ಪ್ರಧಾನಿ ನರೇಂದ್ರ ಮೋದಿ ಕೇವಲ ಬುದ್ಧಿವಂತರಾದರೆ ಸಾಲದು- ಹೃದಯವಂತರಾಗಬೇಕು ; ತೋಂಟದಾರ್ಯ ಶ್ರೀ

ಮಹದಾಯಿ ವಿಚಾರವನ್ನು ಪ್ರಧಾನಿಯವರು ನ್ಯಾಯಾಲಯದ ಹೊರಗೆ ಇಟ್ಟು ಇತ್ಯರ್ಥ ಪಡಿಸಬೇಕು ರಾಜ್ಯಕ್ಕೆ ಅನ್ಯಾಯವಾದ ಸಂದರ್ಭದಲ್ಲಿ ಈ ಹಿಂದೆ ನಟ ಅಂಬರೀಶ್ ರಾಜೀನಾಮೆ ನೀಡಿದ್ದರು. ಅದೇ ರೀತಿಯ ರಾಜ್ಯದ 25 ಸಂಸದರು ಅಗತ್ಯ ಬಿದರೆ ರಾಜೀನಾಮೆ ನೀಡಲು ಮುಂದಾಗಬೇಕು

news18-kannada
Updated:January 10, 2020, 6:03 PM IST
ಪ್ರಧಾನಿ ನರೇಂದ್ರ ಮೋದಿ ಕೇವಲ ಬುದ್ಧಿವಂತರಾದರೆ ಸಾಲದು- ಹೃದಯವಂತರಾಗಬೇಕು ; ತೋಂಟದಾರ್ಯ ಶ್ರೀ
ಚಿಂತನ ಸಭೆ
  • Share this:
ಬೆಳಗಾವಿ(10) : ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಅನಗತ್ಯ ಕ್ಯಾತೆ. ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ. ಈ ಎರಡು ವಿಚಾರಗಳ ಬಗ್ಗೆ ಮುಂದಿನ ಹೋರಾಟ ಸರ್ಕಾರ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಇಂದು ಬೆಳಗಾವಿಯಲ್ಲಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ಚಿಂತನ ಸಭೆಯಲ್ಲಿ ಆಯೋಜಿಸಲಾಗಿತ್ತು.

ಸಭೆಯಲ್ಲಿ ತೋಂಟದಾರ್ಯ ಮಠದ  ಡಾ. ಸಿದ್ದರಾಮ ಸ್ವಾಮಿಜಿಗಳ ನೇತೃತ್ವದಲ್ಲಿ 10ಕ್ಕೂ ವಿವಿಧ ಮಠಾಧೀಶರು ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡರು, ರೈತ ಹೋರಾಟಗಾರರ ಚಿಂತನ ಸಭೆಯಲ್ಲಿ ಪಾಲ್ಗೊಂಡಿದ್ದರು. ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸಭೆಗೆ ಅವಕಾಶ ನಿರಾಕರಿಸಲಾಗಿತ್ತು.

ಸಭೆಯಲ್ಲಿ ಮಾತನಾಡಿದ ತೋಂಟದಾರ್ಯ ಮಠದ ಡಾ. ಸಿದ್ದರಾಮ ಸ್ವಾಮಿಜಿ, ಪ್ರಧಾನಿ ನರೇಂದ್ರ ಮೋದಿಯವರು ಬುದ್ದಿವಂತರು. ಕೇವಲ ಬುದ್ದಿವಂತಿಕೆಯಿಂದ ಜನರ ಮನಸ್ಸಿನಲ್ಲಿ ಉಳಿಯಲು ಸಾಧ್ಯವಿಲ್ಲ. ಅದರ ಜತೆಗೆ ಹೃಯವಂತಿಕೆ ಬೇಕು ಆಗ ಮಾತ್ರ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಸಲು ಸಾಧ್ಯ ಎಂದರು.

ಮಹಾರಾಷ್ಟ್ರ ಸರ್ಕಾರ ಗಡಿ ವಿಚಾರದಲ್ಲಿ ಆಕ್ರಮಣಕಾರಿ ಧೋರಣೆ ಅನುಸರಿಸುತ್ತಿದೆ. ಆದರೇ ಈ ಬಗ್ಗೆ ರಾಜ್ಯ ಸರ್ಕಾರ ಮಾತ್ರ ಮೌನ ವಹಿಸಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಾಲಯದ ಹೊರಗೆ ಇಟ್ಟು ಇತ್ಯರ್ಥ ಪಡಿಸಬೇಕು 

ನಮ್ಮ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿಯವರು ಮುಂದೆ ಧೈರ್ಯದಿಂದ ಮಾತನಾಡೋ ತಾಕತ್ತು ಇಲ್ಲ. ನಮ್ಮನಾದರೂ ಪ್ರಧಾನಿ ಬಳಿ ಕರೆದುಕೊಂಡು ಹೋದ್ರೆ ನಾವೇ ಮಾತನಾಡುತ್ತೇವೆ. ಮಹದಾಯಿ ವಿಚಾರವನ್ನು ಪ್ರಧಾನಿಯವರು ನ್ಯಾಯಾಲಯದ ಹೊರಗೆ ಇಟ್ಟು ಇತ್ಯರ್ಥ ಪಡಿಸಬೇಕು ರಾಜ್ಯಕ್ಕೆ ಅನ್ಯಾಯವಾದ ಸಂದರ್ಭದಲ್ಲಿ ಈ ಹಿಂದೆ ನಟ ಅಂಬರೀಶ್ ರಾಜೀನಾಮೆ ನೀಡಿದ್ದರು. ಅದೇ ರೀತಿಯ ರಾಜ್ಯದ 25 ಸಂಸದರು ಅಗತ್ಯ ಬಿದರೆ ರಾಜೀನಾಮೆ ನೀಡಲು ಮುಂದಾಗಿ ಎಂದು ಎಂದು ಕನ್ನಡ ಕ್ರೀಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಗ್ರಹಿಸಿದರು.

ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ಪದೇ ಪದೇ ಅನ್ಯಾಯವಾಗುತ್ತಿದೆ. ಮಹದಾಯಿ ನ್ಯಾಯಾಧೀಕರಣ ತೀರ್ಪು ನೀಡಿ 17 ತಿಂಗಳು ಕಳೆದರು ಇನ್ನೂ ನೋಟಿಪಿಕೇಷನ್ ಹೊರಡಿಸುವ ಹಂತದಲ್ಲಿಯೇ  ಕೇಂದ್ರ ಸರ್ಕಾರ ಕಾಲಹರಣ ಮಾಡುತ್ತಿದೆ. ಗೋವಾ ರಾಜ್ಯದಲ್ಲಿ ಕೇವಲ ಇಬ್ಬರು ಸಂಸದರು ಕೇಂದ್ರ ಮೇಲೆ ತಮ್ಮ ಪ್ರಭಾವ ಬೀರಿದ್ದಾರೆ. ಆದರೇ ರಾಜ್ಯದ 25 ಸಂಸದರು ಏನು ಮಾಡುತ್ತಿದ್ದಾರೆ.ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆಯಿಂದ ಉತ್ತರ ಕರ್ನಾಟಕದ 13 ತಾಲೂಕಿನ ಕುಡಿಯುವ ನೀರಿನ ಬವಣೆ ದೂರವಾಗಲಿದೆ ಎಂದರು.ಮಹದಾಯಿ ವಿಚಾರದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ರಾಜಕೀಯ ಮಾಡೋದು ಸರಿಯಲ್ಲ; ಜಗದೀಶ ಶೆಟ್ಟರ್ ಕಿಡಿ

ಬೆಳಗಾವಿಯಲ್ಲಿ ನಡೆದ ಮಠಾಧೀಶರ ಸಭೆಯಲ್ಲಿ ಎರಡು ಪ್ರಮುಖ ನಿರ್ಣಯ ಕೈಗೊಳ್ಳಲಾಗಿದೆ. ಗಡಿ ಭಾಗದಲ್ಲಿ ಕನ್ನಡ ಪ್ರಭಲಗೊಳಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಮಹದಾಯಿ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶಕ್ಕೆ ರಾಜ್ಯದ 28 ಲೋಕಸಭಾ ಸದಸ್ಯರು ಒತ್ತಡ ಹೇರಬೇಕು. ಒಂದೇ ವೇಳೆ ಇದು ಸಾಧ್ಯವಾಗದೇ ಇದ್ರೆ ಕೇಂದ್ರ ಸಚಿವರು ರಾಜೀನಾಮೆಗೆ ಸಿದ್ದರಾಗಿಬೇಕು ಎಂದು ಎಂದು ಸಮಾವೇಶದಲ್ಲಿ ಠರಾವು ಮಾಡಲಾಯಿತು.

ಸಭೆಯ ನಿರ್ಣಯವನ್ನು ಪ್ರಧಾನಿ ಕಳುಹಿಸಿದ ಉತ್ತರ ಬಂದ ನಂತರ ಮುಂದಿನ ಹೋರಾಟಕ್ಕೆ ನಾವೇ ಮುಂದಾಗುತ್ತೇವೆ ಎಂದು ಸ್ವಾಮೀಜಿಗಳು ಹೇಳಿದ್ದಾರೆ.
First published:January 10, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ