Pramod Muthalik: ಕೊಟ್ಟ ಗಡುವು ಮುಗಿದಿದೆ; ಮೇ 9ರಂದು ಮೊಳಗಲಿದೆ ಸುಪ್ರಭಾತ

ಹುಬ್ಬಳ್ಳಿ ಗಲಭೆಕೋರರಿಗೆ ಜಮೀರ್ ಅಹಮದ್ ಸಹಾಯ ಮಾಡುವುದು ಅಕ್ಷ್ಯಮ್ಯ ಅಪರಾಧ. ಮೇ.9 ರಂದು ಇಡೀ ರಾಜ್ಯಾದ್ಯಂತ ಬೆ.5 ಗಂಟೆಗೆ ಕರ್ನಾಟಕದ ಒಂದು ಸಾವಿರ ದೇವಸ್ಥಾನಗಳಲ್ಲಿ ನಾವು ಸುಪ್ರಭಾತ, ಹನುಮಾನ್ ಚಾಲೀಸ್, ಓಂ ನಮಃ ಶಿವಾಯ ನಾಮಸ್ಮರಣೆಯನ್ನು ಪ್ರಾರಂಭ ಮಾಡುತ್ತೇವೆ. ತಾಕತ್ತಿದ್ದರೆ ತಡೀರಿ ನೋಡೋಣ.

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

  • Share this:
ಹಾಸನ (ಏ.29): ಹುಬ್ಬಳ್ಳಿ ಗಲಭೆಕೋರರಿಗೆ (Hubballi Rioters)  ಸಹಾಯ ಮಾಡುತ್ತೇನೆ ಎಂದಿರುವ ಜಮೀರ್ ಅಹಮದ್ (Zameer Ahemad ) ನಡೆ ಅಸಂವಿಧಾನಿಕವಾದದ್ದು ಹಾಗೂ ಅಕ್ಷಮ್ಯ ಅಪರಾಧ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ಮುತಾಲಿಕ್ (Pramod Mutalik) ಕಿಡಿಕಾರಿದ್ದಾರೆ. ಹಾಸನ ಜಿಲ್ಲೆ, ಬೇಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಮೀರ್ ಅಹಮದ್ ಅವರ ಕೃತ್ಯ ಇದು‌ ಮೊದಲಲ್ಲ. ಇಸ್ಲಾಂನ ಮಾನಸಿಕತೆ ಇವತ್ತು ಹೊರಗೆ ಬೀಳುತ್ತಿದೆ. ಕಿಡಿಗೇಡಿಗಳಿಗೆ, ರೌಡಿಗಳಿಗೆ, ದರೋಡೆಕೋರರಿಗೆ, ದೇಶದ್ರೋಹಿಗಳಿಗೆ, ಹಿಂದೂ ದೇವಸ್ಥಾನಗಳಿಗೆ (Hindu Temple) ಹಾನಿ ಮಾಡಿದವರಿಗೆ, ಆರಕ್ಷಕರನ್ನು ಕೊಲ್ಲುವ ಪ್ರಯತ್ನ ಮಾಡುವವರಿಗೆ ಹಣ, ಆಹಾರ ಕಿಟ್ ಕೊಡುವಂತಹದ್ದು ಸಂವಿಧಾನ ವಿರೋಧಿಯಾಗಿದ್ದು, ಬಾಬರ್, ಔರಂಗ್‌ಜೇಬ್ ಮಾನಸೀಕತೆ ಜಮೀರ್​ನಲ್ಲಿ ಜೀವಂತವಾಗಿದೆ.

ಜಮೀರ್​ ವಿರುದ್ಧ ಮುತಾಲಿಕ್​ ಕಿಡಿ

ಜಮೀರ್ ಅವರ ಶಾಸಕ ಸ್ಥಾನವನ್ನು ರದ್ದು ಮಾಡುವಂತೆ ಗೌವರ್ನರ್​ ಮತ್ತು ಸಭಾಪತಿಗೆ ಪತ್ರ ಬರೆಯುತ್ತೇವೆ ಎಂದರು. ಮುಸ್ಲಿಂ ಸಮಾಜದ ಅಮಾಯಕರಿಗೆ ಸಹಾಯ ಮಾಡಿ ಆದರೆ ಇಂಥಹವರಿಗೆ ಸಹಾಯ ಮಾಡುವುದನ್ನು ಬಲವಾಗಿ ವಿರೋಧಿಸುತ್ತೇವೆ. ಹುಬ್ಬಳ್ಳಿ ಗಲಭೆ ಬಗ್ಗೆ ರೋಷನ್ ಬೇಗ್ ಬೇಸರ ವ್ಯಕ್ತಪಡಿಸಿರುವ ರೋಷನ್‌ಬೇಗ್ ಹೇಳಿಕೆಯನ್ನು ಸ್ವಾಗತ ಮಾಡುತ್ತೇನೆ. ತಪ್ಪನ್ನು ಒಪ್ಪಿಕೊಂಡರೆ ಸುಧಾರಣೆ ಆಗುತ್ತೆ. ತಪ್ಪನ್ನು ಒಪ್ಪಿಕೊಳ್ಳದೆ, ಅವರು ಮಾಡಿಲ್ಲ ಅಂತ ಸಿದ್ದರಾಮಯ್ಯ ಸೇರಿ ಇಡೀ ಕಾಂಗ್ರೆಸ್ ಹೇಳ್ತಾ ಇದೆ.

ಕಾಂಗ್ರೆಸ್ಸಿಗರೆ ಮತಕ್ಕಾಗಿ  ಮುಸ್ಲಿಂರನ್ನು ಓಲೈಕೆ ಮಾಡಬೇಡಿ.  ಹಿಂದೂ‌ ಸಮಾಜ, ದೇವಾಲಯ ಮೇಲೆ ಆಗಿರುವ ದಾಳಿಯನ್ನು ನೀವು ಖಂಡಿಸಬೇಕು. ಗಲಭೆಕೋರರನ್ನು ಶಿಕ್ಷೆಗೆ ಗುರಿ ಮಾಡಿ ಅಂತ ಹೇಳಬೇಕು. ಮತಕ್ಕಾಗಿ ನಿಮ್ಮ ಈ ರೀತಿಯ ಹೇಳಿಕೆ ನೀಡುತ್ತಿರುವುದು ರಾಷ್ಟ್ರಕ್ಕೆ ಆಘಾತ, ಸಮಾಜಕ್ಕೆ ಅಘಾತವನ್ನುಂಟು ಮಾಡುತ್ತಿದ್ದು, ಹಿಂದೂ ಸಮಾಜ ನಿಮ್ಮನ್ನು ತಿರಸ್ಕಾರ ಮಾಡುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Corona Virus: ಬೆಂಗಳೂರಲ್ಲಿ ಹೆಚ್ಚಿದ ಕೊರೊನಾ ಕೇಸ್; ಮಹದೇವಪುರ ವಾರ್ಡ್​ನಿಂದಲೇ 4ನೇ ಅಲೆ?

ಕೊಟ್ಟ ಗಡುವು ಮುಗಿದಿದೆ

ಅಝಾನ್ ವಿಚಾರವಾಗಿ ಕಳೆದ 6 ತಿಂಗಳಿನಿಂದ ಹೋರಾಟ ಮಾಡುತ್ತಿದ್ದೇವೆ. ಮೇ.1 ಡಿಸಿಗಳಿಗೆ ಕೊಟ್ಟಂತಹ ಗಡುವು ಮುಕ್ತಾಯವಾಗುತ್ತದೆ. ಸರ್ಕಾರ ಮೈಕ್‌ಗಳನ್ನು ತೆರವುಗೊಳಿಸದೆ ಇದ್ದರೆ, ಮೇ.9 ರಂದು ಇಡೀ ರಾಜ್ಯಾದ್ಯಂತ ಬೆ.5 ಗಂಟೆಗೆ ಕರ್ನಾಟಕದ ಒಂದು ಸಾವಿರ ದೇವಸ್ಥಾನಗಳಲ್ಲಿ ನಾವು ಸುಪ್ರಭಾತ, ಹನುಮಾನ್ ಚಾಲಿಸ್, ಓಂಕಾರವನ್ನ, ಓಂ ನಮಃ ಶಿವಾಯ ನಾಮಸ್ಮರಣೆಯನ್ನು ಪ್ರಾರಂಭ ಮಾಡುತ್ತೇವೆ. ತಾಕತ್ತಿದ್ದರೆ ತಡಿರಿ ನೋಡೋಣ. ಮಸೀದಿ ಮೇಲಿನ ಮೈಕ್ ತೆರವುಗೊಳಿಸಲು ನಿಮಗೆ ತಾಕತ್ತಿಲ್ಲ, ನಮ್ಮ ದೇವಸ್ಥಾನಕ್ಕೆ ಬರ್ತಿರಾ, ಹೇಗೆ ಬರ್ತಿರಾ ಬನ್ನಿ ನೋಡೋಣ. ಮೇ.9 ರಂದು ಬೆ.5 ಗಂಟೆಗೆ ನಮ್ಮ ಪ್ರಾರ್ಥನೆ ಪ್ರಾರಂಭವಾಗುತ್ತಿದ್ದು, ಮೊದಲು ಮಸೀದಿ ಮೈಕ್ ತಡಿರಿ, ಆಮೇಲೆ ನಮ್ಮ ಕಡೆ ಬನ್ನಿ ಎಂದು ಸರ್ಕಾರಕ್ಕೆ, ಪೊಲೀಸರಿಗೆ ಸವಾಲ್ ಹಾಕಿದರು.

ರಥೋತ್ಸವಕ್ಕೂ ಕುರಾನ್‌ಗೂ ಏನು ಸಂಬಂಧ

ನಂತರ ಬೇಲೂರು ಪಟ್ಟಣದ ನೆಹರು ನಗರದಿಂದ ಶ್ರೀಚನ್ನಕೇಶವ ಸ್ವಾಮಿ ದೇವಾಲಯದವರೆಗೂ ನೂರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿದರು. ತದನಂತರ ನಡೆದ ಶ್ರೀರಾಮಸೇನೆ ಬೇಲೂರು ತಾಲ್ಲೂಕು ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬೇಲೂರು ರಥೋತ್ಸವಕ್ಕೂ ಕುರಾನ್‌ಗೂ ಏನು ಸಂಬಂಧ, ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆಯವರಿಗೆ ಎಚ್ಚರಿಕೆ ಕೊಡುತ್ತಿದ್ದೇನೆ.

ಮುಂದಿನ ವರ್ಷ ಕುರಾನ್ ಪಠಣ ಮಾಡಲು ಹೋದರೆ ಶ್ರೀರಾಮಸೇನೆಯಿಂದ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಈ ವರ್ಷ ಶ್ರೀರಾಮಸೇನೆ ಸಂಘಟನೆ ಬೇಲೂರಿನಲ್ಲಿ ಇರಲಿಲ್ಲ, ತಾಕತ್ತಿದ್ದರೆ ಮುಂದಿನ ವರ್ಷ ಕುರಾನ್ ಪಠಣ‌ ಮಾಡಿ ನೋಡೋಣ, ಕೂಡಲೇ ಇದನ್ನು ವಾಪಾಸ್ ಪಡೆಯಬೇಕು. ಇಲ್ಲವಾದಲ್ಲಿ ಸಂಘರ್ಷ, ಗಲಾಟೆ, ಗಲಭೆಗಳು ಆಗ್ತವೆ, ಬೆಂಕಿ ಹೊತ್ತಿಕೊಳ್ಳುತ್ತೆ ಎಂದು ಎಚ್ಚರಿಕೆ ನೀಡಿದರು. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳ  ನೂರು ಮೀಟರ್ ವ್ಯಾಪ್ತಿಯಲ್ಲಿ ಹಿಂದುಯೇತರರಿಗೆ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡಬಾರದು ಅನ್ನುವ ಕಾನೂನಿದೆ. ಆದರೆ ಬೇಲೂರಿನ ಶ್ರೀಚನ್ನಕೇಶವ ದೇವಾಲಯದ ಮುಂದೆ ಒಬ್ಬ ಮುಸ್ಲಿಂನ ಅಂಗಡಿ ಇದೆ.

ಇದನ್ನೂ ಓದಿ: Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ; ಹವಾಮಾನ ಇಲಾಖೆ

ಖಾಲಿ ಮಾಡಿಸಲು ನಾನೇ ಬರ್ತಿನಿ

ನೀವು ನೋಟೀಸ್ ನೀಡಿದರು ಆತ ಇನ್ನೂ ಅಂಗಡಿ ಖಾಲಿ ಮಾಡಿಲ್ಲ. ಇನ್ನೊಂದು ವಾರದೊಳಗೆ ಆ ಅಂಗಡಿ ಖಾಲಿ ಮಾಡಿಸಬೇಕು, ಇಲ್ಲವಾದಲ್ಲಿ ಖಾಲಿ ಮಾಡಿಸಲು ನಾನೇ ಬರ್ತಿನಿ. ಆಗ ಗಲಾಟೆ ಆಯ್ತು, ಘರ್ಷಣೆ ಆಯ್ತು ಅಂದರೆ ನಾನು ಕೇಳೊಲ್ಲ. ಮಸೀದಿ ಒಳಗೆ ನಮಗೆ ಪ್ರವೇಶ ಕೊಡ್ತರಾ, ಆವರಣದಲ್ಲಿ ವ್ಯಾಪಾರ ಮಾಡಲು ಬಿಡ್ತರಾ, ದೇವಾಲಯದ ಆಡಳಿತಾಧಿಕಾರಿ ಅವರೇ ಕಾನೂನನ್ನು ಪಾಲನೆ ಮಾಡಿ ಎಂದು ಕಿಡಿಕಾರಿದರು.
Published by:Pavana HS
First published: