HOME » NEWS » State » IF WILL TRY TO STOP PROTEST THEN GOVERNMENT WILL BE TAKE WHOLE RESPONSIBILITY SAYS KURUBURU SHANTAKUMAR PMTV LG

ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿದರೆ ಅದು ದೇಶಕ್ಕೆ ಮಾಡುವ ಅಪಮಾನ; ಕುರುಬೂರು ಶಾಂತಕುಮಾರ್

ರೈತರಿಗೆ ಶಾಂತಿಯುತವಾಗಿ ಪ್ರತಿಭಟನೆ ಮಾಡುವುದಕ್ಕೆ ಅವಕಾಶ ಕೊಡಬೇಕಾಗಿದೆ. ಇಲ್ಲವಾದರೆ ಪ್ರತಿಭಟನೆ ವೇಳೆ ಆಗುವ ಪರಿಣಾಮಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ. ಈ ಪ್ರತಿಭಟನೆಯಿಂದಾದರೂ ಸರ್ಕಾರ ಕಾಯ್ದೆಗಳನ್ನ ವಾಪಸ್‌ ಪಡೆಯಲಿ ಅನ್ನೋ ಮನವಿಯನ್ನ ರಾಜ್ಯ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾಡಿದರು.

news18-kannada
Updated:January 25, 2021, 7:17 AM IST
ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿದರೆ ಅದು ದೇಶಕ್ಕೆ ಮಾಡುವ ಅಪಮಾನ; ಕುರುಬೂರು ಶಾಂತಕುಮಾರ್
ಕುರುಬೂರು ಶಾಂತಕುಮಾರ್
  • Share this:
ಮೈಸೂರು(ಜ.25): ಕಳೆದ 55ಕ್ಕೂ ಹೆಚ್ಚು ದಿನದಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನ ಬೆಂಬಲಿಸಿ ರಾಜ್ಯದಲ್ಲಿ ಬೃಹತ್ ರೈತರ ಗಣರಾಜ್ಯೋತ್ಸವ ರ್ಯಾಲಿ ನಡೆಯಲಿದ್ದು, ಜನವರಿ 26ರಂದು ದೆಹಲಿ ರೈತರ ಮಾದರಿಯಲ್ಲೆ ಟ್ರಾಕ್ಟರ್ ರ್ಯಾಲಿ ನಡೆಲಿ ರಾಜ್ಯದ ಅನ್ನದಾತರು ಸಜ್ಜಾಗಿದ್ದಾರೆ. ಇದಕ್ಕಾಗಿ ಸಕಲ ಸಿದ್ದತೆ ಮಾಡಿಕೊಂಡಿರುವ ರೈತರ ಸಂಘಟನೆಗಳು ಗಣರಾಜ್ಯೋತ್ಸವದ ದಿನದಂದು ಬೆಳಗ್ಗೆ 12 ಗಂಟೆ ಇಡೀ ಬೆಂಗಳೂರಿನ ಎಲ್ಲ ಮೂಲೆಗಳಿಂದ ನಗರಪ್ರದೇಶಕ್ಕೆ ಲಗ್ಗೆಇಟ್ಟು ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ಮಾಡಲಿದ್ದಾರೆ. ಕರ್ನಾಟಕರ ರಾಜ್ಯ ರೈತ ಸಂಘ, ಹಸಿರು ಸೇನೆ, ಐಕ್ಯ ಹೋರಾಟ ಸಮಿತಿ, ದಲಿತ ಸಂಘಟನೆಗಳು, ಹಾಗೂ ಕಾರ್ಮಿಕ ಸಂಘಟನೆಗಳು ನಾಳಿನ ರ್ಯಾಲಿಗೆ ಬೆಂಬಲ ಸೂಚಿಸಿವೆ. ಹೋರಾಟದ ತೀವ್ರತೆ ಹೆಚ್ಚಿಸಲು ರಾಜ್ಯಾಧ್ಯಂತ ರೈತರಿಗೆ ಕರೆ ನೀಡಲಾಗಿದ್ದು ಬರೋಬ್ಬರಿ 25 ಸಾವಿರ ರೈತರು ನಾಳಿನ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. 

ಇನ್ನು ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆಯುವ ರೈತರ ರ್ಯಾಲಿಗೆ ಕರ್ನಾಟಕದ ರೈತರು ಸಾಂಕೇತಿಕವಾಗಿ ಭಾಗಿಯಾಗಲಿದ್ದಾರೆ. ಕರ್ನಾಟಕದಿಂದ ದೆಹಲಿಗೆ ರೈಲು ಪ್ರಯಾಣ ರದ್ದಾಗಿದ್ದು, ಎಲ್ಲರೈ ವಿಮಾನದಲ್ಲಿ ಹೋಗಲು ಸಾಧ್ಯವಿಲ್ಲ. ಹಾಗಾಗಿ ಸಾಂಕೇತಿಕ ಕೆಲ ರೈತರು ಕರ್ನಾಟಕದ ಪರವಾಗಿ ಹೋರಾಟದಲ್ಲಿ ಭಾಗವಹಿಸುತ್ತಾರೆ. ಆದ್ರೆ ಉಳಿದೆಲ್ಲ ರೈತರು ಹಾಗೂ ರೈತ ಮುಖಂಡರುಗಳು, ಪ್ರತಿಭಟನೆಯ ಬೆಂಬಲವಾಗಿ ಜ.26ರಂದು ಬೆಂಗಳೂರಿನಲ್ಲಿ ಬೃಹತ್ ‌‌ರ್ಯಾಲಿ ನಡೆಸುತ್ತೇವೆ ಅಂತ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಹೇಳಿದ್ದಾರೆ.

ಕೊರೋನಾ ಟೈಮ್​ನಲ್ಲಿ ಸಾರಿಗೆ ಸಂಸ್ಥೆಗೆ 4 ಸಾವಿರ ಕೋಟಿ ನಷ್ಟ; ಸಾರಿಗೆ ಸಚಿವ ಲಕ್ಷ್ಮಣ ಸವದಿ

ಗಣರಾಜ್ಯೋತ್ಸವ ಧ್ವಜಾರೋಹಣ ಮುಗಿದ ಮೇಲೆ ನಾವು ರ್ಯಾಲಿ ಮಾಡುತ್ತೇವೆ. ಟ್ರಾಕ್ಟರ್, ಬೈಕ್, ಜೀಪ್, ಎತ್ತಿನಗಾಡಿ ಮೂಲಕ ರ್ಯಾಲಿ ಮಾಡಿ, ಅಂತಿಮವಾಗಿ  ಸ್ವಾತಂತ್ರ್ಯ ಉದ್ಯಾನವನದಲ್ಲಿ ಭಾರತದ ಧ್ವಜಕ್ಕೆ ಗೌರವ ಸಲ್ಲಿಸಲು ತೀರ್ಮಾನ ಮಾಡಿದ್ದೇವೆ. ಇದಕ್ಕಾಗಿ 25 ಸಾವಿರ ವಾಹನಗಳು‌ ನಾಳಿದ್ದು ಬೆಂಗಳೂರು ನಗರಕ್ಕೆ ಲಗ್ಗೆ ಇಡಲಿದ್ದು, ಸರ್ಕಾರ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅವಕಾಶ ಕೊಡಬೇಕು ಅಂತ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರ 11 ಬಾರಿ ಮಾತುಕತೆ ನಡೆಸಿ ರೈತರ ಜೊತೆ ಸಂಧಾನ ನಡೆಸಲು ಸಾಧ್ಯವಾಗಿಲ್ಲ, ಕಾಯ್ದೆಗಳನ್ನ ಸಂಪೂರ್ಣವಾಗಿ ವಾಪಸ್‌ ಪಡೆಯಲು ಸರ್ಕಾರ ನಿರ್ಧಾರ ಮಾಡಿದರೆ ಮಾತ್ರ ಈ ಹೋರಾಟ ನಿಲ್ಲೋದು, ಇದಕ್ಕಾಗಿ ದೇಶಾದ್ಯಂತ ಇಂದು ಪ್ರತಿಭಟನೆಗಳು ನಡೆಯುತ್ತಿದ್ದು, ರಾಜ್ಯದಲ್ಲಿ ಅಂತದ್ದೆ ಪ್ರತಿಭಟನೆಯೊಂದು ನಡೆಯಲಿದೆ. ಈ ಪ್ರತಿಭಟನೆಯಲ್ಲಿ ರೈತರೆಲ್ಲರೂ ಭಾರತದ ತ್ರಿವರ್ಣ ಧ್ವಜ ಹಿಡಿದು ಹೋರಾಟ ಮಾಡುತ್ತಾರೆ. ಹಾಗೇನಾದರೂ ಹೋರಾಟವನ್ನ ಹತ್ತಿಕ್ಕುವ ಅಥವಾ ರೈತರನ್ನ ತಡೆಯುವ ಕೆಲಸ ಮಾಡಿದರೆ ಅದು ದೇಶಕ್ಕೆ ಮಾಡುವ ಅಪಮಾನ ಆಗುತ್ತದೆ ಎಂದರು.

ನಾವು ಬೆಂಗಳೂರಿನ ನಗರದ ಜನತೆಗೂ ತೊಂದರೆಯಾಗದಂತೆ ಪ್ರತಿಭಟನೆ ಮಾಡುತ್ತೇವೆ. ಆದರೆ ಸರ್ಕಾರ ಹಾಗೂ ಪೊಲೀಸರು ರೈತರಿಗೆ ಶಾಂತಿಯುತವಾಗಿ ಪ್ರತಿಭಟನೆ ಮಾಡುವುದಕ್ಕೆ ಅವಕಾಶ ಕೊಡಬೇಕಾಗಿದೆ. ಇಲ್ಲವಾದರೆ ಪ್ರತಿಭಟನೆ ವೇಳೆ ಆಗುವ ಪರಿಣಾಮಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ. ಈ ಪ್ರತಿಭಟನೆಯಿಂದಾದರೂ ಸರ್ಕಾರ ಕಾಯ್ದೆಗಳನ್ನ ವಾಪಸ್‌ ಪಡೆಯಲಿ ಅನ್ನೋ ಮನವಿಯನ್ನ ರಾಜ್ಯ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾಡಿದರು.
Published by: Latha CG
First published: January 25, 2021, 7:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories