Siddu V/s Yatnal: ಸಿದ್ದರಾಮಯ್ಯಗೆ ತಾಕತ್ತು ಇದ್ರೆ ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿ, ಯತ್ನಾಳ್ ಸವಾಲ್

ಸಿದ್ದರಾಮಯ್ಯಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲ್ ಹಾಕಿ, ಸಿದ್ದರಾಮಯ್ಯಗೆ ತಾಕತ್ತು ಇದ್ದರೆ ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿ. ಆಗ ನಿಮ್ಮ ತಾಕತ್ತು ಗೊತ್ತಾಗುತ್ತೆ ಎಂದಿದ್ದಾರೆ. ದೇವಸ್ಥಾನಕ್ಕೆ ಹೋಗುವಾಗ ಧರ್ಮಪಾಲನೆ ಮಾಡಬೇಕು ಅಂದರು.

ಸಿದ್ದರಾಮಯ್ಯಗೆ ಯತ್ನಾಳ್​​ ಸವಾಲ್

ಸಿದ್ದರಾಮಯ್ಯಗೆ ಯತ್ನಾಳ್​​ ಸವಾಲ್

  • Share this:
ಕೊಡಗಿನಲ್ಲಿ (Kodagu) ಮೊನ್ನೆ ಮೊನ್ನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೆರೆ ಹಾನಿ (Flood Effect) ವೀಕ್ಷಿಸಿದ್ರು. ಕೊಡಗಿನ ಭೇಟಿ ವೇಳೆ ಸಿದ್ದರಾಮಯ್ಯ ಮಧ್ಯಾಹ್ನ ಮಾಂಸಾಹಾರ (Non veg Dinner) ಭೋಜನ ಸವಿದು ದೇವಸ್ಥಾನಕ್ಕೆ (Temple Run) ತೆರಳಿದ್ದಾರೆ ಅನ್ನೋದು ರಾಜ್ಯದಲ್ಲಿ ಚರ್ಚೆಗೀಡಾಗಿದೆ. ಎಲ್ಲಾ ವಿವಾದದ ನಡುವೆಯೇ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ಮಾಂಸಾಹಾರ ತಿಂದು ಹೋದ್ರೆ ತಪ್ಪೇನು ಅಂತಾ ಪ್ರಶ್ನೆ ಮಾಡಿದ್ದಾರೆ. ವೀಣಾ ಅಚ್ಚಯ್ಯ ಕೂಡ ಸ್ಪಷ್ಟನೆ ಕೊಟ್ಟಿದ್ದಾರೆ. ಇದರ ನಡುವೆ ಬಿಜೆಪಿ (BJP) ನಾಯಕರು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ. ಸಂಸದ ಪ್ರತಾಪ್ ಸಿಂಹ ಬಳಿಕ ಈಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Yatnal) ಆಕ್ರೋಶ ಹೊರಹಾಕಿದ್ದಾರೆ.

ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದು ತಪ್ಪು. ಸಿದ್ದರಾಮಯ್ಯ ಮಾಂಸ ತಿಂದು ದೇವಸ್ಥಾನ ಪ್ರವೇಶದಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಅಂತಾ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರದಲ್ಲಿ ಹೇಳಿದ್ರು. ಇದೇ ವೇಳೆ ಸಿದ್ದರಾಮಯ್ಯಗೆ ಯತ್ನಾಳ್ ಸವಾಲ್ ಹಾಕಿದ್ರು.

ಸಿದ್ದರಾಮಯ್ಯಗೆ ಯತ್ನಾಳ್ ಸವಾಲ್!

ಸಿದ್ದರಾಮಯ್ಯಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲ್ ಹಾಕಿ, ಸಿದ್ದರಾಮಯ್ಯಗೆ ತಾಕತ್ತು ಇದ್ದರೆ ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿ. ಆಗ ನಿಮ್ಮ ತಾಕತ್ತು ಗೊತ್ತಾಗುತ್ತೆ ಎಂದಿದ್ದಾರೆ. ದೇವಸ್ಥಾನಕ್ಕೆ ಹೋಗುವಾಗ ಧರ್ಮಪಾಲನೆ ಮಾಡಬೇಕು. ದೇವಸ್ಥಾನದ ಪಾವಿತ್ರ್ಯತೆ ಕಾಪಾಡಬೇಕು ಅಂದರು.

If Siddaramaiah has the strength let him eat pork and go to the masjid
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್


ದೇಗುಲದ ನಿಯಮ ಪಾಲನೆ ಪ್ರತಿ ನಾಗರಿಕನ ಕರ್ತವ್ಯ. ಸಿದ್ದರಾಮಯ್ಯ ಉದ್ಧಟತನ ಮಾಡ್ತಿದ್ದಾರೆ. ಸಿದ್ದರಾಮಯ್ಯ ಹಿಂದೂಗಳ ಮನಸ್ಸಿಗೆ ನೋವು ಮಾಡಬಾರದು ಅಂತಾ ಹೇಳಿದ್ರು. ಸಿದ್ದರಾಮಯ್ಯ ಮಡಿಕೇರಿಯಲ್ಲಿ ಊಟ ಸೇವಿಸಿ ಸಂಜೆ ದೇಗುಲಕ್ಕೆ ಹೋಗಿದ್ದರು.‘ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿದ್ದು ಸತ್ಯ’

ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿದ್ದು ಸತ್ಯ. ಆ ದಿನ ನಾನು ಅವರ ಜೊತೆಯಿದ್ದೆ ಅಂತಾ ಮೈಸೂರಲ್ಲಿ ಮಾಜಿ ಮೇಯರ್ ರವಿಕುಮಾರ್ ಹೇಳಿದ್ದಾರೆ. ಅಲ್ಲಿ ವೆಜ್- ನಾನ್ ವೆಜ್ ಎರಡೂ ವ್ಯವಸ್ಥೆ ಮಾಡಿದ್ದರು. ಅವರು ನಾನ್ ವೆಜ್ ತಿಂದು ನಂದಿಪೂಜೆ ಮಾಡಿದ್ರು ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ಕೊಡಗಿಗೆ ಟಿಪ್ಪು ಬಂದಾಗಲೇ ಹೆದರಲಿಲ್ಲ, ಸಿದ್ದು ಸುಲ್ತಾನ್ ಬಂದ್ರೆ ಹೆದರ್ತೀವಾ?; ಪ್ರತಾಪ್ ಸಿಂಹ

ಯಾವುದೇ ಮೈದಾನವಿರಲಿ ಅದು ಸರ್ಕಾರದ ಆಸ್ತಿ- ಯತ್ನಾಳ್

ಈದ್ಗಾ ಮೈದಾನಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸೋ ವಿಚಾರಕ್ಕೆ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ. ದೇಶದ ಯಾವುದೇ ಮೈದಾನದಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬಹುದು. ಯಾವುದೇ ಮೈದಾನವಿರಲಿ ಅದು ಸರ್ಕಾರದ ಆಸ್ತಿ. ಅಲ್ಲಿ ಗಣಪತಿ ಕೂರಿಸಬೇಡಿ ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. ಈದ್ಗಾ ಮೈದಾನ ವರ್ಷಕ್ಕೊಮ್ಮೆ ನಮಾಜ್ ಮಾಡಲು ಅಷ್ಟೇ ಅಂತಾ ಹೇಳಿದ್ದಾರೆ.

If Siddaramaiah has the strength let him eat pork and go to the masjid
ಭೋಜನ ಸವಿಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ


ಮೈದಾನ ಇವರಪ್ಪನ ಆಸ್ತಿಯಾ?

ಈದ್ಗಾ ಮೈದಾನಗಳಲ್ಲಿ ಗಣಪತಿಯನ್ನೂ ಕೂರಿಸುತ್ತೇವೆ, ರಾಷ್ಟ್ರಧ್ವಜವನ್ನೂ ಹಾರಿಸುತ್ತೇವೆ. ಈದ್ಗಾ ಮೈದಾನಗಳಲ್ಲಿ ಕ್ರಿಶ್ಚಿಯನ್, ಮುಸ್ಲಿಂ, ಹಿಂದೂಗಳು ಕಾರ್ಯಕ್ರಮ ಮಾಡಲಿ. ಗಣಪತಿ ಕೂರಿಸುವುದು ಬೇಡ ಎನ್ನಲು ಇವರಪ್ಪನ ಆಸ್ತಿಯಾ, ಇದು ಪಾಕಿಸ್ತಾನನಾ ಎಂದು ಯತ್ನಾಳ್ ಪ್ರಶ್ನೆ ಮಾಡಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ಕಿಡಿ
ಆಗಸ್ಟ್ 26ರಂದು ಮಡಿಕೇರಿ ಚಲೋ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ಟಿಪ್ಪು ಕೊಡಗಿಗೆ ಬಂದಾಗಲೇ ಹೆದರಲಿಲ್ಲ, ಇನ್ನು ಸಿದ್ದು ಸುಲ್ತಾನ್ ಬಂದರೇ ಹೆದರುತ್ತೀವಾ ಎಂದು ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯ ಮೈಸೂರು, ಮಂಡ್ಯ, ಹಾಸನ‌ ಮಾತ್ರವಲ್ಲ ಪಕ್ಕದ ಕೇರಳದ ನಿಮ್ಮ ಸಾಕು ಮಕ್ಕಳನ್ನು ಕರೆದುಕೊಂಡು ಬನ್ನಿ ಎಂದರು.

ಇದನ್ನೂ ಓದಿ: ಮಾಂಸ ತಿಂದು ದೇವಸ್ಥಾನಕ್ಕೆ ಹೋದ್ರೆ ಏನ್ ತಪ್ಪು; ಸಿದ್ದರಾಮಯ್ಯ ಪರ ಮುತಾಲಿಕ್ ಬ್ಯಾಟ್

ಮಾಂಸ ತಿಂದು ದೇವಸ್ಥಾನಕ್ಕೆ ಬರಬೇಡಿ ಅಂತಾ ದೇವರು ಹೇಳಿದ್ದಾರಾ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ನಿಮ್ಮ ಶ್ರೀಮತಿ ಚಾಮುಂಡೇಶ್ವರಿ ಭಕ್ತೆ ಅವರು ಸಹ ಮಾಂಸ ತಿಂದು ದೇವಸ್ಥಾನಕ್ಕೆ ಬರುತ್ತಾರಾ ಕೇಳಿ ಎಂದಿದ್ದಾರೆ. ಒಂದು ವೇಳೆ ನಿಮ್ಮ ಶ್ರೀಮತಿ ಅವರು ಆ ರೀತಿ ಬಂದು ಹೇಳಿದ್ರೆ ನಾವು ಒಪ್ಪಿಕೊಳ್ಳುತ್ತೇವೆ ಎಂದರು.
Published by:Thara Kemmara
First published: