ನನ್ನ ವಿಷಯಕ್ಕೆ ಬಂದರೆ ನಿಮ್ಮ ಬಂಡವಾಳ ಬಯಲು: ಬಿಜೆಪಿ ನಾಯಕರಿಗೆ HDK ಖಡಕ್ ಎಚ್ಚರಿಕೆ

ಹಿಂದೆ ಚಿಕ್ಕಮಗಳೂರಿನ ಮಹಿಳಾ ಸರಕಾರಿ ಅಧಿಕಾರಿಯೊಬ್ಬರ ಪತಿ ಕೆಆರ್ ಎಸ್ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಸೇರಿ ಅನೇಕರ ಕಥೆಗಳು ನನಗೆ ಚೆನ್ನಾಗಿ ಗೊತ್ತಿವೆ. ಸುಮ್ಮನೆ ಕೆಣಕುತ್ತಾ ಹೋದರೆ ಅದೇ ನಿಮಗೆ ತಿರುಗುಬಾಣ ಆಗುತ್ತದೆ. ಬಿಜೆಪಿ ನಾಯಕರಿಗೆ ಇದು ನಾನು ಕೊಡುವ ನೇರ ಎಚ್ಚರಿಕೆ ಎಂದು ಹೇಳಿದ್ದಾರೆ.

ಹೆಚ್.ಡಿ. ಕುಮಾರಸ್ವಾಮಿ.

ಹೆಚ್.ಡಿ. ಕುಮಾರಸ್ವಾಮಿ.

  • Share this:
ಸಿಂದಗಿ: ಬಿಜೆಪಿಯವರು ನನ್ನ ವೈಯಕ್ತಿಕ ವಿಚಾರಗಳನ್ನು ಇಲ್ಲಿಗೆ ಬಿಡುವುದು ಒಳ್ಳೆಯದು. ಇಲ್ಲವಾದರೆ ಆರ್ ಎಸ್ ಎಸ್ (RSS) ಶಾಖೆಗಳಿಂದ ತರಬೇತಿ ಪಡೆದುಕೊಂಡು ಬಿಜೆಪಿಗೆ ಬಂದವರೆಲ್ಲ ನಡೆಸುತ್ತಿರುವ ಅಸಹ್ಯವನ್ನು ಎಲ್ಲವನ್ನೂ ಬಿಚ್ಚಿಡಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಖಡಕ್ ಎಚ್ಚರಿಕೆ ನೀಡಿದರು. ಸಿಂದಗಿ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಇಂದು ಮಾಧ್ಯಮಗಳ ಜತೆ ಅವರು ಮಾತನಾಡಿದರು. ಇವತ್ತು ಬಿಜೆಪಿಯವರು ನನ್ನ ಖಾಸಗಿ ವಿಚಾರಗಳನ್ನು ಕೆದಕಿದ್ದಾರೆ. ಮತ್ತೆ ಮತ್ತೆ ಕೆದಕುತ್ತಿದ್ದಾರೆ. ಅವರಿಗೆ ನೇರವಾಗಿ ಹೇಳಲು ಬಯಸುತ್ತೇನೆ. ನಾನು ಆರ್ ಎಸ್ ಎಸ್ ಬಗ್ಗೆ ಎತ್ತಿರುವ ಪ್ರಶ್ನೆಗಳ ಬಗ್ಗೆ ಉತ್ತರ ನೀಡಲಿ. ಅದರ ಹೊರತಾಗಿ ನನ್ನ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪ ಮಾಡಿದರೆ ನಾನು ಅವರೆಲ್ಲರ ವಿಚಾರಗಳನ್ನು ಮಾಧ್ಯಮಗಳ ಮುಂದೆ ಇಡಬೇಕಾಗುತ್ತದೆ. ಅವೆಲ್ಲವನ್ನೂ ನೀವು ನೋಡಿದರೆ ಅಸಹ್ಯಪಡುತ್ತೀರಿ ಎಂದು ತಿರುಗೇಟು ನೀಡಿದ್ದಾರೆ.

ಬಿಜೆಪಿ ನಾಯಕರದ್ದು ಬ್ರಹ್ಮಾಂಡ ಬಂಡವಾಳ ಇದೆ. ಹಿಂದೆ ಚಿಕ್ಕಮಗಳೂರಿನ ಮಹಿಳಾ ಸರಕಾರಿ ಅಧಿಕಾರಿಯೊಬ್ಬರ ಪತಿ ಕೆಆರ್ ಎಸ್ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಸೇರಿ ಅನೇಕರ ಕಥೆಗಳು ನನಗೆ ಚೆನ್ನಾಗಿ ಗೊತ್ತಿವೆ. ಸುಮ್ಮನೆ ಕೆಣಕುತ್ತಾ ಹೋದರೆ ಅದೇ ನಿಮಗೆ ತಿರುಗುಬಾಣ ಆಗುತ್ತದೆ. ಬಿಜೆಪಿ ನಾಯಕರಿಗೆ ಇದು ನಾನು ಕೊಡುವ ನೇರ ಎಚ್ಚರಿಕೆ. ಈ ಆತ್ಮಹತ್ಯೆಗೆ ಕಾರಣನಾದವರು ಯಾರು? ಆ ನಾಯಕನ ಬಗ್ಗೆ ತಾಕತ್ತಿದ್ದರೆ ಬಿಜೆಪಿಯವರು ಮಾತನಾಡಲಿ. ಆ ಪಕ್ಷ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ  ಎಂದು ಹೇಳಿದರು.

ಮಂಗಳೂರಿನಲ್ಲಿ ಸಂಘದ ಪ್ರಚಾರಕರೊಬ್ಬರ ಕುಟುಂಬದ ಹೆಣ್ಣು ಮಗಳೊಬ್ಬರನ್ನು ಹಾಳು ಮಾಡಿ ಬಾಂಬೆಗೆ ಕದ್ದು ಓಡಿ ಹೋಗಿದ್ದವರು ಯಾರು? ನೀವೇ ಹೇಳಿ. ಇಲ್ಲವಾದರೆ ಅದೆಲ್ಲವನ್ನೂ ನಾನೇ ಬಿಚ್ಚಿ ಇಡಬೇಕಾಗುತ್ತದೆ. ನಾನು ಪದೇ ಪದೆ ಹೇಳುತ್ತಿದ್ದೇನೆ. ನಾನು ಯಾವುದೇ ಕುಟುಂಬಗಳನ್ನು ಹಾಳು ಮಾಡಿಲ್ಲ. ಬಿಜೆಪಿಯವರು ಎಷ್ಟು ಮನೆಗಳನ್ನು ಹಾಳು ಮಾಡಿದ್ದಾರೆ ಎಂಬುದು ನನಗೆ ಮಾತ್ರವಲ್ಲ ಇಡೀ ನಾಡಿಗೇ ಗೊತ್ತಿದೆ. ಅದಕ್ಕೆ ಹೇಳುತ್ತಿದ್ದೇನೆ, ನನ್ನ ವಿಷಯಕ್ಕೆ ಬರಬೇಡಿ. ಸಾಧ್ಯವಾದರೆ ನಾನು ಆರ್ ಎಸ್ ಎಸ್ ಬಗ್ಗೆ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡಿ. ಶಾಖೆಗಳಿಂದ ತರಬೇತಿ ಪಡೆದು ಬಂದಿದ್ದಿರಲ್ಲ, ನಿಮ್ಮದೆಲ್ಲ ಹೊರಗೆ ತೆಗೆದರೆ, ಸೂರ್ಯ ಚಂದ್ರರ ರೀತಿ ಬೆಳಗುತ್ತಿದೆ ಎಂದು ಆರ್ ಎಸ್ ಎಸ್ ಎಂದು ಹೇಳುತ್ತಿದ್ದೀರಿ ಅಲ್ಲವಾ, ಅದನ್ನು ಕತ್ತಲೆಗೆ ತಂದು ಬಿಡುತ್ತೀರಿ. ಹಾಗೆ ಆಗುವುದು ಬೇಡ ಎಂದು ತಿರುಗೇಟು ನೀಡಿದ್ದಾರೆ.

ಇದನ್ನು ಓದಿ: ಕುಮಾರಸ್ವಾಮಿ ದ್ವಿಪತ್ನಿತ್ವ (ಬೈಗಮಿ) ಬಗ್ಗೆ ವೈಯಕ್ತಿಕ ಟೀಕೆ ಮಾಡಿದ್ದ ಬಿಜೆಪಿ ವಿರುದ್ಧ ಕಿಡಿಕಾರಿದ ಟಿಎ ಶರವಣ

ಹೆಚ್ಡಿಕೆ ರಹಸ್ಯ ನನ್ನ ಬಳಿ ಇವೆ ಎಂದಿದ್ದ ಯತ್ನಾಳ್

ಸಿಂದಗಿ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರ ರಹಸ್ಯ ನನ್ನ ಬಳಿಯಲ್ಲಿದೆ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ (Siddaramaiah) ನವರ ಬಗ್ಗೆ ನಮಗೆಲ್ಲ ಗೊತ್ತಿದೆ. ಆ ಬಗ್ಗೆ ಮಾತನಾಡೋದು ಬೇಡ. ಮಾತನಾಡಿದರೆ ಬೇರೆ ಆಗುತ್ತೆ ಎಂದು ವಾಗ್ದಾಳಿ ನಡೆಸಿದರು.

ವೈಯಕ್ತಿಕ ವಿಚಾರ ಎತ್ತಿದ್ದ ಬಿಜೆಪಿ

ಬಿಜೆಪಿ ಟ್ವಿಟ್ಟರ್ ಪೇಜ್ ನಲ್ಲಿ ಕುಮಾರಸ್ವಾಮಿ ವಿರುದ್ಧ ವೈಯಕ್ತಿಕವಾಗಿ ಟೀಕೆ ಮಾಡಲಾಗಿತ್ತು. ಬೇರೆಯವರ ತಪ್ಪುಗಳ ಬಗ್ಗೆ ಮಾತನಾಡುವ ನೀವು ನಿಮ್ಮ ಬಗ್ಗೆ ಜಾಗರೂಕರಾಗಿರಬೇಕಲ್ಲವೇ, ನಿಮ್ಮ ಬಗ್ಗೆ ನೀವು ಆತ್ಮಾವಲೋಕನ ಮಾಡಿಕೊಳ್ಳಿ. ಸಿಗ್ನಲ್ ಜಂಪ್, ವಿಶ್ವಾಸ ದ್ರೋಹ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಇವೆಲ್ಲ ತಪ್ಪುಗಳನ್ನು ಮಾಡಿರುವ ನೀವು ಎಲ್ಲಕ್ಕಿಂತ ಮುಖ್ಯವಾಗಿ ಬೈಗಮಿ(ದ್ವಿ ಪತ್ನಿತ್ವ)ಯಲ್ಲವೇ ಎಂದು ಪ್ರಶ್ನೆ ಮಾಡಿ ಟೀಕಿಸಿತ್ತು.
Published by:HR Ramesh
First published: