ಬಜೆಟ್​ನಲ್ಲೂ ನಿರ್ಲಕ್ಷ್ಯ, ಬೇಡಿಕೆ ಈಡೇರಿಸದಿದ್ದರೆ ಏಪ್ರಿಲ್ 8ರಿಂದ ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ; ಸರ್ಕಾರಕ್ಕೆ ಎಚ್ಚರಿಕೆ!

ಒಟ್ಟಾರೆಯಾಗಿ ಬಜೆಟ್ ವರೆಗೂ ಕಾದು ನೋಡಿದ ಸಾರಿಗೆ ನೌಕರರು ಈಗ ಮತ್ತೆ ಮತ್ತೊಮ್ಮೆ ಸಿಡಿದೇಳುವ ಹಂತದಲ್ಲಿದ್ದಾರೆ. ಈ ಬಾರಿಯೂ ಸರ್ಕಾರ ಸಾರಿಗೆ ನೌಕರರನ್ನು ಕಡೆಗಣಿಸಿದರೆ ಹಿಂದಿನಂತೆ ಸಾರ್ವಜನಕರು ಪರದಾಡಬೇಕಾಗುತ್ತದೆ. ಅದಕ್ಕೂ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ಈ ವಿಚಾರಕ್ಕೊಂದು ಅಂತ್ಯ ಕಾಣಬೇಕಿದೆ.

ಕೋಡಿಹಳ್ಳಿ ಚಂದ್ರಶೇಖರ್- ಬಿ.ಎಸ್.​ ಯಡಿಯೂರಪ್ಪ.

ಕೋಡಿಹಳ್ಳಿ ಚಂದ್ರಶೇಖರ್- ಬಿ.ಎಸ್.​ ಯಡಿಯೂರಪ್ಪ.

  • Share this:
ಬೆಂಗಳೂರು (ಮಾರ್ಚ್​ 09); ಸಾರಿಗೆ ‌ನೌಕರರ ಹಾಗೂ ಸರ್ಕಾರದ ನಡುವೆ ಜಟಪಟಿ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಸದನದಲ್ಲಿ ನಿನ್ನೆ ಮಂಡಿಸಿದ ರಾಜ್ಯ ಬಜೆಟ್​ನಲ್ಲಿ ಸಾರಿಗೆ ನೌಕರರ ಬೇಡಿಕೆಗಳಿಗೆ ಮನ್ನಣೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸಾರಿಗೆ ಹೋರಾಟಗಾರರು ಏಪ್ರಿಲ್ 8 ರವರೆಗೆ ಸರ್ಕಾರಕ್ಕೆ ಮತ್ತೆ ಡೆಡ್​ಲೈನ್ ನೀಡಿದ್ದಾರೆ. ಅಷ್ಟರಲ್ಲಿ ತಮ್ಮ ಬೇಡಿಕೆ ಈಡೇರದಿದ್ದರೆ ಮತ್ತೊಮ್ಮೆ ಸಾರಿಗೆ ನೌಕರರು ಬಸ್​ ಮುಷ್ಕರ ಕೈಗೊಳ್ಳಬೇಕಾಗುತ್ತದೆ ಎಂದು ಸರ್ಕಾರಕ್ಕೆ ಇಂದು ಕೊನೆ ಎಚ್ಚರಿಕೆ ನೀಡಲಾಗಿದೆ. ಸಾರಿಗೆ ನೌಕರರು‌ ಸರ್ಕಾರಕ್ಕೆ ಎಚ್ಚರಿಕೆ ಮೇಲೆ‌ ಎಚ್ಚರಿಕೆ ನೀಡ್ತಿದ್ದಾರೆ.‌ ಕೊಟ್ಟ ಮಾತಿನಂತೆ ಒಂಬತ್ತು ಬೇಡಿಕೆಗಾಗಿ ಈಡೇರಿಕೆಗೆ ಒತ್ತಾಯ ಮಾಡ್ತಿದ್ದಾರೆ. ಇಂದು ಸಹ ಸಾರಿಗೆ ನೌಕರರ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಸಾರಿಗೆ ಇಲಾಖೆಯ ನಾಲ್ಕು ವಿಭಾಗದ ನೌಕರರು ಭಾಗಿಯಾಗಿ‌ ಸರ್ಕಾರಕ್ಕೆ ಮತ್ತೊಂದು ಡೆಡ್​ಲೈನ್ ನೀಡಿದ್ದಾರೆ.

ಡಿಸೆಂಬರ್ ನಲ್ಲಿ ನಾಲ್ಕು ದಿನಕಾಲ ಸಾರಿಗೆ ಮುಷ್ಕರದಲ್ಲಿ ನೌಕರರ ಹತ್ತು ಬೇಡಿಕೆಯಲ್ಲಿ ಒಂಬತ್ತು ಬೇಡಿಕೆಯನ್ನು ಈಡೇರಿಸ್ತೇವೆ, ಸ್ವಲ್ಪ ದಿನ‌‌ ಕಾಲಾವಕಾಶ ಕೊಡಿ‌ ಎಂದು ಸರ್ಕಾರ ಮನವಿ‌ ಮಾಡಿಕೊಂಡಿತ್ತು. ಆದರಂತೆ ಸಾರಿಗೆ ನೌಕರರು ಮೂರು ತಿಂಗಳು ಗಡವು ‌ನೀಡಿತ್ತು. ಆದರೆ, ಗಡುವು ಮುಗಿದರೂ ಸರ್ಕಾರ ಯಾವುದೇ ಸ್ಪಂದನೆ ನೀಡ್ತಿಲ್ಲ.‌ ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯ ಬಜೆಟ್ನಲ್ಲಿ‌ ನೌಕರರ ಬೇಡಿಕೆ ಬಗ್ಗೆ ಯಾವುದೇ ಯೋಜನೆ ನೀಡಿಲಿಲ್ಲ. ಹೀಗಾಗಿ ಮತ್ತೆ ಸರ್ಕಾರದ ವಿರುದ್ಧ ನೌಕರರು ಸಿಡಿದೆದಿದ್ದಾರೆ.

ಇನ್ನೂ ಈ ಬಗ್ಗೆ ಮಾತನಾಡಿದ ಸಾರಿಗೆ ನೌಕರರ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, "ಸಾರಿಗೆ ಇಲಾಖೆಯಲ್ಲಿ 1.30 ಲಕ್ಷ  ನೌಕರರು ಇದ್ದಾರೆ. ಅವರ ಭವಿಷ್ಯಕ್ಕೆ ಬಜೆಟ್ ನಲ್ಲಿ ಯಾವುದೇ ಅವಕಾಶ ನೀಡಿಲ್ಲ. ಡಿಸೆಂಬರ್ 14 ರಲ್ಲಿ ನೀಡದ್ದ ಭರವಸೆ ಈಡೇರಿಲ್ಲ. 3 ತಿಂಗಳ ಕಾಲಾವಕಾಶ ಮುಗಿಯುತ್ತಿದೆ , ಬಜೆಟ್ ನಲ್ಲೂ ಯಾವುದೇ ಘೋಷಣೆ ಆಗಿಲ್ಲ. ಮಾರ್ಚ್ 16ಕ್ಕೆ  ಕಾರ್ಮಿಕ  ಇಲಾಖೆಗೆ ನೋಟಿಸ್ ಕೊಡುತ್ತೇವೆ. ಅದಾದ ಬಳಿಕ 22 ದಿನಗಳ‌ ನಂತರವೂ ಸರ್ಕಾರ ಸ್ಪಂದಿಸದೇ ಹೋದರೆ. ಏಪ್ರಿಲ್ 8ರಿಂದ ಸಾರಿಗೆ ನೌಕರರ ಮುಷ್ಕರ ಆರಂಭವಾಗಲಿದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Parliament Session 2021: ಬೆಲೆ ಏರಿಕೆ ಬಿಸಿಗೆ ಸಂಸತ್ ಕಲಾಪ ಬಲಿ: ಚರ್ಚೆಗೆ ಅವಕಾಶ ನೀಡದ ಕೇಂದ್ರ ಸರ್ಕಾರ

ಇದೇ ವೇಳೆ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಸರ್ಕಾರದ ನಿರ್ಲಕ್ಷ್ಯದ ನಡೆಯನ್ನು ಖಂಡಿಸಿದರು. ಸರ್ಕಾರ ಸಾರಿಗೆ ನೌಕರರನ್ನು ಮಲತಾಯಿ ಮಕ್ಕಳಂತೆ ನೋಡುತ್ತಿದೆ. ಬಜೆಟ್ ನಲ್ಲಿ ನಿರಾಶೆಯಾಗಿದೆ. ಏಪ್ರಿಲ್ 8ರ ನಂತರ ಪ್ರತಿಭಟನೆ ನಡೆಸುತ್ತೇವೆ. ಈ ಬಾರಿ ಕುಟುಂಬ ಸದಸ್ಯರೊಂದಿಗೆ ಸಾರಿಗೆ ನೌಕರರು ಬೀದಿಗಿಳಿಯುತ್ತಾರೆ ಎಂದಿದ್ದಾರೆ.

ಒಟ್ಟಾರೆಯಾಗಿ ಬಜೆಟ್ ವರೆಗೂ ಕಾದು ನೋಡಿದ ಸಾರಿಗೆ ನೌಕರರು ಈಗ ಮತ್ತೆ ಮತ್ತೊಮ್ಮೆ ಸಿಡಿದೇಳುವ ಹಂತದಲ್ಲಿದ್ದಾರೆ. ಈ ಬಾರಿಯೂ ಸರ್ಕಾರ ಸಾರಿಗೆ ನೌಕರರನ್ನು ಕಡೆಗಣಿಸಿದರೆ ಹಿಂದಿನಂತೆ ಸಾರ್ವಜನಕರು ಪರದಾಡಬೇಕಾಗುತ್ತದೆ. ಅದಕ್ಕೂ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ಈ ವಿಚಾರಕ್ಕೊಂದು ಅಂತ್ಯ ಕಾಣಬೇಕಿದೆ.

(ವರದಿ- ಆಶಿಕ್ ಮುಲ್ಕಿ)
Published by:MAshok Kumar
First published: