ಮರಾಠ ಸಮಾಜಕ್ಕೆ 2ಎ ಮೀಸಲಾತಿ‌ ನೀಡದಿದ್ದರೆ ಚುನಾವಣೆ ಬಹಿಷ್ಕಾರ: ಶಾಸಕಿ ಅಂಜಲಿ ನಿಂಬಾಳ್ಕರ್​

ಮರಾಠ ಸಮಾಜಕ್ಕೆ 2ಎ ಮೀಸಲಾತಿ ಮಾಡಿದ್ರೆ ಮಾತ್ರ ಮತ ಹಾಕುತ್ತೇವೆ. ಇಲ್ಲದಿದ್ದರೇ ಬೆಳಗಾವಿ, ಮಸ್ಕಿ, ಗ್ರಾಮ ಪಂಚಾಯತ್​, ಜಿಲ್ಲಾ ಪಂಚಾಯತ್ ಸೇರಿದಂತೆ​​ ಎಲ್ಲ‌ ಚುನಾವಣೆಗಳನ್ನು ಬಹಿಷ್ಕಾರ ಹಾಕುತ್ತೇವೆ ಎಂದು ಎಚ್ಚರಿಸಿದರು

ಶಾಸಕಿ ಅಂಜಲಿ ನಿಂಬಾಳ್ಕರ್

ಶಾಸಕಿ ಅಂಜಲಿ ನಿಂಬಾಳ್ಕರ್

  • Share this:
ಧಾರವಾಡ(ನವೆಂಬರ್​. 29): ಮರಾಠ ಸಮಾಜಕ್ಕೆ 2ಎ ಮೀಸಲಾತಿ‌ ನೀಡದಿದ್ದರೆ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್​ ಹೇಳಿದರು. ಧಾರವಾಡದಲ್ಲಿ ಮರಾಠ ಕ್ರಾಂತಿ‌ ಮೋರ್ಚಾ ಸಭೆಯಲ್ಲಿ ಮಾತನಾಡಿದ ಅವರು, ಮರಾಠ ಸಮಾಜದ ಬಗ್ಗೆ ‌ಕಾಳಜಿ ಇದ್ದರೆ 2 ಎ ಮೀಸಲಾತಿ ನೀಡಲಿ ಎಂದರು. ನಾವೂ ಸ್ವಲ್ಪ ಈಗ ಚುನಾವಣಾ ತಂತ್ರಗಳನ್ನು ಮಾಡುತ್ತೆವೆ‌. ನಾವು ಕೂಡ ಸಮಾಜದ ಮುಖಂಡರಿಂದ ಸರ್ಕಾರಕ್ಕೆ ಪತ್ರ ಬರೆಯಿಸುತ್ತೇವೆ. ಏಳು ದಿನಗಳ ಒಳಗೆ ಮೀಸಲಾತಿ ನಿರ್ಣಯ ಮಾಡಬೇಕು. ಮೀಸಲಾತಿ ಮಾಡಿದ್ರೆ ಮಾತ್ರ ಮತ ಹಾಕುತ್ತೇವೆ. ಇಲ್ಲದಿದ್ದರೇ ಬೆಳಗಾವಿ, ಮಸ್ಕಿ, ಗ್ರಾಮ ಪಂಚಾಯತ್​, ಜಿಲ್ಲಾ ಪಂಚಾಯತ್​​ ಸೇರಿದಂತೆ ಎಲ್ಲ‌ ಚುನಾವಣೆಗಳನ್ನು ಬಹಿಷ್ಕಾರ ಹಾಕುತ್ತೇವೆ ಎಂದು ಎಚ್ಚರಿಸಿದರು. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯ ವಿಷಯದಲ್ಲಿ ನಾವು ಸಿಎಂ ಯಡಿಯೂರಪ್ಪನವರ ಬಳಿ ಭಿಕ್ಷೆ ಕೇಳುತ್ತಿಲ್ಲ. ನಾವೇನು ಭಿಕಾರಿಗಳೂ ಅಲ್ಲ‌. ನಮಗೆ ಐವತ್ತು ಕೋಟಿಯಲ್ಲ, ಐನೂರು ಕೋಟಿ ಕೊಟ್ಟರೂ ಬೇಕಾಗಿಲ್ಲ ಎಂದು ತಿಳಿಸಿದರು.

ಲಿಂಗಾಯತ ಸಮಾಜಕ್ಕೆ ಐನೂರು ಕೋಟಿ ಕೊಟ್ಟಿದೀರಿ‌. ಹಾಗೆಯೇ ಚುನಾವಣಾ ಗಿಮಿಕ್‌ ಅಂತಾ‌ ಯಾವ ಸಮಾಜಕ್ಕೆ ಏನೇನು ಕೊಡುತ್ತಿರೋ ಕೊಡಿ‌. ಯಾವ ಜಾತಿಗೆ ಎಷ್ಟು ಮತ ಇದೆ ಅಷ್ಟು ಪ್ರಾಧಿಕಾರ ಮಾಡುತ್ತಾ ಹೋಗಲಿ ಎಂದರು.

ಇದೇ ಸಂದರ್ಭದಲ್ಲಿ ಮರಾಠಿ ಭಾಷಾ ಪ್ರೇಮ ಪ್ರದರ್ಶಿಸಿದ ಅಂಜಲಿ, ಭಾಷಣದುದ್ದಕ್ಕೂ ಮರಾಠಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರು. ನನ್ನ ಖಾನಾಪುರ ಕ್ಷೇತ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಭಾಷಿಕರು ಹೆಚ್ಚಿದ್ದಾರೆ.‌ ಮಾರವಾಡಿ, ಲಿಂಗಾಯತ, ಬ್ರಾಹ್ಮಣ ಯಾವುದೇ ಜಾತಿ ಇದ್ದರೂ ಮರಾಠಿ ಭಾಷಿಕರು ಹೆಚ್ಚಿದ್ದಾರೆ. ಅಲ್ಲಿ ಕನ್ನಡ ಮಾತನಾಡಿದರೆ ಅರ್ಥ ಆಗುವುದಿಲ್ಲ. ಅದಕ್ಕೆ ನಾವು ಅಲ್ಲಿ ಮರಾಠಿ ಭಾಷೆಯನ್ನೇ ಮಾತನಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ : ಚುನಾವಣೆ ನಡೆಸೋದು ಹೇಗೆಂದು ನನಗೆ ಗೊತ್ತಿದೆ - ಹೆದರದೇ ಸಂಘಟನಾ ಕಾರ್ಯದಲ್ಲಿ ತೊಡಗಿ: ಶಾಸಕ ಡಿ.ಸಿ.ಗೌರಿಶಂಕರ್

ಬೆಂಗಳೂರಿನಲ್ಲೆ ಕನ್ನಡ  ನಾಡಿನಲ್ಲೇ‌ ಹುಟ್ಟಿದ ಜನರಿಗೆ ಕನ್ನಡ ಬರುವುದಿಲ್ಲ.ಅವರು ತಮಿಳು, ತೆಲುಗು ಮಾತನಾಡುತ್ತಾರೆ. ಆದರೆ ಮರಾಠ ಸಮಾಜ ಕನ್ನಡ ಭಾಷೆ ಬಗ್ಗೆ ಅಭಿಮಾನ ಹೊಂದಿದ್ದೇವೆ ಎಂದರು.

ಸಭೆಯ ಬಳಿಕ ಮಾತನಾಡಿದ ಎಂಎಲ್​​ಸಿ ಶ್ರೀನಿವಾಸ್​ ಮಾನೆ, ಕರ್ನಾಟಕ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿ, 50 ಕೋಟಿ ರೂ ಮೀಸಲಿಟ್ಟಿರುವ ಬಗ್ಗೆ ಸಂಶಯವಿದೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಹೊರ ಬಿದ್ದಿಲ್ಲ. ಬೆಳಗಾವಿ, ಬಸವಕಲ್ಯಾಣ, ಮಸ್ಕಿ ಚುನಾವಣೆ ನಂತರ ಕಸದ ಬುಟ್ಟಿಗೆ ಹೋಗಲಿದೆಂಬ ಸಂಶಯ ವ್ಯಕ್ತಪಡಿಸಿದರು.

ಪ್ರಾಧಿಕಾರ-ನಿಗಮ ನಮಗೆ ಬೇಡ. ಸಮಾಜದ ಮುಂದಿನ ಪೀಳಿಗೆ ಏಳಿಗೆ ಆಗಬೇಕಿದೆ. ಇದಕ್ಕಾಗಿ ನಮಗೆ 2 ಎ ಮೀಸಲಾತಿಯೊಂದೇ ಬೇಕು. ಮರಾಠ ಸಮಾಜದ ಹೋರಾಟ ಸರ್ವ ಪಕ್ಷಗಳಿಗೂ ಬೇಕಾಗಿದೆ. ಎಲ್ಲರೂ ನಮ್ಮ ಸಮಾಜವನ್ನು ಬಳಸಿಕೊಳ್ಳುತ್ತಾರೆ. ಆದರೆ, ಅವರ ಶ್ರೇಯೋಭಿವೃದ್ಧಿ ಮಾತ್ರ ಮಾಡತ್ತಿಲ್ಲ ಬೇಸರ ವ್ಯಕ್ತಪಡಿಸಿದರು
Published by:G Hareeshkumar
First published: