42ರ ಮಹಿಳೆ ಜೊತೆ 28ರ ಯುವಕನ ಸಂಬಂಧ: ಇಬ್ಬರ ಮನಸ್ತಾಪಕ್ಕೆ ಹಾರಿಯೋಯ್ತು ಪ್ರಾಣ; ಕೊಲೆಯೋ? ಆತ್ಮಹತ್ಯೆಯೋ?

ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿಕೊಂಡ ಹಿನ್ನಲೆ ಮಹಿಳೆ ಸಾವನ್ನಪ್ಪಿದ್ದಾರೆ. ಹುಡುಗನ ಕೈ ಸುಟ್ಟಿದೆ. ಇದು ಆತ್ಮಹತ್ಯೆ ಪ್ರಕರಣವೋ ಅಥವಾ ಕೊಲೆಯೋ ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.

ಮೂಡಿಗೆರೆ ಪೊಲೀಸ್​ ಠಾಣೆ

ಮೂಡಿಗೆರೆ ಪೊಲೀಸ್​ ಠಾಣೆ

  • Share this:
ಚಿಕ್ಕಮಗಳೂರು (ಡಿ.4) : ಆಕೆ 42 ವರ್ಷದ ಮಹಿಳೆ, ಆತ 28 ವರ್ಷದ ಅವಿವಾಹಿತ. ಇಬ್ಬರ ನಡುವೆ ಅದು ಯಾವ ರೀತಿಯ ಸಂಬಂಧ ಇತ್ತು ಗೊತ್ತಿಲ್ಲ.  ಆದರೆ ಇಬ್ಬರ ಮೊದಮೊದಲು ತುಂಬಾ ಅನ್ಯೋನ್ಯವಾಗಿದ್ದರು. ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯನ್ನ ಕರೆದುಕೊಂಡು ಹೋಗೋದು, ಬರುವುದನ್ನು ಆತನೇ ಮಾಡುತ್ತಿದ್ದ. ಆದರೆ ಇಬ್ಬರ ನಡುವೆ ಅದ್ ಯಾವ ವಿಚಾರಕ್ಕೆ ಮನಸ್ತಾಪ ಬಂದಿದೆಯೊ ಗೊತ್ತಿಲ್ಲ. ಆದರೆ, ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿಕೊಂಡ ಹಿನ್ನಲೆ ಮಹಿಳೆ ಸಾವನ್ನಪ್ಪಿದ್ದಾರೆ. ಹುಡುಗನ ಕೈ ಸುಟ್ಟಿದೆ. ಇದು ಆತ್ಮಹತ್ಯೆ ಪ್ರಕರಣವೋ ಅಥವಾ ಕೊಲೆಯೋ ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.  ಜಿಲ್ಲೆ ಮೂಡಿಗೆರೆ ಪಟ್ಟಣದ ಬಿಳುಗುಳ ನಿವಾಸಿ ಸವಿತಾ ಸಾವನ್ನಪ್ಪಿದ್ದರೆ, ಕೊಲ್ಲಿಬೈಲ್ ನಿವಾಸಿ ನಂದೀಶ ಗಾಯಗೊಂಡಿದ್ದಾನೆ. 

ಕೌಟುಂಬಿಕ ಕಲಹದಿಂದ ಪತಿಯನ್ನ ಬಿಟ್ಟು ತವರು ಮನೆಯಲ್ಲೇ ಸವಿತಾ ವಾಸವಾಗಿದ್ದರು. ಬಿಳಗುಳದ ಸವಿತಾರಿಗೆ  ಕಳೆದ ಒಂದು ವರ್ಷದಿಂದ ಪರಿಚಯವಾದ ನಂದೀಶ  ತುಂಬಾ ಆತ್ಮೀಯವಾಗಿದ್ದ.  ಹತ್ತಿರದ ಹೋಂ ಸ್ಟೇ ವೊಂದರಲ್ಲಿ ಸವಿತಾ ಅಡುಗೆಯವಳಾಗಿ ಆಗಿ ಕೆಲಸ ಮಾಡುತ್ತಿದ್ದರೆ, ಅಲ್ಲೇ ಸಮೀಪದ ದುರ್ಗಾ ಪರಮೇಶ್ವರಿ ಎಸ್ಟೇಟ್​ನಲ್ಲಿ ನಂದೀಶ್ ರೈಟರ್ ಆಗಿ ಕೆಲಸ ಮಾಡುತ್ತಿದ್ದ. ತುಂಬಾ ಅನ್ಯೋನ್ಯವಾಗಿದ್ದ, ಹತ್ತಿರವಾಗಿದ್ದರು. ಇವರಿಬ್ಬರ ಸಂಬಂಧದಲ್ಲಿ ವಿರಸ ಮೂಡಿದೆ.

ಅದ್ಯಾವ ಕಾರಣಕ್ಕೆ ಇವರಿಬ್ಬರ ಮಧ್ಯೆ ವಿರಸ ಮೂಡಿದೆ ಎಂಬುದು ತಿಳಿದಿಲ್ಲ. ಆದರೆ, ಅದು ಪೆಟ್ರೋಲ್​ ಹಾಕಿಕೊಂಡು ಸಾಯುತ್ತೇನೆ ಎನ್ನುವ ಹಂತಕ್ಕೆ ಹೋಗಿದೆ. ನಂದೀಶ್​ನಿಗೆ ಕರೆಮಾಡಿ ನೀನು ಕೆಲಸ ಮಾಡುವ ಎಸ್ಟೇಟ್​ ಮುಂದೆಯೇ  ಪೆಟ್ರೋಲ್​ ಹಾಕಿಕೊಂಡು ಸಾಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾಳೆ. ಆದರೆ ಆಕೆಯ ಮಾತನ್ನು ಲಘುವಾಗಿ ಪರಿಗಣಿಸಿದ ನಂದೀಶ್​ ನಿನ್ನದು ಇದೇ ಆಯ್ತು ಎಂದಿದ್ದಾನೆ. ಆದರೆ ಕಡೆಗೆ ಸವಿತಾ ಹೇಳಿದಂತೆ ಮಾಡಿದ್ದಾಳೆ. ಎಸ್ಟೇಟ್​ ಮುಂಭಾಗವೇ ಸವಿತಾ ಬೆಂಕಿಗೆ ಆಹುತಿಯಾಗಿದ್ದಾಳೆ.

ಇದನ್ನು ಓದಿ: ವಿಜಯಪುರದಲ್ಲಿ ನಾಳೆ ಜಿದ್ದಾ ಜಿದ್ದಿಗೆ ಸಾಕ್ಷಿಯಾಗಲಿರುವ ಬಂದ್; ಬಂದ್​ ವಿಫಲಗೊಳಿಸಲು ಯತ್ನಾಳ್​ ಕರೆ

ಬಹುತೇಕ ಸುಟ್ಟು ಹೋಗಿದ್ದ ಸವಿತಾರನ್ನ ಮಂಗಳೂರಿನ ಆಸ್ಪತ್ರೆಗೆ ಸೇರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಸವಿತಾ ಮೃತಪಟ್ಟಿದ್ದಾರೆ. ಆದರೆ ಈ ಬೆಂಕಿ ಹೇಗೆ ಹೊತ್ತಿಕೊಂಡಿತ್ತು ಎನ್ನುವುದು ಇನ್ನೂ ನಿಗೂಢವಾಗಿದೆ. ಯಾಕೆಂದರೆ ನಾನು ಪೆಟ್ರೋಲ್ ಹಾಕ್ಕೊಂಡ್ ಸಾಯುತ್ತೇನೆ ಎನ್ನುವ ಇವರಿಬ್ಬರ ಮೊಬೈಲ್​ ಸಂಭಾಷಣೆ  ಸಂಭಾಷಣೆ ಪೊಲೀಸರಿಗೆ ಸಿಕ್ಕಿದೆ. ಅಲ್ಲದೇ ನಂದೀಶನ ಎರಡು ಕೈಗಳು ಸುಟ್ಟುಹೋಗಿದೆ. ಸವಿತಾ ಪೆಟ್ರೋಲ್ ಹಾಕಿಕೊಂಡಾಗ ಆತ್ಮಹತ್ಯೆ  ರಕ್ಷಣೆಗೆ ಹೋದಾಗ ನನ್ನ ಕೈ ಸುಟ್ಟಿದೆ ಎಂದು ನಂದೀಶ ಹೇಳುತ್ತಿದ್ದಾನೆ

ಈ ನಡುವೆ ಸವಿತಾ ಮನೆಯವರು, ನಂದೀಶನೇ ಕೊಲೆ ಮಾಡಿರುವುದಾಗಿ ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂದೀಶ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಸದ್ಯ ಆಸ್ಪತ್ರೆ ಪಾಲಾಗಿರುವ ನಂದೀಶ ಗುಣಮುಖವಾದ ಬಳಿಕ ಪೊಲೀಸರ ವಿಚಾರಣೆಯಲ್ಲಿ ಇದು ಕೊಲೆಯೋ..? ಆತ್ಮಹತ್ಯೆಯೋ  ಬಯಲಾಗಿದೆ.
Published by:Seema R
First published: