• Home
  • »
  • News
  • »
  • state
  • »
  • H D Kumarswamy: ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ದಲಿತರಿಗೆ ಡಿಸಿಎಂ ಪಟ್ಟ; ಕೋಲಾರದಲ್ಲಿ ಎಚ್‌ಡಿಕೆ ಭರವಸೆ

H D Kumarswamy: ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ದಲಿತರಿಗೆ ಡಿಸಿಎಂ ಪಟ್ಟ; ಕೋಲಾರದಲ್ಲಿ ಎಚ್‌ಡಿಕೆ ಭರವಸೆ

ಎಚ್​ ಡಿ ಕುಮಾರಸ್ವಾಮಿ

ಎಚ್​ ಡಿ ಕುಮಾರಸ್ವಾಮಿ

ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ (JDS Party) ಬಹುಮತ ಬಂದರೆ ದಲಿತ ವ್ಯಕ್ತಿಗೆ ಡಿಸಿಎಂ ಪಟ್ಟ ನೀಡಲಾಗುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾ,ಮಿ ಹೇಳಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಕೋಲಾರ (ನ.21): ವಿಧಾನಸಭೆ ಚುನಾವಣೆಗೆ (Vidhanasabhe Electiom) ಎಲ್ಲಾ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಜೆಡಿಎಸ್​ ಪಂಚರಥಯಾತ್ರೆ ಮೂಲಕ ಮತದಾರರ (Voters) ಮನ ಸೆಳೆಯಲು ಮುಂದಾಗಿದೆ. ಕೋಲಾರದಲ್ಲಿ ಪ್ರವಾಸ ಕೈಗೊಂಡಿರುವ ಕುಮಾರಸ್ವಾಮಿ ಅವರು ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ (JDS Party) ಬಹುಮತ ಬಂದರೆ ದಲಿತ ವ್ಯಕ್ತಿಗೆ ಡಿಸಿಎಂ ಪಟ್ಟ ನೀಡಲಾಗುತ್ತದೆ ಎಂದು ಹೇಳಿದರು.


ಸಿಎಂಆರ್‌ ಶ್ರೀನಾಥ್‌ ಕೋಲಾರ ಜೆಡಿಎಸ್ ಅಭ್ಯರ್ಥಿ​


ಹಲವು ತಿಂಗಳಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕೋಲಾರ ವಿಧಾನಸಭೆ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ವಿಚಾರಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತೆರೆ ಎಳೆದ್ದಿದ್ದು, ಕ್ಷೇತ್ರದಲ್ಲಿ ಸೋಮವಾರ ನಡೆದ ಪಂಚರತ್ನ ಯೋಜನೆಯ ರಥಯಾತ್ರೆಯಲ್ಲಿ, ಸಿಎಂಆರ್‌ ಶ್ರೀನಾಥ್‌ ಕೋಲಾರ ಕ್ಷೇತ್ರದ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಿದರು.


JDS To Postpone Pancharatna Rathayatre mrq
ಹೆಚ್ ಡಿ ಕುಮಾರಸ್ವಾಮಿ, ಮಾಜಿ ಸಿಎಂ


ಪಂಚರತ್ನ ಯೋಜನೆಯ ರಥಯಾತ್ರೆ


ನ.18 ರಿಂದ ಜಿಲ್ಲೆಯ ಮುಳಬಾಗಲಿನಲ್ಲಿಆರಂಭಗೊಂಡಿರುವ ಜೆಡಿಎಸ್‌ ಪಂಚರತ್ನ ಯೋಜನೆಯ ರಥಯಾತ್ರೆ ಮುಳಬಾಗಲು, ಬಂಗಾರಪೇಟೆ, ಮಾಲೂರು ವಿಧಾನಸಭೆ ಕ್ಷೇತ್ರಗಳಲ್ಲಿಸಂಚರಿಸಿ ಸೋಮವಾರ ಬೆಳಗ್ಗೆ ಮಾಲೂರು-ಕೋಲಾರ ರಸ್ತೆಯ ಕೋಲಾರ ತಾಲೂಕು ಗಡಿ ತಿರುಮಲಕೊಪ್ಪ ಗೇಟ್‌ ಮೂಲಕ ಕೋಲಾರ ಕ್ಷೇತ್ರಕ್ಕೆ ಆಗಮಿಸಿತು.


ಬೃಹತ್‌ ಸೇಬಿನ ಹಾರ ಹಾಕಿ ಸ್ವಾಗತ


ಈ ವೇಳೆ ಕೋಲಾರ ವಿಧಾನಸಭೆ ಕ್ಷೇತ್ರದ ಸಾವಿರಾರು ಮಂದಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಸ್ವಾಗತಿಸಿ, ಬೃಹತ್‌ ಸೇಬಿನ ಹಾರ ಹಾಕಿ ವಕ್ಕಲೇರಿಗೆ ಕರೆತಂದರು. ಪೂರ್ಣಕುಂಭ ಕಳಶ ಹೊತ್ತ ಮಹಿಳೆಯರು, ಕೇರಳದ ಚಂಡೆ ವಾದ್ಯದೊಂದಿಗೆ ತೆರಳಿ ಡಾ.ಬಿ.ಆರ್‌.ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಿ ರೋಡ್‌ಶೋ ನಡೆಸಿ, ಸಾರ್ವಜನಿಕ


ಸಿಎಂಆರ್‌ ಶ್ರೀನಾಥ್‌ ಅಭಿಮಾನಿಗಳು ಜೈಕಾರ


ಸಭೆಯಲ್ಲಿಮಾತನಾಡಿ, ಸಿಎಂಆರ್‌ ಶ್ರೀನಾಥ್‌ ಕೋಲಾರ ಕ್ಷೇತ್ರದ ಅಭ್ಯರ್ಥಿ, ಅವರನ್ನು ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿದರು. ಅಭ್ಯರ್ಥಿ ಹೆಸರು ಘೋಷಣೆಯಾಗುತ್ತಿದ್ದಂತೆ ಸಿಎಂಆರ್‌ ಶ್ರೀನಾಥ್‌ ಅಭಿಮಾನಿಗಳು ಜೈಕಾರದ ಘೋಷಣೆಗಳನ್ನು ಹಾಕಿ ಸಂಭ್ರಮಿಸಿದರು.


ರಾಷ್ಟ್ರೀಯ ಪಕ್ಷಗಳ ವಿರುದ್ಧ HDK ಕಿಡಿ


ಜೆಡಿಎಸ್‌ ಪಂಚರತ್ನ ರಥಯಾತ್ರೆ ವೇಳೆ ತಾಲ್ಲೂಕಿನ ಕೋರಗಂಡಹಳ್ಳಿಯಲ್ಲಿ ಮಾತನಾಡಿ, ಎರಡೂ ರಾಷ್ಟ್ರೀಯ ಪಕ್ಷಗಳು ಕರಾವಳಿ ಪ್ರದೇಶದಲ್ಲಿ ಕೋಮುಗಲಭೆ ವಾತಾವರಣ ನಿರ್ಮಿಸಿವೆ. ಈಗ ಅಲ್ಲಿ ಸ್ಫೋಟ ಸಂಭವಿಸಿದ್ದು, ಆರ್ಥಿಕ ವಹಿವಾಟಿಗೆ ತೊಂದರೆ ಆಗುತ್ತದೆ. ಜನರೂ ಆತಂಕಕ್ಕೆ ಒಳಗಾಗುತ್ತಾರೆ ಎಂದರು.


ಸ್ಫೋಟ ಪ್ರಕರಣವನ್ನು ನಾನು ಖಂಡಿಸುತ್ತೇನೆ. ಪ್ರಕರಣದ ಹಿಂದೆ ಸಮಾಜಘಾತುಕ ಶಕ್ತಿಗಳಿದ್ದು, ಕಠಿಣ ಕ್ರಮ ವಹಿಸಬೇಕು. ಪೊಲೀಸರಿಗೆ ಮುಕ್ತ ಅವಕಾಶ ನೀಡಿ ಯಾವುದೇ ಸಂಘಟನೆ ಇದ್ದರೂ ಪತ್ತೆ ಹಚ್ಚಬೇಕು. ಈಗಿನ ಪ್ರಕರಣದಲ್ಲಿ ದೇವರೇ ಆ ಭಾಗದ ಜನರನ್ನು ಕಾಪಾಡಿದ್ದಾನೆ’ ಎಂದು ಹೇಳಿದರು.


ಶಾಂತಿಯುತ ವಾತಾವರಣ ನಿರ್ಮಾಣವಾಗ್ಬೇಕು


ಯಾವುದೇ ಪಕ್ಷ, ಸಮುದಾಯಗಳಿರಲಿ ನಮ್ಮ ಜವಾಬ್ದಾರಿ ನಾಡಿನ ಜನತೆಗೆ ಸಂಪೂರ್ಣ ರಕ್ಷಣೆ ನೀಡುವುದು, ಸಮಾಜದಲ್ಲಿ ಶಾಂತಿಯುತ ವಾತಾವರಣ ನಿರ್ಮಿಸುವುದು ಆಗಬೇಕು. ಪಕ್ಷಗಳ ಅಂಗ ಪಕ್ಷಗಳು, ಸಂಘಟನೆಗಳು, ಬೇರೆ ಸಮುದಾಯದ ಸಂಘಟನೆಗಳು ಮತ್ತು ಅಲ್ಲಿನ ಧಾರ್ಮಿಕ ಗುರುಗಳು ಇಂಥ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬಾರದು ಎಂದು ಮನವಿ ಮಾಡಿದರು.


ಇದನ್ನೂ ಓದಿ: Karnataka Politics: ಕಾಂಗ್ರೆಸ್​ನಲ್ಲಿ ಡಿಕೆಶಿ-ಸಿದ್ದು ಟಿಕೆಟ್​ ಫೈಟ್​! ಅಭ್ಯರ್ಥಿ ಘೋಷಿಸುವ ಹಕ್ಕು ಸಿದ್ದರಾಮಯ್ಯಗೆ ಇಲ್ಲ ಎಂದ್ರು ಕೆಪಿಸಿಸಿ ಅಧ್ಯಕ್ಷ


ಅನಾಹುತ ನಡೆದರೆ ಅಮಾಯಕರಿಗೆ ಸಮಸ್ಯೆ


ಗೃಹ ಇಲಾಖೆ ವೈಫಲ್ಯ ಎಂದು ಹೇಳುವುದಿಲ್ಲ. ಗುಪ್ತಚರ ಇಲಾಖೆ ಕೆಲಸ ಮಾಡುತ್ತಿದ್ದರೂ ಪುಲ್ವಾಮದಲ್ಲಿ 40 ಯೋಧರ ಹತ್ಯೆ ನಡೆಯಲಿಲ್ಲವೇ? ಸರ್ಕಾರ, ರಾಜಕಾರಣಿಗಳು, ಸಂಘಟನೆಗಳು ದ್ವೇಷದ ವಾತಾವರಣ ನಿರ್ಮಾಣ ಮಾಡಬಾರದು. ಅನಾಹುತ ನಡೆದರೆ ಅಮಾಯಕರು ಸಮಸ್ಯೆಗೆ ಒಳಗಾಗುತ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Published by:ಪಾವನ ಎಚ್ ಎಸ್
First published: