ಹುಬ್ಬಳ್ಳಿಯ ಶಿರಡಿ ಸಾಯಿ ಮಂದಿರದಲ್ಲಿ ಅವ್ಯವಹಾರ ಆರೋಪ

ಶಿರಡಿ ಸಾಯಿಬಾಬಾ ದೇವಾಲಯ

ಶಿರಡಿ ಸಾಯಿಬಾಬಾ ದೇವಾಲಯ

2016ರಿಂದ 2019ರವರೆಗಿನ ಆದಾಯ ತೇರಿಗೆಯನ್ನು ಸಕಾಲಕ್ಕೆ ಸಂದಾಯ ಮಾಡಿಲ್ಲ. ಅರ್ಚಕರಿಗೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿ ಇರುವಾಗಲೆ ಓರ್ವ ಅರ್ಚಕರನ್ನು ತೆಗೆದುಹಾಕಿ ಮತ್ತೋರ್ವ ಅರ್ಚಕರನ್ನು ನೇಮಿಸಿಕೊಳ್ಳಲಾಗಿದೆ.

  • Share this:

ಹುಬ್ಬಳ್ಳಿ(ಜೂ.08): ಹುಬ್ಬಳ್ಳಿಯ ಹಳೇ ಕೋರ್ಟ್ ವೃತ್ತದಲ್ಲಿನ ಶಿರಡಿ ಸಾಯಿ ಮಂದಿರದಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿದೆ. ಸಾಯಿ ಮಂದಿರದ ಆಡಳಿತ ಮಂಡಳಿ ಕಾನೂನು ಬಾಹಿರವಾಗಿ ನಡೆದುಕೊಂಡಿರುವ ಕುರಿತು ವರದಿ ಸಲ್ಲಿಕೆಯಾಗಿದೆ.


ಧಾರವಾಡ‌ ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಸಾಯಿ ಮಂದಿರದ ಆಡಳಿತ ಮಂಡಳಿಯಿಂದ ದೇಣಿಗೆ ಹಣ ದುರ್ಬಳಕೆ ಆಗಿದೆ. ನಿಯಮ ಬಾಹಿರವಾಗಿ ಆಡಳಿತ ಮಂಡಳಿ ಸದಸ್ಯರ ನೇಮಕ ಮಾಡಿಕೊಳ್ಳಲಾಗಿದೆ. ಸಹಕಾರಿ ಇಲಾಖೆಯ ನಿವೃತ್ತ ಅಧಿಕಾರಿಯನ್ನು ಅಕ್ರಮವಾಗಿ ಗೌರವ ಕಾರ್ಯದರ್ಶಿ ನೇಮಿಸಲಾಗಿದೆ. ಉಪಾಧ್ಯಕ್ಷರು ಅಕ್ರಮವಾಗಿ ಹಣ ಸಂಗ್ರಹಿಸಿರುವ ಸಾಧ್ಯತೆಯಿದೆ.


ಇಂದಿನಿಂದ ಮೈಸೂರಿನ ಪ್ರವಾಸಿ ತಾಣಗಳು ರೀ ಓಪನ್​: ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ ಅರಮನೆ,ಚಾಮುಂಡಿ ಬೆಟ್ಟ,ಜೂ


2016ರಿಂದ 2019ರವರೆಗಿನ ಆದಾಯ ತೇರಿಗೆಯನ್ನು ಸಕಾಲಕ್ಕೆ ಸಂದಾಯ ಮಾಡಿಲ್ಲ. ಅರ್ಚಕರಿಗೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿ ಇರುವಾಗಲೆ ಓರ್ವ ಅರ್ಚಕರನ್ನು ತೆಗೆದುಹಾಕಿ ಮತ್ತೋರ್ವ ಅರ್ಚಕರನ್ನು ನೇಮಿಸಿಕೊಳ್ಳಲಾಗಿದೆ. ಆರ್ಥಿಕವಾಗಿ ಪ್ರಬಲವಿರುವ ಸದಸ್ಯರು ಹಾಗೂ ಇತರರು ತಮ್ಮತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಸ್ಥಾಪಿಸಲು ಪವಿತ್ರವಾದ ಜಾಗವನ್ನು ಬಳಕೆ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಾಯಿ ಮಂದಿರದ ವ್ಯವಹಾರಗಳು ಗೊಂದಲದ ಗೂಡಾಗಿವೆ.


ಮಂದಿರವು ಆಧ್ಯಾತ್ಮಿಕ ಕ್ಷೇತ್ರವಾಗಿದ್ದು, ಇದರ ಉದ್ದೇಶಗಳು ದಾರಿ ತಪ್ಪುತ್ತಿವೆ ಎನ್ನುವ ಭಾವನೆ ಬರುತ್ತಿದೆ. ಈ ಕುರಿತು ಶಾಸನ ಬದ್ಧ ತನಿಖೆ ನಡೆಸಬೇಕೆಂದು ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ. 36 ಪುಟಗಳ ವರದಿಯನ್ನು ಧಾರವಾಡ ಜಿಲ್ಲಾ ಸಹಕಾರ ಸಂಘಗಳ ನಿಬಂಧಕರಿಗೆ ಸಲ್ಲಿಸಲಾಗಿದೆ.


ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ಸಂಗ್ರಾಮ ಸೇನೆ ಅಧ್ಯಕ್ಷ ಸಂಜೀವ ದುಮಕನಾಳ, ರಾಜ್ಯ ಸರ್ಕಾರ ಕೂಡಲೆ ಶಿರಡಿ ಸಾಯಿ ಮಂದಿರಕ್ಕೆ ಆಡಳಿತ ಅಧಿಕಾರಿಯನ್ನು ನೇಮಿಸಬೇಕು. ಈಗಿರುವ ಆಡಳಿತ ಮಂಡಳಿ ಮುಂದವರಿಯಲು ಬಿಡಬಾರದು. ಮೂರು ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಕಿಡಿಕಾರಿದ್ದಾರೆ.

Published by:Latha CG
First published: