HOME » NEWS » State » IF THE PRIME MINISTER HAS RESPECT FOR THE FARMERS LET HIM HOLD A SEPARATE MEETING HD KUMARASWAMY ZP

ಪ್ರಧಾನ ಮಂತ್ರಿಗೆ ರೈತರ ಬಗ್ಗೆ ಗೌರವವಿದ್ದರೆ ಪ್ರತ್ಯೇಕ ಸಭೆ ನಡೆಸಲಿ: ಹೆಚ್.ಡಿ.ಕುಮಾರಸ್ವಾಮಿ

ತಾಲೂಕು ಮುಖಂಡರು, ಕಾರ್ಯಕರ್ತರ ಜೊತೆಗೆ ಮಾತನಾಡಿದ ಹೆಚ್ಡಿಕೆ, ಕ್ಷೇತ್ರದ ಯಾವುದೇ ಕೆಲಸವಿರಲಿ ನನ್ನ ಗಮನಕ್ಕೆ ತನ್ನಿ. ನಾನು ಕ್ಷೇತ್ರದ ಅಭಿವೃದ್ಧಿ ಮಾಡಲು ಉತ್ಸುಕನಾಗಿದ್ದೇನೆ.

news18-kannada
Updated:February 7, 2021, 10:20 PM IST
ಪ್ರಧಾನ ಮಂತ್ರಿಗೆ ರೈತರ ಬಗ್ಗೆ ಗೌರವವಿದ್ದರೆ ಪ್ರತ್ಯೇಕ ಸಭೆ ನಡೆಸಲಿ: ಹೆಚ್.ಡಿ.ಕುಮಾರಸ್ವಾಮಿ
ಹೆಚ್​.ಡಿ ಕುಮಾರಸ್ವಾಮಿ
  • Share this:
ರಾಮನಗರ (ಫೆ.7) :  ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ‌.ಕುಮಾರಸ್ವಾಮಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಉದ್ಘಾಟನಾ ಸಮಾರಂಭದಲ್ಲಿಯೂ ಭಾಗವಹಿಸಿದ್ದರು‌. ಈ  ಸಂದರ್ಭದಲ್ಲಿ ಮಾತನಾಡಿದ ಹೆಚ್ಡಿಕೆ ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ರಾಜಕೀಯ ವಿಚಾರಕ್ಕೆ ಪ್ರತಿಕ್ರಿಯಿಸಿ ನಾನು ಸೂಕ್ಷ್ಮವಾಗಿ ಎಲ್ಲವನ್ನು ಗಮನಿಸುತ್ತಿದ್ದೇನೆ, ಧಾರ್ಮಿಕ ಗುರುಗಳೇ ಸಮಾಜದ ಪರವಾಗಿ ಹೋರಾಟಕ್ಕಿಳಿದಿದ್ದಾರೆ. ಹಾಗಾಗಿ ಇದು ದಾರಿತಪ್ಪುವ ಮುನ್ನ ಸರ್ಕಾರ ಎಚ್ಚರಿಕೆ ವಹಿಸಬೇಕು‌.ಧಾರ್ಮಿಕ ಗುರುಗಳ ಭಾವನೆಗೂ ಸರ್ಕಾರ ಗೌರವ ಕೊಡಬೇಕು ಆ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮವಹಿಸಬೇಕಿದೆ ಎಂದರು.

ಇನ್ನು ಬಿಜೆಪಿ - ಜೆಡಿಎಸ್ ಮೈತ್ರಿ ವಿಚಾರಕ್ಕೆ ಮಾತನಾಡಿದ ಹೆಚ್ಡಿಕೆ, ಅದು ಸಭಾಪತಿ ಸ್ಥಾನಕ್ಕಾಗಿ ಮೈತ್ರಿಯಾಗಿದ್ದೇವೆ. ಅದನ್ನ ಬಿಟ್ಟು ಬೇರೆ ರೀತಿ ಹೊಂದಾಣಿಕೆ ಇಲ್ಲ. ನಾವು ವಿಷಯಾಧಾರಿತವಾಗಿ, ರಾಜ್ಯದ ಅಭಿವೃದ್ಧಿಗಾಗಿ ಮೈತ್ರಿಯಾಗುತ್ತೇವೆ. ಜನವಿರೋಧಿ ನೀತಿಗಳ ವಿರುದ್ಧ ಎಂದಿಗೂ ರಾಜೀ ಇಲ್ಲ ಎಂದರು.

ಇದೇ ಸಂದರ್ಭದಲ್ಲಿ ದೆಹಲಿಯಲ್ಲಿನ ರೈತರ ಹೋರಾಟ ವಿಚಾರಕ್ಕೆ ಮಾತನಾಡಿದ ಹೆಚ್ಡಿಕೆ, ಪ್ರಧಾನಮಂತ್ರಿಗೆ ರೈತರ ಬಗ್ಗೆ ಗೌರವ ಇದ್ದರೆ ಅವರನ್ನ ಕರೆದು ಸಭೆ ಮಾಡಬೇಕಿತ್ತು. ಕೃಷಿ ಮಂತ್ರಿಯನ್ನ ಬಿಟ್ಟು ಸಭೆ ಮಾಡಿಸುವ ಬದಲು ಇವರೇ ಸಭೆ ಮಾಡಲಿ. ಅವರ ಕಾಯ್ದೆಗಳಿಂದ ರೈತರಿಗೆ ಅನುಕೂಲ ಏನು ಎಂದು ತಿಳಿಸಲಿ. ರೈತರ ಗೊಂದಲಗಳಿಗೆ ಮನವರಿಕೆ ಮಾಡಲಿ. ಈಗ ರೈತರು ಮುಂದಿನ ಅಕ್ಟೋಬರ್‌ವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದಿದ್ದಾರೆ.

ಕಳೆದ 70 ದಿನಕ್ಕೂ ಹೆಚ್ಚು ದಿನಗಳಿಂದ ದೆಹಲಿಯಲ್ಲಿ ಹೋರಾಟ ಮಾಡ್ತಿದ್ದಾರೆ. ಹಾಗಾಗಿ ದೇಶದಲ್ಲಿ ಶಾಂತಿ ಕಾಪಾಡಲು ಪ್ರಧಾನಮಂತ್ರಿ ಕ್ರಮವಹಿಸಬೇಕು, ಇದು ಸೂಕ್ತ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದರು.

*ಗೌಡಗೆರೆ ಬಸಪ್ಪನಿಂದ ಮಾಜಿ ಸಿಎಂ ಹೆಚ್ಡಿಕೆಗೆ ಆರ್ಶೀವಾದ*
ಚಾಮುಂಡೇಶ್ವರಿ ತಾಯಿಯ ಭಾರತದ ಅತಿ ಎತ್ತರದ ಮೂರ್ತಿಯನ್ನ ಚನ್ನಪಟ್ಟಣದ ಗೌಡಗೆರೆಯಲ್ಲಿ ಸ್ಥಾಪನೆ ಮಾಡಲಾಗ್ತಿದೆ. ಧರ್ಮದರ್ಶಿಗಳಾದ ಮಲ್ಲೇಶ್ ರವರು ಈ ಕಾರ್ಯವನ್ನ ಮಾಡ್ತಿದ್ದಾರೆ. ಈ ಹಿನ್ನೆಲೆ ದೇವಸ್ಥಾನಕ್ಕೆ ಭೇಟಿ ಕೊಟ್ಟ ಹೆಚ್ಡಿಕೆ ದೇವಸ್ಥಾನದ ಬಸಪ್ಪನ ಆರ್ಶೀವಾದ ಪಡೆದರು.

ಈ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ಕುಮಾರಸ್ವಾಮಿ ದೇವಸ್ಥಾನ ತುಂಬಾ ಅದ್ಭುತವಾಗಿ ನಿರ್ಮಾಣವಾಗ್ತಿದೆ. ತಾಯಿಯ ಮೂರ್ತಿಯೂ ಸಹ ಉತ್ತಮವಾಗಿ ಮೂಡಿ ಬರುತ್ತಿದೆ. ದೇವಸ್ಥಾನದ ಧರ್ಮದರ್ಶಿಗಳಾದ ಮಲ್ಲೇಶ್ ರವರಿಗೆ ಶುಭವಾಗಲಿ ಎಂದು ಹೆಚ್ಡಿಕೆ ಅಭಿಪ್ರಾಯಪಟ್ಟರು.
Youtube Video

ಇದೇ ಸಂದರ್ಭದಲ್ಲಿ ತಾಲೂಕು ಮುಖಂಡರು, ಕಾರ್ಯಕರ್ತರ ಜೊತೆಗೆ ಮಾತನಾಡಿದ ಹೆಚ್ಡಿಕೆ, ಕ್ಷೇತ್ರದ ಯಾವುದೇ ಕೆಲಸವಿರಲಿ ನನ್ನ ಗಮನಕ್ಕೆ ತನ್ನಿ. ನಾನು ಕ್ಷೇತ್ರದ ಅಭಿವೃದ್ಧಿ ಮಾಡಲು ಉತ್ಸುಕನಾಗಿದ್ದೇನೆ. ಪಕ್ಷವನ್ನ ಮತ್ತು ಕಾರ್ಯಕರ್ತರನ್ನ ಉಳಿಸಲು ನಾನು ಸದಾ ಸಿದ್ಧನಿದ್ದೇನೆ. ಹಾಗಾಗಿ ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷವನ್ನ ಸದ್ಱಢವಾಗಿ ಕಟ್ಟಿ ಎಂದು ಮನವಿ ಮಾಡಿದರು.

ವರದಿ : ಎ.ಟಿ‌.ವೆಂಕಟೇಶ್
Published by: zahir
First published: February 7, 2021, 10:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories