ಬಿಜೆಪಿ ಒಕ್ಕಲಿಗರಿಗೆ ಅನ್ಯಾಯ ಮಾಡುತ್ತಿದೆ, ಸಮುದಾಯಕ್ಕೆ ಸಮಸ್ಯೆ ಎದುರಾದರೆ ಹೋರಾಟ ತೀವ್ರವಾಗಲಿದೆ; ನಂಜಾವಧೂತ ಸ್ವಾಮೀಜಿ ಎಚ್ಚರಿಕೆ

ಹುಲಿ ಯಾವತ್ತಿದ್ದರೂ ಹುಲಿಯೇ. ಅದು ಬೋನಲ್ಲಿದ್ದರೂ ಹುಲಿಯೇ, ಹೊರಗಿದ್ದರೂ ಹುಲಿಯೇ. ಇತ್ತೀಚೆಗೆ ಅದಕ್ಕೆ ಸಂಸ್ಕಾರ ಹೆಚ್ಚಾಗಿ ಸುಮ್ಮನಿತ್ತಷ್ಟೇ ಎಂದು ಹೇಳುವ ಮೂಲಕ ಡಿಕೆಶಿಯನ್ನು ಹುಲಿಗೆ ಹೋಲಿಸಿದರು.

HR Ramesh | news18-kannada
Updated:September 11, 2019, 4:38 PM IST
ಬಿಜೆಪಿ ಒಕ್ಕಲಿಗರಿಗೆ ಅನ್ಯಾಯ ಮಾಡುತ್ತಿದೆ, ಸಮುದಾಯಕ್ಕೆ ಸಮಸ್ಯೆ ಎದುರಾದರೆ ಹೋರಾಟ ತೀವ್ರವಾಗಲಿದೆ; ನಂಜಾವಧೂತ ಸ್ವಾಮೀಜಿ ಎಚ್ಚರಿಕೆ
ನಂಜಾವಧೂತ ಸ್ವಾಮೀಜಿ
  • Share this:
ಬೆಂಗಳೂರು: ಇದು ಪಕ್ಷಾತೀತ ಹೋರಾಟ. ಯಾರ ವಿರುದ್ಧವೂ ಅಲ್ಲದ, ಯಾರಿಗೂ ನೋವು ಮಾಡುವ ದುರುದ್ದೇಶದಿಂದ ಕೂಡಿರದ, ನಮ್ಮ ನೋವನ್ನು ವ್ಯಕ್ತಪಡಿಸಲು ಮಾಡಿರುವ ಶುದ್ಧ ಹೋರಾಟ ಎಂದು ಒಕ್ಕಲಿಗ ಸಮುದಾಯದ ನಂಜಾವಧೂತ ಸ್ವಾಮೀಜಿ ಹೇಳಿದರು.

ಡಿಕೆಶಿ ಶಿವಕುಮಾರ್ ಬಂಧನ ಖಂಡಿಸಿ ಇಂದು ರಾಜಧಾನಿ ನಡೆದ ಒಕ್ಕಲಿಗ ಸಮುದಾಯದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ನಂಜಾವಧೂತ ಸ್ವಾಮೀಜಿ,  ಸಮುದಾಯದ ಕಟ್ಟಕಡೆಯ ವ್ಯಕ್ತಿಗೆ ನೋವಾದರೂ ಹೀಗೇ ಎಲ್ಲರೂ ಬಂದು ಸೇರುತ್ತೇವೆ ಎಂದು ಹೇಳಿದರು.

ರಾಜ್ಯದ ಜನರಿಗೆ ಮಿಡಿಯುತ್ತಿರುವ ಹೃದಯ ದೇವೇಗೌಡರದ್ದು. ಕಾವೇರಿ ಇರಲಿ, ಕೃಷ್ಣಾ ಇರಲಿ ಲೋಕಸಭೆಯಲ್ಲಿ ದೊಡ್ಡ ದನಿಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ದೇವೇಗೌಡರು.  ನಾಡಿದ ಬಹಳ ದೊಡ್ಡ ದನಿಯನ್ನು ನಾವು ಲೋಕಸಭೆಗೆ ಕಳುಹಿಸಲು ಆಗಲಿಲ್ಲ.  ದೇವೇಗೌಡ್ರು ಎಲೆಕ್ಷನ್​ನಲ್ಲಿ ಸೋತಿದ್ದಕ್ಕೆ ಅವರಿಗೇನೂ ನಷ್ಟವಿಲ್ಲ, ರಾಜ್ಯಕ್ಕೆ ನಷ್ಟ ಅಷ್ಟೇ. ಇಷ್ಟೆಲ್ಲಾ ಹೋರಾಟ ಯಾಕೆ ಮಾಡಿದ್ದು ಅಂದರೆ ಸಿದ್ಧಾರ್ಥಗೆ ಆದ ಅವಸ್ಥೆ ಡಿಕೆ ಶಿವಕುಮಾರ್​ಗೆ ಆಗಬಾರದು ಅಂತ. ಡಿಕೆ ಶಿವಕುಮಾರ್​ ಅವರನ್ನು ಈಗಿನಿಂದ ಈಗಲೇ ಬಿಡಿಸಿಕೊಂಡು ಬರ್ತೀವಿ ಅನ್ನೋ ಹುಂಬತನ ನಮಗಿಲ್ಲ. ಆದರೆ ಡಿಕೆಶಿ, ದೇವೇಗೌಡ್ರು, ಸಿದ್ಧಾರ್ಥ ಇವರೆಲ್ಲರ ಜೊತೆ ನಾವಿದ್ದೇವೆ ಅನ್ನೋದನ್ನು ಹೇಳಲು ಈ ರ್ಯಾಲಿ ಮಾಡಿದ್ದು ಎಂದು ಸ್ವಾಮೀಜಿ ತಿಳಿಸಿದರು.

ಇದನ್ನು ಓದಿ: ರಾಜ್ಯಪಾಲರಿಗೆ ಮನವಿ ಪತ್ರ ನೀಡಿದ ಒಕ್ಕಲಿಗರ ನಿಯೋಗ

ಸಮುದಾಯವನ್ನು ಹತ್ತಿಕ್ಕುವ ಪ್ರಯತ್ನವನ್ನು ಯಾರಾದರು ಮಾಡಿದರೆ ಸಮುದಾಯದ ಮಠಾಧೀಶರು ಪ್ರತಿಭಟನೆಗೆ ಕರೆ ಕೊಡಬೇಕಾಗುತ್ತದೆ. ಆಗ ಬೆಂಗಳೂರಿನಲ್ಲಿ ಜಾಗವಿರುವುದಿಲ್ಲ. ಬಿಜೆಪಿ ಒಕ್ಕಲಿಗರಿಗೆ ಅನ್ಯಾಯ ಮಾಡುತ್ತಿದೆ. ಸಮುದಾಯ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ಇವತ್ತು ನಡೆದ ಹೋರಾಟ ಕೇವಲ ಸ್ಯಾಂಪಲ್ ಅಷ್ಟೇ. ಸಮುದಾಯಕ್ಕೆ ಸಮಸ್ಯೆ ಬಂದರೆ ಹೋರಾಟ ಜೋರಾಗಲಿದೆ ಎಂದು ಕೇಂದ್ರ, ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.

ಹುಲಿ ಯಾವತ್ತಿದ್ದರೂ ಹುಲಿಯೇ. ಅದು ಬೋನಲ್ಲಿದ್ದರೂ ಹುಲಿಯೇ, ಹೊರಗಿದ್ದರೂ ಹುಲಿಯೇ. ಇತ್ತೀಚೆಗೆ ಅದಕ್ಕೆ ಸಂಸ್ಕಾರ ಹೆಚ್ಚಾಗಿ ಸುಮ್ಮನಿತ್ತಷ್ಟೇ ಎಂದು ಹೇಳುವ ಮೂಲಕ ಡಿಕೆಶಿಯನ್ನು ಹುಲಿಗೆ ಹೋಲಿಸಿದರು.

First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ