3D Print Glove: ಪಾರ್ಶ್ವವಾಯು ರೋಗಿಗಳು ಸಾಮಾನ್ಯ ಸ್ಥಿತಿಗೆ ಮರಳಲು ಬರಲಿದೆ 3D ಗ್ಲೌಸ್!

ಈ 3D-ಮುದ್ರಿತ ಕೈಗವಸುಗಳನ್ನು ಹಾಕಿಕೊಂಡ ರೋಗಿಗಳ ಕೈಗಳನ್ನು ಚಲಿಸುವಂತೆ ಮಾಡಲು ಫಿಸಿಯೋಥೆರಪಿಸ್ಟ್‌ಗಳು ಅಥವಾ ವೈದ್ಯರು ಸಾಧನವನ್ನು ದೂರದಿಂದಲೇ ನಿಯಂತ್ರಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪಾರ್ಶ್ವವಾಯು ಅಥವಾ ಸ್ಟ್ರೋಕ್‌ (Stroke) ಬಂದಿರುವ ಎಷ್ಟೋ ರೋಗಿಗಳು ತಮ್ಮ ಕೈಗಳನ್ನು ಹಾಗೂ ದೇಹದ ಇತರೆ ಭಾಗಗಳನ್ನು ಆಡಿಸಲಾಗದೆ, ಏನೂ ಕೆಲಸ ಮಾಡಲಾಗದೆ ಒಂದು ಕಡೆ ಕುಳಿತುಕೊಂಡೇ ಇರುವುದನ್ನು ಅಥವಾ ಮಲಗಿರುವುದನ್ನು ಅನೇಕರು ನೋಡಿರಬಹುದು. ಆದರೀಗ ಅಂಗವಿಕಲ ಸ್ಟ್ರೋಕ್ ರೋಗಿಗಳು ತಮ್ಮ ಕೈಗಳನ್ನು ಚಲಿಸಲು ಸಾಧ್ಯವಾಗುತ್ತದೆ. ಹೌದು, ಇಂತಹವರಿಗೆ ನೆರವಾಗುವಂತೆ ಭಾರತೀಯ ವಿಜ್ಞಾನ ಸಂಸ್ಥೆಯ (IISc Bengaluru)  ಭೌತಶಾಸ್ತ್ರ ವಿಭಾಗದ ಸಂಶೋಧಕರು ಮೃದುವಾದ, ಧರಿಸಬಹುದಾದ ಸಾಧನವನ್ನು (3D Printed Gloves) ಅಭಿವೃದ್ಧಿಪಡಿಸಿದ್ದಾರೆ. ಇದು ರೋಗಿಯ ಅಂಗ ಅಥವಾ ಬೆರಳಿನ ಚಲನೆಯನ್ನು ಗ್ರಹಿಸಲು ಬೆಳಕಿನ ಮೂಲಭೂತ ಗುಣಲಕ್ಷಣಗಳನ್ನು ಬಳಸಿಕೊಳ್ಳುತ್ತದೆ. ಈ ಮೂಲಕ ಪಾರ್ಶ್ವವಾಯು (Rehabilitating Stroke Patients) ರೋಗಿಗಳಿಗೆ ತಾವು ಸಾಮಾನ್ಯ ಸ್ಥಿತಿಗೆ ಮರಳುವಂತೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ.


ಇನ್ನು ಈ 3D-ಮುದ್ರಿತ ಕೈಗವಸುಗಳನ್ನು ಹಾಕಿಕೊಂಡ ರೋಗಿಗಳ ಕೈಗಳನ್ನು ಚಲಿಸುವಂತೆ ಮಾಡಲು ಫಿಸಿಯೋಥೆರಪಿಸ್ಟ್‌ಗಳು ಅಥವಾ ವೈದ್ಯರು ಸಾಧನವನ್ನು ದೂರದಿಂದಲೇ ನಿಯಂತ್ರಿಸಬಹುದು. ಕಸ್ಟಮೈಸ್‌ ಮಾಡಬಹುದಾದ ಈ 3D-ಮುದ್ರಿತ ಕೈಗವಸುಗಳನ್ನು ದೂರದಿಂದಲೇ ನಿಯಂತ್ರಿಸಬಹುದು.


ಪಾರ್ಶ್ವವಾಯು ಸಾವಿಗೆ ಮೂರನೇ ಪ್ರಮುಖ ಕಾರಣ
ಈ ಮೂಲಕ ಫಿಸಿಯೋಥೆರಪಿಸ್ಟ್‌ಗಳಿಗೆ ಟೆಲಿಕನ್ಸಲ್ಟೇಶನ್ ಸಾಧ್ಯತೆಯನ್ನು ತೆರೆಯುತ್ತದೆ ಎಂದು IISc ಹೇಳಿದೆ. ಪಾರ್ಶ್ವವಾಯು ಕಾಯಿಲೆ ಭಾರತದಲ್ಲಿ ಸಾವಿಗೆ ಮೂರನೇ ಪ್ರಮುಖ ಕಾರಣವಾಗಿದೆ ಮತ್ತು ಅಂಗವೈಕಲ್ಯಕ್ಕೆ ಆರನೇ ಪ್ರಮುಖ ಕಾರಣವಾಗಿದೆ ಎಂಬ ಅಂಶವನ್ನು ನಾವು ಇಲ್ಲಿ ಗಮನಿಸಬೇಕಾಗಿದೆ.

ಪಾರ್ಶ್ವವಾಯು ಪೀಡಿತರು ಮತ್ತು ದೈಹಿಕ ಗಾಯಗಳಿಂದ ಬಳಲುತ್ತಿರುವ ರೋಗಿಗಳನ್ನು ಸಾಮಾನ್ಯ ಸ್ಥಿತಿಗೆ ಮರಳಲು ಲಭ್ಯವಿರುವ ಕೆಲವು ಚಿಕಿತ್ಸೆಗಳಲ್ಲಿ ಒಂದಾದ ಫಿಸಿಯೋಥೆರಪಿ ಮೂಲಕ ಗುಣವಾಗಲು ಅಂಗವೈಕಲ್ಯದ ತೀವ್ರತೆಯನ್ನು ಅವಲಂಬಿಸಿ ದಿನಗಳಿಂದ ತಿಂಗಳುಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಿದ IISc, ಹೊಸ ಕೈಗವಸುಗಳು ಅಂತಹವರಿಗೆ ಸಹಾಯ ಮಾಡುತ್ತದೆ ಎಂದಿದೆ.


ಎಲ್ಲರಿಗೂ ಕೈಗೆಟುಕಲಿ
ಇನ್ನು ತಮ್ಮ ತಂಡ ಅಭಿವೃದ್ಧಿಪಡಿಸಿದ ಸಾಧನದ ಬಗ್ಗೆ ಪ್ರತಿಕ್ರಿಯೆ ನೀಡಿದ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅವೀಕ್ ಬಿಡ್ "ಇದು ಎಲ್ಲರಿಗೂ ಕೈಗೆಟುಕುವ ಮತ್ತು ಎಲ್ಲಾ ಸಮಯದಲ್ಲೂ ಒಬ್ಬ ವ್ಯಕ್ತಿಗೆ ಲಭ್ಯವಾಗಬೇಕೆಂದು ನಾವು ಬಯಸುತ್ತೇವೆ. ಉತ್ಪನ್ನವು ಬಳಸಲು ಸುಲಭವಾಗಿರಬೇಕು ಮತ್ತು ಪ್ರತಿಕ್ರಿಯೆಯನ್ನು ಒದಗಿಸಬೇಕು” ಎಂದು ಹೇಳಿದರು.

ವೈದ್ಯರಿಗೂ ಸಹಾಯಕ
ಉದಾಹರಣೆಗೆ, ಚೆಂಡನ್ನು ಹಿಸುಕುವಾಗ ಅನ್ವಯಿಸುವ ಒತ್ತಡದ ಘಟಕಗಳು ಅಥವಾ ಮೊಣಕಾಲಿನ ಗಾಯದಿಂದ ಕಾಲಿನ ಬಾಗುವಿಕೆಯ ಮಟ್ಟವು ರೋಗಿಯನ್ನು ದೂರದಿಂದಲೂ ಮೇಲ್ವಿಚಾರಣೆ ಮಾಡಲು ವೈದ್ಯರಿಗೆ ನಿರ್ಣಾಯಕವಾಗಿದೆ. ಅಂತಹ ಪ್ರತಿಕ್ರಿಯೆ, ಪ್ರತಿ ಸತತ ಸೆಷನ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ರೋಗಿಗಳನ್ನು ಪ್ರೇರೇಪಿಸುತ್ತದೆ ಎಂದೂ ಅವೀಕ್ ಬಿಡ್ ವಿವರಿಸಿದರು.

ಫಿಸಿಯೋಥೆರಪಿಯ ಸವಾಲುಗಳು
ಫಿಸಿಯೋಥೆರಪಿಯ ಮತ್ತೊಂದು ಸವಾಲೆಂದರೆ ಇದು ಸಾಮಾನ್ಯವಾಗಿ ಪ್ರತಿ ದಿನ ಆಸ್ಪತ್ರೆಗೆ ಭೇಟಿ ನೀಡುವ ಅಗತ್ಯವಿರುತ್ತದೆ. ಹಾಗೂ ರೋಗಿಗಳನ್ನು ಮೇಲ್ವಿಚಾರಣೆ ಮಾಡಲು ವೃತ್ತಿಪರರು ಅಥವಾ ಅತ್ಯಾಧುನಿಕ ಸಾಧನಗಳ ಮನೆ ಭೇಟಿಗಳು ಸೂಕ್ತವಾಗಿದ್ದರೂ, ಅದು ಸುಲಭವಾಗಿ ಲಭ್ಯವಿಲ್ಲ ಮತ್ತು ದುಬಾರಿಯಾಗಿದೆ ಎಂದೂ IISc ಹೇಳಿದೆ.

ಪೇಟೆಂಟ್ ಮತ್ತು ವೆಚ್ಚ
ಈ ಸವಾಲುಗಳನ್ನು ಎದುರಿಸಲು, ತಂಡವು ಒಂದು ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಿದ್ದು, ಅದರ ಮೂಲಕ ಕೈಗವಸುಗಳಂತಹ ಧರಿಸಬಹುದಾದ ವಸ್ತುಗಳನ್ನು ವಿನ್ಯಾಸಗೊಳಿಸಬಹುದು, ಹಾಗೂ 3D ಪ್ರಿಂಟ್‌ ಮಾಡಿ ದೂರದಿಂದಲೇ ನಿಯಂತ್ರಿಸಬಹುದು ಎಂದೂ IISc ತಿಳಿಸಿದೆ.


ದೂರದಿಂದಲೂ ನಿಭಾಯಿಸಬಹುದು!
ಈ ಸಾಧನದ ಹಿಂದಿನ ಕಲ್ಪನೆಯೆಂದರೆ ನೀವು ಕೈಗವಸುಗಳಂತಹದನ್ನು ಧರಿಸುತ್ತೀರಿ, ಇದನ್ನು ಫಿಸಿಯೋಥೆರಪಿಸ್ಟ್‌ ಇಂಟರ್ನೆಟ್ ಮೂಲಕ ದೂರದ ಸ್ಥಳದಿಂದಲೇ ಸಾಧನವನ್ನು ನಿಯಂತ್ರಿಸುತ್ತಾರೆ ಮತ್ತು ನಿಮ್ಮ ಕೈಗಳು ಹಾಗೂ ಬೆರಳುಗಳನ್ನು ಚಲಿಸುವಂತೆ ಮಾಡುತ್ತಾರೆ ಎಂದು ಬಿಡ್ ಹೇಳಿದ್ದಾರೆ.

ಈ ಸಾಧನವು ವಿವಿಧ ಕೈ ಮತ್ತು ಬೆರಳಿನ ಚಲನೆಯನ್ನು ಗ್ರಹಿಸಬಹುದು ಮತ್ತು ಒತ್ತಡ, ಬಾಗುವ ಕೋನ ಹಾಗೂ ಆಕಾರದಂತಹ ನಿಯತಾಂಕಗಳನ್ನು ನಿಖರವಾಗಿ ಪತ್ತೆ ಮಾಡುತ್ತದೆ.


10 ತಿಂಗಳಿಗಿಂತ ಹೆಚ್ಚು ಸಮಯ ಪರೀಕ್ಷೆ
ಈ ಸಾಧನವನ್ನು 10 ತಿಂಗಳಿಗಿಂತ ಹೆಚ್ಚು ಕಾಲ ಸ್ಥಿರತೆಗಾಗಿ ಪರೀಕ್ಷಿಸಲಾಗಿದೆ ಮತ್ತು ಯಾವುದೇ ಸೂಕ್ಷ್ಮತೆ ಅಥವಾ ನಿಖರತೆಯ ನಷ್ಟ ಕಂಡುಬಂದಿಲ್ಲ. ಇದನ್ನು ಸಂಪೂರ್ಣವಾಗಿ ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ತಯಾರಿಸಲಾಗಿದೆ ಹಾಗೂ 1,000 ರೂ. ಗಿಂತ ಕಡಿಮೆ ವೆಚ್ಚವನ್ನು ನಿರೀಕ್ಷಿಸಲಾಗಿದೆ ಎಂದೂ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅವೀಕ್ ಬಿಡ್ ಹೇಳಿದ್ದಾರೆ.

ಪೇಟೆಂಟ್​ಗೆ ಅರ್ಜಿ ಸಲ್ಲಿಕೆ
ಇನ್ನು ಈ ಸಾಧನಕ್ಕಾಗಿ ಪೇಟೆಂಟ್ ಅನ್ನು ಸಲ್ಲಿಸಲಾಗಿದೆ ಮತ್ತು ಸಂಶೋಧಕರು ಶೀಘ್ರದಲ್ಲೇ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಆಶಿಸುತ್ತಿದ್ದಾರೆ. ಈ ವಿಧಾನವನ್ನು ವರ್ಧಿತ ರಿಯಾಲಿಟಿ ಮತ್ತು ಆರೋಗ್ಯ ನಿಯತಾಂಕಗಳ ನೈಜ-ಸಮಯದ ಮೇಲ್ವಿಚಾರಣೆಯಂತಹ ಅಪ್ಲಿಕೇಶನ್‌ಗಳಿಗೆ ವಿಸ್ತರಿಸಬಹುದು ಎಂದೂ ಆಶಿಸಲಾಗಿದೆ.

ಈ ತಂತ್ರಜ್ಞಾನವು ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ಸಾಧನವನ್ನು ಚಾಲನೆ ಮಾಡುವ ತಂತ್ರಜ್ಞಾನವು ಬೆಳಕಿನ ಮೂಲಭೂತ ಗುಣಲಕ್ಷಣಗಳನ್ನು (ರಿಫ್ರಾಕ್ಷನ್‌ ಹಾಗೂ ರಿಫ್ಲೆಕ್ಷನ್‌ ಅಥವಾ ಪ್ರತಿಫಲನ) ಆಧರಿಸಿದೆ ಎಂದು IISc ಹೇಳಿದೆ.


“ಒಂದು ಬೆಳಕಿನ ಮೂಲವನ್ನು ಪಾರದರ್ಶಕ ರಬ್ಬರಿನ ವಸ್ತುವಿನ ಒಂದು ತುದಿಯಲ್ಲಿ ಇರಿಸಲಾಗುತ್ತದೆ ಮತ್ತು ಇನ್ನೊಂದು ತುದಿಯಲ್ಲಿ ಬೆಳಕಿನ ಪತ್ತೆಕಾರಕವಿರುತ್ತದೆ. ಬೆರಳು ಅಥವಾ ತೋಳಿನ ಯಾವುದೇ ಚಲನೆಯು ಹೊಂದಿಕೊಳ್ಳುವ ವಸ್ತುವನ್ನು ವಿರೂಪಗೊಳಿಸಲು ಕಾರಣವಾಗುತ್ತದೆ.


ಚಲನೆಯನ್ನು ನಿಖರವಾಗಿ ಅಳೆಯಬಹುದು
ವಿರೂಪತೆಯು ಬೆಳಕಿನ ಮಾರ್ಗವನ್ನು ಬದಲಾಯಿಸುತ್ತದೆ ಹಾಗೂ ಆ ಮೂಲಕ ಅದರ ಗುಣಲಕ್ಷಣಗಳನ್ನು ಬದಲಾಯಿಸುತ್ತದೆ. ಸಾಧನವು ಬೆಳಕಿನ ಗುಣಲಕ್ಷಣಗಳಲ್ಲಿನ ಈ ಬದಲಾವಣೆಯನ್ನು ಪರಿಮಾಣಾತ್ಮಕ ಘಟಕಕ್ಕೆ ಅನುವಾದಿಸುತ್ತದೆ. ಸಾಧನದ ಸಂಪೂರ್ಣ ಉದ್ದಕ್ಕೂ ಬೆಳಕು ಚಲಿಸುವುದರಿಂದ, ರೋಗಿಯ ಬೆರಳು ಅಥವಾ ತೋಳಿನ ಯಾವುದೇ ಭಾಗದಲ್ಲಿ ಚಲನೆಯನ್ನು ನಿಖರವಾಗಿ ಅಳೆಯಬಹುದು’’ ಎಂದು ಈ ಸಾಧನದ ತಂತ್ರಜ್ಞಾನದ ಬಗ್ಗೆ IISc ವಿವರಿಸಿದೆ.

ಇದನ್ನೂ ಓದಿ: ಬೆಂಗಳೂರು IISc ಯಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಲು 105 ಕೋಟಿ ದೇಣಿಗೆ ನೀಡಿದ ಉದಾರ ಹೃದಯಿ!

ಇನ್ನು ಈ ಸಾಧನವು ಹೆಚ್ಚು ಸಂವೇದನಾಶೀಲವಾಗಿದೆ, ಚಿಟ್ಟೆಯ ಸ್ಪರ್ಶಕ್ಕೆ ಸಹ ಪ್ರತಿಕ್ರಿಯಿಸಬಹುದು ಎಂದು ತಂಡದ ಸದಸ್ಯ ಅಭಿಜಿತ್ ಚಂದ್ರ ರಾಯ್ ತಿಳಿಸಿದ್ದಾರೆ.


ಬೆರಳಿನ ಬಾಗುವಿಕೆ ಪತ್ತೆ
ಅಸ್ತಿತ್ವದಲ್ಲಿರುವ ಸಾಧನಗಳು ಬೆರಳಿನ ಬಾಗುವಿಕೆಯನ್ನು ಮಾತ್ರ ಪತ್ತೆ ಮಾಡಬಹುದಾದರೂ, ಹೊಸ ಸಾಧನವು ಬೆರಳಿನ ಪ್ರತಿಯೊಂದು ಸಂಧಿಯಲ್ಲಿ ಬಾಗುವ ಮಟ್ಟವನ್ನು ಸಹ ಅಳೆಯಬಹುದು ಎಂದೂ ವಿವರಿಸುತ್ತಾರೆ.

ಹಾಗೂ ಈ ಸಾಧನಕ್ಕಾಗಿ ಸಂಶೋಧಕರು ಸಿಲಿಕಾನ್ ಆಧಾರಿತ ಪಾಲಿಮರ್ ವಸ್ತುವನ್ನು ಬಳಸಿದ್ದಾರೆ. ಇದು ಪಾರದರ್ಶಕವಾಗಿರುತ್ತದೆ (ಬೆಳಕಿನ ಕುಶಲತೆಯನ್ನು ಸುಲಭಗೊಳಿಸುತ್ತದೆ), ಮೃದು (ಆರಾಮ ಮತ್ತು ಪುನರಾವರ್ತಿತ ಬಳಕೆಗಾಗಿ), ಮತ್ತು ಮುಖ್ಯವಾಗಿ 3D ಮುದ್ರಿತವಾಗಿದೆ ಎಂದೂ ಹೇಳಿದ್ದಾರೆ.


ಇದನ್ನೂ ಓದಿ: IISc Bengaluruಲ್ಲಿ ಹೊಸ B.Tech ಕೋರ್ಸ್! ಪ್ರವೇಶ ಪಡೆಯೋದು ಹೇಗೆ?

"ಆದ್ದರಿಂದ ಇದನ್ನು ಪ್ರತಿ ರೋಗಿಯ ತೋಳು ಮತ್ತು ಬೆರಳುಗಳಿಗೆ ಸರಿಹೊಂದುವಂತೆ ಕಸ್ಟಮೈಸ್ ಮಾಡಬಹುದು. ಸಾಧನವು ಡೇಟಾವನ್ನು ಸೆರೆಹಿಡಿಯಬಹುದು ಮತ್ತು ಸಂಗ್ರಹಿಸಬಹುದು ಹಾಗೂ ಅದನ್ನು ಅಂತರ್ಜಾಲದ ಮೂಲಕ ರವಾನಿಸಬಹುದು, ವೈದ್ಯರು ಅಥವಾ ಫಿಸಿಯೋಥೆರಪಿಸ್ಟ್‌ಗಳು ರಿಮೋಟ್ ಮಾನಿಟರಿಂಗ್ ಅನ್ನು ಸುಗಮಗೊಳಿಸಬಹುದು" ಎಂದು ಬೆಂಗಳೂರು ಮೂಲದ IISc ಹೇಳಿದೆ.


Published by:guruganesh bhat
First published: