ಕೋಲಾರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Assembly Election) ಕೋಲಾರದಿಂದ (Kolar) ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸ್ಪರ್ಧಿಸುವುದು ಅನುಮಾನ ಎನ್ನಲಾಗಿದೆ. ಇದರ ನಡುವೆಯೇ ಸದ್ಯ ಕೋಲಾರದಿಂದ ಕಾಂಗ್ರೆಸ್ (Congress) ಅಭ್ಯರ್ಥಿ ಯಾರು ಆಗಲಿದ್ದಾರೆ ಅನ್ನೋ ಕುತೂಹಲ ಕೆರಳಿಸಿದೆ. ಏಕೆಂದರೆ ಕಳೆದ 15 ವರ್ಷಗಳಿಂದ ಕೋಲಾರದಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ವಿ.ಆರ್ ಸುದರ್ಶನ್ (VR Sudarshan) ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಆಗುತ್ತಾರೆ ಎನ್ನಲಾಗುತ್ತಿದೆ. ಕೆಹೆಚ್ ಮುನಿಯಪ್ಪ (KH Muniyappa), ವಿಆರ್ ಸುದರ್ಶನ್‌ಗೆ ಟಿಕೆಟ್ ಕೊಡಿ ಅಂತಿದ್ದಾರೆ. ಡಿ.ಕೆ ಶಿವಕುಮಾರ್ (DK Shivakumar) ಬೆಂಬಲಿಗರಾಗಿರುವ ಎ ಶ್ರೀನಿವಾಸ್ ಕೂಡ ಟಿಕೆಟ್ ಗಾಗಿ ಲಾಬಿ ನಡೆಸಿದ್ದಾರೆ.
ಕೋಲಾರ ಟಿಕೆಟ್ಗಾಗಿ ಕಾಯುತ್ತಿದ್ದಾರೆ ಘಟಾನುಘಟಿ ಕೈ ನಾಯಕರು
ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡದಿದ್ದರೆ ಸ್ಥಳೀಯ ನಾಯಕರಿಗೆ ಟಿಕೆಟ್ ನೀಡಬೇಕು ಎಂಬ ಕೂಗು ಕೇಳಿ ಬಂದಿದೆ. ಗೋವಿಂದಗೌಡ, ಸಿ.ಆರ್ ಮನೋಹರ್, ನಸೀರ್ ಅಹಮದ್, ಊರುಬಾಗಿಲು ಶ್ರೀನಿವಾಸ್, ಮುಬಾರಕ್, ಎ ಶ್ರೀನಿವಾಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಇದನ್ನೂ ಓದಿ: Bengaluru: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಕ್ಕೆ ಮನೆಯ ಕಾಂಪೌಂಡ್ ಧ್ವಂಸ; ಮಗನ ಪರ ನಿಂತ ತಾಯಿ ಮೇಲೂ ಹಲ್ಲೆ
ಕಳೆದ 15 ದಿನಗಳಿಂದ ಕೋಲಾರದಲ್ಲಿ ಎ ಶ್ರೀನಿವಾಸ್ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಎ ಶ್ರೀನಿವಾಸ್ ಡಿಕೆ ಶಿವಕುಮಾರ್ ಅವರ ಬೆಂಬಲಿಗರಾಗಿದ್ದು, ಅವರಿಗೆ ಕೋಲಾರ ಟಿಕೆಟ್ ಸಿಗುತ್ತಾ ಎಂಬ ಮಾತು ಕೇಳಿ ಬಂದಿದೆ. ಇದರ ನಡುವೆಯೇ ಕೋಲಾರದ ವಿವಿಧ ಕಾರ್ಯಕ್ರಮದಲ್ಲಿ ಶ್ರೀನಿವಾಸ್ ಭಾಗಿಯಾಗುತ್ತಿದ್ದಾರೆ.
ಸ್ಥಳೀಯರಿಗೆ ಟಿಕೆಟ್ ಕೊಡಬೇಕು; ಕೆಹೆಚ್ ಮುನಿಯಪ್ಪ ಒತ್ತಾಯ
ಈ ನಡುವೆ ಬಹಿರಂಗ ವೇದಿಕೆಯಲ್ಲಿ ಮಾತನಾಡಿರುವ ಮಾಜಿ ಸಂಸದ ಕೆ.ಹೆಚ್ ಮುನಿಯಪ್ಪ ಅವರು, ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದ್ದ ಸಮಯದಲ್ಲಿ ಹಲವು ನಾಯಕರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ.
ಸಿದ್ದರಾಮಯ್ಯ ಅವರು ಟಿಕೆಟ್ಗೆ ಅರ್ಜಿ ಹಾಕುವ ಸಂದರ್ಭದಲ್ಲಿ ಕೋಲಾರ ಅಥವಾ ವರುಣಾ ಅಂತ ಯಾವುದೇ ಕ್ಷೇತ್ರದ ಹೆಸರು ಬರೆದಿಲ್ಲ. ಈಗ ಹೈಕಮಾಂಡ್ ಈ ಬಗ್ಗೆ ನಿರ್ಧಾರ ಮಾಡುತ್ತೆ. ಒಂದೊಮ್ಮೆ ಅವರು ಕೋಲಾರದಲ್ಲಿ ಸ್ಪರ್ಧೆ ಮಾಡದಿದ್ದರೆ ವಿಆರ್ ಸುದರ್ಶನ್, ಶ್ರೀನಿವಾಸ್, ಮುಬಾಕರ್ ಅವರ ಹೆಸರನ್ನು ಗಮನದಲ್ಲಿ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ.
ಸ್ಥಳೀಯರಿಗೆ ಕೋಲಾರ ಟಿಕೆಟ್ ಸಿಗಬೇಕು
ಈ ಬಗ್ಗೆ ಮಾತನಾಡಿರುವ ವಿಆರ್ ಸುದರ್ಶನ್ ಅವರು, ಟಿಕೆಟ್ ಕೊಡುವುದು ಕೋಲಾರ ಜನರ ಅಸ್ಮಿತೆ, ಸ್ವಾಭಿಮಾನದ ಪ್ರಶ್ನೆ. ಸಿದ್ದರಾಮಯ್ಯ ಸ್ಪರ್ಧೆಯಿಂದ ಹಿಂದೆ ಸರಿದರೆ ಸ್ಥಳೀಯರಿಗೆ ಕೋಲಾರ ಟಿಕೆಟ್ ಸಿಗಬೇಕು. ಇದರಲ್ಲಿ ಯಾವುದೇ ರಾಜಿಯ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್ ಮಾತನಾಡಿದ್ದು, ವರುಣಾದಿಂದಲೇ ಸ್ಪರ್ಧೆಗೆ ನಾನು ಸಿದ್ದರಾಮಯ್ಯ ಅವರಿಗೆ ಹೇಳಿದ್ದೇವೆ. ಅಂತಿಮವಾಗಿ ಹೈಕಮಾಂಡ್ ನಿರ್ಧಾರವೇ ಅಂತಿಮ ಅಂತ ಹೇಳಿದರು.
ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಾರಾ ಸಿದ್ದರಾಮಯ್ಯ?
ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕ್ಷೇತ್ರ ಟೆನ್ಷನ್ ಶುರುವಾಗಿದೆ. ಕೋಲಾರ ಸೇಫ್ ಅಲ್ಲ ಎನ್ನುವ ವರದಿ ಬೆನ್ನಲ್ಲೆ ಸಿದ್ದರಾಮಯ್ಯ, ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಪ್ಲ್ಯಾನ್ ಮಾಡಿದ್ದಾರಂತೆ. ಹೀಗಾಗಿ ಬಾದಾಮಿ ಕ್ಷೇತ್ರದ ಕಾಂಗ್ರೆಸ್ ವಲಯದಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇದೇ ತಿಂಗಳು 24ರಂದು ಬಾದಾಮಿ ಎಪಿಎಂಸಿ ಆವರಣದಲ್ಲಿ ಭರ್ಜರಿ ಕಾರ್ಯಕ್ರಮ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: Karnataka Election 2023: ನಾವು ಮುಸ್ಲಿಂ ವಿರೋಧಿಗಳಲ್ಲ, ಮುಸ್ಲಿಮರಲ್ಲೂ ಒಳ್ಳೆಯವರಿದ್ದಾರೆ; ಸಿ.ಟಿ ರವಿ
ಸಿದ್ದರಾಮಯ್ಯ ಮತ್ತೆ ಬಾದಾಮಿಯಿಂದ ಸ್ಪರ್ಧೆ ಮಾಡುವಂತೆ ಅಭಿಮಾನಿಗಳು ಒತ್ತಡ ಹಾಕುತ್ತಿದ್ದಾರೆ. ಕೋಲಾರ ಸೇಫ್ ಅಲ್ಲ, ಅಂದ ಮೇಲೆ ಬಾದಾಮಿಯಿಂದ ಸ್ಪರ್ಧೆ ಮಾಡಿ ಅಂತ ಅಭಿಮಾನಿಗಳು ಬಿಗಿ ಪಟ್ಟು ಹಿಡಿದಿದ್ದಾರಂತೆ. ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೂ ಎರಡನೇ ಕ್ಷೇತ್ರ ಬಾದಾಮಿ ಆಗಲಿ ಎನ್ನುವುದು ಸಿದ್ದರಾಮಯ್ಯ ಅವರ ಅಭಿಮಾನಿಗಳ ಆಸೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ