Republic Day Tableaux: ಕರ್ನಾಟಕದ ಇಳಕಲ್ ಸೀರೆ, ಗುಳೇದಗುಡ್ಡದ ಖಣ ಆಯ್ಕೆ...ಏನಿದರ ವಿಶೇಷತೆ?

Ilkal Saree And Guledgudda Khana :  ಈ ಮೊದಲು ಕರ್ನಾಟಕ, ಮಹಾರಾಷ್ಟç, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್, ಮಧ್ಯ ಪ್ರದೇಶ ರಾಜ್ಯಗಳು ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ನಡೆಯುವ ಮದುವೆ ಸೇರಿದಂತೆ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗುಳೇದಗುಡ್ಡ ಖಣ ಮತ್ತು ಇಳಕಲ್ ಸೀರೆಗಳೇ ಮುಖ್ಯ ಪಾತ್ರವಹಿಸುತ್ತಿದ್ದವು,

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಳಕಲ್ ಸೀರೆ (Ilkal Saree) ಉಟ್ಕೊಂಡು ಮೊಳಕಾಲ್ಗಂಟ ಎತ್ಕೊಂಡು ಏರಿ ಮೇಲೆ ಏರಿಬಂದಳು ನಾರಿ ಇದು ನಾರಿಯ ಸೌಂದರ್ಯವನ್ನು ಮತ್ತು ಇಳಕಲ್​ ಸೀರೆಯ ಅಂದವನ್ನು ವರ್ಣಿಸುವ ಹಾಡು ಎಂದರೆ ತಪ್ಪಾಗಲಾರದು. ಮಹಿಳೆಯರಿಗೆ ಇಳಕಲ್ ಸೀರೆ ಎಂದರೆ ಅದೇನೋ ಪ್ರೀತಿ, ವ್ಯಾಮೋಹ. ಹಲವಾರು ವರ್ಷದಗಳಿಂದ ಈ ಸೀರೆಗೆ ಬೇಡಿಕೆಯಿದೆ, ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ದೇಶದ ವಿವಿಧ ಭಾಗಗಳಲ್ಲಿ ಸಹ ಜನ ಇಳಕಲ್ ಸೀರೆಯನ್ನುಇಷ್ಟಪಡುತ್ತಾರೆ. ವಿದೇಶದಲ್ಲಿ ಸಹ ಇದಕ್ಕೆ ಬೇಡಿಕೆ ಇದೆ.  ಸೀರೆ ಎಂದ ಮೇಲೆ ಅದರ ಜೊತೆ ಬ್ಲೌಸ್​ ಫೀಸ್​, ಖಣ ಅಥವಾ ಕುಪ್ಪಸ ಇಲ್ಲದಿದ್ದರೆ ಹೇಗೆ ಹೇಳಿ. ಕರ್ನಾಟಕದ ಇಳಕಲ್ ಸೀರೆಯಂತೆಯೇ, ಗುಳೇದಗುಡ್ಡ (Guledgudda) ಖಣ ಸಹ ಹೆಚ್ಚು ಪ್ರಸಿದ್ದ, ಇವೆರಡರ ಜೋಡಿ ಎಂದರೆ ಸಾಕು ಜನ ಮುಗಿಬೀಳುತ್ತಾರೆ. ಇದೀಗ ಈ ಜೋಡಿಯ ಗೌರವ ಹೆಚ್ಚಾಗಿದ್ದು, ಇಳಕಲ್ ಸೀರೆ ಹಾಗೂ ಗುಳೇದಗುಡ್ಡ ಖಣ ಈಗ ಗಣರಾಜ್ಯೋತ್ಸವ ಸ್ತಬ್ಧ (Republic Day Tableaux)  ಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಬಾಗಲಕೋಟೆ ಜಿಲ್ಲೆಯ ಇಳಕಲ್ ಸೀರೆ ಹಾಗೂ ಗುಳೇದಗುಡ್ಡ ಖಣ ಎರಡು ಆಯ್ಕೆಯಾಗಿದ್ದು, ಸ್ತಬ್ಧಚಿತ್ರಗಳ ಕರಕುಶಲ ವಸ್ತು ಪ್ರದರ್ಶನದಲ್ಲಿ ಮಿಂಚಲಿವೆ.

ಇದು ರಾಜ್ಯಕ್ಕೆ ಮತ್ತು ಬಾಗಲಕೋಟೆ ಜಿಲ್ಲೆಯ ನೇಕಾರರಿಗೆ ಸಂಭ್ರಮದ ವಿಚಾರವಾಗಿದ್ದು,  “ನಾವು ಹೆಣೆಯುವ ಇಳಕಲ್ ಸೀರೆ, ಗುಳೇದಗುಡ್ಡ ಖಣ ಗಣರಾಜ್ಯೋತ್ಸವ ದಿನ ಸ್ತಬ್ದ ಚಿತ್ರ ಪ್ರದರ್ಶನದಲ್ಲಿ ಸ್ಥಾನ ಪಡೆದುಕೊಳ್ಳುತ್ತಿರುವ ಸುದ್ದಿ ಕೇಳಿ ಬಹಳ ಸಂತೋಷವಾಗಿದೆ ಎಂದಿದ್ಧಾರೆ.

ನೇಕಾರರಲ್ಲಿ ಮನೆ ಮಾಡಿದ ಸಂತಸ

ನಾವು ನಮ್ಮ ಪೂರ್ವಜರ ಕಾಲದಿಂದ ಇಳಕಲ್ ಸೀರೆ ಗುಳೇದಗುಡ್ಡ ಖಣ ನೇಯುತ್ತಾ ಬಂದಿದ್ದೀವಿ ಇಳಕಲ್ ಸೀರೆ ಗುಳೇದಗುಡ್ಡ ಖಣ ಇಂದಿಗೂ ತಮ್ಮ ಬೇಡಿಕೆ ಉಳಿಸಿಕೊಂಡಿವೆ. ಇವು ನಮ್ಮ ಸಂಪ್ರದಾಯದ ಪ್ರತೀಕ ಎಂದು ನೇಕಾರರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಗಣರಾಜ್ಯೋತ್ಸವ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಸೀರೆ ಮತ್ತು ಖಣವನ್ನು ಆಯ್ಕೆ ಮಾಡಿದ ಕೇಂದ್ರ, ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.

ಈ ಮೊದಲು ಕರ್ನಾಟಕ, ಮಹಾರಾಷ್ಟ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್, ಮಧ್ಯ ಪ್ರದೇಶ ರಾಜ್ಯಗಳು ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ನಡೆಯುವ ಮದುವೆ ಸೇರಿದಂತೆ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗುಳೇದಗುಡ್ಡ ಖಣ ಮತ್ತು ಇಳಕಲ್ ಸೀರೆಗಳೇ ಮುಖ್ಯ ಪಾತ್ರವಹಿಸುತ್ತಿದ್ದವು, ಆದರೆ ಇಂದಿನ ಫ್ಯಾಷನ್ ಯುಗದಿಂದ ತೆರೆಯ ಮರೆಗೆ ಸರಿದಿವೆ.

ಆದರೆ ಕಳೆದ ವರ್ಷ  ಖಣಕ್ಕೆ ಹೊಸ ಟಚ್ ನೀಡಿ ಮಾರಾಟ ಮಾಡಲಾಗಿತ್ತು. ದೀಪಾವಳಿ ಹಬ್ಬದ ಅಂಗವಾಗಿ ಖಣದಿಂದ ತಯಾರಿಸಿದ ಬಟ್ಟೆಯಿಂದ ಆಕಾಶ ಬುಟ್ಟಿ, ಮಾಸ್ಕ್​, ಚೂಡಿದಾರ್​ ಸೇರಿದಂತೆ ವಿವಿಧ ಬಗೆಯ ವಿನ್ಯಾಸ ಮಾಡಿದ್ದು ಗಮನ ಸೆಳೆದಿತ್ತು. ಗುಳೇದಗುಡ್ಡ ಖಣಕ್ಕೆ ಐತಿಹಾಸಿಕ ಹಿನ್ನೆಲೆ ಹಾಗೂ ತನ್ನದೇ ಆದ ಛಾಪು ಇದೆ. ಇಳಕಲ್​ ಸೀರೆಗೆ ಗುಳೇದಗುಡ್ಡ ಖಣ ಖ್ಯಾತಿ ಪಡೆದುಕೊಂಡಿದೆ.

ಸಹಾಯದ ನಿರೀಕ್ಷೆಯಲ್ಲಿ ನೇಕಾರರು

ಈಗಿನ ಸಮಯದಲ್ಲಿ ಜನರು ಆನ್​ಲೈನ್​ನಲ್ಲಿ ಬಟ್ಟೆಗಳನ್ನು ಖರೀದಿಸುವುದರಿಂದ ಇಳಕಲ್ ಸೀರೆ ಮತ್ತು ಗುಳೇದಗುಡ್ಡ ಖಣವನ್ನು ಸಹ ಆನ್​ಲೈನ್​ ಮೂಲಕ ಮಾರಾಟ ಮಾಡಲು ಆರಂಭಿಸಲಾಗಿತ್ತು. ಕೊರೊನಾ ಕಾರಣದಿಂದ ಎಲ್ಲಾ ವ್ಯಾಪಾರಗಳು ನಷ್ಟ ಅನುಭವಿಸಿದಂತೆ ಈ ಸೀರೆ ವ್ಯಾಪಾರದ ಮೇಲೆ ಸಹ ಪರಿಣಾಮ ಬೀರಿದ್ದು, ನೌಕಾರರು ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದಾರೆ.
Published by:Sandhya M
First published: