ಬೆಳಗಾವಿ ರಾಜಕೀಯಕ್ಕೆ ತಲೆ ಹಾಕಿದರೆ 12 ಜನ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರ್ತಿವಿ; ವೇಣುಗೋಪಾಲ್​ಗೆ ರಮೇಶ್ ಜಾರಕಿಹೊಳಿ ಎಚ್ಚರಿಕೆ!

news18
Updated:September 2, 2018, 3:32 PM IST
ಬೆಳಗಾವಿ ರಾಜಕೀಯಕ್ಕೆ ತಲೆ ಹಾಕಿದರೆ 12 ಜನ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರ್ತಿವಿ; ವೇಣುಗೋಪಾಲ್​ಗೆ ರಮೇಶ್ ಜಾರಕಿಹೊಳಿ ಎಚ್ಚರಿಕೆ!
news18
Updated: September 2, 2018, 3:32 PM IST
ಚಿದಾನಂದ ಪಟೇಲ್, ನ್ಯೂಸ್ 18 ಕನ್ನಡ

ಬೆಳಗಾವಿ (ಸೆಪ್ಟೆಂಬರ್ 2): "ಬೆಳಗಾವಿ ವಿಚಾರಕ್ಕೆ ತಲೆ ಹಾಕಿದರೆ ನಾವು 12 ಜನ‌ ಶಾಸಕರು ರಾಜೀನಾಮೆ ಕೊಟ್ಟು ಬಿಜೆಪಿ ಸೇರುತ್ತೇವೆ ಹುಷಾರ್..!,"

ಹೀಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್​ಗೆ ಖಡಕ್ ಎಚ್ಚರಿಕೆ ನೀಡಿದವರು ಬೇರೆ ಯಾರೂ ಅಲ್ಲ ಕಾಂಗ್ರೆಸ್ ಸಚಿವ ರಮೇಶ್ ಜಾರಕಿಹೊಳಿ.

ಶಾಸಕಿ, ಬೆಳಗಾವಿ ಕಾಂಗ್ರೆಸ್​ ಮುಖಂಡೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಬ್ರದರ್ಸ್​ ನಡುವೆ ಭಿನ್ನಮತ ಭುಗಿಲೆದ್ದಿದ್ದು, ರಾಜೀ ಸಂಧಾನಕ್ಕಾಗಿ ಕೆ.ಸಿ.ವೇಣುಗೋಪಾಲ್ ಶನಿವಾರ ಕೆಪಿಸಿಸಿಯಲ್ಲಿ ಸಭೆ ನಡೆಸಿದ್ದರು. ಈ ವೇಳೆ ರಾಜ್ಯ ಉಸ್ತುವಾರಿ ಎದುರು ಏರು ದನಿಯಲ್ಲಿ ಮಾತನಾಡಿದ ರಮೇಶ್​ ಜಾರಕಿಹೊಳಿ, "ನೀವು ಲಕ್ಷ್ಮೀ ಪರವಾಗಿ ನಿಂತು, ಬೆಳಗಾವಿ ಪಾಲಿಟಿಕ್ಸ್‌ಗೆ ತಲೆ ಹಾಕಬೇಡಿ. ಒಂದು ವೇಳೆ ತಲೆ ಹಾಕಿದರೆ ಕಾಂಗ್ರೆಸ್​ಗೆ ನಾವು 12 ಜನ ಶಾಸಕರು ರಾಜೀನಾಮೆ ನೀಡಿ, ಬಿಜೆಪಿ ಸೇರುತ್ತೇವೆ," ಎಂದು ಎಚ್ಚರಿಕೆ ನೀಡಿದರು.

ರಮೇಶ್ ಎಚ್ಚರಿಕೆಯಿಂದ ದಂಗಾದ ಕೆಸಿವಿ, ಕೂಡಲೇ ಸಭೆ ಮೊಟಕುಗೊಳಿಸಿ, ಬೆಳಗಾವಿ ಕೈ ಕಿತ್ತಾಟ ಗಂಭೀರ ಸ್ವರೂಪದೆಂದು ರಾಹುಲ್ ಗಾಂಧಿಗೆ ವಿವರಣೆ ನೀಡಿದ್ದಾರೆ. ಆನಂತರ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ ಹೈಕಮಾಂಡ್​, ಬೆಳಗಾವಿ ಭಿನ್ನಮತ ಶಮನ ಮಾಡುವ ಜವಾಬ್ದಾರಿ ವಹಿಸಿದ್ದಾರೆ ಎಂದು ನ್ಯೂಸ್ ೧೮ ಕನ್ನಡಕ್ಕೆ ಕಾಂಗ್ರೆಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಲಕ್ಷ್ಮೀ ವಿಚಾರವಾಗಿ ಒಂದಾದ ಸಹೋದರರು
Loading...

ಪೂರ್ವ - ಪಶ್ಚಿಮದಂತಿದ್ದ ಸಹೋದರರು, ಸದಾ ಪರಸ್ಪರ ಕಾಲೆಳೆದುಕೊಳ್ಳುತ್ತಿದ್ದ ಜಾರಕಿಹೊಳಿ ಬ್ರದರ್ಸ್​ ಒಬ್ಬ ಮಹಿಳೆಯ ರಾಜಕಾರಣಕ್ಕೆ ಬೇಸತ್ತು ಒಂದಾಗಿ ಬಿಟ್ಟಿದ್ದಾರೆ. ಮೊದಲ ಬಾರಿಗೆ ಶಾಸಕಿಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಹಿಡಿತಕ್ಕೆ ತೆಗೆದುಕೊಳ್ಳುವ ತಂತ್ರ ಹೆಣೆದಿರುವ ಕಾರಣಕ್ಕೆ  ಹಾವು, ಮುಂಗೂಸಿಯಂತಿದ್ದ ಸತೀಶ್, ರಮೇಶ್ ಜಾರಕಿಹೊಳಿ ಒಂದಾಗಿದ್ದಾರೆ ಎನ್ನಲಾಗುತ್ತಿದೆ.

ಲಕ್ಷ್ಮೀ ಜೊತೆ ವೇಣುಗೋಪಾಲ್ ಪ್ರತ್ಯೇಕವಾಗಿ ಮಾತುಕತೆ

ಲಕ್ಷ್ಮೀ ಹೆಬ್ಬಾಳ್ಕರ್​ ಜತೆ ಕೆ.ಸಿ. ವೇಣುಗೋಪಾಲ್​ ಕೆಪಿಸಿಸಿ ಕಚೇರಿಯಲ್ಲಿ ಸತತ ಒಂದು ಗಂಟೆಗೂ ಹೆಚ್ಚುಕಾಲ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ
ಜಾರಕಿಹೊಳಿ ಸಹೋದರರ ಬಗ್ಗೆ ಲಕ್ಷ್ಮೀ ಅಸಮಾದಾನ ವ್ಯಕ್ತಪಡಿಸಿದ್ದು, ಇಬ್ಬರಿಂದ ತನಗೆ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

"ತಾ.ಪಂ., ಜಿ.ಪಂ., ಪಿಎಲ್​ಡಿ ಬ್ಯಾಂಕ್​ ಚುನಾವಣೆ ಸೇರಿ ಪ್ರತಿ ಹಂತದಲ್ಲೂ ನನ್ನ ಕ್ಷೇತ್ರದ ಆಡಳಿತದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಲಾಗುತ್ತಿದೆ. ನನಗೆ ನೆಮ್ಮದಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ವಿಧಾನ ಸಭಾ ಚುನಾವಣೆಗೂ ಮೊದಲು ರಮೇಶ್​ ಜಾರಕಿಹೊಳಿ ಚೆನ್ನಾಗಿದ್ದರು. ಚುನಾವಣೆ ಬಳಿಕ ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೆ ರಮೇಶ್,​ ಸತೀಶ್​ ಒಂದಾಗಿ ತೊಂದರೆ ಕೊಡುತ್ತಿದ್ದಾರೆ ನನ್ನ ಕ್ಷೇತ್ರದ ಅಧಿಕಾರಿಗಳ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಜಲ ಸಂಪನ್ಮೂಲ, ಕಂದಾಯ, ಲೋಕೋಪಯೋಗಿ ಸೇರಿ ಹಲವು ಇಲಾಖೆಗಳಲ್ಲಿ ಅಧಿಕಾರಿಗಳನ್ನು ತಮ್ಮ ಇಷ್ಟದಂತೆ ನೇಮಿಸಿಕೊಳ್ಳುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಸುಮಾರು 8 ಜಿಲ್ಲಾ ಪಂಚಾಯಿತ್ ಕ್ಷೇತ್ರಗಳು ಇವೆ, ಸತೀಶ್​ ಕ್ಷೇತ್ರದಲ್ಲಿ ಕೇವಲ 2 ಕ್ಷೇತ್ರಗಳು ಬರುತ್ತವೆ. ಹೀಗಿದ್ದರೂ ಸಹ ಅಧಿಕಾರಿಗಳನ್ನು ಅವರೇ ನೇಮಿಸಿಕೊಳ್ಳುತ್ತಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಜಾರಕಿಹೋಳಿ ಸಹೋದರರು ಅನಗತ್ಯವಾಗಿ ಮೂಗು ತೂರಿಸದಂತೆ ಬುದ್ದಿ ಹೇಳಿ," ಎಂದು ಲಕ್ಷ್ಮೀ ಹೆಬ್ಬಾಳ್ಕರ್​ ಅವಲತ್ತುಗೊಂಡಿದ್ದಾರೆ. ಎಲ್ಲಾ ಸಮಸ್ಯೆ ಬಗೆಹರಿಸುವುದಾಗಿ ಲಕ್ಷ್ಮೀಗೆ ವೇಣುಗೋಪಾಲ್‌ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...