ಬೆಂಗಳೂರು: ಇತ್ತೀಚೆಗಷ್ಟೇ ಬೆಂಗಳೂರು ವಿಶ್ವವಿದ್ಯಾಲಯ (Bangalore University ) ಜ್ಞಾನಭಾರತಿ (Jnanabharathi Campus) ಆವರಣದಲ್ಲಿ ಚಿರತೆ (Leopard) ಕಾಣಿಸಿಕೊಳ್ಳುತ್ತಿದೆ ಎಂಬ ಸುದ್ದಿ ಸಖತ್ ಸದ್ದು ಮಾಡಿತ್ತು. ಆದರೆ ಅರಣ್ಯ ಇಲಾಖೆ (Forest Officers) ಅಧಿಕಾರಿಗಳು ವಿಶ್ವವಿದ್ಯಾಲಯದ ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆತಂಕ ಪಡುವ ಅಗತ್ಯವಿಲ್ಲ. ಸ್ಥಳದಲ್ಲಿ ಯಾವುದೇ ಚಿರತೆ ಗುರುತುಗಳು ಪತ್ತೆಯಾಗಿಲ್ಲ ಎಂದು ತಿಳಿಸಿದ್ದರು. ಆದರೆ ಈಗ ಸಿಲಿಕಾನ್ ಸಿಟಿ ಬೆಂಗಳೂರಿನ ಜ್ಞಾನಭಾರತಿ ಯೂನಿವರ್ಸಿಟಿ ಕ್ಯಾಂಪಸ್ ಅಕ್ರಮ ಚಟುವಟಿಕೆಗಳ (Illegal Activities) ತಾಣ ಆಗಿ ಬದಲಾಗಿದೆಯಾ ಎಂಬ ಆತಂಕ ಶುರುವಾಗಿದೆ. ದಟ್ಟ ಕಾಡಿನ (Forest) ನಡುವೆ ಇರುವ ವಿಶ್ವವಿದ್ಯಾಲಯ, ಮಕ್ಕಳು ಓದುವುದಕ್ಕೆ ಉತ್ತಮ ತಾಣ ಎನ್ನುವ ಫೀಲ್ ಕೊಡುತ್ತದೆ. ಆದರೆ ಇದೀಗ ವಿಶ್ವವಿದ್ಯಾಲಯದ ಆವರಣದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆಯಾ ಎಂಬ ಅನುಮಾನ ಶುರುವಾಗಿದೆ.
ಉನ್ನತ ವಿದ್ಯಾಭ್ಯಾಸ ಮಾಡಲು ಬಂದು ವಾಸ್ತವ್ಯ ಹೂಡಿರುವ ವಿದ್ಯಾರ್ಥಿಗಳ ಹಾಸ್ಟೆಲ್ ಸುತ್ತಮುತ್ತ ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿದೆ. ಹಾಸ್ಟೆಲ್ ಸುತ್ತಮುತ್ತ ಮದ್ಯದ ಬಾಟಲ್, ಕಾಂಡೋಮ್ ಪ್ಯಾಕ್ಸ್ ಪತ್ತೆಯಾಗಿವೆ.
ಇದನ್ನೂ ಓದಿ: Bengaluru: ಕರ್ತವ್ಯನಿರತ ಸರ್ಕಲ್ ಇನ್ಸ್ಪೆಕ್ಟರ್ ಕತ್ತಿನ ಪಟ್ಟಿ ಹಿಡಿದು ಹಲ್ಲೆ; ಬಿಜೆಪಿ ಮಾಜಿ ಕಾರ್ಪೊರೇಟರ್ ಅರೆಸ್ಟ್
ಖಾಸಗಿ ವಾಹನಗಳಿಗೂ ಇಲ್ಲಿ ಪ್ರವೇಶ ಇದೆ. ಹೀಗಾಗಿ ಇಲ್ಲಿ ವಿದ್ಯಾರ್ಥಿಗಳು ಯಾರು? ಹೊರಗಿನ ವ್ಯಕ್ತಿಗಳು ಯಾರು ಅನ್ನೋದೆ ಗೊತ್ತಾಗೋದಿಲ್ಲ. ಇಡೀ ಯೂನಿವರ್ಸಿಟಿಯಲ್ಲಿ ಕೇವಲ 120 ಜನ ಮಾತ್ರ ಹೋಂಗಾರ್ಡ್ಸ್ ಕಾರ್ಯನಿರ್ವಹಿಸುತ್ತಿದ್ದಾರೆ. ಫಾರೆಸ್ಟ್ ಏರಿಯಾ ಆಗಿರುವುದರಿಂದ ಯಾರು ಎಲ್ಲಿಗೆ ಹೋಗ್ತಾರೆ ಅನ್ನೋದು ಗೊತ್ತಾಗುವುದಿಲ್ಲ. ಇಲ್ಲಿ ಅಕ್ರಮ ಚಟುವಟಿಗಳು ಹೊರಗಿನವರಿಂದ ನಡೆಯುತ್ತಿದೆಯಾ ಎಂಬ ಪ್ರಶ್ನೆ ಎದುರಾಗಿದೆ.
ಯೂನಿವರ್ಸಿಟಿ ಆಡಳಿತ ಮಂಡಳಿ ಸೆಕ್ಯೂರಿಟಿ ವ್ಯವಸ್ಥೆಯನ್ನು ಬೇಕಾಬಿಟ್ಟಿಯಾಗಿ ನೀಡುತ್ತಿದೆಯಾ ಎಂಬ ಪ್ರಶ್ನೆ ಎದುರಾಗಿದೆ. ಈ ಹಿಂದೆ ವಿದ್ಯಾರ್ಥಿನಿಯರ ಹಾಸ್ಟೆಲ್ ಬಳಿಯೂ ಅಪರಿಚಿತರು ಬಂದು ದುರ್ವರ್ತನೆ ತೋರಿದ್ದರು ಎಂಬ ಮಾಹಿತಿ ಇದ್ದು, ವಿಶ್ವವಿದ್ಯಾಲಯ ಆಡಳಿತ ಮಂಡಳಿ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: Crime News: ಲಯಸ್ಮಿತಾ ಹಂತಕ ಪವನ್ ಕಲ್ಯಾಣ್ ಸೇಫ್, ಆಸ್ಪತ್ರೆಯಿಂದ ಡಿಸ್ಚಾರ್ಜ್; ಕೊಲೆ ಹಿಂದಿನ ಕಾರಣ ಬಾಯ್ಬಿಟ್ಟ ಹಂತಕ
ಕಾಡಿನ ನಡುವೆ ಇರುವ ಹಾಸ್ಟೆಲ್ಗಳಿಗೆ ಸೆಕ್ಯೂರಿಟಿ ವ್ಯವಸ್ಥೆ, ಉತ್ತಮ ಸಿಸಿಟಿವಿ ವ್ಯವಸ್ಥೆ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಯಾವ ಕಡೆ ನೋಡಿದರೂ ಬಿಯರ್ ಬಾಟಲ್, ಕಾಂಡೋಮ್ ಪ್ಯಾಕೆಟ್ಗಳು ಕಾಣುತ್ತಿದ್ದು, ಬೆಂಗಳೂರು ವಿಶ್ವವಿದ್ಯಾಲಯ ಆಡಳಿತ ಮಂಡಳಿಯನ್ನು ಏನಿದು ಅಂತಾ ಪ್ರಶ್ನಿಸಿದರೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ವೈದ್ಯೆ ಸೋಗಿನಲ್ಲಿ ಬಂದು ಚಿನ್ನಾಭರಣ ಕಳ್ಳತನ
ಅಶೋಕನಗರದ ಖಾಸಗಿ ಅಸ್ಪತ್ರೆಯಲ್ಲಿ ವೈದ್ಯೆ ಸೋಗಿನಲ್ಲಿ ಬಂದ ಮಹಿಳೆಯೊಬ್ಬರು ರೋಗಿಗಳ ಬಳಿ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಇಬ್ಬರು ಮಹಿಳೆಯರು ಬಳಿ ಎರಡು ಸರ ಒಂದು ಉಂಗುರ ಎಗರಸಿ ಎಸ್ಕೇಪ್ ಆಗಿದ್ದರು.
ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಅಶೋಕನಗರ ಪೊಲೀಸರು ವೈದ್ಯೆ ಸೋಗಿನಲ್ಲಿಎಂಟ್ರಿಕೊಟ್ಟು ಕಳ್ಳತನ ಮಾಡಿದ್ದ ಮಹಿಳೆ ಲಕ್ಷ್ಮೀ ಎಂಬಾಕೆಯನ್ನ ಪತ್ತೆ ಹಚ್ಚಿದ್ದಾರೆ. ಲಕ್ಷ್ಮೀ ಖಾಸಗಿ ಅಸ್ಪತ್ರೆ ನರ್ಸ್ ಅನ್ನೋದು ಗೊತ್ತಾಗಿದೆ. ಅಲ್ಲದೇ ನರ್ಸ್ಗೆ ವ್ಯಕ್ತಿಯೋರ್ವ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದನಂತೆ. ಹಾಗಾಗಿ ಬೇರೆ ದಾರಿ ಕಾಣದೆ ಕಳ್ಳತನಕ್ಕೆ ಇಳಿದಿರೋದಾಗಿ ಮಹಿಳೆ ಬಾಯ್ಬಿಟ್ಟಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ