HOME » NEWS » State » IF THE BUDGET WAS AS PATHETIC AS SIDDARAMAIAH DESCRIBED HOW DOES HE GET RS 630 CRORE FOR HIS CONSTITUENCY QUESTIONS BYRATI BASAVARAJU LG

ದರಿದ್ರ ಸರ್ಕಾರ ಆಗಿದ್ರೆ ಸಿದ್ದರಾಮಯ್ಯ ಕ್ಷೇತ್ರಕ್ಕೆ ಅನುದಾನ ಹೇಗೆ ಬರ್ತಿತ್ತು?; ಭೈರತಿ ಬಸವರಾಜ್ ಪ್ರಶ್ನೆ

ವಿರೋಧ ಪಕ್ಷವಾಗಿ ಏನಾದರೂ ಹೇಳಬೇಕಲ್ಲ, ಅದಕ್ಕೆ ಸಿದ್ದರಾಮಯ್ಯ ಮಾತನಾಡುತ್ತಾರೆ. ಇಲ್ಲ ಅಂದರೆ ಇಬ್ಬರೂ ಹೊಂದಾಣಿಕೆ ಮಾಡಿಕೊಂಡಿದ್ದಾರೇನೋ ಅಂತ ಎಲ್ಲೋ ಒಂದು ಕಡೆ ಜನರಿಗೆ ಸಂದೇಶ ಹೋಗುತ್ತದೆ.  ಹೀಗಾಗಿ ಸಿದ್ದರಾಮಯ್ಯ ಕೇಳುತ್ತಾರೆ, ಅದಕ್ಕೆ ತಕ್ಕ ಉತ್ತರವನ್ನು ಬಿಎಸ್‌ವೈ ಕೊಡುತ್ತಾರೆ ಎಂದು ಹೇಳಿದರು.

news18-kannada
Updated:March 7, 2020, 1:54 PM IST
ದರಿದ್ರ ಸರ್ಕಾರ ಆಗಿದ್ರೆ ಸಿದ್ದರಾಮಯ್ಯ ಕ್ಷೇತ್ರಕ್ಕೆ ಅನುದಾನ ಹೇಗೆ ಬರ್ತಿತ್ತು?; ಭೈರತಿ ಬಸವರಾಜ್ ಪ್ರಶ್ನೆ
ಭೈರತಿ ಬಸವರಾಜು-ಸಿದ್ದರಾಮಯ್ಯ
  • Share this:
ಬೆಳಗಾವಿ(ಮಾ.07): ನಮ್ಮದು ದರಿದ್ರ ಸರ್ಕಾರ ಅಲ್ಲ, ಸುಭದ್ರ ಸರ್ಕಾರ. ಒಂದು ವೇಳೆ ಬಿಜೆಪಿ ದರಿದ್ರ ಸರ್ಕಾರ ಆಗಿದ್ದರೆ ಸಿದ್ದರಾಮಯ್ಯನವರ ಕ್ಷೇತ್ರ ಬಾದಾಮಿಗೆ ಹೇಗೆ 630 ಕೋಟಿ ರೂಪಾಯಿ ಅನುದಾನ ಸಿಗುತ್ತಿತ್ತು ಎಂದು ಸಚಿವ ಭೈರತಿ ಬಸವರಾಜು ಮಾಜಿ ಸಿಎಂಗೆ ಪ್ರಶ್ನಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರವನ್ನು ದರಿದ್ರ ಸರ್ಕಾರ ಎಂದು ಜರಿದಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದರು. "ಸಿದ್ದರಾಮಯ್ಯ ಕೂಡ ಬಜೆಟ್ ಮಂಡನೆ ಮಾಡಿದ್ದಾರೆ. ಅವರಿಗೆ ವಸ್ತು ಸ್ಥಿತಿ ಎಲ್ಲವೂ ಗೊತ್ತಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ವಸ್ತುಸ್ಥಿತಿಗೆ ಹತ್ತಿರವಾದ ಬಜೆಟ್ ಮಂಡಿಸಿದ್ದಾರೆ.  ಸಿದ್ದರಾಮಯ್ಯ ತಮ್ಮ ಕ್ಷೇತ್ರಕ್ಕೆ ಅನುದಾನ ಸಿಕ್ಕಿರುವುದನ್ನು ಹೇಳಲ್ಲ. ಎಲ್ಲಾ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಪರಿಸ್ಥಿತಿ ಅರ್ಥ ಮಾಡಿಕೊಂಡು ಮಾತನಾಡಬೇಕು.  ವಿರೋಧ ಪಕ್ಷದ ನಾಯಕರಾಗಿ ಅವರು ಏನು ಹೇಳಬೋಕೋ ಅದನ್ನೇ ಹೇಳುತ್ತಾರೆ" ಎಂದು ಕಿಡಿಕಾರಿದರು.

ಕೇಂದ್ರದಿಂದ ಬರಬೇಕಾದ ಜಿಎಸ್​​ಟಿ ಪಾಲಿನ ಬಗ್ಗೆ ಸಂಸದರು ಬಾಯಿ ಬಿಡಬೇಕು: ಎಚ್​. ವಿಶ್ವನಾಥ್​​

ಸಿಎಂ ಬಿ.ಎಸ್.ಯಡಿಯೂರಪ್ಪಈ ಬಾರಿ ರಾಜ್ಯಕ್ಕೆ ಅತ್ಯುತ್ತಮ ಬಜೆಟ್ ಕೊಟ್ಟಿದ್ದಾರೆ.  ಆರ್ಥಿಕ ಪರಿಸ್ಥಿತಿ ಅರ್ಥ ಮಾಡಿಕೊಂಡು ಅದರ ಅನುಗುಣವಾಗಿ ಬಜೆಟ್ ಮಂಡಿಸಿದ್ದಾರೆ.  ಬಿಎಸ್‌ವೈ ಬಂದ ಮೇಲೆ ಪ್ರವಾಹ ಆಗಿದೆ, ಭೀಕರ ಬರಗಾಲ ಇದೆ. ಕೆಲವು ಸಮಸ್ಯೆ ಇವೆ, ಎಲ್ಲವನ್ನೂ ಒಂದೇ ದಿನದಲ್ಲಿ ಪರಿಹಾರ ಮಾಡುತ್ತೇವೆ ಎಂದು ಹೇಳಲು ಆಗಲ್ಲ ಎಂದರು.

ವಿರೋಧ ಪಕ್ಷವಾಗಿ ಏನಾದರೂ ಹೇಳಬೇಕಲ್ಲ, ಅದಕ್ಕೆ ಸಿದ್ದರಾಮಯ್ಯ ಮಾತನಾಡುತ್ತಾರೆ. ಇಲ್ಲ ಅಂದರೆ ಇಬ್ಬರೂ ಹೊಂದಾಣಿಕೆ ಮಾಡಿಕೊಂಡಿದ್ದಾರೇನೋ ಅಂತ ಎಲ್ಲೋ ಒಂದು ಕಡೆ ಜನರಿಗೆ ಸಂದೇಶ ಹೋಗುತ್ತದೆ.  ಹೀಗಾಗಿ ಸಿದ್ದರಾಮಯ್ಯ ಕೇಳುತ್ತಾರೆ, ಅದಕ್ಕೆ ತಕ್ಕ ಉತ್ತರವನ್ನು ಬಿಎಸ್‌ವೈ ಕೊಡುತ್ತಾರೆ ಎಂದು ಹೇಳಿದರು.

ದೆಹಲಿ ಹಿಂಸಾಚಾರ: ಪಕ್ಷಪಾತಿ ವರದಿ ಆರೋಪದ ಮೇಲೆ ಕೇರಳದ 2 ಸುದ್ದಿ ವಾಹಿನಿಗಳಿಗೆ 48 ಗಂಟೆ ನಿಷೇಧ

ಸಿಎಂ ಬಿಎಸ್‌ ಯಡಿಯೂರಪ್ಪ ಈ ಬಾರಿಯ ರಾಜ್ಯ ಬಜೆಟ್​​ನಲ್ಲಿ ಸಿದ್ದರಾಮಯ್ಯ ಕ್ಷೇತ್ರ ಬಾದಾಮಿಗೆ 630 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ. ಸಿದ್ದರಾಮಯ್ಯ ಈ ಹಿಂದೆಯೇ ತನ್ನ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕೆಂದು ಬಿಎಸ್​ವೈಗೆ ಪತ್ರ ಬರೆದಿದ್ದರು.
Youtube Video
First published: March 7, 2020, 1:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories