ಬಿಜೆಪಿಗೆ ಜೆಡಿಎಸ್ ಬಾಹ್ಯ ಬೆಂಬಲ ಘೋಷಿಸುವ ವಿಚಾರ; ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅಂಗಳದಲ್ಲಿ ಚೆಂಡು

ತಮಗೆ ಅಧಿಕಾರ ನಡೆಸಲು ಬಿಡದ ಬಿಜೆಪಿ ಪಕ್ಷವನ್ನೂ ಅಧಿಕಾರದಿಂದ ದೂರ ಸರಿಸಬೇಕು, ಹೆಜ್ಜೆ ಹೆಜ್ಜೆಗೂ ಸಂಕಷ್ಟಗಳನ್ನು ತಂದೊಡ್ಡಬೇಕು ಎಂದು ಕಾಂಗ್ರೆಸ್ ನಾಯಕರು ತಂತ್ರ ರೂಪಿಸುತ್ತಿರುವ ಬೆನ್ನಿಗೆ, ಕಮಲ ಪಾಳಯಕ್ಕೆ ಬಾಹ್ಯ ಬೆಂಬಲ ನೀಡುವ ಕುರಿತು ಜೆಡಿಎಸ್ ಪಕ್ಷದ ಚರ್ಚೆ ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

MAshok Kumar | news18
Updated:July 27, 2019, 10:21 AM IST
ಬಿಜೆಪಿಗೆ ಜೆಡಿಎಸ್ ಬಾಹ್ಯ ಬೆಂಬಲ ಘೋಷಿಸುವ ವಿಚಾರ; ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅಂಗಳದಲ್ಲಿ ಚೆಂಡು
ಹೆಚ್​.ಡಿ. ದೇವೇಗೌಡ
  • News18
  • Last Updated: July 27, 2019, 10:21 AM IST
  • Share this:
ಬೆಂಗಳೂರು (ಜುಲೈ.27); ಜೆಡಿಎಸ್ ಪಕ್ಷದ ಬಹುತೇಕ ಶಾಸಕರು ಬಿಜೆಪಿಗೆ ಬಾಹ್ಯ ಬೆಂಬಲ ನೀಡಲು ಮನಸ್ಸು ಮಾಡಿದ್ದಾರೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯ ಬಳಿಯೂ ಚರ್ಚಿಸಿದ್ದಾರೆ. ಆದರೆ, ಇಂದು ಈ ಕುರಿತು ಹೆಚ್.ಡಿ. ದೇವೇಗೌಡ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಶುಕ್ರವಾರ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಲವಾರು ಶಾಸಕರು ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡೋಣ, ಪಕ್ಷ ಸಂಘಟನೆ ಮಾಡೋಣ ಎಂದು ಅಭಿಪ್ರಾಯಪಟ್ಟಿದ್ದರೆ, ಮತ್ತೆ ಕೆಲವರು ಬಿಜೆಪಿ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡೋಣ ಎಂದು ತಮ್ಮ ಒತ್ತಾಸೆಯನ್ನು ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ತಿಳಿಸಿ ಒತ್ತಡ ಹಾಕಿದ್ದಾರೆ. ಅಲ್ಲದೆ, ಈ ಕುರಿತು ಸಭೆಯಲ್ಲಿ ವಿಸ್ಕೃತ ಚರ್ಚೆಯೂ ನಡೆದಿದೆ.

ಶಾಸಕರ ಜೊತೆಗಿನ ಈ ಚರ್ಚೆಯನ್ನು ಕುಮಾರಸ್ವಾಮಿ ಇಂದು ದೇವೇಗೌಡ ಅವರನ್ನು ಭೇಟಿಯಾಗಿ ತಿಳಿಸಲಿದ್ದಾರೆ. ಬೆಳಗ್ಗೆ 11 ಗಂಟೆಯ ನಂತರ ದೊಡ್ಡ ಗೌಡರನ್ನು ಭೇಟಿ ಮಾಡಲಿರುವ ಮಾಜಿ ಸಿಎಂ ಬಿಜೆಪಿಗೆ ಬೆಂಬಲ ನೀಡುವ ಕುರಿತು ಅವರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ‘ನಮಗೆ ಜೆಡಿಎಸ್ ಬಾಹ್ಯ ಬೆಂಬಲ ಬೇಕಿಲ್ಲ, ಅದರ ಅವಶ್ಯಕತೆಯೂ ಇಲ್ಲ’; ಸಂಸದೆ ಶೋಭಾ ಕರಂದ್ಲಾಜೆ!

ಆದರೆ, ಈ ಚರ್ಚೆಯ ವೇಳೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಬಿಜೆಪಿ ಪಕ್ಷಕ್ಕೆ ಬೆಂಬಲ ಕೊಡುವ ತಮ್ಮ ಶಾಸಕರ ನಿರ್ಧಾರವನ್ನು ಒಪ್ಪಿಕೊಳ್ತಾರ? ಅಥವಾ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವಂತೆ ಕುಮಾರಸ್ವಾಮಿಗೆ ಖಡಕ್ ಸೂಚನೆ ನೀಡ್ತಾರ? ಅನ್ನೋ ವಿಚಾರ ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಅಲ್ಲದೆ, ತಮಗೆ ಅಧಿಕಾರ ನಡೆಸಲು ಬಿಡದ ಬಿಜೆಪಿ ಪಕ್ಷವನ್ನೂ ಅಧಿಕಾರದಿಂದ ದೂರ ಸರಿಸಬೇಕು, ಹೆಜ್ಜೆ ಹೆಜ್ಜೆಗೂ ಸಂಕಷ್ಟಗಳನ್ನು ತಂದೊಡ್ಡಬೇಕು ಎಂದು ಕಾಂಗ್ರೆಸ್ ನಾಯಕರು ತಂತ್ರ ರೂಪಿಸುತ್ತಿರುವ ಬೆನ್ನಿಗೆ, ಕಮಲ ಪಾಳಯಕ್ಕೆ ಬಾಹ್ಯ ಬೆಂಬಲ ನೀಡುವ ಕುರಿತು ಜೆಡಿಎಸ್ ಪಕ್ಷದ ಚರ್ಚೆ ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇದನ್ನೂ ಓದಿ : ಪದಗ್ರಹಣದ ಬೆನ್ನಿಗೆ ಬಿಎಸ್​ವೈ ಮುಂದಿದೆ ಸಾಲು ಸಾಲು ಸವಾಲು; ರಣತಂತ್ರ ಹೆಣೆಯಲು ದೆಹಲಿಯೆಡೆ ಮುಖಮಾಡಿದ ನೂತನ ಸಿಎಂ!
First published:July 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ