ್ರಾನೈಟ್ ಗಣಿಗಾರಿಕೆಯಿಂದ ಕೆರೆಗೆ ಕುತ್ತು

ಈ ಕೆರೆ ಒಟ್ಟು 2200 ಎಕರೆ ನೀರಾವರಿ ಸಾಮರ್ಥ್ಯ ಹೊಂದಿದೆ. ಈ ಕೆರೆ ನಿರ್ಮಾಣಕ್ಕಾಗಿ ಅನೇಕ ಹಳ್ಳಿಗಳ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು ಕೆರೆ ಕಟ್ಟಿಸಲಾಗಿದೆ‌‌‌. ಅನೇಕ ರೈತರು ಕೆರೆ ನಿರ್ಮಾಣವಾದರೆ ನಮ್ಮ ಉಳಿದ ಜಮೀನಿಗೆ , ಇತರೆ ರೈತರಿಗೆ ಕೃಷಿಗೆ ನೀರಾವರಿ ಆಗುತ್ತದೆ ಒಳ್ಳೆಯ ಕಾರ್ಯ ಎಂದು ಭೂಮಿ ಕೊಟ್ಟಿದ್ದಾರೆ. ಆದರೆ ಕೊಪ್ಪಳ ಹಾಗೂ ಬಾಗಲಕೋಟೆ ಗಡಿ ಭಾಗದಲ್ಲಿನ ತಲೆಯೆತ್ತಿದ ಗ್ರಾನೈಟ್ ಕಂಪನಿಗಳು ಕೆರೆಯನ್ನು ನುಂಗಿ ಹಾಕುವ ಹುನ್ನಾರ ನಡೆಸುತ್ತಿವೆ.

ಕಡೂರು ಕೆರೆ

ಕಡೂರು ಕೆರೆ

  • Share this:
ಬಾಗಲಕೋಟೆ (ಜ.31): ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ತವರು ಜಿಲ್ಲೆ  ಬಾಗಲಕೋಟೆ  ಗಡಿಭಾಗದಲ್ಲಿರುವ ಕೊಪ್ಪಳ ಜಿಲ್ಲೆಗೆ ಸೇರಿದ ಕಡೂರು ಕೆರೆ ಸುತ್ತಲು  ಗ್ರಾನೈಟ್ ಕಂಪನಿಗಳ ರುದ್ರ ನರ್ತನದಿಂದ  ರೈತರಿಗೆ ಜೀವನಾಧಾರವಾಗಿದ್ದ ಕೆರೆಗೆ ಕುತ್ತು ಬಂದಿದ್ದು,ಕೆರೆ ನುಂಗಣ್ಣರ ಪಾಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಕೊಪ್ಪಳ ಜಿಲ್ಲೆಯ ವ್ಯಾಪ್ತಿಯ ಕಡೂರ ಕೆರೆ ಅದರ ನಿರ್ವಹಣೆ ಮಾತ್ರ ಬಾಗಲಕೋಟೆ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಗೆ ಸೇರಿದೆ. ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಐದಾರು ಹಳ್ಳಿಗಳಿಗೆ ಧಕ್ಕುತ್ತದೆ.ಈ ಕೆರೆಯ ನೀರನ್ನು ಬಳಸಿಕೊಂಡು ಇಳಕಲ್ ಹುನಗುಂದ ವ್ಯಾಪ್ತಿಯ ನಾಗೂರು,ಚಿತ್ತವಾಡಗಿ,ಯಡಳ್ಳಿ ಸೇರಿದಂತೆ ಐದಾರು ಹಳ್ಳಿಗಳ ರೈತರು ಕೃಷಿ ಮಾಡ್ತಿದ್ದಾರೆ.ಒಟ್ಟು 548ಎಕರೆ ವಿಸ್ತೀರ್ಣದ ಈ ಕೆರೆಗೆ ಗ್ರಾನೈಟ್ ಉದ್ಯಮಿಗಳು ನುಂಗಿ ಹಾಕುತ್ತಿದ್ದಾರೆ‌ ಎನ್ನುವ ಆರೋಪ ಕೇಳಿಬಂದಿದೆ.

ಬಳ್ಳಾರಿ ಮೂಲದ ಸೂರ್ಯನಾರಾಯಣರೆಡ್ಡಿ ಒಡೆತನದ ರಾಘವೇಂದ್ರ ಎಂಟರ್ ಪ್ರೈಸಸ್, ರಾಜು ಬೋರಾ, ದಾಲ್ಮಿಯಾ ಇಂಟರ್ನ್ಯಾಷನಲ್, ಕೆಂಚಮ್ಮ ಸುರಪುರ, ಪಲ್ಲೇದ್ ಎಂಬುವರ ಗ್ರಾನೈಟ್ ಕಂಪನಿಗಳಿಂದ ಕೆರೆ ಹಾಗೂ ಕೆರೆ ಕಾಲುವೆಗೆ ಕುತ್ತು ಬಂದಿದ್ದು, ಕೆರೆಗೆ ಪ್ರತಿದಿನ ಗ್ರಾನೈಟ್ ತ್ಯಾಜ್ಯ ಕಲ್ಲು ಮಣ್ಣು ಎಲ್ಲವನ್ನು ತಂದು ಹಾಕುತ್ತಿದ್ದಾರೆ. ಕಡೂರು ಕೆರೆ ಒಟ್ಟು 548 ಎಕರೆ ವಿಸ್ತೀರ್ಣದ ಬೃಹತ್ ಕೆರೆ 1969 ರಲ್ಲಿ ರೈತರ ಕೃಷಿಗೆ ನೀರಾವರಿ ಕಲ್ಪಿಸಲು ಈ ಕೆರೆಯನ್ನು ನಿರ್ಮಾಣ ಮಾಡಲಾಗಿದೆ.

ಈ ಕೆರೆ ಒಟ್ಟು 2200 ಎಕರೆ ನೀರಾವರಿ ಸಾಮರ್ಥ್ಯ ಹೊಂದಿದೆ. ಈ ಕೆರೆ ನಿರ್ಮಾಣಕ್ಕಾಗಿ ಅನೇಕ ಹಳ್ಳಿಗಳ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು ಕೆರೆ ಕಟ್ಟಿಸಲಾಗಿದೆ‌‌‌. ಅನೇಕ ರೈತರು ಕೆರೆ ನಿರ್ಮಾಣವಾದರೆ ನಮ್ಮ ಉಳಿದ ಜಮೀನಿಗೆ , ಇತರೆ ರೈತರಿಗೆ ಕೃಷಿಗೆ ನೀರಾವರಿ ಆಗುತ್ತದೆ ಒಳ್ಳೆಯ ಕಾರ್ಯ ಎಂದು ಭೂಮಿ ಕೊಟ್ಟಿದ್ದಾರೆ. ಆದರೆ ಕೊಪ್ಪಳ ಹಾಗೂ ಬಾಗಲಕೋಟೆ ಗಡಿ ಭಾಗದಲ್ಲಿನ ತಲೆಯೆತ್ತಿದ ಗ್ರಾನೈಟ್ ಕಂಪನಿಗಳು ಕೆರೆಯನ್ನು ನುಂಗಿ ಹಾಕುವ ಹುನ್ನಾರ ನಡೆಸುತ್ತಿವೆ.

ಸಾವಯವ ಕೃಷಿಯತ್ತವಾಲುತ್ತಿರುವ ಯುವಕರು, ನಗರವಾಸಿಗಳು: ಮಂಡ್ಯ ಆರ್ಗ್ಯಾನಿಕ್ ಸಂಸ್ಥೆಯಿಂದ ಉಚಿತ ತರಬೇತಿ

ಈಗಾಗಲೇ ಸೂರ್ಯನಾರಾಯಣರೆಡ್ಡಿ ಒಡೆತನದ ರಾಘವೇಂದ್ರ ಎಂಟರ್ ಪ್ರೈಸಸ್,ರಾಜು ಬೋರಾ, ದಾಲ್ಮಿಯಾ ಇಂಟರ್ನ್ಯಾಷನಲ್, ಕೆಂಚಮ್ಮ ಸುರಪುರ, ಪಲ್ಲೇದ್ ಎಂಬುವರ ಗ್ರಾನೈಟ್ ಕಂಪನಿಗಳಿಂದ ಐದು ಎಕರೆಗೂ ಹೆಚ್ಚು ಕೆರೆ ಹಾಗೂ ಕೆಲ ಭಾಗ ಕಾಲುವೆ ಕಬಳಿಕೆ ಆಗಿದ್ದು ಕಂಡುಬಂದಿದೆ. ಈ ಬಗ್ಗೆ ಈ ಹಿಂದಿನಿಂದಲೂ ಈ ಹುನಗುಂದ ,ಇಳಕಲ್ ಭಾಗದ ರೈತರು ಹೋರಾಟ ಮಾಡಿದರೂ ಇವರು ಕೇರ್ ಮಾಡಿಲ್ಲ.ಇನ್ನು ಕೆರೆ ಕೊಪ್ಪಳ ಜಿಲ್ಲೆ ಕಡೂರು ವ್ತಾಪ್ತಿಯಲ್ಲಿದ್ದರೂ ಬಾಗಲಕೋಟೆ ಜಿಲ್ಲೆಗೆ ನೀರಾವರಿ ಹಿನ್ನೆಲೆ, ಬಾಗಲಕೋಟೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಇದರ ನಿರ್ವಹಣೆ ಕಾರ್ಯ ಮಾಡುತ್ತಾರೆ.

ಇನ್ನು ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ಈಗಾಗಲೇ 2020 ರಲ್ಲಿ ಎರಡು ಬಾರಿ, 2021 ಜನೇವರಿ 7 ರಂದು ಸರ್ವೆ ಮಾಡಲಾಗಿದ್ದು, ಕೆರೆ ಒತ್ತುವರಿ ಆಗಿದ್ದು ನಿಜ. ಗ್ರಾನೈಟ್ ತ್ಯಾಜ್ಯ ಕಲ್ಲು ಮಣ್ಣು ಹಾಕಿ ಕೆರೆಯನ್ನು ಒತ್ತುವರಿ ಮಾಡಲಾಗಿದೆ. ಈ ಬಗ್ಗೆ ಕೆರೆಗೆ ಹಾಗೂ ಕಾಲುವೆಗೆ ತ್ಯಾಜ್ಯ ಹಾಕಿದ ಗ್ರಾನೈಟ್ ಗಣಿ ಕಂಪನಿಗಳಿಗೆ ನೊಟೀಸ್ ನೀಡಿದ್ದೇವೆ. ಇನ್ನು ನಮ್ಮ ಕೆರೆಯ ವ್ಯಾಪ್ತಿಯನ್ನು ಗುರುತಿಸಿ ಕೊಡಿ ಎಂದು ಕೊಪ್ಪಳ ತಹಸೀಲ್ದಾರ್,ಭೂಗಣಿಗಾರಿಕೆ ಅಧಿಕಾರಿ,ಭೂಸ್ವಾಧೀನ ಅಧಿಕಾರಿಗಳು, ಸರ್ವೆ ಅಧಿಕಾರಿ,ಕೊಪ್ಪಳ ಎಸಿ ಅವರಿಗೆ ಪತ್ರ ಬರೆಯಲಾಗಿದೆ.

ಅವರ ಮೂಲಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಾಗಲಕೋಟೆ ಸಣ್ಣ ನೀರಾವರಿ ಇಲಾಖೆ ಎಇಇ ರವಿ ಕುಂಬಾರ ಹೇಳುತ್ತಾರೆ.ಇನ್ನು ಕೆರೆ ಸುತ್ತಲು ಗ್ರಾನೈಟ್ ಗಣಿ ಕಂಪನಿಗಳ ತ್ಯಾಜ್ಯ ತಂದು ಸುರಿಯುತ್ತಿರುವದರಿಂದ ಕೆರೆಗೆ ಕುತ್ತು ಬಂದಿದೆ.ಇನ್ನು ಅಂತರ್ಜಲ ಮಟ್ಟ ಕುಸಿದು, ಕೆರೆ ಅವಲಂಬಿಸಿ ಬೆಳೆ ಬೆಳೆಯುತ್ತಿದ್ದ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ.ನಮ್ಮ ಜಿಲ್ದೆಯವರೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಿದ್ದಾರೆ. ಕೆರೆ ಉಳಿಸಿಕೊಂಡಿ ಎಂದು ರೈತರು ಹೋರಾಟಗಾರಾದ ಶರಣಗೌಡ, ಹಾಗೂ ಬಸವರಾಜ ಹೊಸಮನಿ ಆಗ್ರಹಿ‌ಸಿದ್ದಾರೆ.ಇನ್ನು ಗಣಿ ಮಾಲೀಕರು.  ನಿಯಮ
ಗಾಳಿಗೆ ತೂರಿ ಗಣಿಗಾರಿಕೆ ನಡೆಸಿದ್ದಾರೆ.

ಒಟ್ಟಿನಲ್ಲಿ ರೈತರಿಗೆ ಜೀವನಾಧಾರವಾಗಿದ್ದ ಕೆರೆಗೆ ಗ್ರಾನೈಟ್ ಗಣಿ ಕಂಪನಿಗಳಿಂದ ಕೆರೆ ನುಂಗಿಹಾಕುವ ಆತಂಕ ರೈತರಿಗೆ ಎದುರಾಗಿದ್ದು,ಕಳೆದ 20ವರ್ಷದಿಂದ ಕೆರೆ ಉಳಿಸಿ ಎಂದು ರೈತರು ಹೋರಾಟ ಮಾಡುತ್ತಿದ್ದಾರೆ.ಪ್ರಭಾವಿ ಗಣಿ ಮಾಲೀಕರಿಂದ ಬೆದರಿಕೆ ಬರುತ್ತಿವೆ.ಗ್ರಾನೈಟ್ ಕಂಪನಿಗಳು ಬೆಲೆ ಬಾಳುವ ನೈಸರ್ಗಿಕ ಸಂಪನ್ಮೂಲದ ಬೆನ್ನುಬಿದ್ದು,ನಿಯಮ ಉಲ್ಲಂಘಿಸುತ್ತಿದ್ದಾರೆ.ಇನ್ಮೇಲಾದರೂ ಸಂಬಂಧಿಸಿದ ಅಧಿಕಾರಿಗಳು ಸಚಿವರು ಕೆರೆ ಉಳಿಸಿ,ರೈತರ ನೆರವಿಗೆ ಬರಬೇಕಾಗಿದೆ.
Published by:Latha CG
First published: