HOME » NEWS » State » ILLEGAL RELATIONSHIP FATHER KILLED HIS DAUGHTER IN BELLARY HK

ಮದುವೆಯಾದ್ರೂ ಪ್ರಿಯಕರನ ಸಂಗ ಬಿಡಲಿಲ್ಲ; ಚೆಂದನೆಯ ಮಗಳನ್ನೇ ಕೊಂದೇ ಬಿಟ್ಟನಲ್ಲಾ ಪ್ರೀತಿಯ ತಂದೆ

ಕವಿತಾಗೆ ಹದಿನೆಂಟು ವಯಸ್ಸಿರುವಾಗ ಒಬ್ಬನನ್ನು ಪ್ರೀತಿಸುತ್ತಿದ್ದಳು. ಅದೇ ಗ್ರಾಮದ ಯುವಕನೊಂದಿಗೆ ಸುತ್ತಾಡುತ್ತಿರುವುದನ್ನು ಅರಿತ ಕುಟುಂಬಸ್ಥರು ಕವಿತಾಳನ್ನು ನಾಲ್ಕು ವರ್ಷದ ಹಿಂದೆ ಮದುವೆ ಮಾಡಿದ್ದರು

news18-kannada
Updated:February 12, 2020, 8:41 PM IST
ಮದುವೆಯಾದ್ರೂ ಪ್ರಿಯಕರನ ಸಂಗ ಬಿಡಲಿಲ್ಲ; ಚೆಂದನೆಯ ಮಗಳನ್ನೇ ಕೊಂದೇ ಬಿಟ್ಟನಲ್ಲಾ ಪ್ರೀತಿಯ ತಂದೆ
ಕೊಲೆಯಾದ ಕವಿತಾ
  • Share this:
ಬಳ್ಳಾರಿ(ಫೆ.12) : ಮಗು ಇದ್ದರು ಹಳೆಯ ಪ್ರಿಯಕರನ ಹಿಂದೆ ಬಿದಿದ್ದ ಮಗಳನ್ನು ತಂದೆಯೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ತಾಲೂಕಿನ ಗೋಡೆಹಾಳ ಗ್ರಾಮದ ನಿವಾಸಿ ಗೋಪಾಲ ರೆಡ್ಡಿ ತನ್ನ ಮಗಳನ್ನೇ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಮೃತ ಮಗಳನ್ನು ಕವಿತಾ (23) ಎಂದು ಗುರುತಿಸಲಾಗಿದೆ. ಮದುವೆ ಮಾಡಿದರು ಊರಿಗೆ ಬಂದಾಗ ಹಳೆ ಪ್ರಿಯಕರನಜೊತೆ ಹೋಗುತ್ತಾಳೆ ಎಂದು ತಂದೆಯೆ ಕವಿತಾಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ

ಮಗಳನ್ನು ನಾನೇ ಕೊಂದೆ ಎಂದ ಅಪ್ಪ ಮಗಳನ್ನು ಕೊಲೆ ಮಾಡಿ ಮಗಳನ್ನು ನಾನೇ ಕೊಂದಿದ್ದೇನೆ. ಅವಳಿಗೆ ಆರು ತಿಂಗಳ ಮಗುವಿದೆ. ಆದರೂ ಆಕೆ ಬೇರೆ ಗಂಡಿನೊಂದಿಗೆ ಸುತ್ತಾಡುತ್ತಿದ್ದಳು. ಅವಳ ತಪ್ಪನ್ನು ಎಷ್ಟೆಂದು ಮನ್ನಿಸಲು ಸಾಧ್ಯ? ಹೀಗಾಗೇ ಕೊಲೆ ಮಾಡಿದೆ ಎಂದು ತಂದೆ ಪೊಲೀಸರಿಗೆ ಶರಣಾಗಿ ಹೇಳಿಕೆ ನೀಡಿದ್ದಾನೆ. ತನ್ನ ಮಗಳ ನಡವಳಿಕೆಯೇ ನಾನು ಕೊಲೆ ಮಾಡಲು ಪ್ರೇರಕವಾಯಿತು ಎಂದೂ ಹೇಳಿಕೊಂಡಿದ್ದಾನೆ.

ಕವಿತಾಗೆ ಹದಿನೆಂಟು ವಯಸ್ಸಿರುವಾಗ ಒಬ್ಬನನ್ನು ಪ್ರೀತಿಸುತ್ತಿದ್ದಳು. ಅದೇ ಗ್ರಾಮದ ಯುವಕನೊಂದಿಗೆ ಸುತ್ತಾಡುತ್ತಿರುವುದನ್ನು ಅರಿತ ಕುಟುಂಬಸ್ಥರು ಕವಿತಾಳನ್ನು ನಾಲ್ಕು ವರ್ಷದ ಹಿಂದೆ ಮದುವೆ ಮಾಡಿದ್ದರು. ಆದರೆ ತನ್ನ ಹಳೇ ಪ್ರಿಯಕರನನ್ನು ಬಿಟ್ಟಿರದ ಕವಿತಾ ಊರಿಗೆ ಬಂದಾಗಲೆಲ್ಲ ಅವನ ಜೊತೆ ಹೋಗುತ್ತಿದ್ದಳು ಎಂದು ತಿಳಿದುಬಂದಿದೆ. ಎಷ್ಟೇ ಬುದ್ಧಿ ಹೇಳಿದರೂ ಕೇಳದ ಕಾರಣ ತಂದೆಯೇ ಕತ್ತು ಹಿಸುಕಿ ಕೊಂದು ಹಾಕಿದ್ದಾನೆ.

ಇದನ್ನೂ ಓದಿ :  ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರ ಸಾವು

ಕಳೆದ ತಿಂಗಳು ಕವಿತಾ ಗಂಡನ ಮನೆ ಬಿಟ್ಟು ನೇರವಾಗಿ ಪ್ರಿಯಕರನ ಜೊತೆ ಹೋಗಿದ್ದಳು. ಇದರಿಂದ ಮತ್ತೊಮ್ಮೆ ಕುಟುಂಬ ಸದಸ್ಯರು ಕವಿತಾಗೆ ಬುದ್ಧಿ ಮಾತನ್ನು ಹೇಳಿ ಮನೆಗೆ ಕರೆದುಕೊಂಡು ಬಂದಿದ್ದರು. ಆದರೆ ಆ ಹುಡುಗ ಕೂಡ ಮತ್ತೆ ಮತ್ತೆ ಕವಿತಾಳನ್ನು ಸಂಪರ್ಕ ಮಾಡಲು ಮನೆ ಹತ್ತಿರ ಬರುತ್ತಿದ್ದ ಎಂದು ತಿಳಿದುಬಂದಿದೆ.

ಮಗಳ ಈ ನಡೆಯಿಂದ ಬೇಸತ್ತಿದ್ದ ತಂದೆ ಗೋಪಾಲ ರೆಡ್ಡಿ, ಸೋಮವಾರ ಮನೆಯಲ್ಲಿ ಕವಿತಾಳ ಕತ್ತು ಹಿಸುಕಿ ಕೊಂದು ಶವವನ್ನು ಹೊಲಕ್ಕೆ ತಂದು ಎಸೆದಿದ್ದಾನೆ. ಆದರೆ ಕವಿತಾಳ ನಾಲ್ಕುವರೆ ತಿಂಗಳ ಮಗು ಇದೀಗ ಅನಾಥವಾಗಿದೆ. ತಂದೆ ಗೋಪಾಲರೆಡ್ಡಿ ಸೇರಿದಂತೆ ಮನೆಯ ನಾಲ್ವರನ್ನು ಬಂಧಿಸಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಎಸ್ಪಿ ಸಿ ಕೆ ಬಾಬಾ ಪ್ರತಿಕ್ರಿಯೆ ನೀಡಿದ್ದಾರೆ.
Youtube Video
First published: February 12, 2020, 8:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories