• Home
  • »
  • News
  • »
  • state
  • »
  • CM BSY: ಆಗಸ್ಟ್ 15ರ ಮುಂಚೆಯೇ ಸಿಎಂ ಬಿಎಸ್​ವೈ ರಾಜೀನಾಮೆ? ವಿಧಾನಸೌಧದ ಪಡಸಾಲೆಯಲ್ಲಿ ಏನಿದು ಗುಸುಗುಸು?

CM BSY: ಆಗಸ್ಟ್ 15ರ ಮುಂಚೆಯೇ ಸಿಎಂ ಬಿಎಸ್​ವೈ ರಾಜೀನಾಮೆ? ವಿಧಾನಸೌಧದ ಪಡಸಾಲೆಯಲ್ಲಿ ಏನಿದು ಗುಸುಗುಸು?

ಸಿಎಂ ಬಿಎಸ್​ ಯಡಿಯೂರಪ್ಪ.

ಸಿಎಂ ಬಿಎಸ್​ ಯಡಿಯೂರಪ್ಪ.

BSY: ಯಡಿಯೂರಪ್ಪನವರು ಅಧಿಕಾರಕ್ಕೆ ಬಂದು ಎರಡು ವರ್ಷಗಳು ಮುಕ್ತಾಯಗೊಳ್ಳುತ್ತಿದ್ದು ಜುಲೈ 26 ರ ನಂತರ ಅಥವಾ ಅದಕ್ಕೂ ಮುನ್ನವೇ ಯಡಿಯೂರಪ್ಪನವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದು ಪಕ್ಷದ ಆಪ್ತ ಮೂಲಗಳು ತಿಳಿಸಿವೆ.

  • Share this:

ಆಗಸ್ಟ್ 15 ರ ಮುನ್ನವೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ವಿದಾಯ ಹೇಳುವ ಸಮಯ ಒದಗಿಬಂದಿದ್ದು ಮುಖ್ಯಮಂತ್ರಿ ಸ್ಥಾನದಲ್ಲಿ ಇನ್ನು ಕೊಂಚ ಕಾಲ ಮುಂದುವರಿಯಬೇಕೆಂಬ ಯಡಿಯೂಪ್ಪನವರ ಆಸೆಗೆ ಕೇಂದ್ರ ಬಿಜೆಪಿ ತಣ್ಣೀರೆರಚಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದು ಎರಡು ವರ್ಷಗಳು ಮುಕ್ತಾಯಗೊಳ್ಳುತ್ತಿದ್ದು ಜುಲೈ 26 ರ ನಂತರ ಅಥವಾ ಅದಕ್ಕೂ ಮುನ್ನವೇ ಯಡಿಯೂರಪ್ಪನವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದು ಪಕ್ಷದ ಆಪ್ತ ಮೂಲಗಳು ತಿಳಿಸಿವೆ ಎಂದು ಡೆಕ್ಕನ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.


ಆದರೆ ಮುಖ್ಯಮಂತ್ರಿ ವಲಯಗಳು ಈ ಸುದ್ದಿಯನ್ನು ಅಲ್ಲಗೆಳೆಯುತ್ತಿದ್ದು ಇದೆಲ್ಲಾ ಊಹಪೋಹಗಳು ಎಂದು ತಿಳಿಸಿವೆ. ಯಡಿಯೂರಪ್ಪನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೇ ಇದ್ದರೆ ಆಡಳಿತದ ಮೇಲೆ ಇದು ಕೆಟ್ಟ ಪರಿಣಾಮವನ್ನು ಬೀರುವ ಸಾಧ್ಯತೆ ಇದೆ ಎಂಬುದು ಬಲ್ಲ ಮೂಲಗಳು ದೃಢೀಕರಿಸಿವೆ. ಕಳೆದ ವಾರವಷ್ಟೇ ಯಡಿಯೂರಪ್ಪನವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಗಣ್ಯರನ್ನು ಭೇಟಿ ಮಾಡಲು ದೆಹಲಿಗೆ ಪ್ರಯಾಣ ಮಾಡಿರುವ ಮುನ್ನವೇ ಯಡಿಯೂರಪ್ಪನವರ ಮುಖ್ಯಮಂತ್ರಿ ಸ್ಥಾನದ ನಿರ್ಗಮನ ನಿಶ್ಚಯವಾಗಿತ್ತು. ಸುದ್ದಿಮೂಲದ ಪ್ರಕಾರ ಯಡಿಯೂರಪ್ಪನವರ ರಾಜೀನಾಮೆ ಪತ್ರವನ್ನು ವಾರಗಳ ಮುಂಚೆಯೇ ಸಿದ್ಧಪಡಿಸಲಾಗಿದೆ ಎಂಬ ಮಾಹಿತಿಯೂ ಇದೆ.


ಇದನ್ನೂ ಓದಿ: Infosys Sudha Murthy: ನಿಮ್ಮ ಮಗಳನ್ನು ಮದುವೆಯಾಗ್ತೀನಿ ಎಂದು ಬಂದ ಹುಡುಗನಿಗೆ ಸುಧಾ ಮೂರ್ತಿ ಕೇಳಿದ್ದು ಒಂದೇ ಪ್ರಶ್ನೆ.. ಏನದು ?

ಶಿವಮೊಗ್ಗದಲ್ಲಿ ಕೆಲವೊಂದು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯನ್ನು ಯಡಿಯೂರಪ್ಪನವರು ಮಾಡಬೇಕಾಗಿರುವುದರಿಂದ ಅವರಿಗೆ ಇನ್ನಷ್ಟು ಹೆಚ್ಚಿನ ಕಾಲಾವಕಾಶ ಬೇಕಾಗಿದೆ ಎಂಬುದಾಗಿ ರಾಜಕೀಯ ವಕ್ತಾರರು ತಿಳಿಸಿದ್ದಾರೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಮಾತನಾಡಿರುವ ಆಡಿಯೋ ಕ್ಲಿಪ್ ಒಂದು ವೈರಲ್ ಆಗಿದ್ದು, ಯಡಿಯೂರಪ್ಪನವರು ತಮ್ಮ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡುವ ಸುದ್ದಿಯನ್ನು ಇದು ದೃಢೀಕರಿಸಿದ್ದು ಹೊಸ ಮುಖ್ಯಮಂತ್ರಿಗಳ ಕುರಿತು ಹಾಗೂ ಕ್ಯಾಬಿನೆಟ್ ಪುನರ್‌ರಚನೆಯ ಮಾಹಿತಿ ಕೂಡ ದೊರಕಿದೆ ಎಂಬ ಅಂಶ ತಿಳಿದು ಬಂದಿದೆ. ಆದರೆ ನಳಿನ್ ಕುಮಾರ್ ಇದನ್ನು ತಳ್ಳಿಹಾಕಿದ್ದು ಆಡಿಯೋ ಕ್ಲಿಪ್‌ನಲ್ಲಿ ಸಂಭಾಷಣೆ ಮಾಡಿರುವ ಧ್ವನಿ ನನ್ನದಲ್ಲ ಎಂದು ತಿಳಿಸಿದ್ದಾರೆ.


ಈ ಕ್ಲಿಪ್‌ನಲ್ಲಿ ಇರುವ ಮಾಹಿತಿ ಪ್ರಕಾರ ಮೂರು ಅಭ್ಯರ್ಥಿಗಳನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಈಗಾಗಲೇ ಆಯ್ಕೆಮಾಡಲಾಗಿದ್ದು, ಆ ಮೂವರಲ್ಲಿ ಯಾರದರೊಬ್ಬರು ಸಿಎಮ್ ಕುರ್ಚಿಯನ್ನು ಅಲಂಕರಿಸಬಹುದು ಇಲ್ಲಿಂದ ಬೇರೆ ಯಾರೂ ಆಯ್ಕೆಯಾಗಿಲ್ಲ, ಇನ್ನು ದೆಹಲಿ ಹೈಕಮಾಂಡ್ ಆ ಮೂವರಲ್ಲಿ ಒಬ್ಬರನ್ನು ಸಿಎಮ್ ಆಗಿ ಆಯ್ಕೆಮಾಡಲಿದೆ ಎಂದು ಹೇಳಲಾಗಿದೆ.


ಇದನ್ನೂ ಓದಿ: ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದ್ರೆ ಆರೋಗ್ಯ ವೃದ್ಧಿ! ಮಡಿಕೆಗೂ ಆರೋಗ್ಯಕ್ಕೂ ನಡುವೆ ಆಯುರ್ವೇದದ ನಂಟು

ಆಡಿಯೋದಲ್ಲಿ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ ಕ್ಯಾಬಿನೆಟ್‌ನಲ್ಲಿ ಕೂಡ ಪ್ರಮುಖ ಬದಲಾವಣೆಗಳಾಗಲಿದ್ದು ಈಶ್ವರಪ್ಪ, ಜಗದೀಶ್ ಶೆಟ್ಟರ್ ಮತ್ತು ತಂಡವನ್ನು ಪಕ್ಷದಿಂದ ಹೊರಹಾಕಲಿದ್ದು ಹೊಸ ತಂಡವನ್ನು ರಚಿಸಲಾಗುತ್ತದೆ ಎಂದಾಗಿದೆ. ಕೆ.ಎಸ್ ಈಶ್ವರಪ್ಪನವರು ಗ್ರಾಮೀಣಾಭಿವೃದ್ಧಿಹಾಗೂ ಪಂಚಾಯತ್ ರಾಜ್ ಸಚಿವರಾಗಿದ್ದು, ಜಗದೀಶ್ ಶೆಟ್ಟರ್ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೈಗಾರಿಕಾ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಪಕ್ಷದ ಹೆಸರನ್ನು ಕೆಡಿಸಬೇಕೆಂಬ ಉದ್ದೇಶದಿಂದ ಈ ಆಡಿಯೋ ಕ್ಲಿಪ್ ಅನ್ನು ಸೋರಿಕೆ ಮಾಡಲಾಗಿದ್ದು ಇದರಕುರಿತು ತನಿಖೆಯಾಗಬೇಕೆಂದು ಯಡಿಯೂರಪ್ಪನವರಿಗೆ ನಳಿನ್ ಕುಮಾರ್ ವಿನಂತಿಸಿದ್ದಾರೆ. ಹಾಗೆಯೇ ಈ ಆಡಿಯೋ ಕ್ಲಿಪ್‌ನಲ್ಲಿರುವ ಧ್ವನಿ ನನ್ನದಲ್ಲದ ಕಾರಣ ಇದರ ಬಗ್ಗೆ ನಾನು ಹೆಚ್ಚು ಹೇಳುವುದಿಲ್ಲವೆಂದು ಅವರು ತಿಳಿಸಿದ್ದಾರೆ. ಯಡಿಯೂರಪ್ಪನವರು ಪಕ್ಷದ ಆತ್ಮವಿದ್ದಂತೆ ಹಾಗೆಯೇ ಈಶ್ವರಪ್ಪ ಮತ್ತು ಶೆಟ್ಟರ್ ಕಣ್ಣುಗಳಿದ್ದಂತೆ. ನಾಯಕತ್ವ ಬದಲಾವಣೆಯಲ್ಲಿ ಯಾವುದೇ ಮಾರ್ಪಾಡುಗಳಿಲ್ಲ ಇದೆಲ್ಲಾ ಮೋಸದ ಕಟ್ಟುಕಥೆಯಾಗಿದೆ ಎಂದು ನಳಿನ್ ಆರೋಪಿಸಿದ್ದಾರೆ.
ಆಡಿಯೋ ಕ್ಲಿಪ್ ಕುರಿತಂತೆ ಈಶ್ವರಪ್ಪನವರು ಪ್ರತಿಕ್ರಿಯಿಸಿದ್ದು ಪಕ್ಷದಲ್ಲಿ ನಾನು ಅಧಿಕಾರದ ಆಸೆಯಿಂದಾಗಿ ಕೆಲಸ ಮಾಡುತ್ತಿಲ್ಲ. ಹಿಂದೂ ದೇಶ ಹಾಗೂ ಹಿಂದೂ ರಾಷ್ಟ್ರದ ಅಭಿವೃದ್ಧಿಗಾಗಿ ನಾನು ಪಣ ತೊಟ್ಟಿದ್ದೇನೆ ಹಾಗೂ ಅದರ ಸಲುವಾಗಿಯೇ ನಾನು ಪಕ್ಷದಲ್ಲಿ ಕೆಲಸ ಮಾಡುತ್ತಿರುವೆ ಎಂದು ತಿಳಿಸಿದ್ದಾರೆ.

Published by:Soumya KN
First published: