ರಾಮನಗರ (ಜು.23): ಕನಕಪುರದ ಕೆಡಿಪಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಅಧಿಕಾರಿಗಳನ್ನು ತೆಗೆದುಕೊಂಡ್ರು ಇದೇ ವೇಳೆ ಮತ್ತೆ ಸಿಎಂ ಆಗೋ ಆಸೆ ವ್ಯಕ್ತಪಡಿಸಿಕೊಂಡಿದ್ದಾರೆ. ನೀವೆಲ್ಲಾ ನನ್ನ ಜೊತೆ ಇದ್ರೆ ಮುಖ್ಯಮಂತ್ರಿ ಆಗೋದು ನಾನೇ ಎಂದು ಹೇಳಿದ್ದಾರೆ. ಎಲೆಕ್ಷನ್ (Election) ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ನಲ್ಲಿ (Congress) ಸಿಎಂ ಕಿತ್ತಾಟ ಜೋರಾಗಿದೆ. ನಾನೇ ಸಿಎಂ, ನಾನೇ ಸಿಎಂ ಎನ್ನುವ ನಾಯಕರ ಸಂಖ್ಯೆ ಹೆಚ್ಚಾಗಿದೆ. ಸಭೆಯಲ್ಲಿ ರೈತರ ಸಮಸ್ಯೆಗಳನ್ನು (Farmer Problem) ಆಲಿಸಿದ ಡಿ.ಕೆ ಶಿವಕುಮಾರ್, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಧಿಕಾರಿಗಳಿಗೆ ಡಿಕೆ ಶಿವಕುಮಾರ್ ಕ್ಲಾಸ್
ಜಮೀನು ಪೋಡಿ, ಖಾತೆ ಮಾಡಿಸಲು 50-60 ಸಾವಿರ ಹಣ ನೀಡಬೇಕು. ಇಲ್ಲವಾದರೆ ನಮ್ಮ ಕೆಲಸ ಮಾಡಲ್ಲ ಎಂದು ರೈತನೊಬ್ಬ ಆರೋಪಿಸಿದ್ದಾನೆ. ನಮ್ಮ ಫೈಲ್ ಎಲ್ಲರೂ ಟೇಬಲ್ನಲ್ಲೇ ಇಟ್ಟುಕೊಳ್ಳುತ್ತಾರೆ ಕೆಲಸ ಮಾಡಲ್ಲ ಎಂದ್ರು. ಈ ವಿಚಾರಕ್ಕೆ ಎಡಿಎಲ್ಆರ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೋರಾಗಿ ಮಾತಾಡಯ್ಯ, ದುಡ್ಡು ಇಸ್ಕೋಳ್ಳುವಾಗ ಮೆತ್ತಗೆ ಮಾತನಾಡುತ್ತೀರಾ? ಕನಕಪುರ ಎಡಿಎಲ್ಆರ್ ಗಂಗಾಧರ್ಗೆ ಕ್ಲಾಸ್ ತೆಗೆದುಕೊಂಡ್ರು.
MP, MLCಗೆ ಎಷ್ಟು ಕೊಡ್ತಿದ್ದಿಯಾ?
ಯಾವ ಯಾವ ಡಿಪಾರ್ಟ್ಮೆಂಟ್ ನಲ್ಲಿ ಏನ್ ನಡೆಯುತ್ತಿದೆ ಅಂತ ನನಗೆ ಗೊತ್ತಿದೆ. ಪೋಡಿ ಮಾಡುವುದರಲ್ಲಿ ನನಗೆ ಎಷ್ಟು ಕಮೀಷನ್, MP, MLC ಗೆ ಎಷ್ಟು ನೀಡುತ್ತಿದ್ದೀಯಾ ಹೇಳಪ್ಪ ಎಂದ ಡಿ.ಕೆ ಶಿವಕುಮಾರ್, ಎಂಪಿಗೆ ಹಣ ನೀಡಬೇಕು ಇಲ್ಲ ಅಂದ್ರೆ ಬೂಟ್ ಕಾಲಿನಲ್ಲಿ ಹೊದಿತ್ತಾರೆ ಅಂತ ಹೇಳ್ತಾರೆ ಅಧಿಕಾರಿಗಳು ಎಂದು ರೈತರು ಆರೋಪಿಸಿದ್ದಾರೆ.
ಇದನ್ನೂ ಓದಿ: Karnataka Politics: ಜಮೀರ್ ಅಹ್ಮದ್ಖಾನ್ ನಮ್ಮ ಪಕ್ಷದ ಬಾಹುಬಲಿ; ಸತೀಶ್ ಜಾರಕಿಹೊಳಿ
ನಮಗೆ ಎಷ್ಟು ಹಣ ನೀಡುತ್ತಿದ್ದೀರಾ ಹೇಳಿ?
ಆದ್ರೆ ಎಂಪಿ ಕನಕಪುರದಲ್ಲಿ 10 ರೂ. ಹಣ ಪಡೆಯೊಲ್ಲ. ಆದ್ರೆ ನಿಮ್ಮ ಬಗ್ಗೆ ನನಗೆ ಗೊತ್ತಿಲ್ಲ ಎಂದ ರೈತ, ಈ ವೇಳೆ ಮುಗುಳ್ನಗೆ ಬೀರಿದ ಡಿಕೆಶಿ, ಈ ತಾಲೂಕಿನಲ್ಲಿ ನಾನು, ಅನಿತಾ ಕುಮಾರಸ್ವಾಮಿ ಇಬ್ಬರು ಶಾಸಕರಿದ್ದೇವೆ. ನಮಗೆ ಎಷ್ಟು ಹಣ ನೀಡುತ್ತಿದ್ದೀರಾ ಹೇಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.
ಫೋಟೋ ಹಾಕಿಸಿ ಹೂವಿನ ಹಾರ ಹಾಕ್ರಿ
ಎಸಿ ಮಂಜುನಾಥ್ ನಿಮ್ಮ ಹಣೆಬರಹ ಕೇಳಿಕೊಳ್ಳುತ್ತಿದ್ದೀರಾ? ನಿಮ್ಮ ತಿಂಗಳ ಇನ್ಕಮ್ 10 ಲಕ್ಷ ಇದೆಯಾ? ನಿಮ್ಮ ಡಿಡಿಎಲ್ಆರ್ ಫೋಟೋ ಇದೆಯಾ? ರೀ ತಹಶೀಲ್ದಾರರೇ ಫೋಟೋ ಹಾಕಿಸಿ ಹೂವಿನ ಹಾರ ಹಾಕ್ರಿ, ಯಾವುದ್ದಕ್ಕೆ ಎಷ್ಟು ಲಂಚ ಕೊಡಬೇಕು ಅಂತ ರೇಟ್ ಫಿಕ್ಸ್ ಮಾಡಿ ಬೋರ್ಡ್ ಹಾಕಿ, ನಮಗೆ ಏನಾದ್ರೂ ಕೊಡುತ್ತಿದ್ದರೆ ಅದನ್ನೂ ಹಾಕಿ. ನಾನು ಬೆಂಗಳೂರಿನಲ್ಲಿ ಕೆಲಸ ಅಂತ ಹೋದ್ರೆ ಇಲ್ಲಿ ಆಗಿದೆ.
ಇದನ್ನೂ ಓದಿ: H D Kumaraswamy: ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆಗೆ ಸಿದ್ಧತೆ; ಯಾವಾಗ ಎಲೆಕ್ಷನ್ ಬಂದ್ರು ನಾವ್ ರೆಡಿ
ಅಶ್ವತ್ಥ್ ನಾರಾಯಣ ವಿರುದ್ಧ MLC ರವಿ ತಿರುಗೇಟು
ಸಚಿವ ಆರ್.ಆಶೋಕ್ ಗೆ ಪೋಸ್ಟಿಂಗ್ಸ್ ಗೆ ಹಣ ಕೊಟ್ಟು ಬಂದಿದ್ದೇವೆ ಅದಕ್ಕೆ ಹಣ ಪಡೆಯುತ್ತಿದ್ದೇವೆ ಅಂತಾರೆ ಅಲ್ಲದೇ ಅಶ್ವತ್ಥ್ ನಾರಾಯಣ್ ಗೆ ಕೊಡಬೇಕು ಅಂತಾರೆ ಎಂದು ಬಿಜೆಪಿ ಸಚಿವರಿಗೆ ಎಎಲ್ಸಿ ರವಿ ತಿರುಗೇಟು ನೀಡಿದ್ರು. ಪೋಸ್ಟಿಂಗ್ಸ್ ರೇಟ್ ಜಾಸ್ತಿ ಆಗಿದೆ ಅಂತ ಜನರ ಬಳಿ ವಸೂಲಿಗೆ ಬಿದ್ರೆ ಹೇಗಪ್ಪಾ, ಕನಕಪುರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಸರ್ವೆ ಡಿಪಾಟ್ಮೆಂಟ್ ಅದ್ವಾನ ಆಗಿದೆ. VAಗಳನ್ನ ನಿಂಯತ್ರಣ ಮಾಡೋದು ಕಷ್ಟ ಆಗುತ್ತಿದೆ. ಕನಕಪುರದ ಕೆಡಿಪಿ ಸಭೆಯಲ್ಲಿ ಡಿ.ಕೆ ಶಿವಕುಮಾರ್, ಎಂ.ಎಲ್.ಸಿ ರವಿ ವಾಗ್ದಾಳಿ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ