ಚಾಮರಾಜನಗರ: ಚಾಮುಲ್ ಅಕ್ರಮ ನೇಮಕಾತಿ ತನಿಖಾ ವರದಿ ಸಲ್ಲಿಸಿ 6 ತಿಂಗಳಾದರೂ ಕ್ರಮವಿಲ್ಲ

ಉತ್ತರಪತ್ರಿಕೆಗಳನ್ನು ಬದಲಿಸಿ ಹಾಗು ಉತ್ತರ ಪತ್ರಿಕೆಗಳನ್ನು ಟ್ಯಾಂಪರಿಂಗ್ ಮಾಡಿರುವ ಸಾಧ್ಯತೆಗಳಿವೆ. ನಿಯಮಾವಳಿ ಪ್ರಕಾರ ಮೀಸಲಾತಿ ರೋಸ್ಟರ್ ಪಾಲಿಸಿರುವುದಿಲ್ಲ, ಪರೀಕ್ಷೆಗಳನ್ನು ಜಿಲ್ಲಾ  ಕೇಂದ್ರದಲ್ಲಿ ನಡೆಸದೆ ಮೈಸೂರಿನ ಖಾಸಗಿ ಕಾಲೇಜಿನಲ್ಲಿ  ನಡೆಸಿರುವುದು ಸಂಶಯಾಸ್ಪದವಾಗಿರುತ್ತದೆ.

news18-kannada
Updated:September 23, 2020, 1:19 PM IST
ಚಾಮರಾಜನಗರ: ಚಾಮುಲ್ ಅಕ್ರಮ ನೇಮಕಾತಿ ತನಿಖಾ ವರದಿ ಸಲ್ಲಿಸಿ 6 ತಿಂಗಳಾದರೂ ಕ್ರಮವಿಲ್ಲ
ಚಾಮುಲ್
  • Share this:
ಚಾಮರಾಜನಗರ ( ಸೆ.23): ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ (ಚಾಮುಲ್)ದಲ್ಲಿ ನಡೆದಿದ್ದ ಅಕ್ರಮ ನೇಮಕಾತಿ ಸಂಬಂಧ ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿ  ಆರು ತಿಂಗಳಾದರು ಯಾವುದೇ ಕ್ರಮ ಕೈಗೊಳ್ಳುದಿರುವುದು ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹೊಸದಾಗಿ ರಚನೆಯಾದ ಚಾಮುಲ್ ಗೆ ಮೊದಲ ಹಂತದಲ್ಲಿ ಮಾಡಿಕೊಳ್ಳಲಾದ 72 ಹುದ್ದೆಗಳಈ ನೇಮಕಾತಿಯಲ್ಲಿ ಸ್ವಜನಪಕ್ಷಪಾತ, ಭ್ರಷ್ಟಾಚಾರ, ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು.

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ  ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದಲ್ಲಿ ಖಾಲಿ ಇದ್ದ 72 ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಆದರೆ ಈ ನೇಮಕಾತಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ಒಕ್ಕೂಟದ ಅಂದಿನ ಅಧ್ಯಕ್ಷರು ಹಾಗೂ ನಿರ್ದೇಶಕರ ಸಂಬಂಧಿಗಳಿಗೆ ಹುದ್ದೆಗಳನ್ನು ನೀಡಲಾಗಿದೆ. ಪ್ರಭಾವಿ ರಾಜಕಾರಣಿಗಳ ಮಕ್ಕಳನ್ನು ಅಕ್ರಮವಾಗಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಅರ್ಹ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.

ಹೀಗಾಗಿ ವಿವಿಧ ಸಂಘಸಂಸ್ಥೆಗಳು ಭಾರೀ ಹೋರಾಟ ನಡೆಸಿದ್ದವು. ಈ ಹಿನ್ನಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತನಿಖೆ ನಡೆಸಲು ಜಿಲ್ಲಾ ಮಟ್ಟದ ನಾಲ್ವರು ಅಧಿಕಾರಿಗಳ ಜಂಟೀ ಸಮಿತಿ ರಚಿಸಿದ್ದರು. ಈ ಸಮಿತಿ ಸುಮಾರು ಎರಡ ತಿಂಗಳ ಕಾಲ  ತನಿಖೆ ನಡೆಸಿ ವರದಿ ಸಲ್ಲಿಸಿತ್ತು. ಈ ತನಿಖಾ ವರದಿ ನ್ಯೂಸ್ 18  ಲಭ್ಯವಾಗಿದ್ದು, ವರದಿಯ ಪ್ರಮುಖಾಂಶಗಳು ಹೀಗಿವೆ.

ಉತ್ತರಪತ್ರಿಕೆಗಳನ್ನು ಬದಲಿಸಿ ಹಾಗು ಉತ್ತರ ಪತ್ರಿಕೆಗಳನ್ನು ಟ್ಯಾಂಪರಿಂಗ್ ಮಾಡಿರುವ ಸಾಧ್ಯತೆಗಳಿವೆ. ನಿಯಮಾವಳಿ ಪ್ರಕಾರ ಮೀಸಲಾತಿ ರೋಸ್ಟರ್ ಪಾಲಿಸಿರುವುದಿಲ್ಲ, ಪರೀಕ್ಷೆಗಳನ್ನು ಜಿಲ್ಲಾ  ಕೇಂದ್ರದಲ್ಲಿ ನಡೆಸದೆ ಮೈಸೂರಿನ ಖಾಸಗಿ ಕಾಲೇಜಿನಲ್ಲಿ  ನಡೆಸಿರುವುದು ಸಂಶಯಾಸ್ಪದವಾಗಿರುತ್ತದೆ. ಪರೀಕ್ಷಾ ಪಾರದರ್ಶಕತೆಯನ್ನು  ಪ್ರಶ್ನಿಸಿಸುವಂತಾಗಿದೆ, ಪ್ರಶ್ನೆ ಪತ್ರಿಕೆಗಳನ್ನು ನಕಲಿಸಿರುವ ಸಂಭವವಿದೆ, ಮೌಲ್ಯ ಮಾಪನದಲ್ಲಿ ಪಾರದರ್ಶಕತೆ ಇರುವುದಿಲ್ಲ. ಲಿಖಿತ ಪರೀಕ್ಷೆಯಿಂದ ಸಂದರ್ಶನಕ್ಕೆ ಆಯ್ಕೆಯಾದ 1:5 ಅಭ್ಯರ್ಥಿಗಳ ಪಟ್ಟಿಯನ್ನು ವೆಬ್ ಸೈಟ್​​​ನಲ್ಲಾಗಲಿ  ಇನ್ಯಾವುದೇ ರೀತಿಯಲ್ಲಿ  ಪ್ರಕಟಿಸಿರುವುದಿಲ್ಲ.

ಪ್ರವಾಹ ತಡೆಗಟ್ಟಲು ವಿಶೇಷ ಸಮಿತಿ ರಚಿಸುವಂತೆ ಕೇಂದ್ರಕ್ಕೆ ಕೆ.ಸಿ. ರಾಮಮೂರ್ತಿ ಒತ್ತಾಯ

ಸಂದರ್ಶನದ ಸಿಸಿಟಿವಿ ಫುಟೇಜ್ ವಿಡಿಯೋ ಅಥವಾ ಫೋಟೋ ಅಗಲಿ ಇಲ್ಲ, ಸಂದರ್ಶನಕ್ಕೆ  ಹಾಜರಾಗಿದ್ದ ಅಭ್ಯರ್ಥಿಗಳು  ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಎಲ್ಲೂ ಬಹಿರಂಗಪಡಿಸಿಲ್ಲ, ಚಾಮುಲ್ ಅಧ್ಯಕ್ಷರೇ ತನ್ನ ರಕ್ತ ಸಂಬಂಧಿಗೆ  ಸಂದರ್ಶನ ನಡೆಸಿರುವುದು ಸಂಶಯಾಸ್ಪದವಾಗಿರುತ್ತದೆ. ಹಲವಾರು  ಪ್ರತಿಭಾನ್ವಿತರು ಅವಕಾಶ ವಂಚಿತರಾಗಿದ್ದಾರೆ.  ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಒ.ಎಮ್.ಆರ್. ಶೀಟ್ ಕೊಟ್ಟಿಲ್ಲ. ಹಾಗೂ ಕೀ ಆನ್ಸರ್ ಸಹ ಪ್ರಕಟಿಸಿಲ್ಲ. ನೇಮಕಾತಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದವರನ್ನು 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆದು ತಮಗೆ ಬೇಕಾದವರನ್ನು  ಆಯ್ಕೆ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.  ಲಿಖಿತ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಬಂದಿದ್ದರೂ ಕಡಿಮೆ ಅಂಕ ಬಂದವರನ್ನು ವೈವಾದಲ್ಲಿ ಹೆಚ್ಚಿನ ಅಂಕ ನೀಡಿ ಆಯ್ಕೆ ಮಾಡಿಕೊಂಡಿರುವುದು ಕಂಡು ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹೀಗೆ ಹಲವಾರು ಅಂಶಗಳನ್ನು ಉಲ್ಲೇಖಿಸಿ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೆ ಸರ್ಕಾರಕ್ಕೆ ಈ ವರದಿ ಸಲ್ಲಿಸಿ ಆರು ತಿಂಗಳಾದರೂ  ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದು  ಮತ್ತಷ್ಟು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಜಂಟಿ  ತನಿಖಾ ಸಮಿತಿ ವರದಿಯಾನುಸಾರ ಶಿಸ್ತು ಕ್ರಮ ಜರುಗಿಸಬೇಕು, ಅಕ್ರಮ ನೇಮಕಾತಿ ರದ್ದುಪಡಿಸಬೇಕು. ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಸಮಿತಿಯನ್ನು ಸೂಪರ ಸೀಡ್ ಮಾಡಿ, ಹೊಸದಾಗಿ ಸಮಿತಿ ರಚಿಸಿ ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಜಿಲ್ಲಾಭಿವೃದ್ಧಿ ಹೋರಾಟ ಸಮಿತಿ  ಎಚ್ಚರಿಸಿದೆ.
Published by: Latha CG
First published: September 23, 2020, 1:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading