News18 India World Cup 2019

ಅಕ್ರಮ ಸಂಬಂಧಕ್ಕಾಗಿ ಗಂಡನನ್ನೆ ಕೊಲೆ ಮಾಡಿಸಿದ ಹೆಂಡತಿ

news18
Updated:June 11, 2018, 12:41 PM IST
ಅಕ್ರಮ ಸಂಬಂಧಕ್ಕಾಗಿ ಗಂಡನನ್ನೆ ಕೊಲೆ ಮಾಡಿಸಿದ ಹೆಂಡತಿ
news18
Updated: June 11, 2018, 12:41 PM IST
-ಲೋಹಿತ್ ಶೀರೋಳ, ನ್ಯೂಸ್ 18 ಕನ್ನಡ

ಚಿಕ್ಕೋಡಿ ( ಜೂನ್ 11) :  ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೇ ಪ್ರಿಯಕರ ಹಾಗೂ ಆತನ ಸಹಚರರಿಗೆ ಸುಪಾರಿ ಕೊಟ್ಟು ಪತ್ನಿಯೆ ಕೊಲೆ ಮಾಡಿಸಿ ,ಕೊಲೆಯನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಹೋಗಿದ್ದ ಖದಿಮರು ಇದೀಗ ಪೊಲೀಸರ ಅಥಿತಿಯಾಗಿದ್ದಾರೆ.  ಇಂತಹದೊಂದು ಘಟನೆ ನಡೆದಿರೋದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದೆ.

ಕಳೆದ ಜೂನ್ 1ರಂದು ಉಮರಾಣಿ ಗ್ರಾಮದ ಹೊರವಲಯದಲ್ಲಿ ಬೈಕ್ ಮತ್ತು ಕಾರ್ ನಡುವೆ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಒರ್ವ ಮಾಜಿ ಯೋಧ ಪ್ರಕಾಶ ಶಂಕರ ಈಟಿ ಮೃತಪಟ್ಟಿರುತ್ತಾನೆ. ಈ ಕಿರಿತು ಚಿಕ್ಕೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸಿದಾದ ಇದು ಅಪಘಾತವಲ್ಲ ಕೊಲೆಯಾಗಿರುವ ಶಂಕೆ ಮೂಡುತ್ತದೆ. ತನಿಖೆ ಚುರುಕು ಗೊಳಿಸಿದ ಪೋಲಿಸರು ಪ್ರಕರಣದ ಬೆನ್ನಟ್ಟಿ ಪೊಲೀಸರು ಕೊಲೆ ರಹಸ್ಯವನ್ನು ಬಯಲಿಗೆಳೆದಿದ್ದಾರೆ.

12 ವರ್ಷಗಳ ಹಿಂದೆ ಕೊಲೆಯಾದ ಪ್ರಕಾಶ ಈಟ್ಟಿ ಜೊತೆ ಶ್ರೀದೇವಿ ವಿವಾಹವಾಗಿತ್ತು ಆದ್ರೆ ಆರೋಪಿ ಸಂತೋಷ ಕಮತೆ ಜತೆ ಶ್ರೀದೇವಿ ಅನೈತಿಕ ಸಂಬಂಧ ಹೊಂದಿದ್ದಳು. ಪತಿ ಯೋದನಾಗಿದ್ದ ಕಾರಣ ಪತಿಯ ಗ್ರಾಮ ನಾಗರಮುನ್ನೊಳಿ ಯಲ್ಲಿ ಇರುವ ಬದಲು ಶ್ರೀದೇವಿ ಹೆಚ್ಚು ತವರು ಮನೆಯಾದ ಕುಂಗಟೋಳಿ ಗ್ರಾಮದಲ್ಲಿಯೇ ಇರುತ್ತಿದ್ದಳು. ಅದಕ್ಕೆ ಕಾರಣ ಅನೈತಿಕ ಸಂಬಂಧ ಇದು ಗ್ರಾಮದ ಹಲವು ಜನರಿಗೆ ಗೊತ್ತಾಗಿತ್ತು. ಅಲ್ಲದೆ ಅನೈತಿಕ ಸಂಬಂಧದ ಕುರಿತು ಗ್ರಾಮದಲ್ಲಿ ಹಲವರು ಮಾತನಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ

ಇನ್ನು ಈ ವಿಚಾರ ಪತಿ ಪ್ರಕಾಶ ಕಿವಿಗು ಬಿದ್ದಿದೆ ಇದನ್ನ ಅರಿತ ಶ್ರೀದೇವಿ ಹೆಗಾದ್ರು ಮಾಡಿ ಪತಿಯನ್ನೆ ಕೊಲೆ ಮಾಡಲು ಮುಂದಾಗಿದ್ದಳು.  ಮತ್ತೊಂದೆಡೆ ಅಪಘಾತ ಮಾಡಿದ ಜೀಪಿನ ಮಾಲೀಕ ಭರಮು ಎಂಬುವವನು ಸಂತೋಷನಿಗೆ 20 ಸಾವಿರ ರೂ.ಸಾಲ ಕೊಡಬೇಕಾಗಿತ್ತು. ಈ ಹಿನ್ನೆಲೆ ಸಾಲ ಮರುಪಾವತಿಸಲು ಸಾಧ್ಯವಾಗದ ಭರಮು ಕೊಲೆ ಮಾಡಲು ಒಪ್ಪಿಕೊಂಡಿದ್ದ.

ಇದಕ್ಕೆಲ್ಲ ಮೃತನ ಪತ್ನಿ ಶ್ರೀದೇವಿ ಸಹಕಾರ ನೀಡಿದ್ದಳು ಅದರಂತೆ ಅಪಘಾತದ ರೂಪದಲ್ಲಿ ಕೊಲೆ ಮಾಡಿದ್ರೆ ಯಾರಿಗೂ ಸಂಶಯ ಬರಲ್ಲ ಎಂದು ಪ್ಲಾನ್ ಮಾಡಿದ ಆರೋಪಿಗಳು ಉಮರಾಣಿ ಗ್ರಾಮದ ಹೊರವಲಯದಲ್ಲಿ ಜೂ.1ರಂದು ಬೈಕ್ ನಲ್ಲಿ ಬರುತ್ತಿದ್ದ ಪ್ರಕಾಶನ್ನ ಜೀಪ್ ಹಾಯಿಸಿ ಕೊಲೆ ಮಾಡಿ ಪರಾರಿಯಾಗಿದ್ದ. ಘಟನೆ ಬಳಿಕ ಪ್ರಕಾಶ ಈಟ್ಟಿ ಮೃತಪಟ್ಟ ನಂತರ ವದಂತಿಗಳು ಹರಿದಾಡಿದ್ದವು.
Loading...

ಇದು ರಸ್ತೆ ಅಪಘಾತವಲ್ಲ ಬದಲಾಗಿ ಉದ್ದೇಶಪೂರ್ವಕ ಕೊಲೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದರು. ಮೃತಪಟ್ಟ ವ್ಯಕ್ತಿಯ ಪತ್ನಿ ಶ್ರೀದೇವಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಪತಿಗೆ ನ್ಯಾಯ ದೊರಕಿಸಿಕೊಡುವಂತೆ ಚಿಕ್ಕೋಡಿ ಸಂಚಾರಿ ಪೊಲೀಸ್ಠಾ ಣೆಗೆ ದೂರು ನೀಡಿದ್ದಳು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಸ್ತೆ ಅಪಘಾತ ಮಾಡಿದ ವಾಹನಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ನಾಗರಮುನ್ನೋಳ್ಳಿ ಗ್ರಾಮಸ್ಥರು ಇದು ರಸ್ತೆ ಅಪಘಾತವಲ್ಲ ಕೊಲೆಯಾಗಿದೆ ಎಂದು ಮಾಹಿತಿ ನೀಡಿದ್ದರು. ಕೊಲೆ ನಡೆದ ದಿನ ಪ್ರಕಾಶ್ ಅವರನ್ನು ಕ್ರೂಸರ್ ವಾಹನವೊಂದು ಪದೇ ಪದೇ ಹಿಂಬಾಲಿಸುತ್ತಿದ್ದ ದೃಶ್ಯ ಸ್ಥಳೀಯ ಪೆಟ್ರೋಲ್ ಪಂಪ್‌ವೊಂದರ ಸಿಸಿಟಿವಿಗಳಲ್ಲಿ ರೆಕಾರ್ಡ್ ಆಗಿದೆ.

ಈ ಎಲ್ಲ ಮಾಹಿತಿ ಸಂಗ್ರಹಿಸಿದಾಗ ಮೃತ ಪತ್ನಿಯೇ ತನ್ನ ಅನೈತಿಕ ಸಂಬಂಧ ಉಳಿಸಿಕೊಳ್ಳುವುದಕ್ಕಾಗಿ ಪ್ರಿಯಕರ ಸಂತೋಷ ಕಮತೆ ಹಾಗೂ ಆತನ ಸಹಚರರಾದ ಭರಮು ಹರಿಜನ, ಮಹೇಶ ಹರಿಜನ ಎಂಬುವವರಿಗೆ ಸೂಪಾರಿ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಇದೀಗ ನಾಲ್ವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಯನ್ನ ನಡೆಸಿದ್ದಾರೆ
First published:June 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...