ಬೆಂಗಳೂರು ಹೊರವಲಯದಲ್ಲಿ ಅಕ್ರಮ ಲೇಔಟ್; ಸರ್ಕಾರಿ ಜಮೀನು, ಸ್ಮಶಾನ, ದೇವಸ್ಥಾನದ ಜಾಗ ಕಬಳಿಕೆ; ರಸ್ತೆಗಾಗಿ ಕೆರೆಯೇ ಒತ್ತುವರಿ

ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಗೆ ಸೇರುವ ಭೂತಾನಹಳ್ಳಿಯಲ್ಲಿ ಸರ್ಕಾರಿ ಜಾಗ ಮತ್ತು ಕೆರೆಯನ್ನೇ ಕಬಳಿಸಿ ಭೂಗಳ್ಳರು ಅಕ್ರಮ ಬಡಾವಣೆ ನಿರ್ಮಿಸುತ್ತಿದ್ದಾರೆನ್ನಲಾಗಿದೆ.

news18
Updated:June 26, 2019, 9:26 PM IST
ಬೆಂಗಳೂರು ಹೊರವಲಯದಲ್ಲಿ ಅಕ್ರಮ ಲೇಔಟ್; ಸರ್ಕಾರಿ ಜಮೀನು, ಸ್ಮಶಾನ, ದೇವಸ್ಥಾನದ ಜಾಗ ಕಬಳಿಕೆ; ರಸ್ತೆಗಾಗಿ ಕೆರೆಯೇ ಒತ್ತುವರಿ
ಆನೇಕಲ್​ನ ಭೂತಾನಹಳ್ಳಿಯಲ್ಲಿ ಒತ್ತುವರಿಗೊಂಡ ಕೆರೆ
  • News18
  • Last Updated: June 26, 2019, 9:26 PM IST
  • Share this:
ಆನೇಕಲ್(ಜೂನ್ 26): ಅದು ಸರ್ಕಾರಿ ಸ್ಮಶಾನ, ಸರ್ಕಾರಿ ರಸ್ತೆ, ಸರ್ಕಾರಿ ದೇವರ ಮಾನ್ಯ ಜಮೀನು ಒತ್ತುವರಿ ಮಾಡಿ, ಹಸಿರು ವಲಯದಲ್ಲಿ ನಿರ್ಮಿಸಿರುವ ಆಕ್ರಮ ಬಡಾವಣೆ. ಸಾಲದಕ್ಕೆ ಕೆರೆಯಲ್ಲಿ ಆಕ್ರಮವಾಗಿ ಮಣ್ಣು ತೆಗೆದು ಕೆರೆ ಜಾಗದಲ್ಲೇ ಬಡಾವಣೆಗಾಗಿ ಆಕ್ರಮವಾಗಿ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. ಭೂಗಳ್ಳರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರು ನೀಡಿದ್ರೆ ಅಧಿಕಾರಿಗಳ ಸಮ್ಮುಖದಲ್ಲೇ ಗ್ರಾಮಸ್ಥರಿಗೆ ಧಮ್ಕಿ ಹಾಕಲಾಗುತ್ತಿದೆ. ಇಂಥದ್ದೊಂದು ಭೂಮಾಫಿಯಾ ತಲೆ ಎತ್ತಿರುವುದು ಬೆಂಗಳೂರು ನಗರದ ಹೊರವಲಯದಲ್ಲಿರುವ ಆನೇಕಲ್ ತಾಲೂಕಿನ ಭೂತಾನಹಳ್ಳಿ ಗ್ರಾಮದಲ್ಲಿ.

ಬನ್ನೇರುಘಟ್ಟ ಅರಣ್ಯದಂಚಿನಲ್ಲಿರುವ ಈ ಗ್ರಾಮದ ಕೆರೆಯು ಭೂಗಳ್ಳರ ಪಾಲಾಗುತ್ತಿದೆ. ಕೆರೆಯಲ್ಲಿನ ಮಣ್ಣನ್ನು ತೆಗೆದು ಕೆರೆ ಜಾಗ ಒತ್ತವರಿ ಮಾಡಿ ಖಾಸಗಿ ಬಡಾವಣೆಗೆ ರಸ್ತೆ ನಿರ್ಮಿಸಲಾಗುತ್ತಿದೆ. ನಕಾಶೆಯಲ್ಲಿರುವ ರಸ್ತೆ ಕಬಳಿಸಲಾಗಿದೆ. ಜೊತೆಗೆ ಹಸಿರು ವಲಯದಲ್ಲಿ ಬಡಾವಣೆ ನಿರ್ಮಿಸಿ ಆಕ್ರಮವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ಕೋಟಿ ಕೋಟಿ ವಂಚನೆ ಮಾಡಲಾಗುತ್ತಿದೆ ಎಂದು ಸ್ಥಳೀಯರು ಬಡಾವಣೆ ಮಾಲೀಕ ವೆಂಕಟೇಶ್ ಮೇಲೆ ಆರೋಪಿಸಿದ್ದಾರೆ.

ಇದನ್ನೂ ಓದಿ: ನನ್ನ ಮುಂದೆ ಮೋದಿ ಭಜನೆ ಮಾಡಿದರೆ ಪ್ರಯೋಜನವಿಲ್ಲ; ಎಚ್​.ಡಿ ಕುಮಾರಸ್ವಾಮಿ

ಕೆರೆ ಕುಂಟೆ, ರಾಜಕಾಲುವೆ ಸುತ್ತಮುತ್ತಲಿನ ಬಫರ್ ಜೋನ್ ವ್ಯಾಪ್ತಿಯಲ್ಲಿ ಯಾವುದೇ ಬಡಾವಣೆ ನಿರ್ಮಾಣ ಮಾಡುವಂತಿಲ್ಲ. ಆದ್ರೆ ವೆಂಕಟೇಶ್ ಎನ್ನುವ ವ್ಯಕ್ತಿ ಕೆರೆಯ ಜಾಗವನ್ನ ಆಕ್ರಮವಾಗಿ ಒತ್ತುವರಿ ಮಾಡಿ ರಸ್ತೆ ಅಭಿವೃದ್ಧಿಪಡಿಸಲು ಮುಂದಾಗಿರುವುದಲ್ಲದೆ, ಕೆರೆಯ ಪಕ್ಕದ ಬಫರ್ ಜೋನ್​ನಲ್ಲಿಯು ಅದರಲ್ಲೂ ಕೃಷಿಗೆ ಮಿಸಲಿಟ್ಟಿರುವ ಜಮೀನಿನಲ್ಲಿ ಬಡಾವಣೆ ನಿರ್ಮಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಆಕ್ರಮ ಫಿಲ್ಟರ್ ದಂಧೆ ನಡೆಸುತ್ತಿದ್ದ ಈತ ಕೆರೆಯಲ್ಲಿನ ಫಲವತ್ತಾದ ಮಣ್ಣನ್ನ ಲೂಟಿ ಮಾಡಿದ್ದು, ಇದೀಗ ಕೆರೆಯನ್ನು ನುಂಗಲು ಮುಂದಾಗಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ: YGF 2: ರಾಕಿಂಗ್​ ಅಪ್ಪನ ಸ್ಪೀಡ್​ ಕಂಡು ದಂಗಾದ ARYA: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಯಶ್​-ರಾಧಿಕಾ..!

ಇನ್ನು ಸರ್ಕಾರಕ್ಕೆ ಸೇರಿದ ಮುತ್ತುರಾಯಸ್ವಾಮಿ ದೇವರ ಮಾನ್ಯ ಜಮೀನನ್ನು ಸಹ ಕಬಳಿಸುವ ಸಲುವಾಗಿ ದೇವಾಲಯದ ಅರ್ಚಕರ ಕುಟುಂಬದವರಿಗೆ ಕೊಲೆ ಬೆದರಿಕೆ ಹಾಕಿ ಊರಿನಿಂದ ಹೊರ ಓಡಿಸಿದ್ದಾರೆ. ದೇವಾಲಯದಲ್ಲಿ ಪೂಜೆ ಮಾಡಲು ಅವಕಾಶ ನೀಡುವುದಿಲ್ಲ. ಸರ್ಕಾರ ನೀಡಿದ್ದ ಜಾಗವನ್ನು ದೌರ್ಜನ್ಯದಿಂದ ಕಸಿದುಕೊಂಡಿದ್ದಾನೆ ಎಂದು ದೇವಾಲಯ ಅರ್ಚಕರ ಕುಟುಂಬದವರು ಸಹ ಬಡಾವಣೆ ಮಾಲೀಕ ವೆಂಕಟೇಶ್ ವಿರುದ್ಧ ಆಪಾದನೆ ಮಾಡಿದ್ದಾರೆ.

ಒಟ್ಟಿನಲ್ಲಿ ಹಸಿರು ವಲಯ, ಸರ್ಕಾರಿ ದೇವರ ಮಾನ್ಯ, ಸ್ಮಶಾನ ದಾರಿಯ ಜಾಗದ ಕಬಳಿಕೆ ಹೀಗೆ ಆಕ್ರಮಗಳ ಮೇಲೆ ಆಕ್ರಮಗಳನ್ನು ಎಸಗುತ್ತಾ ಕಾನೂನಿಗೆ ಮಣ್ಣೆರಚುತ್ತಿರುವ ಇಂತಹ ಭೂಗಳ್ಳರ ವಿರುದ್ಧ ತಾಲ್ಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸರ್ಕಾರಿ ಆಸ್ತಿಗಳ ರಕ್ಷಣೆಗೆ ಮುಂದಾಗಬೇಕಿದೆ.(ವರದಿ: ಆದೂರು ಚಂದ್ರು)

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:June 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ