IISc Bengaluruಲ್ಲಿ ಹೊಸ B.Tech ಕೋರ್ಸ್! ಪ್ರವೇಶ ಪಡೆಯೋದು ಹೇಗೆ?

ಗಣಿತ, ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಮತ್ತು ಯಂತ್ರ ಕಲಿಕೆ, ಕಂಪ್ಯೂಟೇಶನಲ್ ಸೈನ್ಸ್, ಸೈದ್ಧಾಂತಿಕ ಕಂಪ್ಯೂಟರ್ ಸೈನ್ಸ್, ಕ್ವಾಂಟಮ್ ಕಂಪ್ಯೂಟಿಂಗ್, ಸಿಗ್ನಲ್ ಪ್ರೊಸೆಸಿಂಗ್, ಕಂಪ್ಯೂಟೇಶನಲ್ ಬಯಾಲಜಿ ಮತ್ತು ಮ್ಯಾಥಮೆಟಿಕಲ್ ಫೈನಾನ್ಸ್‌ನಲ್ಲಿ ಕೋರ್ಸ್​ಗಳನ್ನು ವಿನ್ಯಾಸಗೊಳಿಸಲಾಗಿದೆ.

IISc ಕ್ಯಾಂಪಸ್​

IISc ಕ್ಯಾಂಪಸ್​

  • Share this:
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಬೆಂಗಳೂರು ಹೊಸ ಕೋರ್ಸ್ ಅನ್ನು ಪ್ರಾರಂಭಿಸಿದೆ. IISc Bengaluru ಗಣಿತ ಮತ್ತು ಕಂಪ್ಯೂಟಿಂಗ್‌ನಲ್ಲಿ ಬಿ. ಟೆಕ್ ಅನ್ನು (BTech) ಪ್ರಾರಂಭಿಸಿದೆ. ನಾಲ್ಕು ವರ್ಷಗಳ ಕೋರ್ಸ್‌ಗೆ ಜಂಟಿ ಪ್ರವೇಶ ಪರೀಕ್ಷೆ (JEE) ಅಡ್ವಾನ್ಸ್ಡ್ ಚಾನೆಲ್ ಮೂಲಕ ಪ್ರವೇಶವನ್ನು ನೀಡಲಾಗುತ್ತದೆ. ಕೋರ್ಸ್ ಆಗಸ್ಟ್, 2022ರಲ್ಲಿ ಪ್ರಾರಂಭವಾಗುತ್ತದೆ ಎಂದು ತನ್ನ ಸುತ್ತೋಲೆಯನ್ನು ಹೊರಡಿಸಿದೆ. 4-ಸೆಮಿಸ್ಟರ್ ಪ್ರೋಗ್ರಾಂ ಗಣಿತ ಮತ್ತು ಕಂಪ್ಯೂಟಿಂಗ್ (BTech in Mathematics in Computing) ಕ್ಷೇತ್ರಗಳಲ್ಲಿ ತಲಾ ಆರು ಕೋರ್ಸ್‌ಗಳನ್ನು ಒಳಗೊಂಡಿದೆ, ಜೊತೆಗೆ ವಿಜ್ಞಾನ, ಮಾನವಿಕತೆ ಮತ್ತು ಇತರ ಎಂಜಿನಿಯರಿಂಗ್ ವಿಭಾಗಗಳ ಕೋರ್ಸ್‌ಗಳನ್ನು ಒಳಗೊಂಡಿದೆ ಎಂದು ಐಐಎಸ್‌ಸಿ ಹೇಳಿದೆ.

ಹೊಸ ಪದವಿಪೂರ್ವ ಕಾರ್ಯಕ್ರಮವು "ಸಂಶೋಧನೆ, ಅಭಿವೃದ್ಧಿ ಮತ್ತು ಭವಿಷ್ಯದ ವಿಭಾಗಗಳಲ್ಲಿ ಹಾಗೂ ಮುಂದಿನ ಪೀಳಿಗೆಯ ತಂತ್ರಜ್ಞಾನಗಳಲ್ಲಿ ಗಣಿತ, ಕಂಪ್ಯೂಟರ್ ವಿಜ್ಞಾನ ಮತ್ತು ಡೇಟಾದ ಆಳವಾದ ಬಳಕೆಯ ಅಗತ್ಯವಿದೆ.

ಭವಿಷ್ಯದ ನಾಯಕರನ್ನು ರೂಪಿಸುವ ಕನಸು!
ಮುಂದಿನ ಪೀಳಿಗೆಯ ತಂತ್ರಜ್ಞಾನಗಳಲ್ಲಿ ಮುಂಚೂಣಿಯಲ್ಲಿರುವ ಭವಿಷ್ಯದ ನಾಯಕರನ್ನು ತಯಾರಿಸುವ ಗುರಿಯೊಂದಿಗೆ ಸ್ಥಾಪಿತ ಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸುತ್ತದೆ" ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು ಸಂಸ್ಥೆ ಹೇಳಿದೆ.

ಈ ಎಲ್ಲ ವಿಷಯಗಳು ಇರಲಿವೆ!
"ಗಣಿತ, ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಮತ್ತು ಯಂತ್ರ ಕಲಿಕೆ, ಕಂಪ್ಯೂಟೇಶನಲ್ ಸೈನ್ಸ್, ಸೈದ್ಧಾಂತಿಕ ಕಂಪ್ಯೂಟರ್ ಸೈನ್ಸ್, ಕ್ವಾಂಟಮ್ ಕಂಪ್ಯೂಟಿಂಗ್, ಸಿಗ್ನಲ್ ಪ್ರೊಸೆಸಿಂಗ್, ಕಂಪ್ಯೂಟೇಶನಲ್ ಬಯಾಲಜಿ ಮತ್ತು ಮ್ಯಾಥಮೆಟಿಕಲ್ ಫೈನಾನ್ಸ್‌ನಲ್ಲಿ ಕೋರ್ಸ್​ಗಳನ್ನು ವಿನ್ಯಾಸಗೊಳಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ನಾಲ್ಕನೇ ವರ್ಷದಲ್ಲಿ ಸಂಶೋಧನೆ/ಉದ್ಯಮ ಪ್ರಾಜೆಕ್ಟ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು” ಎಂದು ಸಂಸ್ಥೆ ಹೇಳಿದೆ.

"ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳು ಪದವಿ ಪಡೆಯುವ ಹೊತ್ತಿಗೆ, IISc ಸ್ನಾತಕೋತ್ತರ ವೈದ್ಯಕೀಯ ಶಾಲೆಯನ್ನು ಸ್ಥಾಪಿಸುತ್ತದೆ. ಈ ಕೋರ್ಸ್‌ಗೆ ದಾಖಲಾದ ವಿದ್ಯಾರ್ಥಿಗಳು ವಿಜ್ಞಾನ, ಎಂಜಿನಿಯರಿಂಗ್ ಅಥವಾ ವೈದ್ಯಕೀಯದ ಯಾವುದೇ ಶಾಖೆಯಲ್ಲಿ ಪ್ರಾಜೆಕ್ಟ್‌ಗಳನ್ನು ಮಾಡಲು ಸಾಧ್ಯವಾಗುತ್ತದೆ. ಇದು ಈ ದೇಶದಲ್ಲಿ ಬಹಳ ವಿಶಿಷ್ಟವಾದದ್ದು ಎಂದು IISc ನಿರ್ದೇಶಕ ಪ್ರೊಫೆಸರ್ ಗೋವಿಂದನ್ ರಂಗರಾಜನ್, ಗಣಿತ ಮತ್ತು ಕಂಪ್ಯೂಟಿಂಗ್‌ನಲ್ಲಿ ಬಿ. ಟೆಕ್ ಕಾರ್ಯಕ್ರಮದ ಬಗ್ಗೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿರುವ ತಜ್ಞರೊಂದಿಗೆ ಸಂವಹನ
ಕಂಪ್ಯೂಟರ್ ಸೈನ್ಸ್, ಕಂಪ್ಯೂಟೇಶನಲ್ ಡೇಟಾ ಸೈನ್ಸ್ ಮತ್ತು ಗಣಿತ ಹಾಗೂ ಇತರ ವಿಭಾಗಗಳ ತಜ್ಞರು ವಿದ್ಯಾರ್ಥಿಗಳಿಗೆ ಬೋಧಿಸಲಿದ್ದಾರೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ನಾಯಕತ್ವದ ಕೌಶಲ್ಯಗಳನ್ನು ನೀಡುತ್ತದೆ. ಏಕೆಂದರೆ ಅವರು ಬೆಂಗಳೂರಿನಲ್ಲಿ ನೆಲೆಸಿರುವ ತಜ್ಞರು, ಉದ್ಯಮಿಗಳು ಮತ್ತು ಟೆಕ್ ನಾಯಕರೊಂದಿಗೆ ಸಂವಹನ ನಡೆಸುತ್ತಾರೆ” ಎಂದು ಅವರು ಹೇಳಿದರು.

ಗಣಿತ ಮತ್ತು ಕಂಪ್ಯೂಟಿಂಗ್‌ನಲ್ಲಿ ಬಿ. ಟೆಕ್ ನಂತರ, ವಿದ್ಯಾರ್ಥಿಗಳು ಹೆಚ್ಚುವರಿ ವರ್ಷ ಮತ್ತು ಪ್ರಾಜೆಕ್ಟ್ ಕ್ರೆಡಿಟ್‌ಗಳನ್ನು ತೆಗೆದುಕೊಳ್ಳುವ ಮೂಲಕ ಎಂ. ಟೆಕ್ ಪದವಿಗೆ ಹೋಗಬಹುದು ಎಂದು ಸಲಹೆ ನೀಡಿದೆ.

ಇದನ್ನೂ ಓದಿ: Bamboo Rice: ಬಿದಿರಿನ ಅಕ್ಕಿಯಿಂದ ತಿಂಗಳಿಗೆ 50 ಸಾವಿರ ಆದಾಯ! ಈ ಮಹಿಳೆಯಂತೇ ನೀವೂ ಗಳಿಸಿ!

ಬಿ.ಟೆಕ್ ಕೋರ್ಸ್‌ಗೆ ಮಹಿಳಾ ಅಭ್ಯರ್ಥಿಗಳಿಗೆ 8 ಸೂಪರ್‌ನ್ಯೂಮರರಿ ಸೀಟುಗಳು ಮತ್ತು ವಿದೇಶಿ ರಾಷ್ಟ್ರಗಳು/ಎನ್‌ಆರ್‌ಐ/ಒಸಿಐಗೆ 4 ಸೇರಿದಂತೆ ಒಟ್ಟು 52 ಸೀಟುಗಳು ಇರುತ್ತವೆ. ಇನ್ನು ಶುಲ್ಕ ನೋಡುವುದಾದರೆ ಸಾಮಾನ್ಯ/OBC/EWS ವರ್ಗದ ಅಭ್ಯರ್ಥಿಗಳಿಗೆ ಮೊದಲ ವರ್ಷಕ್ಕೆ 2,20,200 ರೂ. ಆದರೆ SC/ST ವರ್ಗದ ಅಭ್ಯರ್ಥಿಗಳು ಮೊದಲ ಶೈಕ್ಷಣಿಕ ವರ್ಷದಲ್ಲಿ 20,200 ರೂ. ಆಗಿರುತ್ತದೆ.

ಶಿಕ್ಷಣ ಅರ್ಹತೆಗಳು
ವಿದ್ಯಾರ್ಥಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಒಂದು ಭಾಷೆ ಹಾಗೂ ಮೇಲಿನ ನಾಲ್ಕು ವಿಷಯದ ಜತೆ ಇತರೆ ಯಾವುದೇ ವಿಷಯದಲ್ಲಿ ಮಾನ್ಯತೆ ಪಡೆದ ಬೋರ್ಡ್‌ನಿಂದ 12 ನೇ ತರಗತಿ ಅಥವಾ ತತ್ಸಮಾನವನ್ನು ಪಡೆದಿರಬೇಕು.

ಇದನ್ನೂ ಓದಿ: Mangoes: ಮಾವು ರಕ್ಷಿಸಲು ರೈತರ ಮಾಸ್ಟರ್ ಪ್ಲ್ಯಾನ್‌! ನೀವೂ ಈ ಉಪಾಯ ಟ್ರೈ ಮಾಡಿದ್ದೀರಾ?

ಕೌನ್ಸೆಲಿಂಗ್
ಬಿ. ಟೆಕ್ ಕಾರ್ಯಕ್ರಮಕ್ಕಾಗಿ ಕೌನ್ಸೆಲಿಂಗ್ ಅನ್ನು JoSAA ನಡೆಸುತ್ತದೆ ಅಥವಾ IISc ಪ್ರವೇಶ ಪೋರ್ಟಲ್ ಮೂಲಕ ನಡೆಯುತ್ತದೆ. ಗಣಿತ ಮತ್ತು ಕಂಪ್ಯೂಟಿಂಗ್ ಪ್ರೋಗ್ರಾಂನಲ್ಲಿ ಬಿಟೆಕ್ ವಿವರಗಳಿಗಾಗಿ, iisc.ac.in. ವೆಬ್‌ಸೈಟ್‌ಗೆ ಭೇಟಿ ನೀಡಿ ಹೆಚ್ಚಿನ ಮಾಹತಿ ತಿಳಿದುಕೊಳ್ಳಿ. ಇನ್‌ಸ್ಟಿಟ್ಯೂಟ್ ಕಾರ್ಯಕ್ರಮದ ಪ್ರವೇಶಕ್ಕಾಗಿ ಯಾವುದೇ ಟೈಮ್‌ಲೈನ್ ಅನ್ನು ಬಿಡುಗಡೆ ಮಾಡಿಲ್ಲ ಮತ್ತು ಗಡುವನ್ನು ಶೀಘ್ರದಲ್ಲೇ IISc ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗುತ್ತದೆ.
Published by:guruganesh bhat
First published: