• Home
  • »
  • News
  • »
  • state
  • »
  • BJP MLC: ಕುಮಾರಣ್ಣ ಸಿಎಂ ಆದ್ರೆ ಮೊದಲು ಖುಷಿ ಪಡೋದು ನಾನೇ; ಬಿಜೆಪಿ ಎಂಎಲ್​ಸಿ ಶಾಕಿಂಗ್ ಹೇಳಿಕೆ!

BJP MLC: ಕುಮಾರಣ್ಣ ಸಿಎಂ ಆದ್ರೆ ಮೊದಲು ಖುಷಿ ಪಡೋದು ನಾನೇ; ಬಿಜೆಪಿ ಎಂಎಲ್​ಸಿ ಶಾಕಿಂಗ್ ಹೇಳಿಕೆ!

ಎಚ್‌.ಡಿ. ಕುಮಾರಸ್ವಾಮಿ (ಸಂಗ್ರಹ ಚಿತ್ರ)

ಎಚ್‌.ಡಿ. ಕುಮಾರಸ್ವಾಮಿ (ಸಂಗ್ರಹ ಚಿತ್ರ)

ಮುಂದಿನ ಮುಖ್ಯಮಂತ್ರಿ ಕುಮಾರಣ್ಣ ಆದ್ರೆ, ಸಂತೋಷ ಪಡೋದ್ರಲ್ಲಿ ನಾನೂ ಕೂಡ ಒಬ್ಬ ಎಂದು ಬಿಜೆಪಿ ಎಂಎಲ್​ಸಿ ಹೇಳಿದ್ದಾರೆ. ಅಲ್ಲದೇ ನಮ್ಮ ಸಮುದಾಯವನ್ನ ಕೇಂದ್ರದಲ್ಲೂ ಕೂಡ ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಹೇಳಿದ್ದಾರೆ. 

  • News18 Kannada
  • Last Updated :
  • Karnataka, India
  • Share this:

ತುಮಕೂರು (ಅ.24): ಜೆಡಿಎಸ್ ವರಿಷ್ಠ ಹೆಚ್​. ಡಿ ಕುಮಾರಸ್ವಾಮಿ (H.D Kumaraswamy) ಮುಖ್ಯಮಂತ್ರಿ (Chief Minister) ಆದ್ರೆ ಮೊದಲು ಖುಷಿ ಪಡೋನು ನಾನೇ ಎಂದು ಬಿಜೆಪಿ ಎಂಎಲ್​ಸಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಹೆಚ್​.ಡಿ ಕುಮಾರಸ್ವಾಮಿ ಹಾಗೂ ನಂಜಾವದುತ ಸ್ವಾಮೀಜಿ ಎದುರಲ್ಲಿ ಹೇಳಿಕೆ ನೀಡಿದ್ದಾರೆ. ಕುಂಚಿಟಿಗ-ಒಕ್ಕಲಿಗ ಸಮಾವೇಶದಲ್ಲಿ (Okkaliga Convention) ಭಾಷಣ ಮಾಡುತ್ತಾ ಬಿಜೆಪಿ ಎಂಎಲ್ ಸಿ ಎಂ.ಚಿದಾನಂದಗೌಡ (BJP MLC M Chidanand Gowda), ಕುಮಾರಸ್ವಾಮಿ ಸಿಎಂ ಆಗಲ್ಬೇಕು ಎನ್ನುವ ತನ್ನ ಆಸೆಯನ್ನು ವ್ಯಕ್ತಪಡಿಸಿದ್ದಾರೆ. 


ಕುಮಾರಣ್ಣ ಸಿಎಂ ಆದ್ರೆ ನನಗೆ ಖುಷಿ


ಮುಂದಿನ ಮುಖ್ಯಮಂತ್ರಿ ಕುಮಾರಣ್ಣ ಆದ್ರೆ, ಸಂತೋಷ ಪಡೋದ್ರಲ್ಲಿ ನಾನೂ ಕೂಡ ಒಬ್ಬ ಎಂದು ಬಿಜೆಪಿ ಎಂಎಲ್​ಸಿ ಹೇಳಿದ್ದಾರೆ. ಅಲ್ಲದೇ ನಮ್ಮ ಸಮುದಾಯವನ್ನ ಕೇಂದ್ರದಲ್ಲೂ ಕೂಡ ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಹೇಳಿದ್ದಾರೆ. ಶಿರಾ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ಮೀಸಲಾತಿ ಕೂಗು ಕೇಳಿಬಂದಿದೆ. ಯಾರೇ ಸಿಎಂ ಆದ್ರೂ ನಮ್ಮ ಸಮುದಾಯವನ್ನ ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಎಂ ಚಿದಾನಂದಗೌಡ ಹೇಳಿದ್ದಾರೆ.


ಅಭ್ಯರ್ಥಿಗಳ ಮೊದಲ ಪಟ್ಟಿ  ಪ್ರಕಟ


ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಇನ್ನೂ 6  ತಿಂಗಳು ಬಾಕಿ ಇರುವಾಗಲೇ  ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಭರ್ಜರಿ ತಯಾರಿ ನಡೆಸಿದೆ. ಜೆಡಿಎಸ್​ ನಾಯಕರು, ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷ ಜೆಡಿಎಸ್ ಒಂದು ಹೆಜ್ಜೆ ಮುಂದೆ ಹೋಗಿದ್ದು, 2023ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ.


If Kumaraswamy is the CM, I am the first to be happy; BJP MLC's shocking statement!
ಬಿಜೆಪಿ ಎಂಎಲ್​ಸಿ ಚಿದಾನಂದಗೌಡ


ಮೈಸೂರು ಅಭ್ಯರ್ಥಿಗಳ ಪಟ್ಟಿ ರಿಲೀಸ್​

ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಅವರು ಮೈಸೂರು ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಶುಕ್ರವಾರ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಮತ್ತು ಜಿ. ಟಿ. ದೇವೇಗೌಡರು ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮೈಸೂರು ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.



 


ಮೈಸೂರು ಜಿಲ್ಲಾ ಜೆಡಿಎಸ್​ ಅಭ್ಯರ್ಥಿಗಳ ಪಟ್ಟಿ


ಚಾಮುಂಡೇಶ್ವರಿ – ಜಿ. ಟಿ. ದೇವೇಗೌಡ


ಹುಣಸೂರು – ಜಿ. ಟಿ. ಹರೀಶ್ ಗೌಡ





 ಕೆ. ಆರ್. ನಗರ – ಸಾ. ರಾ. ಮಹೇಶ್


ಪಿರಿಯಾಪಟ್ಟಣ – ಕೆ. ಮಹದೇವ್


ಟಿ. ನರಸೀಪುರ – ಅಶ್ವಿನ್


ಎಚ್. ಡಿ. ಕೋಟೆ – ಜಯಪ್ರಕಾಶ್


2023ಕ್ಕೆ ಮಿಷನ್​ 123


2023ಕ್ಕೆ ಮಿಷನ್​ 123 ಶುರು ಮಾಡಿರುವ ಕುಮಾರಸ್ವಾಮಿ ಈಗ 126 ಅಭ್ಯರ್ಥಿಗಳ ಪಟ್ಟಿ ರೆಡಿ ಮಾಡಿದ್ದಾರೆ. ಇದರಲ್ಲಿ ನಿಖಿಲ್​ ಕುಮಾರಸ್ವಾಮಿ ಮತ್ತು ಜಿಟಿ ದೇವೇಗೌಡ ಪುತ್ರ ಹರೀಶ್​​ಗೂ ಟಿಕೆಟ್​ ಖಚಿತವಾಗಿದೆ .


‘40 ಸ್ಥಾನ ಬಂದ್ರೆ ರಾಜಕೀಯ ಬಿಡ್ತೀನಿ’


ಈ ಬಾರಿ ಜೆಡಿಎಸ್​ಗೆ 30ರಿಂದ 40 ಸ್ಥಾನ ಬಂದರೆ ಅಧಿಕಾರದಿಂದ ದೂರ ಇರುತ್ತೇನೆ. 30ರಿಂದ 40 ಸ್ಥಾನ ಬಂದರೂ ನಾನು ಸಿಎಂ ಆಗುತ್ತೇನೆ ಎಂದು ನಮ್ಮ ಪಕ್ಷದ ಶಾಸಕರು ಅಂದುಕೊಳ್ಳುವುದು ಬೇಡ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.


ಇದನ್ನೂ ಓದಿ: Zameer Ahmed Khan: ಡಿಸೆಂಬರ್​ನಲ್ಲಿ ಕಾದಿದೆ ಬಿಜೆಪಿಗೆ ಬಿಗ್​ ಶಾಕ್​​; ಎಚ್​ಡಿಕೆಗೂ ಜಮೀರ್​ ಸವಾಲ್!


ಜೆಡಿಎಸ್​ ತೊರೆಯುವ ನಿರ್ಧಾರದಿಂದ ಹಿಂದೆ ಸರಿದ ಜಿಟಿಡಿ


ಜಿಟಿಡಿ ನಿವಾಸಕ್ಕೆ ಭೇಟಿ ನೀಡಿದ ಹೆಚ್​​ಡಿಡಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಮುನಿಸಿಕೊಂಡಿದ್ದ ಅರಸಿಕೆರೆ ಶಾಸಕ ಶಿವಲಿಂಗೇಗೌಡರು (MLA Shivalingegowda) ಪಕ್ಷದಲ್ಲಿಯೇ ಉಳಿಯುವ ಬಗ್ಗೆ ತೀರ್ಮಾನ ಮಾಡಿದ್ದಾರೆ.


Published by:ಪಾವನ ಎಚ್ ಎಸ್
First published: