ವರಮಹಾಲಕ್ಷ್ಮಿ ಹಬ್ಬದಂದೇ ವ್ಯಾಪಾರಿಗಳಿಗೆ ಶಾಕ್; ತಹಶೀಲ್ದಾರ್ ನೇತೃತ್ವದಲ್ಲಿ ಅಕ್ರಮ ಅಂಗಡಿಗಳ ತೆರವು

ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು ಹದಿನೈದಕ್ಕೂ ಅಧಿಕ ಕುಗ್ರಾಮಗಳು ಇದ್ದು, ನಿತ್ಯ ಒಂದಿಲ್ಲೊಂದು ರೋಗಿ ತುರ್ತು ಚಿಕಿತ್ಸೆಗೆ ಆಗಮಿಸುತ್ತಾರೆ. ಅದೆಷ್ಟೋ ಸಂದರ್ಭಗಳಲ್ಲಿ ಎರಡು ಬದಿಗಳಲ್ಲಿ ವ್ಯಪಾರಿಗಳು ಅಂಗಡಿಗಳನ್ನು ಇಟ್ಟುಕೊಂಡಿದ್ದರಿಂದ ಜನ ಜಂಗುಳಿಯಿಂದಾಗಿ ಆ್ಯಂಬುಲೆನ್ಸ್ ಆಸ್ಪತ್ರೆ ಬಳಿಗೆ ಬರಲು ಪ್ರಯಾಸ ಪಡಬೇಕಾಗಿತ್ತು. 

news18-kannada
Updated:July 31, 2020, 10:14 PM IST
ವರಮಹಾಲಕ್ಷ್ಮಿ ಹಬ್ಬದಂದೇ ವ್ಯಾಪಾರಿಗಳಿಗೆ ಶಾಕ್; ತಹಶೀಲ್ದಾರ್ ನೇತೃತ್ವದಲ್ಲಿ ಅಕ್ರಮ ಅಂಗಡಿಗಳ ತೆರವು
ಅಕ್ರಮ ಅಂಗಡಿಗಳನ್ನು ತೆರವುಗೊಳಿಸುತ್ತಿರುವ ದೃಶ್ಯ
  • Share this:
ಆನೇಕಲ್(ಜು.31):  ಸರ್ಕಾರಿ ಆಸ್ಪತ್ರೆಗೆ ಸಾಗುವ ದಾರಿಯ ಇಕ್ಕೆಲಗಳಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿಗಳನ್ನು ತಾಲ್ಲೂಕು ಆಡಳಿತ ತೆರವುಗೊಳಿಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿಯಲ್ಲಿ ನಡೆದಿದೆ. 

ಆನೇಕಲ್ ತಹಶಿಲ್ದಾರ್ ಮಹಾದೇವಯ್ಯ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಿದ ತಾಲ್ಲೂಕು ಆಡಳಿತ ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿದ್ದ ಸುಮಾರು ಐವತ್ತಕ್ಕೂ ಅಧಿಕ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎರಡು ಬದಿಗಳಲ್ಲಿ ತಾತ್ಕಾಲಿಕ ಟೆಂಟ್​​ಗಳನ್ನು ನಿರ್ಮಿಸಿಕೊಂಡಿದ್ದ ವ್ಯಾಪಾರಿಗಳಿಗೆ ಹಲವು ಬಾರಿ ಸ್ಥಳೀಯ ಪುರಸಭೆ ಅಧಿಕಾರಿಗಳು ತೆರವುಗೊಳಿಸಿ ಸಂತೆ ಕಟ್ಟೆಗೆ ಮೀಸಲಿರುವ ಸ್ಥಳದಲ್ಲಿ ಅಂಗಡಿಗಳನ್ನು ಇಟ್ಟುಕೊಳ್ಳುವಂತೆ ಸೂಚಿಸಿದ್ದರು. ಆದರೂ ಸಹ ಸ್ಥಳಾಂತರಗೊಂಡಿರಲಿಲ್ಲ.

ಪಠ್ಯ ಕಡಿತ ಅಂತಿಮವಾಗಿಲ್ಲ, ಶೀಘ್ರವೇ ಶಿಕ್ಷಕರ ವರ್ಗಾವಣೆ; ಸಚಿವ ಸುರೇಶ್ ಕುಮಾರ್

ಇಂದು ಆನೇಕಲ್ ತಹಶಿಲ್ದಾರ್ ಮಹಾದೇವಯ್ಯ, ಜಿಗಣಿ ಠಾಣೆ ಇನ್ಸ್ಪೆಕ್ಟರ್ ವಿಶ್ವನಾಥ್ ನೇತೃತ್ವದಲ್ಲಿ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಿ ವರ ಮಹಾಲಕ್ಷ್ಮೀ ಹಬ್ಬದಂದೇ ವ್ಯಾಪಾರಿಗಳಿಗೆ ಶಾಕ್ ನೀಡಿದ್ದಾರೆ. ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು ಹದಿನೈದಕ್ಕೂ ಅಧಿಕ ಕುಗ್ರಾಮಗಳು ಇದ್ದು, ನಿತ್ಯ ಒಂದಿಲ್ಲೊಂದು ರೋಗಿ ತುರ್ತು ಚಿಕಿತ್ಸೆಗೆ ಆಗಮಿಸುತ್ತಾರೆ. ಅದೆಷ್ಟೋ ಸಂದರ್ಭಗಳಲ್ಲಿ ಎರಡು ಬದಿಗಳಲ್ಲಿ ವ್ಯಪಾರಿಗಳು ಅಂಗಡಿಗಳನ್ನು ಇಟ್ಟುಕೊಂಡಿದ್ದರಿಂದ ಜನ ಜಂಗುಳಿಯಿಂದಾಗಿ ಆ್ಯಂಬುಲೆನ್ಸ್ ಆಸ್ಪತ್ರೆ ಬಳಿಗೆ ಬರಲು ಪ್ರಯಾಸ ಪಡಬೇಕಾಗಿತ್ತು.

ಇನ್ನೂ ಈಗಂತೂ ಕೊರೊನಾ ಎಲ್ಲಾ ಕಡೆ ತಾಂಡವವಾಡುತ್ತಿದೆ. ಸಕಾಲಕ್ಕೆ ಚಿಕಿತ್ಸೆ ಸಿಗದೆ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಜೊತೆಗೆ ಇದು ಹೀಗೆ ಮುಂದುವರಿದರೆ ರೋಗಿಗಳು ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ.  ಹಾಗಾಗಿ ತಹಶಿಲ್ದಾರ್ ಮಹಾದೇವಯ್ಯ ಮತ್ತು ಜಿಗಣಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ.

ಜೊತೆಗೆ ಯಾರೂ ಸಹ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗುವ ರಸ್ತೆ ಇಕ್ಕೆಲಗಳಲ್ಲಿ ಅಥವಾ ಸುತ್ತಮುತ್ತಲು ಅಂಗಡಿಮುಂಗಟ್ಟುಗಳನ್ನು ಇಟ್ಟು ವ್ಯಾಪಾರ ವಹಿವಾಟು ನಡೆಸಬಾರದು. ಒಂದು ವೇಳೆ ಅಕ್ರಮವಾಗಿ ಅಂಗಡಿಗಳನ್ನು ಇಟ್ಟುಕೊಂಡು ಪುನಃ ವ್ಯಾಪಾರ ವಹಿವಾಟು ನಡೆಸಿದರೆ ಅಂತಹವರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ತಹಶಿಲ್ದಾರ್ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.
Published by: Latha CG
First published: July 31, 2020, 10:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading