ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Bengaluru) ಮತ್ತೆ ಕಿಡ್ನಿ ದಂಧೆ ಕಾಣಿಸಿಕೊಂಡಿದೆ. ಬುದ್ದಿಮಾಂದ್ಯನೊಬ್ಬನಿಗೆ (Mentally Challenged Person ) ಚಿಕಿತ್ಸೆ ಕೊಡಿಸುವ ನೆಪದಲ್ಲಿ ಕಿಡ್ನಿಯನ್ನೇ ಆಪರೇಷನ್ ಮಾಡಿ ತೆಗೆದಿರೋದು ಬೆಳಕಿಗೆ ಬಂದಿದೆ. ಯಾದಗಿರಿ (Yadagiri) ಮೂಲದ ಶಂಕರಪ್ಪ ಬುದ್ದಿಮಾಂದ್ಯನಾಗಿದ್ದು, ಚಿಕಿತ್ಸೆಗೆಂದು ಹೆಗ್ಗನಹಳ್ಳಿಯ ಏಕತಾ ಚಾರಿಟಬಲ್ ಟ್ರಸ್ಟ್ಗೆ ಸೇರಿಸಿದ್ದರು. ಆದರೆ ಆತನಿಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ (Nimhans Hospital) ಚಿಕಿತ್ಸೆ ಕೊಡಿಸುವ ನೆಪದಲ್ಲಿ ಕರೆದುಕೊಂಡು ಬಂದು ಕಿಡ್ನಿ ಕದ್ದಿರೋ ಆರೋಪ ಕೇಳಿಬಂದಿದೆ. ಆಪರೇಷನ್ ವೇಳೆ ಯಡವಟ್ಟಾಗಿ ಶಂಕರಪ್ಪ ಜೀವ ಬಿಟ್ಟಿದ್ದಾನೆ. ಈ ಬಗ್ಗೆ ದೂರು ನೀಡಿದರೂ ಸರಿಯಾಗಿ ವಿಚಾರಣೆ ನಡೆಸದ ಪೊಲೀಸರಿಗೆ ಮಾನವ ಹಕ್ಕುಗಳ ಆಯೋಗ 14 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಆಶ್ರಮಕ್ಕೆ ಸೇರಿದ ಬುದ್ದಿಮಾಂದ್ಯನ ಕಿಡ್ನಿ ಕಸಿ ಮಾಡಿದ್ರು
ಹೌದು, ಇದು ಬುದ್ದಿಮಾಂದ್ಯನೊಬ್ಬನ ಕರುಣಾಜನಕ ಕಥೆ ಇದು. ಬುದ್ದಿಮಾಂಧ್ಯ ಅನ್ನೋ ಕಾರಣಕ್ಕೆ ಮನೆಯವರು ಬೆಂಗಳೂರಿಗೆ ಬಂದು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡಿಸಲು ಆಗಲ್ಲ ಅಂತ ಅನಾಥ ಆಶ್ರಮಕ್ಕೆ ಸೇರಿಸಿದ್ದರು. ಆದರೆ ಆಶ್ರಮಕ್ಕೆ ಬಂದ ಕೆಲವೇ ತಿಂಗಳಲ್ಲಿ ಆತನ ಕಿಡ್ನಿ ಕಸಿ ಆಗಿದ್ದು ಶವವೂ ಸಿಗದೆ ಮಾಡಿದ್ದಾರೆ. ಇದ್ದಲ್ಲಿ ತನಿಖೆ ಸರಿಯಾಗಿ ಮಾಡದ ಖಾಕಿಗೆ ಲಕ್ಷ ಲಕ್ಷ ದಂಡ ಕೂಡ ವಿಧಿಸಿದೆ.
ಮನೆಯವರಿಗೆ ಗೊತ್ತಾಗದೆಯೇ ಶವಸಂಸ್ಕಾರ ಮಾಡಿದ್ರು
ಮೂಲತಃ ಯಾದಗಿರಿಯ ಶಂಕರಪ್ಪ ಹುಟ್ಟಿದಾಗಿನಿಂದ ಬುದ್ದಿಮಾಂದ್ಯ ಆಗಿದ್ದ ಕಾರಣಕ್ಕೆ ಆತನ ಸೋದರಮಾವ ಚಿಕಿತ್ಸೆಗಾಗಿ ಆತನನ್ನು 2018ರಲ್ಲಿ ಹೆಗ್ಗನಹಳ್ಳಿಯ ಏಕತಾ ಚಾರಿಟೇಬಲ್ ಟ್ರಸ್ಟ್ಗೆ ದಾಖಲಿಸಿದ್ದರು. ಈ ವೇಳೆ ಆಶ್ರಮಕ್ಕೆ ಬಂದಿದ್ದ ಮೆಡಿಕಲ್ ಕ್ಯಾಂಪ್ ಸಿಬ್ಬಂದಿ ಬುದ್ದಿಮಾಂದ್ಯ ಶಂಕರಪ್ಪ ತಪಾಸಣೆ ಮಾಡಿ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಕೊಡಿಸಿದರೆ ಸರಿಯಾಗುತ್ತದೆ ಎಂದು ಹೇಳಿದ್ದಂತೆ.
ಇದನ್ನೂ ಓದಿ: Kidney Health: ದೇಹದ ಆರೋಗ್ಯ ಕಾಪಾಡುವ ಕಿಡ್ನಿಗಳ ಆರೋಗ್ಯಕ್ಕೆ ಏನು ಮಾಡ್ಬೇಕು? ಈ ಪದಾರ್ಥಗಳ ಸೇವನೆ ಮಾಡಿ ಸಾಕು!
ಅದರಲ್ಲಿ ಓರ್ವ ವ್ಯಕ್ತಿ ಕಿಡ್ನಿ ಮಾರಾಟ ಮಾಡಿದರೆ ಲಕ್ಷ ಲಕ್ಷ ಹಣ ಬರುತ್ತೆ ಅಂತ ಅನಾಥಶ್ರಮದ ಮಾಲೀಕ ಶ್ರೀಧರ್ ವಾಸು ದೇವ್ ಚೌಹಾಣ್ ಗೆ ಹಣದ ಆಸೆ ತೋರಿಸಿದ್ದನಂತೆ. ಇದರಿಂದ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಕೊಡಿಸುವ ನೆಪದಲ್ಲಿ ಕಿಡ್ನಿಯನ್ನೇ ಕಳ್ಳತನ ಮಾಡಿದ್ದಾರೆ. ಆದರೆ ಆಪರೇಷನ್ ಟೈಂನಲ್ಲಿ ಎಡವಟ್ಟು ಆಗಿ ಶಂಕರಪ್ಪ ಸಾವನ್ನಪ್ಪಿದ್ದು, ಮನೆಯವರಿಗೆ ಗೊತ್ತಾಗದೆಯೇ ಆತನ ಶವಸಂಸ್ಕಾರವನ್ನು ಮಾಡಿಬಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ದೂರು ಕೊಟ್ಟರು ಯಾವುದೇ ತನಿಖೆ ಮಾಡದ ಸಿದ್ದಾಪುರ ಪೊಲೀಸರು
ಈ ವೇಳೆ ನಿಮ್ಹಾನ್ಸ್ ಆಸ್ಪತ್ರೆಯಿಂದ ಶಂಕರಪ್ಪ ಎಸ್ಕೇಪ್ ಆಗಿದ್ದಾನೆ ಅಂತ ಶ್ರೀಧರ್ ಹೇಳಿದ್ದರಂತೆ. ಅಷ್ಟೋತ್ತಿಗೆ ನಿಮ್ಹಾನ್ಸ್ ಆಸ್ಪತ್ರೆ ಚಿಕಿತ್ಸೆ ಕೊಡಿಸುವ ರೀತಿ ನಕಲಿ ದಾಖಲೆ ಸೃಷ್ಟಿ ಮಾಡಿದ್ದರಂತೆ. ಈ ದಾಖಲೆ ತಗೊಂಡು ಶಂಕರಪ್ಪ ಸೋದರಮಾವ ನಿಮ್ಹಾನ್ಸ್ ಆಸ್ಪತ್ರೆಗೆ ಹೋದಾಗ ಕಳ್ಳಾಟ ಬಯಲಾಗಿದೆ. ನಂತರ ಅವರು ಘಟನೆ ಬಗ್ಗೆ ಸಿದ್ದಾಪುರ ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ.
ಸರಿಯಾಗಿ ತನಿಖೆ ಮಾಡದ ಐವರು ಪೊಲೀಸರಿಗೆ 14 ಲಕ್ಷ ದಂಡ
ದಾಖಲೆ ನಕಲಿ ಅಂತ ಗೊತ್ತಾದರೂ ಪೊಲೀಸರು ಶ್ರೀಧರ್ನ ಬಂಧನ ಮಾಡಿಲ್ಲ. ಇನ್ನು ಶ್ರೀಧರ್ ಕಿಡ್ನಿ ಮಾರಾಟ ಮಾಡಿದ್ದಾರೆ ಅಂತ ದೂರು ಕೊಟ್ರು ಶ್ರೀಧರ್ ಅರೆಸ್ಟ್ ಮಾಡಿಲ್ಲ. ನಂತರ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ ಶಂಕರಪ್ಪ ಸೋದರ ಮಾವ ದೂರು ನೀಡಿದ್ದೇ ತನಿಖೆ ಮಾಡಿದ ಆಯೋಗ ಪೊಲೀಸರು ಸರಿಯಾಗಿ ತನಿಖೆ ಮಾಡಿಲ್ಲ ಅಂತ ಐವರು ಪೊಲೀಸ್ ಅಧಿಕಾರಿಗಳಿಗೆ 14 ಲಕ್ಷ ದಂಡ ಹಾಕಿದ್ದಾರೆ.
ಇದನ್ನೂ ಓದಿ: Crime News: ಕಾಮದ ಮೋಹಕ್ಕೆ ಬಿದ್ದು ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ! ಮಕ್ಕಳು ಬಿಚ್ಚಿಟ್ಟರು ಘೋರ ಸತ್ಯ
ಸದ್ಯ ಶಂಕರಪ್ಪ ಸೋದರಮಾವ ನೀಡಿದ ದೂರಿನ್ವಯ ತನಿಖೆ ಮಾಡಿದ ಆಯೋಗ ಇಡೀ ತನಿಖಾ ರಿಪೋರ್ಟ್ ನ ಸಿಐಡಿ ನೀಡಿ ಕೇಸ್ ವರ್ಗಾವಣೆ ಮಾಡಿದೆ. ಇನ್ನು ಸಿಐಡಿ ಅಧಿಕಾರಿಗಳು ಸೂಕ್ತ ತನಿಖೆ ಮಾಡಿದ್ರೆ ಇನ್ನು ಯಾರೆಲ್ಲ ಕಿಡ್ನಿಗಳು ಕಸಿಯಾಗಿದೆ. ಯಾರೆಲ್ಲ ದಂಧೆಯಲ್ಲಿ ಇದ್ದಾರೆ ಅನ್ನೋ ವಿಚಾರ ಬಯಲಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ