ಬೆಂಗಳೂರು: ಇಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಆರ್.ಅಶೋಕ್ (Former Minister R Ashok), ಸಚಿವ ಪ್ರಿಯಾಂಕ್ ಖರ್ಗೆ (Minister Priyank Kharge) ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ನಿಮ್ಮ ಅಪ್ಪ, ಅಜ್ಜಿ, ಮುತ್ತಾತ್ತನ ಕೈಯಲ್ಲೇ ಆಗಿಲ್ಲ. ಇವಾಗ ದೇಶದಲ್ಲಿ ನಿಮ್ಮ ಸರ್ಕಾರ ನೆಗೆದು ಬಿದ್ದಿದೆ. ಇವಾಗ ತಾಕತ್ ಧಮ್ ಇದ್ರೆ, ಬಜರಂಗ ದಳ (Bajrangdal) ಆಗಲಿ ಆಥವಾ ಒಂದು ಆರ್ಎಸ್ಎಸ್ ಶಾಖೆಯನ್ನು (RSS Branch) ಬ್ಯಾನ್ ಮಾಡಿ. ಬ್ಯಾನ್ ಮಾಡಿದ ಮೂರು ತಿಂಗಳಿಗೆ ನಿಮ್ಮ ಸರ್ಕಾರ ಇರಲ್ಲ ಎಂದು ಆರ್ ಅಶೋಕ್ ಗುಡುಗಿದರು.
ನಿಮ್ಮ ಗೂಟದ ಕಾರುಗಳೆಲ್ಲ ಎಲ್ಲವೂ ವಾಪಸ್ಸು ಹೋಗಬೇಕು. ಈ ದೇಶದ ಪ್ರಧಾನಿಗಳು ಆರ್ಎಸ್ಎಸ್ನವರು. ಆರ್ಎಸ್ಎಸ್ ಒಂದು ಹಿಂದೂಗಳ ಧ್ವನಿ ಎಂದು ಆರ್ ಅಶೋಕ್ ಹೇಳಿದರು.
ಬಸ್ ಫ್ರೀ ಯಾವಾಗ?
ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ. ಅತ್ತೆ, ತಾಯಿ, ಮಾವನ ಮನೆಗೆ, ದೇವಸ್ಥಾನಕ್ಕೆ ಹೋಗಲು ಬಸ್ ಫ್ರೀ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದ್ರೆ ಈವರೆಗೆ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ. ಗ್ಯಾರಂಟಿ ಘೋಷಣೆ ಮಾಡುವಾಗ ಯೋಚನೆ ಮಾಡಿರಲಿಲ್ಲವಾ ಎಂದು ಆರ್ ಅಶೋಕ್ ಪ್ರಶ್ನೆ ಮಾಡಿದರು.
ಇದನ್ನೂ ಓದಿ: Cabinet Expansion: ಖರ್ಗೆ ಸೂತ್ರದಡಿಯಲ್ಲಿಯೇ ಸಂಪುಟ ರಚನೆ? ಈ ಎರಡು ಸಮುದಾಯಗಳಿಗೆ ಅಗ್ರಸ್ಥಾನ!
ವಿದ್ಯುತ್ ಬಿಲ್ ಕಟ್ಟಬೇಡಿ!
ನಿರುದ್ಯೋಗಿ ಯುವಕರಿಗೆ ಭತ್ಯೆ ಕೊಡ್ತೀನಿ ಅಂದಿದ್ದೀರಿ. ಪಾಪ, ಎಷ್ಟೋ ಹುಡುಗರು ಉದ್ಯೋಗ ಇಲ್ಲದೇ ಅಲೆದು ಪಾಪ ಇವರಿಗೆ ಮತ ಹಾಕಿದ್ದಾರೆ. ಆದರೆ ಈ ವರ್ಷ ಪಾಸ್ ಆದವರಿಗೆ ಎಂದು ಹೇಳುತ್ತಿದ್ದಾರೆ. ಗ್ಯಾರಂಟಿ ಕಾರ್ಡ್ಗಳಿಗೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಗ್ಯಾರಂಟಿ ಕಾರ್ಡ್ಗೆ ಸಹಿ ಹಾಕಿದ್ದಾರೆ. ಹಾಗಾಗಿ ಯಾರೂ ವಿದ್ಯುತ್ ಬಿಲ್ ಪಾವತಿ ಮಾಡಬೇಕಿಲ್ಲ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ