ದಲಿತ ಕುಟುಂಬಗಳಿಗೆ ನೀಡಿದ ಜಾಗದಲ್ಲಿ ರಾಯಚೂರು ಐಐಐಟಿ ಸ್ಥಾಪನೆ; ಒಕ್ಕಲೆಬ್ಬಿಸಬೇಡಿ ಎಂದು ಅಂಗಲಾಚುತ್ತಿರುವ ರೈತರು

ಐಐಐಟಿಗೆ ಗುರುತಿಸಲಾಗಿರುವ ಜಾಗ ಈ ಹಿಂದೆ ದಲಿತರಿಗೆ ನೀಡಿದ ಭೂಮಿ ಇದು. ಈ ಭೂಮಿಯನ್ನೆ ನಂಬಿಕೊಂಡು ಜೀವನ ನಡೆಸುತ್ತಿರುವವ ಕುಟುಂಬಗಳು ನಮ್ಮನ್ನು ಒಕ್ಕಲೆಬ್ಬಿಸಬೇಡಿ ಎಂದು ಆಗ್ರಹಪೂರ್ವಕ ಮನವಿ ಮಾಡುತ್ತಿವೆ.

ಐಐಐಟಿಗೆ ಮೀಸಲಿಟ್ಟ ಭೂಮಿ

ಐಐಐಟಿಗೆ ಮೀಸಲಿಟ್ಟ ಭೂಮಿ

  • Share this:
ರಾಯಚೂರು(ಮಾ. 06): ಇಲ್ಲಿ ಜನರು ಕೇಳಿದ್ದು ಐಐಟಿ, ಆದರೆ, ಕೇಂದ್ರ ಸರಕಾರ ನೀಡಿದ್ದು ಐಐಐಟಿ. ಈಗಾಗಲೇ ರಾಯಚೂರು ಐಐಐಟಿಯು ಹೈದರಾಬಾದ್​ನಲ್ಲಿ ಆರಂಭವಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ರಾಯಚೂರಿನಲ್ಲಿಯೇ ಐಐಐಟಿ ಆರಂಭಿಸುವ ಸಿದ್ದತೆ ನಡೆದಿದೆ. ಆದರೆ ಐಐಐಟಿಗೆ ಗುರುತಿಸಲಾಗಿರುವ ಜಾಗ ಈ ಹಿಂದೆ ದಲಿತರಿಗೆ ನೀಡಿದ ಭೂಮಿ ಇದು. ಈ ಭೂಮಿಯನ್ನೆ ನಂಬಿಕೊಂಡು ಜೀವನ ನಡೆಸುತ್ತಿರುವವ ಕುಟುಂಬಗಳು ನಮ್ಮನ್ನು ಒಕ್ಕಲೆಬ್ಬಿಸಬೇಡಿ ಎಂದು ಆಗ್ರಹಪೂರ್ವಕ ಮನವಿ ಮಾಡುತ್ತಿವೆ.

ಶೈಕ್ಷಣಿಕವಾಗಿ ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ರಾಯಚೂರು ಜಿಲ್ಲೆಗೆ ಐಐಟಿ ದೊರೆಯುತ್ತದೆ ಎಂಬ ಕನಸು ರಾಯಚೂರು ಜನತೆ ಹೊಂದಿದ್ದರು, ಆದರೆ ಕೇಂದ್ರ ಸರಕಾರ ಐಐಟಿಯನ್ನು ಧಾರವಾಡಕ್ಕೆ ನೀಡಿ, ರಾಯಚೂರಿಗೆ ಐಐಐಟಿಯನ್ನು ನೀಡಿತು. ಈ ಶೈಕ್ಷಣಿಕ ವರ್ಷದಿಂದ ಐಐಐಟಿಯು ಹೈದರಾಬಾದ್​ನಲ್ಲಿ ನಡೆಯುತ್ತಿದೆ. ಈ ಮಧ್ಯೆ ರಾಯಚೂರಿನ ತ್ರಿಬಲ್ ಐಟಿ ರಾಯಚೂರಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಬೇಕು ಎನ್ನುವ ಉದ್ದೇಶದಿಂದ ಈಗಾಗಲೇ ಸಿದ್ದತೆ ನಡೆದಿದೆ.

ಈ ಮಧ್ಯೆ ತ್ರಿಬಲ್ಐಟಿಗಾಗಿ ಬಾಯಿದೊಡ್ಡಿ ಗ್ರಾಮದ ಬಳಿಯ ವಡವಾಟಿ ಸೀಮಾಂತರದ ಸ ಸರ್ವೆ ನಂಬರ್ 99/1/3 ರಲ್ಲಿ ಒಟ್ಟು 65 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಈ 65 ಎಕರೆಯಲ್ಲಿ ಈ ಹಿಂದೆ 1978 ರಲ್ಲಿ ಭೂ ರಹಿತ ದಲಿತರಿಗೆ 35 ಎಕರೆ ಭೂಮಿಯನ್ನು 12 ಕುಟುಂಬಗಳಿಗೆ ನೀಡಲಾಗಿದೆ. ಈಗ ಗುರುತಿಸಿರುವ ಭೂಮಿಯಲ್ಲಿಯೇ ಈ ರೈತರು ಸಾಗುವಳಿ ಮಾಡುತ್ತಿದ್ದಾರೆ. ಸರಕಾರ ನೀಡಿದ ಭೂಮಿಯಲ್ಲಿ ಕೃಷಿಯನ್ನು ಮಾಡುತ್ತಿದ್ದಾರೆ. ಆದರೆ ಈ ಮಧ್ಯೆ ಏಕಾಏಕಿಯಾಗಿ ಜಿಲ್ಲಾಡಳಿತವು ಇದೇ ಭೂಮಿಯನ್ನು ಕಾಲೇಜಿಗೆ ನೀಡಲು ಮುಂದಾಗಿದ್ದರಿಂದ ಈ ದಲಿತ ಕುಟುಂಬಗಳು ಭೂಮಿ ಕಳೆದುಕೊಳ್ಳುವ ಭಯದಲ್ಲಿವೆ.

ಈ ಮಧ್ಯೆ ಉನ್ನತ ಶಿಕ್ಷಣ ಸಚಿವರಾದ ಡಿಸಿಎಂ ಡಾ ಅಶ್ವಥ್ ನಾರಾಯಣ ಅವರು ತ್ರಿಬಲ್ಐಟಿಗಾಗಿ ಗುರುತಿಸಿದ ಸ್ಥಳಕ್ಕೆ ಭೇಟಿ ಮಾಡಿದಾಗ ರೈತರು ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ರಾಯಚೂರು ಜಿಲ್ಲಾಧಿಕಾರಿಗಳು ಇಲ್ಲಿರುವ ರೈತರಿಗೆ ಪರ್ಯಾಯ ಭೂಮಿ ನೀಡಲಾಗುವುದು. ಗಂಗಾ ಕಲ್ಯಾಣ ಯೋಜನೆಯಲ್ಲಿ ಪಂಪ್ ಸೆಟ್​ಗಳನ್ನು ಹಾಕಿಸಿಕೊಡಲಾಗುವುದೆಂಬ ಭರವಸೆ ನೀಡಿದ್ದಾರೆ.

ಇದನ್ನೂ ಓದಿ :  ಕೆಲಸ ಸಿಕ್ಕಿದ ಬಳಿಕ ಕಷ್ಟಪಟ್ಟು ಓದಿಸಿದ್ದ ಪೋಷಕರನ್ನೇ ಮರೆತ ಮಗ; ನ್ಯಾಯಮಂಡಳಿ ಮೆಟ್ಟಿಲೇರಿ ಗೆದ್ದ ತಂದೆ..!

ಸುಮಾರು 40 ವರ್ಷದಿಂದ ಸಾಗುವಳಿ ಮಾಡಿಕೊಂಡು ಬಂದಿದ್ದೇವೆ, ಇದೇ ಭೂಮಿಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ, ಅಲ್ಲದೆ ಪಂಪುಸೆಟ್ಟು ಹಾಕಿಸಲು ಅಲ್ಲದೆ ಭೂಮಿಯ ಮೇಲೆ ಅಲ್ಲಲ್ಲಿ ಸಾಲವನ್ನು ಸಹ ಮಾಡಿದ್ಧೇವೆ, ಈಗ ಭೂಮಿ ಕಸಿದುಕೊಂಡರೆ ನಾವೇನು ಮಾಡಬೇಕು ನಮಗೆ ಇದೇ ಭೂಮಿ ಬೇಕು ಎನ್ನುತ್ತಿದ್ದಾರೆ ರೈತರು.

ಈ ವರ್ಷದಿಂದ ತ್ರಿಬಲ್ಐಟಿ ಕಟ್ಟಡ ಆರಂಭವಾಗುತ್ತದೆ ಎನ್ನುತ್ತಿರುವಾಗಲೇ ದಲಿತರಿಗೆ ನೀಡಿದ ಭೂಮಿ ವಾಪಸ್ಸು ಪಡೆದು ಬೇರೆ ಭೂಮಿ ನೀಡುವ ಪ್ರಕ್ರಿಯೆ ಆರಂಭಿಸಬೇಕು, ಇದರಿಂದಾಗಿ ತ್ರಿಬಲ್ಐಟಿ ಕಟ್ಟಡ ಕಾಮಗಾರಿ ಆರಂಭ ವಿಳಂಬವಾಗುವ ಸಾಧ್ಯತೆ ಇದೆ.
First published: