ಹುಚ್ಚುನಾಯಿಗೆ ಹೊಡೆದಂತೆ ಕಲ್ಲು ಹೊಡೆಯಿರಿ: ರಮೇಶ್​ ಬೆಂಬಲಿಗರಿಂದ ದೌರ್ಜನ್ಯವಾಗುತ್ತಿದೆ ಎಂದ ಮಹಿಳೆಗೆ ಸತೀಶ್ ಜಾರಕಿಹೊಳಿ ಸಲಹೆ

ರಮೇಶ್​ ಜಾರಕಿಹೊಳಿ ಬೆಂಬಲಿಗರು ಇನ್ಮುಂದೆ ತೊಂದರೆ ಕೊಡಲು ಬಂದರೆ ಅವರನ್ನು ಹುಚ್ಚು ನಾಯಿ ಓಡಿಸಿದಂತೆ ಕಲ್ಲು ತೆಗೆದು ಎಸೆಯಿರಿ. ಡವರಿಗೆ ದಯೆ ತೋರದ ಅವರನ್ನು ಹಾಗೇಯೇ ನೋಡಬೇಕು. ನಿಮಗೆ ಏನು ಬೇಕೋ ಅದಕ್ಕೆ ನಾನಿರುತ್ತೇನೆ ಹೆದರಬೇಡಿ

Seema.R | news18-kannada
Updated:November 7, 2019, 11:23 AM IST
ಹುಚ್ಚುನಾಯಿಗೆ ಹೊಡೆದಂತೆ ಕಲ್ಲು ಹೊಡೆಯಿರಿ: ರಮೇಶ್​ ಬೆಂಬಲಿಗರಿಂದ ದೌರ್ಜನ್ಯವಾಗುತ್ತಿದೆ ಎಂದ ಮಹಿಳೆಗೆ ಸತೀಶ್ ಜಾರಕಿಹೊಳಿ ಸಲಹೆ
ಸತೀಶ್ ಜಾರಕಿಹೊಳಿ
  • Share this:
ಬೆಳಗಾವಿ (ನ.06): ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಬೆಂಬಲಿಗರಾದ ಅಂಬಿರಾವ್ ಮತ್ತವರ ಬೆಂಬಲಿಗರು  ನಡೆಸುತ್ತಿರುವ ದಬ್ಬಾಳಿಕೆ ಕುರಿತು ಮಹಿಳೆಯೊಬ್ಬರು ಮಾಜಿ ಸಚಿವ ಸತೀಶ್​ ಜಾರಕಿಹೊಳಿ ಅಳಲು ತೊಡಿಕೊಂಡಿದ್ದಾರೆ. 

ಪ್ರವಾಹ ಕುರಿತು ಪರಿಹಾರ ಕ್ರಮಕ್ಕೆ 25 ಸಾವಿರ ಲಂಚ ಕೇಳುತ್ತಿದ್ದಾರೆ. ಸೂರು ಕಳೆದುಕೊಂಡ ನಮಗೆ ಪುನರ್ವಸತಿ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರೆ, ನಮ್ಮ ಬಳಿಯೇ ಲಂಚ ಕೇಳುತ್ತಾರೆ. ಇಪ್ಪತ್ತು ವರ್ಷದಿಂದ ಗ್ರಾಮಕ್ಕೆ ರಸ್ತೆ ಸೇತುವೆ ಮಾಡುವಂತೆ ಮನವಿ ಮಾಡಿದೇವು. ಅರ್ಧ ಕೆಲಸ ಮಾಡಿ ಕೈ ಬಿಟ್ಟರು. ಕಡೆಗೆ ಗ್ರಾಮಸ್ಥರೆಲ್ಲರೂ ಸೇರಿ ಹಣ ಹಾಕಿ ರಸ್ತೆ ಮಾಡಿಕೊಂಡಿದ್ದೇವೆ. ಈಗ ಪರಿಹಾರ ಕೇಳಲು ಹೋದರೆ ನನಗೆ ಮತ ಹಾಕಿಲ್ಲ ಎಂದು ದಬಾಯಿಸುತ್ತಾರೆ ಎಂದು ಕಣ್ಣೀರಿಟ್ಟರು.

ನಾನು ಆಸ್ಪತ್ರೆ  ಸೇರಿದರು ಅವರ ಬೆಂಬಲಿಗರು ಅಲ್ಲಿಗೆ ಬಂದು ಹಣ ಕೀಳುತ್ತಿದ್ದಾರೆ. ತಮಗೆ ನೆರವು ನೀಡಬೇಕು ಎಂದು ಕಮಲವ್ವ ಎಂಬ ಮಹಿಳೆ ಸತೀಶ್​ ಜಾರಕಿಹೊಳಿ ಮುಂದೆ ತಮ್ಮ ಕಷ್ಟ ಹೇಳಿಕೊಂಡರು.

ಈ ವೇಳೆ ಮಹಿಳೆಗೆ ಸಾಂತ್ವನ  ಹೇಳಿದ ಸತೀಶ್​ ಜಾರಕಿಹೊಳಿ, ರಮೇಶ್​ ಜಾರಕಿಹೊಳಿ ಬೆಂಬಲಿಗರು ಇನ್ಮುಂದೆ ತೊಂದರೆ ಕೊಡಲು ಬಂದರೆ ಅವರನ್ನು ಹುಚ್ಚು ನಾಯಿ ಓಡಿಸಿದಂತೆ ಕಲ್ಲು ತೆಗೆದು ಎಸೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಓದಿ: ಮಾಜಿ ಪ್ರಧಾನಿ ದೇವೇಗೌಡರ ಪ್ರತಿಭಟನೆಗೆ ಮಣಿದ ಮುಖ್ಯಮಂತ್ರಿ: ಯಾದಗಿರಿ ಪಿಎಸ್​​ಐ ಎತ್ತಂಗಡಿ !

ರಮೇಶ್​ ಅಳಿಯ ಅಂಬಿರಾವ್​ ಅವರನ್ನು ನಾಯಿಗೆ ಹೋಲಿಸಿದ ಸತೀಶ್​, ಬಡವರಿಗೆ ದಯೆ ತೋರದ ಅವರನ್ನು ಹಾಗೇಯೇ ನೋಡಬೇಕು. ನಿಮಗೆ ಏನು ಬೇಕೋ ಅದಕ್ಕೆ ನಾನಿರುತ್ತೇನೆ ಹೆದರಬೇಡಿ ಎಂದು ಧೈರ್ಯ ತುಂಬಿದರು.

First published:November 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ