ಬೆಂಗಳೂರು: ಮತಾಂತರ ಕಾಯ್ದೆ ನಿಷೇಧ ಬಗ್ಗೆ ಮನವಿ ನೀಡಿದ್ದಾರೆ. ನಾನು ಬಹಿರಂಗ ವಾಗಿ ಸ್ಟೇಟ್ಮೆಂಟ್ ನೀಡಿದ್ದೇನೆ. ಕಾನೂನಿನಲ್ಲಿ ಅವಕಾಶ ಇದೆಯಾ ಅಂತ ನೋಡುತ್ತಿದ್ದೇನೆ. ಬೇರೆ ಬೇರೆ ರಾಜ್ಯದಲ್ಲಿ ಅವಕಾಶ ಇದೆಯಾ ಅಂತ ನೋಡುತ್ತೇವೆ. ಮತಾಂತರ ಕಾಯ್ದೆ ಜಾರುಗೆ ತರಲು ಸಾಧ್ಯವಾ ಅಂತ ಚರ್ಚೆ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಅವರು ಹೇಳಿದರು.
ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಬೊಮ್ಮಾಯಿ ಅವರು,
ಬಿಟ್ ಕಾಯಿನ್ ವಿಚಾರವಾಗಿ ಪ್ರತಿಪಕ್ಷಗಳು ಮಾಡುತ್ತಿರುವುದು ಆಧಾರ ರಹಿತ ಆರೋಪಗಳು. ಈಗಾಗಲೇ ರಾಜ್ಯ ಸರ್ಕಾರ ಇಡಿ ತನಿಖೆಗೆ ವಹಿಸಿದೆ. ಪ್ರತಿದಿನ ಈ ಬೇಸ್ ಲೆಸ್ ಆರೋಪಗಳಿಗೆ ಉತ್ತರಿಸೋಕ್ಕೆ ಆಗಲ್ಲ. ಯಾವ ಆಧಾರದ ಮೇಲೆ ಈ ಆರೋಪ ಮಾಡ್ತಾಯಿದ್ದಾರೆ. ಒಬ್ಬೊಬ್ಬರು ಒಂದೊಂದು ಸಂಖ್ಯೆಗಳು ಹೇಳ್ತಾರೆ. ಒಬ್ರು ಎರಡು ಸಾವಿರ, ಇನ್ನೊಬ್ಬರು ಮೂರು ಸಾವಿರ ಅಂತಾರೆ. ಬಿಟ್ ಕಾಯಿನ್ ಅರೋಪ ಕುರಿತಾಗಿ ನನಗೆ ಯಾವುದೇ ಭಯವಿಲ್ಲ. ಪ್ರತಿಪಕ್ಷಗಳು ರಾಜಕೀಯ ಪ್ರೇರಿತವಾಗಿ ಆರೋಪಗಳು ಮಾಡುತ್ತಿವೆ ಎಂದು ತಿರುಗೇಟು ನೀಡಿದರು.
ಬಿಟ್ ಕಾಯಿನ್ ವಿಚಾರವಾಗಿ ನಾನು ಪ್ರತಿ ನಿತ್ಯ ಪ್ರತಿಕ್ರಿಯೆ ಕೊಡಲು ಇಚ್ಚಿಸುವುದಿಲ್ಲ. ಯಾರು ಹೇಳುತ್ತಿದ್ದಾರೋ ಅವರಿಗೆ ಹಗರಣ ಏನು, ಯಾರು ಭಾಗಿಯಾಗಿದ್ದಾರೆ ಅಂತಾ ದಯವಿಟ್ಟು ಹೇಳಿ ಎಂದು ಮನವಿ ಮಾಡುತ್ತೇನೆ. ನೀವು ಕನಿಷ್ಠ ಮಾಹಿತಿ ನೀಡಿದರೂ ತನಿಖೆಗೆ ಸಹಾಯವಾಗುತ್ತದೆ. ಕರ್ನಾಟಕ ಸರ್ಕಾರ ಬಹಳ ಸ್ಪಷ್ಟವಾಗಿದೆ. ಒಂಬತ್ತು ತಿಂಗಳ ಹಿಂದೆಯೇ ಇಡಿಗೆ ಈ ಪ್ರಕರಣ ಹಸ್ತಾಂತರ ಮಾಡಲಾಗಿದೆ. ಇಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. ಸುಮಾರು ಜನ 2 ಸಾವಿರ, 8 ಸಾವಿರ ಕೋಟಿ ಅಂತಾ ಹೇಳುತ್ತಿದ್ದಾರೆ. ಆದರೆ ಆಧಾರ ಏನಿದೆ? ಇದಕ್ಕೆ ಯಾವುದೇ ಆಧಾರ ಇಲ್ಲ. ನಮ್ಮ ಸರ್ಕಾರ ಮುಕ್ತವಾಗಿದೆ. ನಾವು ಯಾರನ್ನೂ ರಕ್ಷಣೆ ಮಾಡುವ ಅಗತ್ಯವಿಲ್ಲ. ನಮ್ಮ ಸರ್ಕಾರದ ಯಾವುದೇ ವ್ಯಕ್ತಿಗಳು ಭಾಗಿಯಾಗಿಲ್ಲ. ಅವರಿಗೆ ಯಾವುದೇ ಸಣ್ಣ ಮಾಹಿತಿ ಇದ್ದರೂ ತನಿಖಾ ಏಜೆನ್ಸಿಗೆ ನೀಡಲಿ. ಈ ಏಜೆನ್ಸಿಗಳು ರಾಜ್ಯ ಸರ್ಕಾರದ ಅಡಿಯಲ್ಲಿ ಬರುವುದಿಲ್ಲ. ಆರೋಪ ಮಾಡುವವರು ಮಾಹಿತಿ ನೀಡಲಿ. ಅದು ಸಾಬೀತಾಗಲಿ, ಸತ್ಯ ಹೊರಗೆ ಬರಲಿ ಎಂದು ಸವಾಲು ಹಾಕಿದರು.
ವಶಪಡಿಸಿಕೊಂಡ ಬಿಟ್ ಕಾಯಿನ್ ಕಾಣೆಯಾಗಿದೆ ಎಂಬ ಆರೋಪ ಎಲ್ಲವೂ ಕೂಡಾ ದಾಖಲಾತಿಗಳಲ್ಲಿ ಸಾಬೀತಾಗಬೇಕಿದೆ. ನಿಜವಾದ ಸ್ಕ್ಯಾಮ್ ಏನು ಎಂಬುದು ಇಲ್ಲಿರುವ ವಿಚಾರ. ನಾವು ಸಿಬಿಐ, ಇಂಟರ್ ಪೋಲ್ ಗೆ ಕೂಡ ರೆಫರ್ ಮಾಡಿದ್ದು ಅವರೂ ತನಿಖೆ ಮಾಡುತ್ತಿದ್ದಾರೆ. ಸಿಎಂ ಸ್ಥಾನಕ್ಕೇ ಕುತ್ತು ಎಂಬುದು ಎಲ್ಲಾ ರಾಜಕೀಯ ಪ್ರೇರಿತ ಹೇಳಿಕೆಗಳು ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
ನಾಳೆ ಸಿದ್ದರಾಮಯ್ಯಗೆ ವಿವರ ಕೊಡುತ್ತೇವೆ: ಬೊಮ್ಮಾಯಿ
ರಾಜ್ಯದಲ್ಲಿ ಮಳೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ನೆರವು ನೀಡಲು ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಸಿದ್ದರಾಮಯ್ಯ ಅವರ ಪತ್ರ ತಲುಪಿದೆ. ಈ ವಿಷಯವಾಗಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ನಾಳೆ ಅವರಿಗೆ ವಿವರ ಕೊಡುತ್ತೇವೆ ಎಂದು ಹೇಳಿದರು.
ಇದನ್ನು ಓದಿ: Ramanagara: ಸ್ವಂತ ಮನೆ, ವಿದ್ಯುತ್, ಶೌಚಾಲಯ ಕೂಡ ಇಲ್ಲದೆ ಕಾಡುಪ್ರಾಣಿಗಳಂತೆ ಬದುಕುತ್ತಿರುವ ಇರುಳಿಗರು
ಇವತ್ತು ಬೆಳಗ್ಗೆ ಎರಡು ಸಭೆ ಮಾಡಿದ್ದೆ. ತಿರುಪತಿಯಲ್ಲಿ ದಕ್ಷಿಣ ಭಾರತ ಸಚಿವರ ಸಭೆ ಇದೆ. ಅಮಿತ್ ಶಾ ಸಭೆ ಅಧ್ಯಕ್ಷ ಸ್ಥಾನ ವಹಿಸಲಿದ್ದಾರೆ. ಅಂತರಾಷ್ಟ್ರೀಯ ವಿಚಾರ ಚರ್ಚೆ ಆಗಲಿದೆ. ದಕ್ಷಿಣ ಭಾರತ ಅಭಿವೃದ್ಧಿ ಬಗ್ಗೆ ಸಭೆ ಮಾಡಲಿದ್ದಾರೆ. ಕಳೆದ ವರ್ಷ ಆಗಬೇಕಿತ್ತು ಆಗಿರಲಿಲ್ಲ. ಕೇಂದ್ರ ಹಣಕಾಸು ಸಭೆ ಮಾಡಿದ್ರು, ಈಸಿಂಗ್ ಔಟ್ ಆಫ್ ಸಭೆ ಮಾಡಿದ್ರು. ಒಂದು KSRTC, NERTC ಪುನಶ್ಚೇತನ ಕೆಲಸ ಮಾಡಿದ್ರು. ರೆವೆನ್ಯೂ ಸಭೆ ಮಾಡಿದ್ರು. ಶ್ರೀನಿವಾಸ್ ಮೂರ್ತಿ ನೇತೃತ್ವದಲ್ಲಿ ಸಮಿತಿ ಮಾಡಿದ್ದು ವರದಿ ನೀಡಲು ಹೇಳಿದ್ದೇವೆ. ಹೆಸ್ಕಾಂ ಸಂಬಂಧ ಸಭೆ ಮಾಡಲಾಗಿತ್ತು. ಎನರ್ಜಿ ಸೆಕ್ರೇಟರಿ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ಜನರಿಗೆ ಸೇವೆ ನೀಡುವ ನಿಟ್ಟಿನಲ್ಲಿ ಸಭೆ ಮಾಡಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ