ಯಾದಗಿರಿ(ಮೇ.22): ಜಿಲ್ಲೆಯಲ್ಲಿ ನಕಲಿ ಮದ್ಯ ಮಾರಾಟ ದಂಧೆ ಎಗ್ಗಿಲ್ಲದೇ ಸಾಗಿದೆ. ನಕಲಿ ಮದ್ಯ ಮಾರಾಟ (Illegal Liquor Sale) ಜಾಲ ಪತ್ತೆ ಹಚ್ಚಿ ಅಕ್ರಮ ದಂಧೆಗೆ ಕಡಿವಾಣ ಹಾಕಲು ಅಬಕಾರಿ ಅಧಿಕಾರಿಗಳು ಜೀವದ ಹಂಗು ತೊರೆದು ಹಗಲಿರುಳು ಶ್ರಮವಹಿಸುತ್ತಿದ್ದಾರೆ. ಆದರೆ ಅಕ್ರಮ ದಂಧೆಕೊರರು ಅಬಕಾರಿ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ, ದೊಣ್ಣೆಗಳಿಂದ ಹಲ್ಲೆ ನಡೆಸಿ ಜೀವ ಬೇದರಿಕೆ (Death threat) ಹಾಕಿದ್ದಾರೆ. ಗಲಾಟೆ ವೇಳೆ ಅಬಕಾರಿ ಪೊಲೀಸರು (Police) ಅಪಾಯದಿಂದ ಪಾರಾಗಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಚಂದಾಪುರ ಗ್ರಾಮದ ಹೊರಭಾಗದ ಮುದುಕಪ್ಪ ಅವರ ಮನೆ ಹತ್ತಿರ ಘಟನೆ ಜರುಗಿದೆ. ಮುದುಕಪ್ಪ ಅವರ ಮನೆಯಲ್ಲಿ ಅಕ್ರಮವಾಗಿ ನಕಲಿ ಮದ್ಯ ಸಂಗ್ರಹ ಮಾಡಿ ಸಾಗಾಟ ಮಾಡಲಾಗುತಿತ್ತು.
ಈ ವೇಳೆ ಶಹಾಪುರ ಅಬಕಾರಿ ಇನ್ಸ್ಪೆಕ್ಟರ್ ವಿಜಯಕುಮಾರ್ ಹಿರೇಮಠ ಅವರ ನೇತೃತ್ವದ ಅಧಿಕಾರಿಗಳ ತಂಡ ಮೇ 19 ರಂದು ಖಚೀತ ಮಾಹಿತಿ ಮೆರೆಗೆ ರಾತ್ರಿ ದಾಳಿ ನಡೆಸಿ ನಕಲಿ ಮದ್ಯ ಜಪ್ತಿ ಮಾಡಿ ಆರೋಪಿ ಹಣಮಂತ ಸಾಹು ಅವರನ್ನು ಬಂಧನ ಮಾಡಿ ಕರೆದುಕೊಂಡು ಹೋಗುವಾಗ ಹಣಮಂತ ಸಾಹು ಅವರ ಬೆಂಬಲಿಗರು 40 ಕ್ಕು ಹೆಚ್ಚು ಜನ ಕಲ್ಲು, ದೊಣ್ಣೆಗಳನ್ನು ತೆಗೆದು ಹಲ್ಲೆ ನಡೆಸುವ ವೇಳೆ ಅಧಿಕಾರಿಗಳು ಅಪಾಯದಿಂದ ಪಾರಾಗಿದ್ದಾರೆ.
ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೇದರಿಕೆ
ಈ ವೇಳೆ ಅಬಕಾರಿ ನಿರೀಕ್ಷಕ ವಿಜಯಕುಮಾರ್ ಹಿರೇಮಠ ಹಾಗೂ ಸಿಬ್ಬಂದಿ ಮಹ್ಮದ್ ರಫಿ ಅವರಿಗೆ ಅಕ್ರಮ ದಂಧೆ ಕೊರರು ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೇದರಿಕೆ ಹಾಕಿದ್ದಾರೆ.ಈ ವೇಳೆ ಬಂಧನಕ್ಕೊಳಗಾದ ಆರೋಪಿ ಹಣಮಂತ ಎಸ್ಕೇಪ್ ಆಗಿದ್ದಾನೆ.
ಈ ವೇಳೆ 45 ಪೆಟ್ಟಿಗೆ ನಕಲಿ ಮದ್ಯ ಜಪ್ತಿ ಮಾಡಲಾಗಿದೆ.ಹಲ್ಲೆಗೊಳಗಾದ ಅಬಕಾರಿ ಇನ್ಸ್ಪೆಕ್ಟರ್ ವಿಜಯಕುಮಾರ್ ಹಿರೇಮಠ ಅವರು ಗೋಗಿ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದು,ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗೋಗಿ ಪೊಲೀಸರು ಆರೋಪಿಗಳಾದ ಲಕ್ಷ್ಮಣ ಹಾಗೂ ರೇವಣಸಿದ್ದನನ್ನು ಬಂಧಿಸಿದ್ದಾರೆ.
ಪ್ರಕರಣ ದಾಖಲು
ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಅವರು ಮಾತನಾಡಿ, ಚಂದಾಪುರ ಗ್ರಾಮದ ಹೊರಭಾಗದಲ್ಲಿ ಅಬಕಾರಿ ಅಧಿಕಾರಿಗಳು ನಕಲಿ ಮದ್ಯ ಜಪ್ತಿ ಮಾಡಿದ್ದು, ಈ ವೇಳೆ 40 ಕ್ಕು ಹೆಚ್ಚು ಜನ ಸೇರಿ ಅಬಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ಗೋಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಇಬ್ಬರು ಆರೋಪಿಗಳನ್ನು ಬಂಧನ ಮಾಡಲಾಗಿದ್ದು,ಇನ್ನುಳಿದ ಆರೋಪಿಗಳನ್ನು ಬಂಧನ ಮಾಡಲಾಗುತ್ತದೆ ಎಂದರು.ಆರೋಪಿಗಳ ವಿರುದ್ಧ ರೌಡಿಶೀಟರ್ ಓಪನ್ ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ: Gadag: ರಾತ್ರಿ ಬೆಳಗಾಗುವುದರಲ್ಲಿ ಉಕ್ಕಿ ಹರಿದ ಹಳ್ಳ! ಸಿಕ್ಕಿಹಾಕಿಕೊಂಡಿದ್ದ ಕಾರ್ಮಿಕರ ರಕ್ಷಣೆ
ಪ್ರಮುಖ ಆರೋಪಿಗಾಗಿ ಜಾಲ ಬೀಸಿದ ಖಾಕಿ ಪಡೆ!
ಪ್ರಕರಣ ದಾಖಲಿಸಿಕೊಂಡ ಗೋಗಿ ಪೊಲೀಸರು.ಪ್ರಮುಖ ಆರೋಪಿ ಹಣಮಂತರಾಯ ಸಾಹು ಅವರನ್ನು ಪತ್ತೆ ಹಚ್ಚಲು ಜಾಲ ಬೀಸಿದ್ದು,ಹಣಮಂತರಾಯ ಯಾದಗಿರಿ ಜಿಲ್ಲಾದ್ಯಂತ ನಕಲಿ ಮದ್ಯ ಸಾಗಾಟ ಮಾಡುತ್ತಿದ್ದನಾ ಅಥವಾ ಎನು ಎಂಬುದು ಪತ್ತೆ ಹಚ್ಚುವುದು ಅವಶ್ಯವಿದೆ.ಇದರಿಂದ ಹಣಮಂತರಾಯನನ್ನು ಬಂಧಿಸಲು ಜಾಲ ಬೀಸಿದ್ದಾರೆ.
ನಕಲಿ ಮದ್ಯ ಬೇರು ಸಮೇತ ನಿರ್ಮೂಲನೆಗೆ ಬದ್ದ!
ನಕಲಿ ಮದ್ಯ ಮಾರಾಟ ದಂಧೆ ಬಗ್ಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ನಕಲಿ ದಂಧೆ ಕಡಿವಾಣ ಹಾಕಲಾಗುತ್ತಿದೆ.ಈಗಾಗಲೇ ಎರಡು ನಕಲಿ ಮದ್ಯ ಸಾಗಾಟ ಪ್ರಕರಣಗಳು ಪತ್ತೆ ಹಚ್ಚಲಾಗಿದೆ.ನಕಲಿ ಮದ್ಯ ಸಾಗಾಟದಿಂದ ಮದ್ಯ ವೇಸನಿಗಳ ಆರೋಗ್ಯದ ಮೇಲೆ ಪರಿಣಾಮ ಬಿರುವ ಜೊತೆ ಸರಕಾರದ ಬೊಕ್ಕಸಕ್ಕೆ ನಷ್ಟವಾಗಲಿದೆ.ಇದರಿಂದ ಬೇರು ಸಮೇತ ನಕಲಿ ಮದ್ಯ ಮಾರಾಟ ಕಡಿವಾಣ ಹಾಕಲು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: Cashew Shaped Egg: ಗೋಡಂಬಿ ಆಕಾರದ ಮೊಟ್ಟೆ ಇಟ್ಟ ಕೋಳಿ, ಫೋಟೋಸ್ ವೈರಲ್
ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಅಬಕಾರಿ ಉಪ ಆಯುಕ್ತ ಮೋತಿಲಾಲ್ ಅವರು ಮಾತನಾಡಿ, ಎರಡು ನಕಲಿ ಮದ್ಯ ಮಾರಾಟ ದಂಧೆ ಪ್ರಕರಣಗಳು ಪತ್ತೆ ಹಚ್ಚಲಾಗಿದೆ.ಚಂದಾಪುರನಲ್ಲಿ 40 ಕ್ಕು ಹೆಚ್ಚು ಜನರು ನಕಲಿ ಮದ್ಯ ದಾಳಿ ಮಾಡಲು ಹೋದವರ ಮೇಲೆ ಹಲ್ಲೆ ನಡೆಸಿದ್ದು, ಈ ಬಗ್ಗೆ ಗೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.45 ಬಾಕ್ಸ್ ನಕಲಿ ಮದ್ಯ ಜಪ್ತಿ ಮಾಡಲಾಗಿದೆ .ತಪ್ಪಿತಸ್ಥರು ಯಾರೆ ಇದ್ದರು ಕ್ರಮಕೈಗೊಳ್ಳಲಾಗುತ್ತದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ