ಪಕ್ಷ ಟಿಕೆಟ್​ ನೀಡಿದರೆ, ಚುನಾವಣೆಗೆ ಸ್ಪರ್ಧಿಸಲು ಸಿದ್ದ; ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್​

ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿದ್ದು, ವಿಧಾನಸಭಾ ಚುನಾವಣೆ ಆಕಾಂಕ್ಷಿ ಅಲ್ಲ. ಬದಲಾಗಿ  ಪಕ್ಷ ನಾನೇ ಚುನಾವಣೆಗೆ ನಿಲ್ಲಬೇಕು ಎಂದು ಆದೇಶ ಕೊಟ್ಟರೆ ಚುನಾವಣೆಗೆ ನಿಲ್ಲುತ್ತೇನೆ

ಎನ್​ಆರ್​ ಸಂತೋಷ್

ಎನ್​ಆರ್​ ಸಂತೋಷ್

  • Share this:
ಹಾಸನ (ಅ.10): ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿರುವ ಎನ್​ ಆರ್​ ಸಂತೋಷ್​​​ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಪಕ್ಷ ಇಚ್ಚಿಸಿದ್ದಲ್ಲಿ ಅರಸೀಕೆರೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವೇ ಎಂದು ಅವರು ತಿಳಿಸಿದ್ದಾರೆ. ಈ ಹಿಂದೆ ಬಿಎಸ್​ ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಎನ್​ ಆರ್​ ಸಂತೋಷ್​ ಆಪರೇಷನ್​ ಕಮಲದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬಿಎಸ್​ವೈ ಸಂಬಂಧಿಯೂ ಆಗಿರುವ ಇವರು ಸಿಎಂ ರಾಜಕೀಯ ಕಾರ್ಯದರ್ಶಿಯಾದ ಮೇಲೆ ಅರಸೀಕೆರೆ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ರಾಜಕೀಯ ಪ್ರವೇಶ ಕುರಿತು ಸಂತೋಷ್​ ಪ್ರಯತ್ನ ನಡೆಸುತ್ತಿರುವ ಕುರಿತು ಪರೋಕ್ಷ ಮಾತು ಕೇಳಿ ಬರುತ್ತಿತ್ತು. ಇಂದು ಈ ಕುರಿತು ಸಂತೋಷ್​ ನೇರವಾಗಿ ತಿಳಿಸಿದ್ದಾರೆ. ನಗರದಲ್ಲಿ ಇಂದು ಮಾತನಾಡಿದ ಅವರು,  ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿದ್ದು, ವಿಧಾನಸಭಾ ಚುನಾವಣೆ ಆಕಾಂಕ್ಷಿ ಅಲ್ಲ. ಬದಲಾಗಿ  ಪಕ್ಷ ನಾನೇ ಚುನಾವಣೆಗೆ ನಿಲ್ಲಬೇಕು ಎಂದು ಆದೇಶ ಕೊಟ್ಟರೆ ಚುನಾವಣೆಗೆ ನಿಲ್ಲುತ್ತೇನೆ ಎಂದಿದ್ದಾರೆ.

ಕ್ಷೇತ್ರದಲ್ಲಿ ಸಂತೋಷ್​ ಓಡಾಟ ಕುರಿತು ಶಾಸಕ ಶಿವಲಿಂಗೇಗೌಡ ಟೀಕೆಗೆ ಉತ್ತರಿಸಿದ ಅವರು, ನಾನು ಅಖಿಲಭಾರತ್ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತ ಆದಂಗಿನಿಂದಲೂ ಅರಸೀಕೆರೆಯಲ್ಲಿ ಓಡಾಟ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಸಕ್ರಿಯ ನಾಗಿದ್ದೇನೆ. ಡಿಎಂ ಕುರ್ಕೆಯ ಬೂತ್ ನಂ 42 ರಲ್ಲಿ ನನ್ನ‌ ಮತವಿದೆ. ಇದು ನನ್ನ ಊರು ಎಂದು ವಿಶೇಷ ಗಮನ ಕೊಡುತ್ತಿದ್ದೇನೆ. ಯಾರೂ ಇದನ್ನು ಅಪರಾಧ ಎಂದು ಹೇಳುವಂತಿಲ್ಲ ಎಂದು ತಿರುಗೇಟು ನೀಡಿದರು.

ಅರಸೀಕೆರೆ ನಗರಸಭೆ ಅಧ್ಯಕ್ಷ ಮೀಸಲಾತಿ ಕಾನೂನು ಬಾಹಿರ ಎಂಬ ಶಾಸಕ ಶಿವಲಿಂಗೇಗೌಡ ಆರೋಪಕ್ಕೆ ಉತ್ತರಿಸಿದ ಅವರು, ಕಾನೂನು ಮೀರಿ ಯಾವುದೇ ಮೀಸಲಾತಿ ಕೊಟ್ಟಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಅಧಿಕಾರಿಗಳು ಎಲ್ಲವನ್ನು ಪರಿಶೀಲಿಸಿ ಅರಸೀಕೆರೆಯಲ್ಲಿ ಎಸ್‌ಟಿ ಜನಾಂಗಕ್ಕೆ ಅನುಕೂಲ ಆಗುತ್ತೆ ಎಂದು ಮೀಸಲಾತಿ ಕೊಟ್ಟಿದ್ದಾರೆ ಎಂದರು.

ಇದೇ ವೇಳೆ ಶಿವಲಿಂಗೇಗೌಡರು ಮೀಸಲಾತಿ ವಿರುದ್ಧ ಹೋರಾಟ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.  ಅವರ ಕಾನೂನು ಹೋರಾಟದ ಬಗ್ಗೆ ಅರಸೀಕೆರೆ ಎಸ್‌ಟಿ ಸಮುದಾಯದ ಜನರಿಗೆ ತಿಳಿಸುವುದಾಗಿ ಹೇಳಿದರು.

ಪ್ರಮಾಣ ಮಾಡಲಿ ; ಸವಾಲ್​ ಹಾಕಿದ ಶಾಸಕರು

ಕಾನೂನು ಪ್ರಕಾರ ಈ ಬಾರಿ‌ ಅರಸೀಕೆರೆ ನಗರಸಭೆ ಅಧ್ಯಕ್ಷಗಾದಿಗೆ ಎಸ್‌ಟಿ ಮೀಸಲಾತಿ ಬಂದಿದೆ ಎಂದು ದೇವರ ಮುಂದೆ ಪ್ರಮಾಣ ಮಾಡಲಿ ಎಂದು ಇದೇ ವೇಳೆ ಶಾಸಕರು, ಸಂತೋಷ್​ಗೆ ಸವಾಲ್​ ಹಾಕಿದ್ದಾರೆ. ನಾನು ಹೇಳುತ್ತಿರುವುದು ಕಾನೂನಿನಲ್ಲಿ ತಪ್ಪಿದ್ದರೆ ಬೆಳಗ್ಗೆಯೇ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದರು

ಜೆಡಿಎಸ್‌ ಬಹುಮತವಿದ್ದರೂ ಮೀಸಲಾತಿಯಿಂದ ಅರಸೀಕೆರೆ ನಗರಸಭೆ ಅಧ್ಯಕ್ಷಗಾದಿ ಬಿಜೆಪಿ ಪಾಲಾಗಲಿದೆ. ಮೀಸಲಾತಿ ದೋಷದಿಂದ ಕೂಡಿದ್ದು ಈ ಬಗ್ಗೆ ನ್ಯಾಯಾಲಯದಲ್ಲಿ ಹೋರಾಟ ಮಾಡುವುದಾಗಿ ಅವರು ತಿಳಿಸಿದರು.

ಇದನ್ನು ಓದಿ: ರಾಜ್ಯ ಸರ್ಕಾರ ಇನ್ನೂ 3 ತಿಂಗಳು ಶಾಲೆ ತೆರೆಯದಿರುವುದು ಒಳಿತು; ಹೆಚ್​.ಡಿ. ಕುಮಾರಸ್ವಾಮಿ ಸಲಹೆಎಲ್ಲೆಲ್ಲಿ ಬಿಜೆಪಿಯವರನ್ನು ತಂದು ಕೂರಿಸಬಹುದೋ ಅಲ್ಲೆಲ್ಲ ಮೀಸಲಾತಿ ತಂದಿದ್ದಾರೆ. ಕಾನೂನನ್ನು ಮೀರಿ ಅವರಿಗೆ ಬೇಕಾದ ಕಡೆ ಮೀಸಲಾತಿ ಕೊಟ್ಟಿದ್ದಾರೆ. ಎಸ್‌ಟಿ ಸದಸ್ಯ ಜೆಡಿಎಸ್‌ನಿಂದ ಗೆದ್ದಿದ್ದರೆ ಮೀಸಲಾತಿ ಮಾಡಿಸುತ್ತಿದ್ದರಾ? ಇವನು ಆತ್ಮಸಾಕ್ಷಿ ಮುಟ್ಟಿಕೊಂಡು ಹೇಳಲಿ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.ಅರಸೀಕೆರೆಯಲ್ಲಿ ನೆಮ್ಮದಿ ರಾಜಕಾರಣ ಇತ್ತು. ಈಗ ಬೆಂಕಿ ಹಾಕಲು ಬಂದಿದ್ದಾರೆ. ಜಾತಿ ಜಾತಿ ಎಂದು ಉರಿಸಲು ಬಂದಿದ್ದಾರೆ. ನಾನು ಅರಸೀಕೆರೆಯಲ್ಲಿ ಜಾತಿ ರಾಜಕಾರಣ ಮಾಡಿದ್ದೇನೆ ಎಂದರೆ, ಅವರ ಮನೆಯಲ್ಲಿ ಜೀತ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Published by:Seema R
First published: