ಅಭಿವೃದ್ಧಿ ಬೇಕು ಅಂದರೆ ಕಾಂಗ್ರೆಸ್​​ ಪಕ್ಷಕ್ಕೆ ಮತ ಹಾಕಿ; ಮಲ್ಲಿಕಾರ್ಜುನ ಖರ್ಗೆ

ಈಗ ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ. ಜಿಡಿಪಿ ಕುಸಿಯುತ್ತಿದೆ. ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಿ ಎಂದು ಮತದಾರರಿಗೆ ಕಿವಿಮಾತು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ.

ಮಲ್ಲಿಕಾರ್ಜುನ ಖರ್ಗೆ.

  • Share this:
ಬೆಂಗಳೂರು(ಡಿ.02): ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಬೆಂಗಳೂರು ಹೆಚ್ಚು ಅಭಿವೃದ್ಧಿಯಾಗಿದೆ. ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ನಗರದ ರಸ್ತೆ ಸರಿಹೋಗಿದ್ದು. ಸಿದ್ದರಾಮಯ್ಯ ಪಕ್ಷ ಭೇದ ಮರೆತು ಹಣ ಬಿಡುಗಡೆ ಮಾಡಿದರು. ಅಭಿವೃದ್ಧಿ ಬೇಕು ಅಂದರೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತದಾರರಿಗೆ ಕರೆ ನೀಡಿದ್ದಾರೆ.

ಮಹಾಲಕ್ಷ್ಮೀ ಲೇಔಟ್‌ನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ಸರ್ಕಾರದ ದಿನಗಳನ್ನು ಸ್ಮರಿಸಿದರು. "ಈ ಹಿಂದೆ ಸಿದ್ದರಾಮಯ್ಯ ಉತ್ತಮ ಕಾರ್ಯಕ್ರಮ ಕೊಟ್ಟಿದ್ದರು. ಅಭಿವೃದ್ಧಿ ಆಗಬೇಕು ಅಂದರೆ ಕಾಂಗ್ರೆಸ್​ ಪಕ್ಷಕ್ಕೆ ಮತ ಹಾಕಿ. ಅನರ್ಹ ಶಾಸಕರ ಹಣೆಬರಹ ಬರೆಯುವವರು ನೀವು. ಬಾಂಬೆಗೆ ಹೋಗಿದ್ದ ಅನರ್ಹರು ತಿರುಗಿ ಕ್ಷೇತ್ರಕ್ಕೆ ಬರಬೇಕು," ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಮಾಜಿ ಸಿಎಂ ದೇವರಾಜ್ ಅರಸು ಮಗಳ ಸೀರೆಯನ್ನು ಎಳೆಸಿದ್ದ ವ್ಯಕ್ತಿ ವಿಶ್ವನಾಥ್: ಸಾ.ರಾ.ಮಹೇಶ್​ ಗಂಭೀರ ಆರೋಪ

ಈಗ ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ. ಜಿಡಿಪಿ ಕುಸಿಯುತ್ತಿದೆ. ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಿ ಎಂದು ಮತದಾರರಿಗೆ ಕಿವಿಮಾತು ಹೇಳಿದರು.

ಮಹಾರಾಷ್ಟ್ರದಲ್ಲಿ  ಎನ್​ಸಿಪಿ, ಶಿವಸೇನಾ ಜೊತೆ ನಮ್ಮ ಸರ್ಕಾರ ಬಂದಿದೆ. ಬಿಜೆಪಿಯವರು ಮಧ್ಯಪ್ರದೇಶ, ರಾಜಸ್ಥಾನ ಸೇರಿ ಹಲವು ಕಡೆ ಅಧಿಕಾರ ಕಳೆದುಕೊಂಡಿದ್ದಾರೆ. ಏಕೆ ಅಂತ ಗೊತ್ತಿದೆ , ಒಂದು ಸುಳ್ಳನ್ನು ನೂರಾರು ಸಲ ಹೇಳಿ ಸತ್ಯ ಮಾಡುವುದು ಬಿಜೆಪಿ. ಮೋದಿ 2014ರಲ್ಲಿ ಯುವಕರಿಗೆ ಕೆಲಸ ಕೊಡುತ್ತೇನೆ ಎಂದು ಹೇಳಿದ್ದರು. ಎಲ್ಲಿ ಕೊಟ್ಟರು? ಜನರಿಗೆ ಇವರು ಏನೂ ಮಾಡಿಲ್ಲ. ಇಂತವರ ಪಕ್ಷಕ್ಕೆ ಗೋಪಾಲಯ್ಯ ಹೋಗಿದ್ದಾರೆ. ಅಭಿವೃದ್ಧಿ  ಬೇಕು ಅಂದರೆ ಡಿ. 5 ರಂದು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಪುನರುಚ್ಚರಿಸಿದರು.

ಸಾಮಾನ್ಯರಂತೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿ, ತಮ್ಮ ಲಗ್ಗೇಜನ್ನು ತಾವೇ ಹೊತ್ತ ಸ್ವೀಡನ್​​​ನ ರಾಜ, ರಾಣಿ

First published: